ಫ್ರೆಂಡ್ ರಿಕ್ವೆಸ್ಟ್ ಬಂದಿರುತ್ತೆ!
Team Udayavani, Jul 4, 2017, 3:45 AM IST
ಮಕ್ಲೆಲ್ಲಾ ತಮ್ಮ ಕಾಲೇಜಿನ ಬಗ್ಗೆ, ಉಪನ್ಯಾಸಕರ ಬಗ್ಗೆ ಫೇಸ್‌ಬುಕ್ಕಿನಿಂದ ವಿಷಯಗಳನ್ನು ಕಲೆಹಾಕಿರುತ್ತಾರೆ. ಕೆಲವರು ಒಂದು ಕೈ ನೋಡೇ ಬಿಡೋಣ ಎಂದು ಫ್ರೆಂಡ್ ರಿಕ್ವೆಸ್ಟ್ ಕೂಡಾ ಕಳಿಸಿಬಿಡ್ತಾರೆ..!
ದಿನಬೆಳಗಾದರೆ “ಗುಡ್ ಮಾರ್ನಿಂಗ್ ಸಾರ್, ಗುಡ್ ಡೇ ಸರ್’ - ಹೀಗೆಲ್ಲಾ ರಾಗವಾಗಿ ವಿಶ್ ಮಾಡುತ್ತಾ ಫ್ರೆಶ್ ಆಗಿ ಕಾಣಿಸಿಕೊಳ್ಳುವ ಯುವವಿದ್ಯಾರ್ಥಿ ಮಿತ್ರರ ಸಾಂಗತ್ಯ ನನಗೆ ಖುಷಿಕೊಡುವ ಸಂಗತಿಗಳಲ್ಲೊಂದು. ಅಪರಿಚಿತ ಮುಖಗಳಾಗಿ ಪರಿಚಯವಾಗುವ ವಿದ್ಯಾರ್ಥಿಗಳಿಗೆಲ್ಲಾ ನಾನು ಗುರುವಾದರೂ, ಕಾಲಕಳೆದಂತೆ ಅದೇನೋ ಆಪ್ತಭಾವ ನಮ್ಮ ನಡುವೆ ಮೂಡಿ ಕೊನೆಗೊಮ್ಮೆ ನಮ್ಮಿಂದ ಬೀಳ್ಕೊಡುವಾಗ ಕಣ್ಣಂಚನ್ನು ಒ¨ªೆಮಾಡಿಕೊಂಡು ತೆರಳುವವರು ಬಹಳ ಮಂದಿ. ಹಾಗಾಗಿ ಮಾರ್ಚ್ ಏಪ್ರಿಲ್‌ನಲ್ಲಿ ನಮಗೆ ವಿದಾಯದ ಬೇಸರವಾದರೆ,ಜೂನ್- ಜುಲೈ ಬರುತ್ತಲೇ ಮಗದೊಂದು ಬ್ಯಾಚ್ ಅನ್ನು ಸ್ವಾಗತಿಸುವ ಸಂಭ್ರಮ. ರೆಕ್ಕೆ ಬಿಚ್ಚಿ ಹಾರಿ ಹೋದ ಹಳೆಯ ಮುಖಗಳ ಜಾಗಕ್ಕೆ, ಕನಸು ಕಂಗಳ ಹೊತ್ತ ಹೊಸ ಮುಖಗಳ ಪ್ರವೇಶ. ನಮಗಿದೊಂಥರಾ ಜಾಯಿಂಟ್‌ವ್ಹೀಲ್ ಆಟ!
ಬಹಳಷ್ಟು ಮಕ್ಕಳಿಗೆ ಕಾಲೇಜು ಜೀವನಕ್ಕೆ ಕಾಲಿರಿಸುವುದೆಂದರೆ ಬಹುದೊಡ್ಡ ಕನಸೊಂದು ನನಸಾದಂತೆ. ಮೊದಲ ನೋಟಕ್ಕೇ ವಿದ್ಯಾರ್ಥಿಗಳನ್ನು ಜಡ್ಜ್ ಮಾಡುವುದು ತಪ್ಪೆಂದು ಕಂಡರೂ ಕೆಲ ವಿದ್ಯಾರ್ಥಿಗಳ ಸಂಸ್ಕಾರ, ಹಾವ ಭಾವ, ಗತ್ತು ದೌಲತ್ತು ಇನ್ನಿತ್ಯಾದಿಗಳ ಮೊದಲ ದರ್ಶನವೇ ಆ ವಿದ್ಯಾರ್ಥಿಗಳ ಮೂರು ವರುಷದ ಭವಿಷ್ಯದ ಚಿತ್ರಣ ನೀಡುತ್ತವೆ. ಈಗಿನ ಕಾಲದ ವಿದ್ಯಾರ್ಥಿಗಳೂ ಅಷ್ಟು ದಡ್ಡರೇನಲ್ಲ. ಅವರೆಲ್ಲಾ ಸಕಲ ಕಲಾಪಾರಂಗತರು. ಗುರುಗಳನ್ನು ಒಲಿಸಿಕೊಳ್ಳುವ ಎಲ್ಲಾ ಪ್ರಯೋಗಗಳನ್ನು ಆರಂಭದಿಂದಲೇ ಅಳವಡಿಸಿಕೊಳ್ಳುತ್ತಾರೆ.
