ಪೆಟ್ರೋಲ್‌ಗೂ ಒಬ್ಬ ಎಂಜಿನಿಯರ್
Team Udayavani, Oct 17, 2017, 7:55 AM IST
ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೌಲ್ಯ ಕುಸಿಯುತ್ತಿದೆ. ಆದರೂ ಸರ್ಕಾರ ಮಾತ್ರ ಪೆಟ್ರೋಲ್ ಬೆಲೆ ಇಳಿಸುತ್ತಲೇ ಇಲ್ಲ. ಮುಂದಿನ ವರ್ಷಕ್ಕೆ ಪೆಟ್ರೋಲ್ ಬೆಲೆ 90 ರೂ. ದಾಟಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ನಾವೆಲ್ಲಾ ಸಾಮಾನ್ಯವಾಗಿ ಮಾತಾಡುತ್ತೇವೆ. ದೇಶಕ್ಕೆ ಒಂದು ಟ್ಯಾಂಕರ್ ಪೆಟ್ರೋಲ… ಸಿಗಬೇಕಾದರೆ ಏನೆಲ್ಲಾ ಕಸರತ್ತು ನಡೆಯುತ್ತೆ ಎನ್ನುವುದೇ ನಮಗೆ ತಿಳಿದಿರುವುದಿಲ್ಲ. ಬಿಟ್ಟರೆ ಆವಿಯಾಗುವ, ಕಿಡಿ ತಗುಲಿದರೆ ಭಸ್ಮವಾಗುವ ಪೆಟ್ರೋಲ… ಉತ್ಪನ್ನಗಳನ್ನು ರಕ್ಷಿಸಿ, ಸಂಸ್ಕರಿಸಿ ನಮ್ಮ ಮುಂದಿಡುವ ಲೋಕವೇ ಬೇರೆ ಇದೆ. ಅದರಲ್ಲಿ ಪೆಟ್ರೋಲಿಯಂ ಎಂಜಿನಿಯರ್‌ಗಳದ್ದು ಪಾತ್ರ ಮಹತ್ವದ್ದು. ಆ ಪೆಟ್ರೋಲಿಯಂ ಎಂಜಿನಿಯರ್ ಹುದ್ದೆಯ ಸುತ್ತ ಮುತ್ತ ಒಂದು ನೋಟ…
“ಗುರೂ.. ನಾಳೆ ಭಾರತ್ ಬಂದ್ ಜೊತೆಗೆ ಮೂರು ದಿನ ಪೆಟ್ರೋಲ್, ಡೀಸೆಲ್ ಸಿಗಲ್ಲ. ಗಾಡಿ ಫುಲ್ ಮಾಡಿಸಬೇಕು ಬರ್ತೀಯಾ..’, “ಅಯ್ಯೋ ನಾಳೆಯಿಂದ ಪೆಟ್ರೋಲ್ ಬೆಲೆ 2 ರೂ. ಜಾಸ್ತಿ ಅಂತೆ ಸಂಜೆ ಹೊತ್ತಿಗೆ ಗಾಡಿಗಳಿಗೆಲ್ಲಾ ಪೆಟ್ರೋಲ… ಹಾಕಿಸಿಬಿಡಬೇಕು’ ಎಂದು ಪರದಾಡುವುದು ಮಾಮೂಲಾಗಿ ಬಿಟ್ಟಿದೆ.
