ಅಯ್ಯೋ, ಗಡ್ಡ! “ಗಡ್ಡ’ದಾರಿ ಹಿಡಿದ ಹುಡುಗ
Team Udayavani, Feb 27, 2018, 5:00 PM IST
“ಗಡ್ಡ ತೆಗೆದ ಆ ಗದ್ದ ಸುಂದರವೇ ಅಲ್ಲ. ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು. ಗಡ್ಡದಿಂದ ನನ್ನ ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆ. ಮೊಗದ ಸೌಂದರ್ಯಕ್ಕೆ ಗಡ್ಡವೇ ರಕ್ಷಕ. ಆದರೆ, ಇಂಥ ಉಪಕಾರಿ ಗಡ್ಡವನ್ನು ಸಹಿಸದವರೂ ನನ್ನ ಅಕ್ಕಪಕ್ಕದಲ್ಲಿದ್ದಾರೆ’… ಎಂದು ಇಲ್ಲೊಬ್ಬ ಗಡ್ಡದ ಹುಡುಗ ಗುಡುತ್ತಿದ್ದಾನೆ!
ತನ್ನಷ್ಟಕ್ಕೆ ಬೆಳೆದ ಈ ಗಡ್ಡದ ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತ್ತಿಗೆ, ಯಾರದೋ ಸನ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು ಕೇಳುವುದು, “ಯಾರಾತ ಆ ಗಡ್ಡದ ಹುಡುಗ?’ ಎಂದು. ಅದೆಷ್ಟೋ ಸಲ ಮಾತಾನಾಡಿಸಿದ್ದೂ ಇದೆ. “ಮನೆ ಎಲ್ಲಿ? ಯಾರ ಮಗ? ಏನು ಓದುವುದು? ಏನು ಉದ್ಯೋಗ?’ ಎಂದು ಜನಗಣತಿಯ ಟೀಚರ್ ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯ ಅನುಭವವಾದದ್ದಿದೆ. ನನ್ನಂಥ ಗಡ್ಡಧಾರಿಗಳನ್ನೇಕೆ ಅಪರಾಧಿ ಥರ ನೋಡುತ್ತಾರೆಂಬುದಕ್ಕೆ ಇಲ್ಲಿಯವರೆಗೆ ಕಾರಣ ಸಿಕ್ಕಿಲ್ಲ.
ಮತ್ತೂಂದು ವ್ಯತಿರಿಕ್ತ ಅಂದರೆ, ನಮ್ಮ ಮನೆಯಲ್ಲಿ ಗಡ್ಡ ಬಿಡುವುದಕ್ಕೆ, ತೆಗೆಯುವುದಕ್ಕೆ ಚಕಾರವಿಲ್ಲದಿದ್ದರೂ, ಊರಿನವರಿಗೆ, ಅತ್ತಿಗೆಯಂದಿರಿಗೆ, ಸಂಬಂಧಿಗಳಿಗೆ, ಸೋದರತ್ತೆಯಂದಿರಿಗೆ, ಶಾಲಾ ಟೀಚರಿಗೆ, ಕಾಲೇಜು ಪ್ರಾಂಶುಪಾಲರಿಗೆ, ಕಡೆಗೆ ದಾರಿಹೋಕರಿಗೂ ನನ್ನ ಗಡ್ಡ ಚರ್ಚೆಯ ವಿಷಯವೇ. “ನಿನಗೆ ಗಡ್ಡ ಚಂದ ಕಾಣÕಲ್ಲ’, “ನಿನ್ನದು ಕೋಲು ಮುಖ, ಹಾಗಾಗಿ ಗಡ್ಡ ಇಲ್ಲದಿದ್ರೆ ಚಂದ’, “ಮೊಘಲರ ವಂಶದವನ ಹಾಗೆ ಕಾಣಿ¤ದ್ದೀಯಾ’… ಹೀಗೆಲ್ಲಾ ಕುಹಕವಾಡಿದ್ದೂ ಇದೆ. ದೂರದಿಂದ ಮಾವ ಆಗುವವರೊಬ್ಬರು, “ಗಡ್ಡ ಇಡುವುದು ನಮ್ಮ ಸಂಸ್ಕಾರ ಅಲ್ಲ ಆಲ್ವಾ?’ ಎಂದು ತನ್ನ ಮಗಳಿಗೆ ಈತ ವರನಲ್ಲ ಎನ್ನುವುದನ್ನು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿ ಮುನ್ಸೂಚನೆ ನೀಡಿಯೇಬಿಟ್ಟರು.