ನಾನು ವಿದ್ಯಾರ್ಥಿಯಾಗಿ¨ªಾಗ, ಕಾಲೇಜು ಆರಂಭವಾಗುವವರೆಗೆ ಆ ಕಾಲೇಜಿನ ಬಗ್ಗೆ, ಗುರುಗಳ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತಿರಲಿಲ್ಲ. ಸೀನಿಯರ್‌ಗಳು ಹೇಳಿದ್ದ ಅರ್ಧಂಬರ್ಧ ಮಾಹಿತಿಗಳೇ ನಮಗೆ ಆಧಾರವಾಗಿತ್ತು. ಆದರೆ, ಇದು ತೋರುಬೆರಳ ತುದಿಯಿಂದ ಟಚ್ ಸ್ಕ್ರೀನಿಗೆ ಮುತ್ತಿಟ್ಟು ಮಾಹಿತಿ ಪಡೆಯುವ ಕಾಲ. ಮಕೆಲ್ಲಾ ತಮ್ಮ ಕಾಲೇಜಿನ ಬಗ್ಗೆ, ಉಪನ್ಯಾಸಕರ ಬಗ್ಗೆ ಫೇಸ್‌ಬುಕ್ಕಿನಿಂದ ವಿಷಯಗಳನ್ನು ಕಲೆಹಾಕಿರುತ್ತಾರೆ. ಕೆಲವರು ಒಂದು ಕೈ ನೋಡೇ ಬಿಡೋಣ ಎಂದು ಫ್ರೆಂಡ್ ರಿಕ್ವೆಸ್ಟ್ ಕೂಡಾ ಕಳಿಸಿಬಿಡ್ತಾರೆ!
ಕಾಲೇಜು ಆರಂಭವಾದ ಮೊದಲ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲಾ ಗುರುವಿನ ಕಣ್ಮುಂದೆ ಒಳ್ಳೆಯವರಾಗಿರಲು ಯತ್ನಿಸುವುದು ಸಾಮಾನ್ಯ. ಅನುಸರಿಸುವ ವಿಧಾನಗಳಷ್ಟೇ ಬೇರೆ ಬೇರೆ. ದಿನಕ್ಕೆ ಹತ್ತಿಪ್ಪತ್ತು ಬಾರಿ ಸಿಕ್ಕರೂ ನಮಸ್ಕಾರ ಮಾಡುವವರು ಒಂದು ಕಡೆಯಾದರೆ, ನೋಟ್ಸು, ಪಾಯಿಂಟ್ಸು ಇನ್ನಿತ್ಯಾದಿಗಳನ್ನು ಶಿಸ್ತಾಗಿ ಬರೆದು ಮೆಚ್ಚುಗೆ ಪಡೆಯಲು ಬಯಸುವವರು ಮತ್ತೂಂದೆಡೆ. ತುಂಟತನದ ಮಂಗಾಟಗಳನ್ನೆಲ್ಲಾ ಬಚ್ಚಿಟ್ಟುಕೊಂಡು, ವಿಧೇಯ ವಿದ್ಯಾರ್ಥಿಯಂತೆ ವರ್ತಿಸುವವರದ್ದು ಒಂದು ರೀತಿಯಾದರೆ, ಮೊಬೈಲು, ವಾಟ್ಸಾéಪು, ಫೇಸುºಕ್ಕೆಲ್ಲಾ ಗೊತ್ತೇ ಇಲ್ಲ, ಲವ್ವಂತೂ ಇಲ್ಲವೇ ಇಲ್ಲ ಎನ್ನುವವರದ್ದೂ ಇನ್ನೊಂದು ರೀತಿ. ಈ ವರ್ಷದ ಬ್ಯಾಚು ಸೂಪರ್ ಎನ್ನಿಸೋವಷ್ಟರ ರೇಂಜಿಗೆ ಮಕ್ಳು ಮಸ್ಕಾ ಹೊಡೀತಾರೆ. ಅಂತೂ ಮೊದಲ ದಿನ ಎಲ್ಲ ಮಕ್ಕಳೂ ಪಾಪವೇ..!