ಸಾಗರದಾಳದಲ್ಲಿ ಸಿಗುವ, ಇರಾಕ್, ಇರಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಪ್ರದೇಶದಲ್ಲಿ ಭೂಗರ್ಭದ ನಿಕ್ಷೇಪವಾಗಿ ದೊರಕುವ ಪೆಟ್ರೋಲಿಯಂ ಉತ್ಪನ್ನಗಳನ್ನು ಪ್ರಪಂಚದ ನಾನಾ ಭಾಗಗಳಿಗೆ ಹಂಚಿಕೆ ಮಾಡಲು ಜಾಗತಿಕ ಮಟ್ಟದಲ್ಲಿ ದೊಡ್ಡ ಸಭೆ, ಚರ್ಚೆಗಳೇ ನಡೆಯುತ್ತವೆ. ಅಮೆರಿಕ, ರಷ್ಯಾದಂ ಥ ಬಲಿಷ್ಠ ರಾ ಷ್ಟ್ರಗಳು ಸಾಗರದಾಳದ ಅನಿಲ ನಿಕ್ಷೇಪಗಳನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಸಂಗ್ರಹಿಸಲು ಮುಂದಾಗುತ್ತಿವೆ. ಈ ವಿಷಯದಲ್ಲಿ ಭಾರತವೂ ಒಲವು ತೋರುತ್ತಿದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜನರ ಕೈಗೆ ಸಿಗುವಂತೆ ಮಾಡುವುದರಲ್ಲಿ ಪೆಟ್ರೋಲಿಯಂ ಎಂಜಿನಿಯರ್‌ಗಳ ಪಾತ್ರ ಹಿರಿದು. ನೈಸರ್ಗಿಕ ಅನಿಲವನ್ನು ಸಂಗ್ರಹಿಸಿ, ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಗ್ರೀಸ್, ವ್ಯಾಸಲೀನ್ ಇತರ ಬಹೋಪಯೋಗಿ ವಸ್ತುಗಳನ್ನಾಗಿ ಪರಿವರ್ತಿಸಿ ದೇಶಕ್ಕೆ ಆದಾಯ ತರುವಂತೆ ಕಾರ್ಯಯೋಜನೆಯನ್ನು ರೂಪಿಸಿ ನಿರ್ವಹಿಸುವವರೇ ಪೆಟ್ರೋಲಿಯಂ ಎಂಜಿನಿಯರ್‌ಗಳು.
ಇವರು ತೈಲ ನಿಷೆಪಗಳ ಹುಡುಕುವಿಕೆಯಿಂದ ಹಿಡಿದು, ನೈಸರ್ಗಿಕ ಅನಿಲಗಳನ್ನು ಸದ್ಬಳಕೆ ಮಾಡಿಕೊಳ್ಳುವವರೆಗೂ ವಿವಿಧ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ವಿದ್ಯಾರ್ಹತೆ ಏನು ಬೇಕು?
ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಆರಿಸಿಕೊಡು, ನಂತರ ಜಾಯಿಂಟ್ ಎಂಟ್ರೆನ್ಸ್ (ಜೆಇಇ) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಪದವಿಯಲ್ಲಿ ಬಿಇ, ಬಿ.ಟೆಕ್ ವಿಷಯಗಳಲ್ಲಿ ಅಧ್ಯಯನ ಮಾಡಿದರೆ ಪೆಟ್ರೋಲಿಯಂ ಎಂಜಿನಿಯರ್ ಆಗುವುದು ಸುಲಭ. ಜೊತೆಗೆ ಎಂ.ಟೆಕ್‌ನಲ್ಲಿ ಪೆಟ್ರೋಲಿಯಂ ಎಂಜಿನಿಯರ್ ಕೋರ್ಸ್ ಆಯ್ಕೆ ಮಾಡಿಕೊಂಡರೆ ಉದ್ಯೋಗ ಪಡೆಯು ವು ದು ಇನ್ನೂ ಸುಲಭವಾಗುತ್ತದೆ. (ಜೆಇಇ ಎಂಟ್ರೆನ್ಸ್ ಮತ್ತು ಅಡ್ವಾನ್ಸ್ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದರೆ ಹುದ್ದೆ ಹೊಂದುವುದು ಕಷ್ಟವಾಗದು).
