ಆಫೀಸಲ್ಲಿ ಅಸಿಡಿಟಿ
Team Udayavani, Jan 14, 2020, 5:00 AM IST
ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವಾಗ ಆಕಳಿಕೆ ಬರುತ್ತದೆ. ಅದು ಇನ್ನೂ ಪೂರ್ತಿ ಮುಗಿದೇ ಇರೋಲ್ಲ. ಆಗಲೇ ಗಂಟಲ ಮೇಲಾºಗದ ಪ್ರದೇಶದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ತೆರೆದ ಆಕಳಿಕೆ ಬಾಯಿ ಮುಚ್ಚಲು ಯಮಯಾತನೆ. ನನಗೆ ಯಾವುದೋ ದೊಡ್ಡ ಕಾಯಿಲೆ ಅಪ್ಪಳಿಸಿದೆ ಅನ್ನಿಸಿಬಿಡುತ್ತದೆ. ಇದರಂತೆ, ಕೆಲಸ ಮಾಡುತ್ತಿದ್ದ ಖುರ್ಚಿಯಿಂದ ಏಳುತ್ತಿದ್ದಂತೆ ಮೀನಖಂಡಗಳಲ್ಲಿ ವಿಪರೀತವಾದ ಬೇನೆಯಾಗಿ, ಕಾಲನ್ನು ಎತ್ತಿ ಇಡಲೂ ಸಹ ಆಗದಂತ ಪರಿಸ್ಥಿತಿ ಎದುರಾಗಿಬಿಡುತ್ತದೆ. ಬಹಶ ಕಾಲಿನ ಭಾಗಕ್ಕೆ ಸ್ಟ್ರೋಕ್ ಆಗಿಬಿಟ್ಟಿದೆಯೇನೋ ಅನಿಸುವಷ್ಟು ನೋವು… ಒಂದಷ್ಟು ನಿಮಿಷಗಳ ನಂತರ ನಿಧಾನಕ್ಕೆ ನೋವು ಕರಗಿಹೋಗುತ್ತದೆ. ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ, ನಿಮ್ಮ ಕೆಲಸದ ಸಮಯದಲ್ಲಿ ಹೀಗೆ ಕಾಡುವುದು ಬೇರೆ ಯಾವ ರೋಗವೂ ಅಲ್ಲ. ಅದುವೇ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್. ಬಿಸಿ, ಬಿಸಿ ಅವರೇಕಾಳು ಉಪ್ಪಿಟ್ಟು ತಿಂದು ಆಫೀಸಿಗೆ ಬಂದಿದ್ದರೆ, ಆಲೂಗಡ್ಡೆ ಕುರ್ಮ ಜೊತೆಗೆ ಚಪಾತಿ ಮೆದ್ದು ಬಂದಿದ್ದರೆ, ಬದನೆಕಾಯಿ ಸಾಂಬರು ತಿಂದಿದ್ದರೆ ಹೀಗೆ .. ಇಂಥ ತಿಂಡಿಗಳಿಂದಲೇ ಅಸಿಡಿಟಿ ಶುರುವಾಗುವುದು. ಇದು ತಾರಕ್ಕೇರಿದಾಗ ಈ ರೀತಿಯಾಗುತ್ತದೆ. ಎಷ್ಟೋ ಸಲ ಎದು ಉರಿ, ನೋವು ಉಂಟಾದಾಗ ನನಗೆ ಹೃದಯದ ಸಮಸ್ಯೆ ಇದೆ ಅಂದುಕೊಳ್ಳೋರು ನಮ್ಮಲ್ಲಿ ಇದ್ದಾರೆ. ತಪ್ಪು, ತಪ್ಪು ಇದೂ ಕೂಡ ಅಸಿಡಿಟಿಯ ಇನ್ನೊಂದು ರೀತಿಯ ಕಿರುಕುಳವೇ.
ಆಫೀಸಲ್ಲಿ ಹೀಗೆ ಕಾಡಿದರೆ ಏನು ಮಾಡೋದು? ಚಿಂತೆ ಬೇಡ. ಜೇಬಲ್ಲಿ ಒಂದಷ್ಟು ಓಂ ಕಾಳನ್ನು ಹಾಕಿಕೊಂಡು ಬನ್ನಿ. ಅದನ್ನು ಆಗಾಗ, ತಿನ್ನುತ್ತಿರಿ. ಆಫೀಸಿಗೆ ಹೊರಡುವಾಗ ಮನೆಯ ಮುಂದಿನ ತುಳಸಿಯ ಎರಡು ಎಲೆ ಕಿತ್ತು ಬಾಯಿಗೆ ಹಾಕಿಕೊಳ್ಳಿ. ಇದು ಪಚನ ಕ್ರಿಯೆ ಸರಾಗಮಾಡುತ್ತದೆ. ಒಂದು ಬಾಟಲ್‌ನಲ್ಲಿ ಮಜ್ಜಿಗೆ ಇಟ್ಟುಕೊಂಡಿರಿ. ಅದಕ್ಕೆ ಮೂರು ನಾಲ್ಕು ಕಾಳು ಮೆಣಸನ್ನು ಜಜ್ಜಿ ಹಾಕಿ. ಯಾವ ಕಾರಣಕ್ಕೂ ಹಸಿಮೆಣಸನ್ನು ಹಾಕಬೇಡಿ. ಇದು ಅಸಿಡಿಟಿಯ ಕ್ಲೋಸ್ ಫ್ರೆಂಡ್. ಮೂರು ನಾಲ್ಕು ಸಲ ಕುಡಿದು ನೋಡಿ. ಆಫೀಸಲ್ಲಿ ಯಾವ ಕಾರಣಕ್ಕೆ ಅಸಿಡಿಟಿ ನಿಮ್ಮ ಹೊಟ್ಟೆಯಲ್ಲಿ ಕುಣಿಯುವುದಿಲ್ಲ. ಆಫೀಸಲ್ಲಿ ಬಾಸು ರೇಗಿದರು, ಕೆಲಸ ಮುಗಿದಿಲ್ಲ, ಸಹೋದ್ಯೋಗಿ ಕಿರಿಕಿರಿ ಮಾಡಿದರು ಅಂತ ಟೆನÒನ್ ತಗೊಂಡರೆ… ಹೊಟ್ಟೆ ಹಸಿವಾಗಲ್ಲ. ಅರ್ಧ ಹೊಟ್ಟೆ ಊಟ ಮಾಡುತ್ತೀರಿ. ಆಗಲೂ ಕೂಡ ಅಸಿಡಿಟಿ ತಾಳ ಹಾಕುತ್ತದೆ. ಅಂದರೆ, ಅಸಿಡಿಟಿಗೆ ನಾವು ತಿನ್ನುವ ಆಹಾರದಷ್ಟೇ ಮಾನಸಿಕ ಸ್ವಾಸ್ಥ್ಯ ಕೂಡ ಮುಖ್ಯ. ಕೆಲಸ ಮಾಡುವ ವಾತಾರವಣ ಒತ್ತಡ ರಹಿತವಾಗಿ, ಶುದ್ಧವಾಗಿಟ್ಟುಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.