ಛತ್ರಿಯೆಂಬ “ಕಮಾನು’ ಡಾರ್ಲಿಂಗ್‌! ತುಂತುರು ಇಲ್ಲಿ ನೀರ ಹಾಡು


Team Udayavani, May 30, 2017, 3:07 PM IST

um.jpg

ಮಳೆ ಬಿದ್ದಿದೆ. ನೋಡ್ತಾ ನೋಡ್ತಾ ನಮ್ಮನ್ನು, ನಿಮ್ಮನ್ನು ತೊಪ್ಪೆ ಮಾಡಲಿದೆ. “ಅಯ್ಯೋ, ನೀವು ನೆನೆಯಬೇಡಿ’ ಎನ್ನುತ್ತಾ ಅಲ್ಲಿ ಛತ್ರಿಯೊಂದು ಓಡಿಬಂದು ಕೈಸೇರುತ್ತೆ. ಇನ್ನು ಮೂರ್‍ನಾಲ್ಕು ತಿಂಗಳು ಕೊಡೆಯೇ ನಮಗೆಲ್ಲ ಸಂಗಾತಿ. ಬೀದಿಯಲ್ಲಿ ಈ ಬಣ್ಣದ ಕೊಡೆಗಳ ಪ್ರೇಮರಾಗ, ಮಳೆಯಲ್ಲಿ ಕಂಠ ಉಬ್ಬಿಸಿದ ಗ್ರಾಮಾಫೋನಿನಂತೆ ತಾಜಾ ತಾಜಾ. ಛತ್ರಿಗಳೊಂದಿಗೆ ದೋಸ್ತಿ ಮಾಡುವ ಈ ಹೊತ್ತಿನಲ್ಲಿ ಇಲ್ಲೊಂದು ಲೇಖನ, ತುಂತುರುವಿಗೆ ಮುಖವೊಡ್ಡಿದಂತೆ ಹಿತ ನೀಡಲಿದೆ…  

ನಂದೊಂಥರ ರಗಡ್‌ ವ್ಯಕ್ತಿತ್ವ. ಕಾಲೇಜಲ್ಲಿ ತುಂಬಾ ಕೆಟ್ಟ ಹುಡುಗ, ಸ್ವಲ್ಪ ಒಳ್ಳೆ ಹುಡುಗ ಅನ್ನೋ ಥರದ ಕ್ಯಾರೆಕ್ಟರ್‌. ಕ್ಲಾಸಿಗೆ ಲೇಟ್‌ ಆಗಿ ಬರದೇ ಇದ್ದ ದಿನಗಳೇ ವಿರಳ. ಸೂರ್ಯನ ಬೆಳಕು ಮುಖಕ್ಕೆ ರಾಚಿದ ಮೇಲೆಯೇ ನನಗೆ ಬೆಳಗಾಗ್ತಿದ್ದಿದ್ದು, ಆಮೇಲೆ ಅರ್ಧಂಬರ್ಧ ತಿಂದು, ಅಮ್ಮನ ಬೈಗುಳಗಳೆಲ್ಲಾ ಆಶೀರ್ವಾದ ಅಂದ್ಕೊಂಡು ಬಸ್‌ ಹತ್ತಿದ್ರೆ ಮುಗೀತು. ಗೊತ್ತಲ್ವಾ, ಲೋಕಲ… ಬಸ್‌ಗಳಲ್ಲಿ ಆಗೋ ಕಾಮನ್‌ ಅವಾಂತರ? ಸಿಟಿ ಬಸ್ಟ್ಯಾಂಡ್‌ ತಲುಪುವವರೆಗೆ ಎಲ್ಲಾ ವಿಧದ ನೃತ್ಯ ಪ್ರಕಾರಗಳನ್ನು ಕುಂತಲ್ಲೇ ಮಾಡಿ ಮುಗಿಸಿರುತ್ತಿದ್ದೆ. ಮಳೆಗಾಲದಲ್ಲಿ ಬಸ್ಸಿನ ತಾರಸಿಯಿಂದ ಸೋರುವ ನೀರಿಗೆ ನನ್ನ ಮಳೆ ಡ್ಯಾನ್ಸ್‌ ಕೂಡ ಆಗಿಬಿಡುತ್ತಿತ್ತು. ಯಾರಿಗಂತ ಬೈಯ್ಯೋದು! ಕಚೀìಫ್ ಮರೆತು ಬಂದಾಗ ನನಗೆ ನಾನೇ ಬೈಕೊಂಡು ತೆಪ್ಪಗಾಗ್ತಿದ್ದೆ.

