ಬಾರೋ ಸಾಧಕತ ಕೇರಿಗೆ : ಅರಮನೆಯ ಶಿಶು ಗುಡಿಸಲಲ್ಲಿ ಬೆಳೆಯಿತು!

Team Udayavani, Oct 13, 2020, 8:00 PM IST

josh-tdy-5

ಚಳಿಗಾಲದ ಒಂದು ಮುಂಜಾನೆ. ನಸುಕಿನ ಬೆಳಕಿನಲ್ಲಿ ಪಾದ್ರಿಗಳು ಚರ್ಚಿನ ಬಾಗಿಲು ತೆರೆಯುವಷ್ಟರಲ್ಲಿ ಮೆಟ್ಟಿಲ ಮೇಲೆ ಒಂದು ನವಜಾತ ಶಿಶು ಮಲಗಿರುವುದನ್ನು ಕಂಡರು. ಸಣ್ಣದೊಂದು ಬುಟ್ಟಿಯಲ್ಲಿ ಮೆತ್ತನೆ ಬಟ್ಟೆಗಳನ್ನು ಹಾಸಿ ಆ ಕೂಸನ್ನು ಮಲಗಿಸಲಾಗಿತ್ತು. ಜಗತ್ತಿನ ಪರಿವೆಯಿಲ್ಲದೆ ನಿದ್ರೆಗೆ ಜಾರಿದ್ದ

ಆ ಮಗುವನ್ನು ಪಾದ್ರಿಗಳು ಎತ್ತಿಕೊಂಡರು. ಸಮೀಪದಲ್ಲಿದ್ದ ಅನಾಥಾಲಯಕ್ಕೆ ಮಗುವನ್ನು ಹಸ್ತಾಂತರಿಸಿದರು. ಸ್ಫುರದ್ರೂಪಿ ಕಂದ. ಸುತ್ತಿಟ್ಟ ಬಟ್ಟೆಗಳ್ಳೋ ಶ್ರೀಮಂತರ ಮನೆಯದೆಂದು ಸಾರಿಹೇಳುತ್ತಿತ್ತು. ಅದಾಗಿ ಕೆಲ ದಿನಗಳ ನಂತರ ಅನಾಥಾಲಯಕ್ಕೆ ದೇಶದ ಮುಖ್ಯ ಹುದ್ದೆಯಲ್ಲಿರುವ ಸೇನಾಧಿಕಾರಿಯೊಬ್ಬ ರಹಸ್ಯವಾಗಿ ಬಂದ. ಮಗುವಿನ ದೇಖ ರೇಖೀ ನೋಡಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಬೇಕೆಂದು ಅಲ್ಲಿನ ಆಡಳಿತ ನೋಡಿಕೊಳ್ಳುತ್ತಿದ್ದವರನ್ನು ಕೇಳಿಕೊಂಡ. ಆದರೆ ಮಗುವಿನೊಡನೆ ತನ್ನ ಯಾವ ಸಂಬಂಧವೂ ಎಲ್ಲೂ ಪ್ರಕಟವಾಗಬಾರದೆಂಬ ಷರತ್ತನ್ನೂ ಹಾಕಿದ. ಅನಾಥಾ ಲಯ, ತನ್ನ ನಿಯಮಾವಳಿಗಳಿಗೆ ತಕ್ಕಂತೆ ಮಗುವನ್ನು ಸಾಮಾನ್ಯ ಹೆಂಗಸೊಬ್ಬಳಿಗೆ ಹಸ್ತಾಂತರಿಸಿತು.ಆಕೆಯೋ ಗಾಜಿನ ಕೆಲಸ ಮಾಡುತ್ತಿದ್ದ ಓರ್ವ ಮಧ್ಯಮ ವರ್ಗದ

