ಒಂದು ಪೇಪರ್‌, ಬಾಳೆಹಣು ¡ ಮತ್ತು ನಿಯತ್ತು…


Team Udayavani, Dec 3, 2019, 12:24 PM IST

JOSH-TDY-9

ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ ಬಳಿ ಸ್ವಲ್ಪವೇ ಹಣವಿದೆ ಮತ್ತು ಚೇಂಜ್‌ ಸಹ ಇಲ್ಲ ಅಂತ ಹೇಳಿದೆ. ಆತ ನನ್ನನ್ನೊಮ್ಮೆ ದಿಟ್ಟಿಸಿ ನೋಡಿದ. ಏನನ್ನಿಸಿತೋ. ಹೋಗಲಿ ಬಿಡು ಅಂದ. ತದೇಕವಾಗಿ ಆತನನ್ನು ನೋಡಿ ಧನ್ಯವಾದ ಹೇಳಿ ಹೊರಟೆ.

ಮತ್ತೆ ನಾಲ್ಕು ತಿಂಗಳ ನಂತರ ಅದೇ ಬಸ್‌ ಸ್ಟಾಪ್‌. ಮತ್ತದೇ ಸ್ಥಿತಿ. ಮತ್ತೆ ಅದೇ ಅಂಗಡಿಗೆ ಹೋಗಿ ನನ್ನಲ್ಲಿ ಸ್ವಲ್ಪ ಹಣವಿದೆ ಮತ್ತು ಚೇಂಜ್‌ ಇಲ್ಲ. ಆದರೆ ಪೇಪರ್‌ ಮತ್ತು ಬಾಳೇಹಣ್ಣು ಬೇಕು ಅಂತ ಕೇಳಿದೆ. ಈ ಬಾರಿಯೂ ಆತ ಏನೂ ಅನ್ನದೇ ಬಾಳೆ ಹಣ್ಣು ನೀಡಿದ. ಇದಾಗಿ ಹತ್ತೂಂಭತ್ತು ವರ್ಷ ಕಳೆದಿವೆ. ಇಂದು ನಾನು ಅದೇ ಬಸ್‌ ಸ್ಟಾಪ್‌ ನಲ್ಲಿ ಇಳಿದೆ.

ಏರ್‌ಪೋರ್ಟ್‌ಗೆ ಹೋಗಲು ಕಾರ್‌ಪಿಕ್‌ ಮಾಡಲು ಬರುವುದಿತ್ತು. ಈ ಮಧ್ಯೆ ಸಾಕಷ್ಟು ಬಾರಿ ಆತನನ್ನು ನೆನೆದಿದಿದ್ದೆ. ಅರಿವಿಲ್ಲದೇ ಸೆಳೆದೊಯ್ದಂತೆ ಮತ್ತೆ ಅದೇ ಚಿಕ್ಕ ಅಂಗಡಿಗೆ ಹೋದೆ. ಆತ ಒಮ್ಮೆ ನೋಡಿದವ, ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ. “ನಾನ್ಯಾರು ಗೊತ್ತಾಯ್ತ?’ ಅಂದೆ ಹೌದು. ನೀವು ಪ್ರತಿಷ್ಠಿತ ಉದ್ಯಮಿ ಅಂತ ಗೊತ್ತು‘, ಅಂದವನೇ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ. “ನೀವು ನನಗೆ ಎರಡು ಬಾರಿ ಬಾಳೆ ಹಣ್ಣು ಪೇಪರ್‌ ಉಚಿತವಾಗಿ ನೀಡಿದ್ದೀರಿ. ಅದಕ್ಕೆಬದಲಾಗಿ ನಾನೀಗ ನಿಮಗೆ ಸ್ವಂತ ಒಂದು ಅಂಗಡಿ ನೀಡಬೇಕೆಂದುಕೊಂಡಿದ್ದೇನೆಎಂದೆ.ಒಮ್ಮೆ ಮಾಡುತ್ತಿದ್ದ ಕೆಲಸ ನಿಲ್ಲಿಸಿ ನನ್ನೆಡೆಗೆ ನೋಡಿದ ಆತ.. “ನಾನು ನಿಮಗೆ ಮಾಡಿದ ಸಹಾಯಕ್ಕೆ ನೀವು ಮಾಡೋದು ಸರಿ ತೂಗದುಅಂದ. ವಿಚಲಿತನಾದ ನಾನು– “ನೀವು ನೀಡಿದ ಎರಡು ಬಾಳೇಹಣ್ಣು ಪೇಪರ್‌ಗೆ ಪ್ರತಿಯಾಗಿ ನಾನು ಅದೆಷ್ಟೋ ಬೆಲೆಬಾಳ್ಳೋ ಕಟ್ಟಿದ ಸ್ಥಳ ನೀಡುತ್ತಿದ್ದೇನೆ. ಇದು ಹೆಚ್ಚೇ ಅಲ್ಲವೇನನ್ನ ಸಹಜ ಉದ್ಯಮ ಬುದ್ಧಿಯಿಂದ ಹೇಳಿದೆ. ತಣ್ಣಗಿನ ಧ್ವನಿಯಲ್ಲಿ ಆತ ಹೇಳಿದ.