ಕಂಡಕ್ಟರ್‌ ಜೊತೆ ದಿನಕ್ಕೆರಡು ಬಾರಿ ಜಗಳ ಆಡಲಿಲ್ಲ ಅಂದ್ರೆ ಬೆಳಿಗ್ಗೆ ತಿಂದಿರೋ ಅವಲಕ್ಕಿ, ಮಧ್ಯಾಹ್ನ ತಿಂದಿರೋ ಎಗ್‌ ಪಪ್ಸ್ ಜೀರ್ಣ ಆಗಲ್ವೇನೋ ಅನ್ನೋ ಥರದ ಫೀಲಿಂಗು. ಜೀವಕ್ಕೆ ಜೀವ ಬೇಕಾದ್ರು ಕೊಡ್ತೀನಿ, ಲೋಕಲ್ ಬಸ್ಸಲ್ಲಿ ಸೀಟ್‌ ಹಿಡ್ಕೊ ಅನ್ನೋಕೊಬ್ಬ ಚಡ್ಡಿ ದೋಸ್ತ್ ಅವನೋ ಉರ್ದು ಜೊತೆ ಕನ್ನಡ ಮಿಕ್ಸ್‌ ಮಾಡಿ ಮಾತಾಡೋನು. ನಂಗೂ ಚೂರು ಪಾರು ಹಿಂದಿ ಬರ್ತಿದ್ದಿದ್ದರಿಂದ ಅವನ ಜೊತೆಗೆ ಹಿಂದಿಯಲ್ಲಿ ಪಿ.ಹೆಚ್‌.ಡಿ ಪಡೆದವನಿಗಿಂತ ತುಸು ಜಾಸ್ತೀನೆ ಮಾತಾಡ್ತಿದ್ದೆ. ಅದನ್ನು ಗಮನಿಸಿದ್ದ ಎಷ್ಟೋ ಜನ ಹುಡುಗಿಯರ ಕಣ್ಣಿಗೆ ನಾನು ಕನ್ನಡದವನೇ ಅಲ್ಲಾ ಅನಿಸಿಬಿಟ್ಟಿತ್ತು ಅನ್ನೋದು ಸ್ವಲ್ಪ ತಡವಾಗಿ ಬೆಳಕಿಗೆ ಬಂದ ಸತ್ಯ. ಅವಾಗ ಒಂಚೂರು ಜಾಸ್ತೀನೇ ಭಯ ಆಗಿತ್ತು.

ಅದೇನೇ ಇರಲಿ ಬಿಡಿ. ನನ್ನ ಕಥೆ ಗಿರಕಿ ಹೊಡೆಯೋದು ಮಳೆಗಾಲದ ಸುತ್ತ. ಈ ಛತ್ರಿ ವಿಷಯ ಗೊತ್ತಲ್ವ? ಹುಡ್ಗಿàರಿಗೆ ವರ್ಷದ ಮುನ್ನೂರ ಅರವತ್ತೈದು ದಿನವೂ ಛತ್ರಿ ಜೊತೆಗಿರಬೇಕು. ಹುಡುಗರಿಗೆ ಮಳೆಯಲ್ಲಿ ಒ¨ªೆಯಾಗಿ ತಿರುಗೋದಾದ್ರು ಸರಿ, ಛತ್ರಿ ಇಟ್ಕೊಂಡು ತಿರುಗಾಡೋದು ಅಂದ್ರೆ ಅದೇನೋ ಬಿಟ್ಕೊಂಡಂಗೆ. ಅಂಥವರ ಸಾಲಿನಲ್ಲಿ ನಾನೂ ಒಬ್ಬ. ನಾನು ಛತ್ರಿಯ ಮುಖವನ್ನು ಕೊನೆ ಬಾರಿ ನೋಡಿದ್ದು ನಿನ್ನೆ ಸಂಜೆ ಅತ್ತೆ ಮನೆಯಿಂದ ಬರುವಾಗ.