ಕೌಶಲಗಳಿರಲಿ…
ನೈಸರ್ಗಿಕ ಉತ್ಪನ್ನ ಅಥವಾ ಅನಿಲ ಸಂರಕ್ಷಣೆಗೆ ತಕ್ಕ ಯೋಜನೆ ರೂಪಿಸುವ ಕೌಶಲ, ವೈಜ್ಞಾನಿಕ ಚಿಂತನೆ, ಪ್ರಾಕೃತಿಕ ವಿಕೋಪ, ಹವಾಮಾನ ಬದಲಾವಣೆ, ಪ್ರದೇಶಾವಾರು ಭೂ ಉಷ್ಣತೆಯ ತಿಳಿವಳಿಕೆ, ಡ್ರಿಲ್ಲಿಂಗ್, ಪ್ರೊಡಕ್ಷನ್ ಎಂಜಿನಿಯರ್‌ಗಳೊಂದಿಗೆ ಕಾರ್ಯಕ್ಷಮತೆಯನ್ನು ತೋರಿಸುವ ಉತ್ಸಾಹ ಮತ್ತು ಚಾಣಾಕ್ಷತೆ. ಯಂತ್ರಗಳ ಬಳಕೆ, ತಂತ್ರಜ್ಞಾನದ ವಿಶ್ಲೇಷಣೆ ಮಾಡುವ ಸಾಮರ್ಥ್ಯದ ಜೊತೆಗೆ ಉತ್ತಮ ಸಂವಹನ ಬೇಕು. ಯಂತ್ರಗಳ ಉತ್ತಮ ನೀಲಿನಕ್ಷೆ, ಯೋಜನೆ ರೂಪಿಸುವ ಜ್ಞಾನ.
ಗಳಿಕೆ ಹೇಗಿರುತ್ತೆ?
ಪೆಟ್ರೋಲಿಯಂ ಎಂಜಿನಿಯರ್‌ಗಳಿಗೆ ಜಾಗತಿಕ ಅವಕಾಶಗಳು ಹೆಚ್ಚು. ಜೊತೆಗೆ ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳು ಸ್ಪರ್ಧೆಗೆ ಬಿದ್ದು ಕಚ್ಚಾತೈಲದ ಸಂಗ್ರಹಣೆಗೆ ಮುಂದಾಗಿರುವುದರಿಂದ ಪೆಟ್ರೋಲಿಯಂ ಎಂಜಿನಿಯರ್‌ಗಳ ಹುದ್ದೆಗೆ ಸಾಕಷ್ಟು ಡಿಮ್ಯಾಂಡ್ ಇದೆ. ಪ್ರಸ್ತುತ ಪೆಟ್ರೋಲಿಯಂ ಎಂಜಿನಿಯರ್‌ಗಳು ವಾರ್ಷಿಕವಾಗಿ 3 ಲಕ್ಷದಿಂದ 35 ಲಕ್ಷ ರೂ. ದವರೆಗೆ ಸಂಬಳವನ್ನು ಪಡೆಯುತ್ತಾರೆ.
ಅವಕಾಶಗಳು ಎಲ್ಲೆಲ್ಲಿ?
– ತೈಲ ಪರಿಶೋಧನಾ ಸಂಘಟನೆಗಳು
– ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು
– ಸಂಸ್ಕರಣಾಗಾರಗಳು
– ಖಾಸಗಿ ತೈಲ ಕೈಗಾರಿಕೆಗಳು
– ಅನಿಲ ಕಂಪನಿಗಳು
– ವಿಶ್ವವಿದ್ಯಾಲಯಗಳು
– ಪೆಟ್ರೋಲಿಯಂ ಮತ್ತು ತೈಲ ಸಂಶೋಧನಾ ಸಂಸ್ಥೆಗಳು
– ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ
– ಹಿಂದೂಸ್ತಾನ್ ಆಯಿಲ್ ಎಕ್ಷ್ ಪ್ಲೊರೇಶನ್ ಕಂಪನಿ ಲಿಮಿಟೆಡ್
– ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.
– ಆಯಿಲ… ಅಂಡ್ ನ್ಯಾಷನಲ… ಗ್ಯಾಸ್ ಕಮಿಷನ್
ಕಾಲೇಜುಗಳು
– ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಧನಬಾದ್
– ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಅಂಡ್ ಎನರ್ಜಿ ಸ್ಟಡೀಸ್, ಡೆಹ್ರಾಡೂನ್
– ಪಿಡಿಪಿಯು- ಸ್ಕೂಲ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ (ಎಸ್.ಪಿ.ಟಿ ಪಿಡಿಪಿಯು), ಗಾಂಧೀನಗರ್
– ರಾಜೀವ್‌ಗಾಂಧಿ ಇನ್ಸ್ಟಿಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ, ಉತ್ತರಪ್ರದೇಶ
– ಇಂಡಿಯನ್ ಇನ್ಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿ, ದೆಹಲಿ
– ನ್ಯಾಷನಲ್ ಇನ್ಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬೈ
ಎನ್. ಅನಂತನಾಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.