ನಾನು ನಿಮಗೆ ಪೇಪರ್‌ಬಾಳೆಹಣ್ಣು ನೀಡಿದ್ದು, ನನ್ನ ಹತ್ತಿರವೂ ಏನೂ ಇಲ್ಲದ ಸಮಯದಲ್ಲಿ. ಈಗ ಹತ್ತೂಂಭತ್ತು ವರ್ಷಗಳ ನಂತರ, ನಿಮ್ಮ ಹತ್ತಿರ ಎಲ್ಲಾ ಹೆಚ್ಚಾಗಿರುವಾಗ ಬಂದು ಏನೋ ನೀಡಲು ಬಂದರೆ ಅದು ನಾನು ನನ್ನಲ್ಲಿ ಏನೂ ಇಲ್ಲದಾಗ ನೀಡಿದ್ದಕ್ಕೆ ಹೇಗೆ ಸರಿದೂಗೀತು.. ? ಎಂದ. ಸಮಚಿತ್ತದಿಂದಲೇಸವಿನಯದಿಂದ ಆತ ನಾನೇನು ಮಾಡುತ್ತಿದ್ದೇನೆ….ಎಲ್ಲಿ ಎಡವುತ್ತಿದ್ದೇನೆ ಅನ್ನುವುದ ತೋರಿಸಿದ್ದ. ಕೊಡುವುದರ ಬೆಲೆ ಬಗ್ಗೆ ಅಂದು ಆತ ದೊಡ್ಡ ಪಾಠ ಕಲಿಸಿದ್ದ.

ಇನ್ನೊಬ್ಬರ ಕಡುಗತ್ತಲೆ ಹೋಗಲಾಡಿಸಲು ಹಚ್ಚುವ ಹಣತೆಯಿಂದ ನಮಗೂ ನಮ್ಮ ಹಾದಿ ಕೊಂಚವಾದರೂ ಸ್ಫುಟವಾಗಿ ಕಾಣುತ್ತೆ . ಸದಾ ನನ್ನಿಂದ ಏನಾದರೂ ಲಾಭಕ್ಕಾಗಿಯೇ ನನ್ನನ್ನುಹುಡುಕುವ ಜನರ ಮಧ್ಯೆ, ಈತ ಯಾವುದೋ ಲೋಕದವನಂತೆ ಕಂಡ. ನಿಜಕ್ಕೂ ಆತ ನಾನುನೀಡ ಬೇಕೆಂದುಕೊಂಡಿದ್ದುದನ್ನು ನಿರಾಕರಿಸಿ, ಇನ್ನೂ ದೊಡ್ಡ ಸ್ಥಾನಕ್ಕೇರಿದ್ದ. ಆತ ಎಷ್ಟು ಬೇಡವೆಂದರೂ ಬಿಗಿಪಟ್ಟು ಹಿಡಿದು, ತೀರಾ ನಂಬಿಗಸ್ತರಿಗೆ ನೀಡುವ ಹಣಕಾಸಿನ ಮುಖ್ಯ ನಿರ್ವಹಣೆಯನ್ನು ಆತನಿಗೆವಹಿಸಿದೆ .

ಇದನ್ನು ನನ್ನ ಮೂರ್ಖತನವೆಂದು ಹಲವರು ನಕ್ಕರು. ನಾನು ಮಾತ್ರ ಅಂದು ಎರಡುಬಾಳೇಹಣ್ಣು ಎರಡು ಪೇಪರ್‌ ಗೆ ಬದಲಿಯಾಗಿ ಆತನಿಗೆ ದೊಡ್ಡ ಸ್ಥಾನ ಕೊಟ್ಟೆ ಎಂದು ಬೀಗಿದೆ. ದಿನಕಳೆದಂತೆ ನಾನು ಅತ್ಯಂತ ನಂಬಿಕೆಯಿಟ್ಟಿದ್ದ ಮುಖ್ಯ ಸ್ಥಾನದಲ್ಲಿದ್ದವರಿಂದ ಊಹಿಸದ ಮಟ್ಟದಲ್ಲಿ ಸೋರಿಕೆಯಾಗುತ್ತಿರುವುದನ್ನು ತೋರಿಸಿಕೊಟ್ಟ. ಅದು ಹಾಗೇ ಮುಂದುವರಿದಿದ್ದರೆ ನನ್ನ ಉದ್ಯಮವೇ ಕುಸಿಯುವುದು ನಿಶ್ಚಿತವಿತ್ತು ಎನ್ನುವುದು ಗಮನಕ್ಕೆ ಬಂದಾಗ ಗಾಬರಿಯಾದೆ.