ಏನೋ ಪಾಪ ಹುಡುಗ ಛತ್ರಿ ನೋಡಿ ವರ್ಷಗಳೇ ಕಳೆದಿರಬೇಕು ಅಂದ್ಕೊಂಡ್ರಾ? ಹಾಗೇನೂ ಇÇÉಾ..!! ಆದ್ರೆ ಕಾಲೇಜಿಗೆ ಛತ್ರಿ ತಗೊಂಡೋಗೋಕೆ ಕೋಟಿ ಕೊಡ್ತೀನಿ ಅಂದ್ರೂ ಒಪ್ಕೊಳ್ಳೋ ದೊಡ್ಡ ಮನಸಿರಲಿಲ್ಲ.

ಯಾಕೆ ಅಂದ್ರಾ? ಛತ್ರಿ ಕೊಂಡೊಯ್ಯುವುದೆಂದರೆ ಪಾಸಿಟಿವ್‌ಗಿಂತ ನೆಗೆಟಿವ್‌ಗಳೇ ಜಾಸ್ತಿ! ಒಮ್ಮೊಮ್ಮೆ ಮಳೆ ನಿಲ್ಲದೆ ಬೆಳಿಗ್ಗೆ ಮನೆ ಬಿಡೋ ಅಷ್ಟೊತ್ತಿಗೆ ಒಂದು ಕ್ಲಾಸ್‌ ಮುಗಿದು ಹೋಗಿರುತ್ತಿತ್ತು. ಆದ್ರೆ ಹೆಚ್ಚಿನ ಸಲ ರಸ್ತೆಯಲ್ಲಿ ತುಂತುರು ಮಳೆಯಲ್ಲಿ ನೆನೆಯೋ ಹುಡುಗನ ಮೇಲೆ ಉಕ್ಕಿ ಬರೋ ಕರುಣೆ ಪಕ್ಕದ್ಮನೆ ಹುಡ್ಗಿàರ ಹಾರ್ಟನ್ನು ಐಸ್‌ ಥರ ಕರಗಿಸಿ ಬಿಡ್ತಿತ್ತು ಅನ್ಸುತ್ತೆ. ಇದನ್ನೇ ನೋಡಿ ಪಾಸಿಟಿವ್‌ ಅಂತ ಆವಾಗ್ಲೆà ಹೇಳಿದ್ದು. ಒಂದೇ ಛತ್ರಿ ಕೆಳಗೆ ಒಂದು ಹುಡುಗಿ ಜೊತೆ ಜಿನುಗೋ ಮಳೆಯಲ್ಲಿ ವಾಕಿಂಗ್‌ ಹೋಗೋದು ಅಂದ್ರೆ ಸ್ವರ್ಗಕ್ಕೂ ಕಿಚ್ಚು ಹಚ್ಚಿದ ಹಾಗೆಯೇ ಅಲ್ವಾ? ಇನ್ನೂ ಅನುಭವಕ್ಕೆ ಬಂದಿÇÉಾ ಅಂದ್ರೆ ಟ್ರೈ ಮಾಡಿ ನೋಡಿ. ಅಯ್ಯೋ ಬರೀ ಛತ್ರಿ ನೋಡಿ ಬಿತ್ರಿ ಸಹವಾಸ ಮಾಡಿºಟ್ಟಿàರಾ ಆಮೇಲೆ.