ಹೆಣ್ಣುಮಗಳು. ದೇಶದ ಸೇನೆಯ ಫಿರಂಗಿದಳದ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್‌ ಜನರಲನೇಆಮಗುವಿನ ಅಪ್ಪ; ದೇಶದ ಸಂಸತ್ತಿನ ಅಧ್ಯಕ್ಷನ ಮಗಳೇ ಆ ಮಗುವಿನ ಅಮ್ಮ – ಎಂಬ ಸತ್ಯ ಆಕೆಗಾದರೂ ಹೇಗೆ ತಿಳಿಯಬೇಕು? ಹೀಗೆ ಅರಮನೆಯಂಥ ಬಂಗಲೆಯಲ್ಲಿ ಹುಟ್ಟಿ ಬಾಲ್ಯವನ್ನು ಕಳೆಯಬೇಕಿದ್ದ ಹುಡುಗ ಬೆಳೆದದ್ದು ಒಬ್ಬ ಕಾರ್ಮಿಕ ಮಹಿಳೆಯ ಸಾಧಾರಣ ಮನೆಯಲ್ಲಿ. ಮಲಗಿದ್ದು ಚಾಪೆಯಲ್ಲಿ. ಬಾಲ್ಯದಲ್ಲಿ ಆಡಿದ್ದು ಬೀದಿಯ ಗೆಳೆಯರೊಂದಿಗೆ . ಓದಿದ ಶಾಲೆಯೂ ಸಾಧಾರಣವೇ! ಇಷ್ಟೆಲ್ಲ ಸಾಧಾರಣವಾದ ಬಾಲ್ಯವನ್ನು ಕಳೆದ ಆ ಹುಡುಗನ ಬುದ್ಧಿಮತ್ತೆ ಮಾತ್ರ ಅಸಾಧಾರಣವಾಗಿತ್ತು. ಗಣಿತ, ವಿಜ್ಞಾನ, ತತ್ವಜ್ಞಾನ, ಕಲೆ, ಸಂಗೀತ… ಎಲ್ಲದರಲ್ಲೂ ಅವನದ್ದು ಅಪರಿಮಿತ ಆಸಕ್ತಿ, ಅಭಿಜಾತ ಪ್ರತಿಭೆ.

ಆತ ಭೌತಶಾಸ್ತ್ರದಲ್ಲಿ ಹೊಸ ಸಂಗತಿಗಳನ್ನು ಸಂಶೋಧಿಸಿದ. ಡೈನಮಿಕ್ಸ್ ಕ್ಷೇತ್ರದಲ್ಲಿ ಹೊಸ ನಿಯಮಗಳನ್ನು ನಿರೂಪಿಸಿದ. ಬೀಜಗಣಿತದ ಮೂಲಭೂತ ಪ್ರಮೇಯ ಎಂದು ಹೆಸರಾದ ಪ್ರಮೇಯವನ್ನು ನಿರೂಪಿಸಿ ಸಾಧಿಸಿದ. ಧ್ವನಿವಿಜ್ಞಾನದಲ್ಲಿ ಸಾಕಷ್ಟು ಕೆಲಸ ಮಾಡಿದ. ಡಿಡೆರೋ ಎಂಬ, ಆ ಕಾಲದ ರಾಷ್ಟ್ರಮಟ್ಟದ ಶ್ರೇಷ್ಠ ಪಂಡಿತನ ಜೊತೆ ಸೇರಿ ವಿಶ್ವಕೋಶವನ್ನು ರಚಿಸುವ ಕೆಲಸವನ್ನು ಪೂರ್ಣಗೊಳಿಸಿದ. ಆ ಗ್ರಂಥಕ್ಕಾಗಿ ಈತ ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಬರೋಬ್ಬರಿ ಸಾವಿರ ಲೇಖನಗಳನ್ನು ಬರೆದ!

ಇಷ್ಟೆಲ್ಲ ಸಾಧನೆ ಮಾಡಿದ ಈ ವಿಶ್ವಪ್ರಸಿದ್ಧ ಗಣಿತಜ್ಞನ ಹೆಸರು ಡಲನ್ಬೇರ್‌ (ಪುಸ್ತಕಗಳಲ್ಲಿ ಡಿ’ಆಲಂಬರ್ಟ್‌ ಎಂದೂ ಬರೆದಿರುವುದುಂಟು). ಡಲನ್ಬೇರ್‌ತನ್ನಜೀವನದಐವತ್ತುವರ್ಷಗಳನ್ನುಕಳೆದದ್ದುಸಾಕುತಾಯಿಯ ಜೊತೆಗೇ. ಆತ ಹೆಸರುವಾಸಿಯಾಗಿ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬಂದ ಮೇಲೆ ಒಂದು ದಿನ ಆತ ಜನ್ಮಕೊಟ್ಟ ತಾಯಿ ಬಂದಳಂತೆ. ನಾನೇ ನಿನ್ನ ತಾಯಿ. ನನ್ನ ಜೊತೆ ಬಂದುಬಿಡು ಎಂದು ಬೇಡಿಕೊಂಡಳಂತೆ. ಡಲನ್ಬೇರ್‌ ಸಾಧ್ಯವಿಲ್ಲ. ನನ್ನ ತಾಯಿ ಅರಮನೆಯಲ್ಲಿ ವಾಸಮಾಡುವ ರಾಣಿ ಅಲ್ಲ. ಅವಳು ಗಾಜಿನ ಕೆಲಸ ಮಾಡುವ ಬಡ ಕೂಲಿಕಾರ್ತಿ ಎಂದು ಹೇಳಿ ಡಲನ್ಬೇರ್‌ ತನ್ನ ಸಾಕು ತಾಯಿಯ ಜೊತೆಗೇ ಉಳಿಯುವ ನಿರ್ಧಾರವನ್ನು ಪ್ರಕಟಿಸಿದನಂತೆ. ­

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.