ಪಕ್ಕಾ ವ್ಯವಹಾರಸ್ಥನಂಬಿಗಸ್ಥನಾದ ಆ ಚಿಕ್ಕ ಅಂಗಡಿಯವ ಅದೆಷ್ಟೋ ಕೋಟಿ ಉಳಿತಾಯ ಮಾಡಿಕೊಟ್ಟ. ದಿಗ್ಭ್ರಮೆಯಾಗಿತ್ತು ನನಗೆ . ಅವನಿಗೆ ಎರಡು ಬಾಳೆ ಹಣ್ಣಿನ ಸಹಾಯ ತೀರಿಸಲು ಹೋದ ನನಗೆ ಆತ ಮಾಡಿದ ಸಹಾಯವನ್ನು ಯಾವ ರೀತಿ ಲೆಕ್ಕ ಹಾಕಬಹುದಿತ್ತು?

ಇವು ಸ್ಮರಿಸಿಕೊಳ್ಳುವಂಥವು ಮಾತ್ರವೇ. ನೊಂದು ಬಂದು ಸೋಫಾದಲ್ಲಿ ಕುಸಿದು ಕೂತಾಗ ಪಾದ ನೆಕ್ಕುವ ನಾಯಿಗಿಂತ ನಿಯತ್ತುನಿಷ್ಠೆ. ಅಂದಿನಿಂದ ಆತ ನನ್ನ ಬದುಕಿನಲ್ಲಿ ಇದುವರೆಗೂ ಇದ್ದ ಎಲ್ಲರಿಗಿಂತ ಮಹತ್ವದ ಸ್ಥಾನ ಪಡೆದುಕೊಡ. ಕೊನೆಯಲ್ಲಿ ಉಯಿಲು ಬರೆಯುವಾಗ ನನ್ನನ್ನುಆತನನ್ನು ಪಕ್ಕ ಪಕ್ಕ ಹೂಳಬೇಕೆಂದು ಬರೆದು ತಕ್ಕ ಜಾಗ ಹಣದ ವ್ಯವಸ್ಥೆ ಮಾಡಿಟ್ಟೆ. ಉದ್ಯಮಿಯೊಬ್ಬರೂ ತಮ್ಮ ಕಥನದಲ್ಲಿ, ಹೀಗೆ ಬರೆದುಕೊಂಡದ್ದನ್ನು ತುಂಬಾ ಹಿಂದೆ ಓದಿದ ನೆನಪು.

ಮಾನವೀಯ ಬದುಕು : ಆಕೆಯ ಬಳಿ ಆ ಕಾಲೇಜಿನ ವಿದ್ಯಾರ್ಥಿಗಳಿಂದಹಿಡಿದುಅಟೆಂಡರ್‌ಗಳು, ಸಹೋದ್ಯೋಗಿಗಳು , ಅಡ್ಮಿನ್‌ ಸ್ಟಾಫ್ ಹೀಗೆ ಎಲ್ಲರೂ ಹೋಗಿದ್ದಾರೆ. ಹಾಗಂತ ಆಕೆಯೇನು ದುಡ್ಡಿದ್ದವಳ್ಳೋ ಅಥವಾ ರಾಜಕೀಯ ಲಿಂಕ್‌ ಇದ್ದವಳ್ಳೋ ಅಲ್ಲ. ಆಕೆಗಿದ್ದದ್ದು ಸಹೃದಯ, ಅಂತಃಕರಣ. ನಾವುನೀವು ಊಹಿಸಲಾರದಷ್ಟು ಪೂರ್ಣ ಮನಸ್ಸಿನಿಂದ ಎಲ್ಲರ ನೋವನ್ನು ತನ್ನದೇ ಎನ್ನುವಂತೆ ಆಲಿಸಿ, ತನಗೆ ಸಾಧ್ಯವಿರುವುದನ್ನೆಲ್ಲಾ ಮಾಡುವಂಥ ಮಾತೃ ಹೃದಯ. ಅದ್ಯಾವ ನೋವು ಉಂಡೆದ್ದು ಜೀರ್ಣಿಸಿಕೊಂಡಿದ್ದಳ್ಳೋ….ಯಾರು ನೋವೆಂದು ಬಂದರೂ ತನಗಾದದ್ದನ್ನುಮಾಡಿಯೇ ತೀರುತ್ತಿದ್ದಳು. ಹೇಳಿದರೆ ನಂಬುವುದು ಕಷ್ಟ. ಅವರ ಹೆಸರು ಉಷಾ ಮೇಡಂ. ಸಹಸ್ರ ಸಂಖ್ಯೆಯ ಆ ಕಾಲೇಜಿನಲ್ಲಿ ವಿಶೇಷ ಸ್ಥಾನ ಪಡೆದಾಕೆ. ಅದು ನಿಜ ರೀತಿಯಲ್ಲಿಮನುಷ್ಯಳಾಗಿದ್ದಕ್ಕೆ. ಆಕೆಯೊಟ್ಟಿಗೆ ಮಾತಾಡಿ ಹಿಂದಿರುಗುವ ಹಾದಿಯ ಪೂರ್ಣ ಅನಿಸಿದ್ದು ಒಂದೇ…. ಮಾನವೀಯತೆ ಎಷ್ಟು ಸುಂದರ.