ಬೀಳ್ಳೋ ಹೊಡೆತಕ್ಕೆ ನಾನಂತೂ ಹೊಣೆಗಾರ ಆಗಲಾರೆ!!
ನಂಗೆ ಜೊತೆಯಾಗ್ತಿದ್ದ ರಮ್ಯಾ, ಕವನ, ಪ್ರತಿಮಾ ಎಲ್ಲರೂ ಕೊನೆವರೆಗೂ ನನ್ನ ಪಾಲಿನ ದೇವತೆಗಳೇ. ಅವರುಗಳ ಛತ್ರಿಯ ಆಯಸ್ಸು ಗಟ್ಟಿಯಾಗಿರಲಿ ಅಂತ ಬೇಡ್ಕೊಳ್ಳೋಕ್ಕಾದ್ರು ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗ್ತಿ¨ªೆ. ಒಂದೊಂದು ದಿನ ಮನೆ ಬಿಡುವ ಹೊತ್ತಿಗಾಗಲೇ ಒಂದು ಛತ್ರಿ ಸಿಕ್ಕರೆ ಲೋಕಲ… ಬಸ್ಸಲ್ಲಿ ಅರ್ಧ ಗಂಟೆ ಹರಟೆ ಪಕ್ಕಾ ಆಗಿರ್ತಿತ್ತು. ಹೌದು, ಇಂಥ ಮೀಟಿಂಗುಗಳೇ ಒಳ್ಳೆ ಗೆಳೆತನಕ್ಕೆ ನಾಂದಿ ಆಗ್ತಿತ್ತು. ಎಷ್ಟೋ ಸಲ ಥ್ಯಾಂಕÕ… ಹೇಳ್ಳೋದು ಮಳೆಗೋ, ಛತ್ರಿಗೋ ಅಂತ ಕನ್‌ಫ್ಯೂಸ್‌ ಆಗಿಬಿಡ್ತಿ¨ªೆ. ಭಟ್ಕಳದ ಬಸ್ಟ್ಯಾಂಡ್‌ಗೆ ಸರಿಯಾದ ಸಮಯಕ್ಕೆ ಬಸ್‌ ಬರೋದು ಅಂದ್ರೆ ತುಂಬಾ ಹೊಟ್ಟೆ ಹಸಿದಾಗ ಚಿಕನ್‌ ಬಿರಿಯಾನಿ ಸಿಕ್ಕಿಂದಂಗೇನೆ. ಟೈಮ… ಸಿಕ್ಕಾಗ ಬರೋ ಬಸ್ಸುಗಳಿಗೆ ಬಕ ಪಕ್ಷಿಗಳಂತೆ ಕಾಯ್ತಾ ನಿಂತಿರುವ ನಮಗೆÇÉಾ ಮಳೆರಾಯ ದೊಡ್ಡ ವಿಲನ್‌!! ಮಳೆ ಸುರಿಯೋವಾಗ ನೆನೆಯೋ ನನ್ನನ್ನು ನೋಡಿ ಪಕ್ಕದಲ್ಲಿರೋ ಒಬ್ಬಳಾದ್ರು ಹುಡುಗಿ ಹೃದಯ ಕರಗದೇ ಇರೋಕೆ ಸಾಧ್ಯಾನಾ? ಕೊನೆಗೂ ಛತ್ರಿ ಕೆಳಗಡೆ ನಾನ್‌ ನಿÇÉೋಕೆ ಒಂದು ಐದು ನಿಮಿಷ ಅಷ್ಟೇ ತಗುಲುತ್ತಿದ್ದಿದ್ದು. ಈ ಕೆಂಪು ಬಸ್ಸುಗಳನ್ನು ಕಾಯೋದೇ ಒಂದು ಹಿಂಸೆಯಾದರೆ ಬಸ್ಟ್ಯಾಂಡ್‌ ಎದುರಿಗೆ ಇರೋ ಕೆಸರು ಗ¨ªೆಯಲ್ಲಿ ಕಾಲಿಡೋದು ಇನ್ನೊಂದು ಗ್ರಹಚಾರ. ಛತ್ರಿ ಹಿಡಿದವಳ ಮುಖ ನೋಡಿ ಕೆನ್ನೆ ಕೆಂಪಾಗ್ತಿದ್ದಿದ್ದು. ಕಣÕನ್ನೆಯಲ್ಲಿ ಮಾತಾಡೋಕೆ ಶುರು ಮಾಡ್ತಿದ್ದಿದ್ದು, ಇವೆಲ್ಲಾ ನೆನಪಿಸಿಕೊಂಡಾಗಲೆÇÉಾ ಕಚಗುಳಿ ಇಟ್ಟಂಗಾಗುತ್ತೆ. ಅಷ್ಟಕ್ಕೆ ಮುಗಿಯೋ ಚಿಕ್ಕ ಕಥನಗಳೇನು ಅÇÉಾ ಬಿಡಿ ಅವು! ಈ ಛತ್ರಿಯ ಸಹವಾಸದಿಂದ ನನ್ನಂಥ ಎಷ್ಟೋ ಜನ ಹುಡುಗರು ಪ್ರೀತಿ ಬಲೆಗೂ ಬೀಳ್ಳೋ ಹಾಗಾಗಿದೆ.