ಈ ಗಡ್ಡದಲ್ಲೂ ಹಲವು ವಿಧಗಳಿವೆ. ಕೈಯಾಡಿಸಿದರೆ ಕಂತಿದರೆ ಅದು ಪೋಕ್ರಿ ಗಡ್ಡ. ಅದೆÇÉೋ ಮೂಲೆಯಲ್ಲಿ ಒಂದು ನಾಕು ಕೂದಲು ಬೆಳೆದರೆ ಹೋತ ಗಡ್ಡ. ಸಾಧಾರಣ ಉದ್ದವಿದ್ದರೆ ಹೆಂಡತಿ ಗರ್ಭಿಣಿಯೋ ಇಲ್ಲವೋ ಎಂಬುದನ್ನು ಸೂಚಿಸುವ ಗಡ್ಡ. ಮತ್ತಷ್ಟು ಮುಖ ತುಂಬಾ ದಪ್ಪವಾಗಿದ್ದರೆ, “ಹುಡುಗನಿಗೆ ಹುಷಾರಿಲ್ಲ’ ಎಂಬರ್ಥದ ಗಡ್ಡ. ಹಲವು ಬಾರಿ ಅತ್ತಿಗೆಯಂದಿರ ಬಾಯಿ ಮುಚ್ಚಿಸಿದ್ದೇನೆ. “ನಿಮಗೆ ಗಡ್ಡ ಬರುವುದಿಲ್ಲವೆಂದು ನನ್ನನ್ನು ನೋಡಿ ನಂಜಿ ಕಾರುತ್ತೀರಿ’ ಎಂದು ಕೇಳಿ ಮತ್ತೆಂದೂ ನನ್ನ ಗಡ್ಡದ ಬಗೆಗೆ ಪ್ರಶ್ನಿಸದ ಹಾಗೆ ಮಾಡಿದ್ದಿದೆ. ಅವರೆಲ್ಲರಿಗೂ ನನ್ನ ಗಡ್ಡದ ಪ್ರಯೋಜನಗಳಾವುವೂ ಗೊತ್ತಿಲ್ಲ! ಗಡ್ಡದಿಂದ ನನ್ನ ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆ. ಮೊಗದ ಸೌಂದರ್ಯ ಕಾಪಾಡುತ್ತದೆ. ಕೆನ್ನೆಯನ್ನು ಬಿಸಿಲು, ಮಾಲಿನ್ಯದಿಂದ ಕಾಪಾಡುವುದಲ್ಲದೆ ತಂಪಾಗಿಡುತ್ತದೆ. ಜೊತೆಗೆ ಮೊಡವೆಗಳ ಗೊಡವೆಯೇ ಇಲ್ಲ.
ಗಡ್ಡ ತೆಗೆದ ಆ ಗದ್ದ ಸುಂದರವೇ ಅಲ್ಲ. ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು. ಗಡ್ಡದ ಮಾಸಿದ ಚುಕ್ಕಿಗಳ ಸಶೇಷವಲ್ಲದ ಬಿಂಬ ಎಂಬ ಸತ್ಯ ಮಾತ್ರ ಹೌದು. ತಮಗೂ ಗೊತ್ತಿರಬಹುದು, ಕರಿಯ ಜನಾಂಗದ ಪ್ರಥಮ ಮತ್ತು ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಗಡ್ಡ ಬಿಡುತ್ತಿದ್ದರು. ಅವರ ಎಲ್ಲ ಭಾವಚಿತ್ರಗಳಲ್ಲಿ ಗಡ್ಡವನ್ನು ನೋಡಬಹುದು.
ಯಾರಾದರೂ ಅದು ಪ್ರೇಮ ವೈಫಲ್ಯ ಇದ್ದಿರಬೇಕು ಎಂದು ಸಂಶಯಿಸಿದ್ದರೇ? ಇಲ್ಲ! ಅಚ್ಚರಿ ಎಂದರೆ, ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು 11ರ ಬಾಲಕಿಯೊಬ್ಬಳ ಪತ್ರವಂತೆ. 1860ರ ಅಕ್ಟೋಬರ್, ಆಗಷ್ಟೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವುದರಲ್ಲಿತ್ತು. ರಿಪಬ್ಲಿಕನ್ ಪಕ್ಷದಿಂದ ಲಿಂಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ ನ್ಯೂಯಾರ್ಕ್‌ನ ವೆಸ್ಟ್ ಫೀಲ್ಡ್‌ನಿಂದ ಗ್ರೇಸ್ ಬೆಡೆಲ್ಸ ಎಂಬ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ ಅಬ್ರಹಾಂ ಲಿಂಕನ್‌ರ ಕೈ ಸೇರಿತ್ತು. ಅದರಲ್ಲಿ “ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರೂ ದೊಡ್ಡವಳಾಗಿದ್ದರೆ ನಿಮಗೆ ವೋಟ್ ಮಾಡುತ್ತಿದ್ದೆ. ಆದರೇನಂತೆ, ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ವೋಟ್ ಮಾಡುವಂತೆ ಕೇಳುತ್ತೇನೆ. ಆದರೆ ಒಂದು ಷರತ್ತು: ನಿಮ್ಮ ಮುಖ ತುಂಬಾನೆ ಸಣಕಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ವೋಟು ಹಾಕುವಂತೆ ಒತ್ತಾಯಿಸುತ್ತಾರೆ. ಆಗ ನೀವು ನಮ್ಮ ಅಧ್ಯಕ್ಷರಾಗೋದು ಖಂಡಿತ’ ಎಂದು ಬರೆದಿತ್ತು. ಆ ಪುಟಾಣಿಯ ಬಯಕೆಯಂತೆಯೇ ಲಿಂಕನ್ ಜೀವನಪೂರ್ತಿ ಗಡ್ಡಧಾರಿಯಾಗಿಯೇ ಬದುಕಿದರು.
ಅಂಥದ್ದೊಂದು ಅದೃಷ್ಟ ನನ್ನ ಪಾಲಿಗೂ ಯಾಕೆ ಬರಬಾರದು? ಅದಕ್ಕಾಗಿ ಕಾಯುತ್ತಿರುವೆ. ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನು, ನಸುನಗುವ ತುಟಿಗಳನ್ನು ಅಡಗಿಸಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನ್ನಲ್ಲ, ಅವನು ಅವನೇ… ಬದಲಾದ್ದು ನಮ್ಮ ನೋಟ ಅಷ್ಟೇ!
– ಭರತೇಶ ಅಲಸಂಡೆಮಜಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.