ನಡೆಯದ ಉಪನ್ಯಾಸ
ಬಾರೋ ಸಾಧಕರ ಕೇರಿಗೆ
Team Udayavani, Jan 21, 2020, 5:42 AM IST
19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್. ವೈಟ್‌ಹೆಡ್ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ. ಒಮ್ಮೆ ಅವನು ಕೇಂಬ್ರಿಡ್ಜ್ನಲ್ಲಿ ತನ್ನ ತರಗತಿಗೆ ಐದು ನಿಮಿಷ ಮೊದಲೇ ಬಂದುಬಿಟ್ಟ. ಇಡೀ ಉಪನ್ಯಾಸ ಕೊಠಡಿ ಖಾಲಿ ಇತ್ತು. ವಿದ್ಯಾರ್ಥಿಗಳೆಲ್ಲ ಬೇರಾವುದೋ ಕ್ಲಾಸಿಗೆ ಹೋಗಿದ್ದರಿಂದ ಅವರು ಬರುವುದಕ್ಕಿನ್ನೂ ಸ್ವಲ್ಪ ಸಮಯ ಇದೆ ಅಂದುಕೊಂಡ ವೈಟ್‌ಹೆಡ್ ಅದುವರೆಗೆ ತನ್ನ ತಲೆ ತಿನ್ನುತ್ತಿದ್ದ ಸಮಸ್ಯೆಯನ್ನು ಬಿಡಿಸುತ್ತ ಕೂರೋಣ ಎಂದು ಬೋರ್ಡಿನತ್ತ ತಿರುಗಿದ. ಅಲ್ಲಿ ಅವನು ಯೋಚಿಸುತ್ತ ಸೂತ್ರ- ಸಮೀಕರಣ-ಚಿತ್ರಗಳನ್ನು ಬರೆಯುತ್ತ ಕೂತಿದ್ದಾಗ ಕ್ಲಾಸಿಗೆ ಒಬ್ಬೊಬ್ಬರಾಗಿ ವಿದ್ಯಾರ್ಥಿಗಳು ಬಂದು ಕೂತರು. ಇಡೀ ತರಗತಿಯೇ ಭರ್ತಿಯಾದರೂ ಅದ್ಯಾವುದೂ ಅವನ ಗಮನಕ್ಕೆ ಬರಲಿಲ್ಲ.
ವಿದ್ಯಾರ್ಥಿಗಳು ತುಂಬ ಸಹನಾಶೀಲರಾಗಿ ಮೌನವಾಗಿ ಕೂತು ಪೊ›ಫೆಸರ್ ಎಂದಾದರೂ ಹಿಂತಿರುಗಿ ನೋಡಿಯಾರು ಎಂದು ಪ್ರತೀಕ್ಷಿಸಿದರು. ಉಪನ್ಯಾಸದ ಅವಧಿ ಮುಗಿದರೂ ಬೋರ್ಡಿನತ್ತ ಮುಖಮಾಡಿ ಯೋಚಿಸುತ್ತ ತಲೆ ತುರಿಸುತ್ತ ಕಣ್ಮುಚ್ಚಿ ಧ್ಯಾನಿಸುತ್ತ ಏನೇನೋ ಸೂತ್ರ ಬರೆಯುತ್ತ ನಿಂತ ವೈಟ್‌ಹೆಡ್‌ನ ಕೆಲಸ ಮುಗಿಯಲಿಲ್ಲ. ವಿದ್ಯಾರ್ಥಿಗಳು ಅವಧಿ ಮುಗಿದ ಮೇಲೆ ನಿಧಾನಕ್ಕೆ ಎದ್ದು ಹೊರಟುಹೋದರು. ಅದಾಗಿ ಸ್ವಲ್ಪ ಹೊತ್ತಿನಲ್ಲಿ ವೈಟ್‌ಹೆಡ್‌ನ ಸಮಸ್ಯೆ ಬಗೆಹರಿಯಿತು. ತನ್ನ ಲೆಕ್ಕವನ್ನು ತೃಪ್ತಿಯಿಂದ ನೋಡಿ ಅವನು ಆ ಕೊಠಡಿಯಿಂದ ನಿರ್ಗಮಿಸಿದ. ಅಂದು ಸಂಜೆ ಮನೆಯಲ್ಲಿ ತನ್ನ ಪತ್ನಿಯೊಡನೆ ಮಾತಾಡುತ್ತ ವೈಟ್‌ಹೆಡ್, ಇಂದು ಒಂದು ವಿಚಿತ್ರ ನಡೆಯಿತು ಗೊತ್ತಾ? ಒಬ್ಬ ಹುಡುಗನೂ ನನ್ನ ಉಪನ್ಯಾಸಕ್ಕೆ ಬರಲಿಲ್ಲ! ಎಂದು ಆಶ್ಚರ್ಯ ಹಂಚಿಕೊಂಡ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್; ವಶಕ್ಕೆ ಪಡೆದುಕೊಂಡ ಪೊಲೀಸರು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.