ಇತ್ತೀಚೆಗಷ್ಟೇ ರಘುನಾಥ್‌ ಎಂಬ ಮೇಷ್ಟ್ರೊಬ್ಬರು ನಿವೃತ್ತರಾದರು. ತೀವ್ರವೆನಿಸುವ ನೋವು ಗಳೊಂದಿಗೆ ಹುಟ್ಟಿದಾತ. ಭಿಕ್ಷೆ ಬೇಡುವುದರಿಂದಕಸಗುಡಿಸುವುದರಿಂದ ಎಲ್ಲವನ್ನೂ ಮಾಡಿದಾತ. ಹತ್ತನೇ ತರಗತಿ ನಪಾಸಾಗಿದ್ದರೂ ಪರಿಚಿತರೊಬ್ಬರಿಂದ ಶಿಕ್ಷಕ ವೃತ್ತಿ ದೊರೆತು, ತನ್ನಂಥದೇ ಮಾನಸಿಕ ಸ್ಥಿತಿಯಲ್ಲಿರುವ ನೂರಾರು ಜನರಿಗೆ ಸಮಾಧಾನ ಹೇಳಿ, ಆ ಸ್ಥಿತಿಯಿಂದ ಹೊರತರುವಲ್ಲಿ ಸಫ‌ಲರಾಗಿದ್ದಾರೆ. ಅಂದರೆ ನೂರಾರು ಜೀವ ಉಳಿಸಿದ್ದಾರೆ ಇಂಥವು ಕೊಳ್ಳಲು ಸಾಧ್ಯವಿದ್ದರೂ ಬಿಕರಿಗೆ ಸಿಗು ವಂಥದ್ದಲ್ಲ ಮತ್ತು ಮನದಾಳದಿಂದ ಹೊಮ್ಮುವಂಥದ್ದೇ ಆಗಿರಬೇಕು.

ಕೃತಕತೆಗೆ ಸಾಧ್ಯವಾಗುವಂಥದ್ದಲ್ಲ. ವೈದ್ಯರು ಚಿಕ್ಕ ಜ್ವರಕ್ಕೆ ದೊಡ್ಡ ಹೆಸರಿಟ್ಟು ವಸೂಲಿಗೆ ನಿಂತರೆಎಲ್ಲಾ ವ್ಯವಸ್ಥೆಗಳಲ್ಲೂ ಕೆಳಗಿನ ಸಿಬ್ಬಂದಿಯ ಚಿಕ್ಕ ತಪ್ಪನ್ನು ತಾವೇ ದೊಡ್ಡದು ಮಾಡಿ, ಅವನಿಂದ ಸಾಧ್ಯವಾದಷ್ಟು ಕೀಳಲೆಂದೇ ನಿಂತ ಮೇಲಾಧಿಕಾರಿಗಳು , ಸಂಬಂಧಗಳಲ್ಲಿ ಇನ್ನೂ ಹೆಚ್ಚು ಬಡಿದಾಟ ಹಚ್ಚಿ ನಿಲ್ಲುವ ಲಾಯರ್‌ಗಳು, ಹೀಗೆ…. ಮನುಷ್ಯತ್ವವನ್ನು ಹುಡುಕಿ ಹೆಕ್ಕಬೇಕಾದ ಇಂದಿನ ಕಾಲದಲ್ಲಿ ಮಾನವೀಯತೆ ಅದೆಷ್ಟು ಸುಂದರ ಎನ್ನಿಸದಿರದು….ಹೀಗಾಗಲು, ಏನಾದರೂ ಆಗಲಿ, ಮೊದಲು ಮಾನವರಾಗುವತ್ತ ಚಿತ್ತ ಹರಿಸಬೇಕೇನೋ..

 

-ಮಂಜುಳಾ ಡಿ

ಟಾಪ್ ನ್ಯೂಸ್

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.