ವೃತ್ತಿಯ ಆರಂಭದ ದಿನಗಳಲ್ಲಿ ಇದೆಲ್ಲಾ ನಿಜವೆನಿಸುತ್ತಿತ್ತು. ಆದರೆ, ದಿನಗಳುರುಳಿ ಕ್ಯಾಂಪಸ್ಸಿನಲ್ಲಿ ಇವರೆಲ್ಲಾ ಹಳಬರಾದಾಗ, ಎಷ್ಟೋ ವಿದ್ಯಾರ್ಥಿಗಳ ಬಂಡವಾಳವೆಲ್ಲಾ ಹೊರಗೆ ಬಿದ್ದು ನಮಗೇನೋ ಆಶ್ಚರ್ಯವಾದದ್ದಿದೆ. ಆದರೂ ನಮ್ಮ ಮಕ್ಕಳೆಂಬ ಪ್ರೀತಿ, ಇನ್ನೂ ಇವರೆಲ್ಲಾ ಎಳೆಯರು ಎಂಬ ಭಾವ ಇದ್ದೇ ಇರುತ್ತದೆ. ಬದುಕೆಂಬ ಖಡಕ್ ಮಾಸ್ತರ್, ನಮಗಿಂತ ಚೆನ್ನಾಗಿ ಇವರಿಗೆಲ್ಲಾ ಪಾಠ ಕಲಿಸ್ತಾನೆ ಎಂದು ನಾವೇ ತಾಳ್ಮೆವಹಿಸಿದ್ದೂ ಇದೆ.
ಅಷ್ಟಕ್ಕೂ ನಾವೇನೂ ಎಲ್ಲ ಬಲ್ಲವರಲ್ಲ ತಾನೇ..? ಇದೇ ಮಕ್ಕಳಿಂದ ನಾವು ಕಲಿಯೋದು ಬಹಳಷ್ಟಿದೆ. ಹಾಗಾಗಿ, ವಿದ್ಯಾರ್ಥಿಗಳು ಮಾಡುವುದರಲ್ಲಿ ತಪ್ಪುಗಳೆಷ್ಟೇ ಇದ್ದರೂ, ಬರಬರುತ್ತಾ ರಾಯರ ಜೊತೆಗಿದ್ದದ್ದು ಕುದುರೆಯಲ್ಲವೆಂದು ಗೊತ್ತಾದರೂ, ಕ್ಷಮಿಸುವ ದೊಡ್ಡಗುಣ ಬಹಳಷ್ಟು ಉಪನ್ಯಾಸಕರಲ್ಲಿರುತ್ತದೆ. ಕೊನೆಗೊಂದು ದಿನ, ಆ ವಿದ್ಯಾರ್ಥಿ ಎÇÉೋ ಒಂದು ಕಡೆ ನೆಮ್ಮದಿಯಿಂದ ಜೀವನ ಮಾಡುತ್ತಿ¨ªಾನೆ ಎಂಬ ಸುದ್ದಿಯೇ ನನ್ನಂಥ ಎಷ್ಟೋ ಉಪನ್ಯಾಸಕರಿಗೆ ಸಂತೃಪ್ತಿಯಾದ ನಿದ್ರೆಯನ್ನು ತರುತ್ತದೆ. ಒಂದು ವಿಷಯದ ಬಗ್ಗೆ ಸತ್ಯ ಗೊತ್ತಿರುವ ವ್ಯಕ್ತಿ ಅದರ ಸುಳ್ಳಿನ ವರ್ಷನ್ ಕಂಡು ಒಳಗೊಳಗೇ ನಗುವಂತೆ, ಪೋಕರಿ ವಿದ್ಯಾರ್ಥಿಗಳ ಮಸ್ಕಾ ಹೊಡೆಯುವ ಮೇಕಪ್ ಕಂಡು ನಾವು ಮನಸಾರೆ ಆನಂದಿಸಿ, ನಕ್ಕು ಹಗುರಾಗಿ ಬಿಡುತ್ತೇವೆ. ಇಂಥದ್ದೊಂದು ವೃತ್ತಿಗೆ ಶಿರಬಾಗಿ ವಂದಿಸಿ ಶರಣಾಗುತ್ತೇವೆ.
-ಸುಚಿತ್ ಕೋಟ್ಯಾನ್ ಕುರ್ಕಾಲು, ಎಂ.ಜಿ.ಎಂ. ಕಾಲೇಜು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.