ಕೊನೆಗೆ ಬಸ್‌ ಇಳಿದು, ಮುಡೇìಶ್ವರದ ಸ್ವಾಗತ ಕಮಾನಿನ ಕೆಳಗೆ ಒಂದರ್ಧ ಕಿಲೋಮೀಟರ್‌ ನಡೆದು ಸಾಗಬೇಕಿದ್ದ ವಿದ್ಯಾ ದೇಗುಲಕ್ಕೆ ಮಳೆ ನಿಲ್ಲದ ಹೊತ್ತಲ್ಲಿ ಹುಡುಕಾಟ ಮತ್ಯಾವುದೋ ಛತ್ರಿಗೆ. ಅಲ್ಲಿಗೆ ಕಾಲೇಜಿನ ಮುಂಭಾಗ ತಲುಪುವವರೆಗಿನ ಪ್ರಯಾಣಕ್ಕೆ ಛತ್ರಿ ಜೊತೆಗೆ ಒಂದು ಬ್ಯೂಟಿಫ‌ುಲ… ವಾಕ್‌ವೆುàಟ್‌ ಕೂಡ!! ಅದ್ಯಾಕೋ ಈ ಹುಡ್ಗಿàರ ಜೊತೆ ನಡೆಯುವಾಗ, ಪಾಪ… ಅವರುಗಳ ಕೈನಲ್ಲಿ ಛತ್ರಿ ಇದ್ರೆ ಕೈ ನೋವು ಬರುತ್ತೇನೋ ಅಂತ ಇಸ್ಕೊಳ್ಳೋ ತುಂಬಾ ದೊಡ್ಡ ಮನಸ್ಸು ಹುಡುಗರದ್ದು. ಇದೇನು ಒಂದಿನಕ್ಕೆ ಮುಗಿಯೋ ಕಥೆ ಅÇÉಾ! ಮಳೆಗಾಲದಲ್ಲಿ ಛತ್ರಿಗಳ ಕೆಳಗೆ ನಡೆಯುವ ಪೋಲಿ ಹುಡುಗರ ಪ್ರೀತಿಯ ಕಥೆಗಳು ಸಾವಿರ.

ಸದ್ಯದÇÉೇ ತುಂತುರು ಮಳೆಯಲ್ಲಿ ಬಣ್ಣದ ಛತ್ರಿಯ ಕೆಳಗೆ ಕಣÕನ್ನೆ, ಮುಗುಳುನಗೆಯಲ್ಲಿ ಶುರುವಾದ ಪ್ರೇಮ ಕಥೆಯೊಂದನ್ನು ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೂ ನಿಮ್ಮ ಛತ್ರಿಗಳು ನಿಮ್ಮ ಜೊತೆಗೆ ಹುಷಾರಗಿರಲಿ ಅಯ್ತಾ?

– ತಿರು ಭಟ್ಕಳ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.