ಅಪರಿಚಿತ ಅಣ್ಣ ದೇವರಂತೆ ಬಂದ


Team Udayavani, Aug 6, 2019, 5:00 AM IST

ASDD

ಆಗ ನನಗೆ ಆರೋಗ್ಯ ಸರಿ ಇರಲಿಲ್ಲ. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಒಳ್ಳೆ ವೈದ್ಯರಿಗೆ ತೋರಿಸುವ ಸಲುವಾಗಿ, ದೂರದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ನನ್ನ ಅಕ್ಕ ತನ್ನ ಮನೆಗೆ ಬರಲು ಹೇಳಿದಳು. ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ನಾನೆಂದೂ ಪ್ರಯಾಣ ಮಾಡದವನಲ್ಲ. ಆದರೂ ಮನೆಯವರ ಒತ್ತಾಯದಿಂದಾಗಿ ನೇರವಾಗಿ ಹುಬ್ಬಳ್ಳಿಯ ಬಸ್‌ ಹತ್ತಿದೆ.

ಅಪ್ಪ, ಖರ್ಚಿಗೆಂದು ಸ್ವಲ್ಪಹಣ ನೀಡಿದ್ದರು. ಅಕ್ಕನಿಗಾಗಿ ಅಮ್ಮ ಸಂಡಿಗೆ ಮಾಡಿ ಕಳುಹಿಸಿದ್ದಳು. ಮನೆಯಲ್ಲಿ ನನ್ನೊಡನೆ ಬರಲು ಯಾರಿಗೂ ಕಾಲಾವಕಾಶವಿರದಿದ್ದರಿಂದ ನಾನೊಬ್ಬನೇ ಹುಬ್ಬಳ್ಳಿಗೆ ಹೊರಡಬೇಕಾಯಿತು.ಅಕ್ಕ ಆಗಾಗ ಕರೆ ಮಾಡಿ ನಾನಿರುವ ಸ್ಥಳವನ್ನು ತಿಳಿದುಕೊಳ್ಳುತ್ತಿದ್ದಳು. ಹುಬ್ಬಳ್ಳಿಗೆ ಬಂದ ತಕ್ಷಣ ಕರೆ ಮಾಡು, ಕರೆದುಕೊಂಡು ಬರಲು ನಿನ್ನ ಭಾವ ಬರ್ತಾರೆ ಎಂದೂ ತಿಳಿಸಿದ್ದಳು.

ಕೊನೆಗೂ ಹುಬ್ಬಳ್ಳಿ ಬಂದೇ ಬಿಟ್ಟಿತು. ಬಸ್ಸಿನಿಂದ ಇಳಿದ ನಂತರ ಅಕ್ಕನ ಮನೆಗೆ ಕರೆ ಮಾಡಿದರಾಯಿತು ಎಂದುಕೊಂಡು ಜನರ ಗದ್ದಲದ ಮಧ್ಯೆ ಇಳಿದು ಕೊಂಡೆ. ನೋಡ ನೋಡುತ್ತಿದ್ದಂತೆಯೇ ಯಾರೋ ಒಬ್ಬ ನನ್ನ ಕಿಸೆಯಲ್ಲಿದ್ದ ಮೊಬೈಲ್‌ ಎಗರಿಸಿಕೊಂಡು ಓಡತೊಡಗಿದ. ನಾನು ಊರಿಗೆ ಹೊಸಬ. ಅಪರೂಪಕ್ಕೆ ಬಸ್‌ ಹತ್ತಿದ್ದೆ. ಹಿಡಿಯೋಣ ಅಂದರೆ, ಎರಡೂ ಕೈಗಳಲ್ಲಿ ಚೀಲಗಳಿವೆ. ಅದನ್ನು ಹೊತ್ತು ಕೊಂಡು ಓಡುವುದಾದರೂ ಹೇಗೆ? ನಾನು ಮೊಬೈಲ್‌  ಮೊಬೈಲ್‌ ಎಂದು ಕಿರುಚಿದೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಕೊನೆಗೆ ತಲೆಯ ಮೇಲೆ ಕೈ ಹೊತ್ತು ಕೂರಬೇಕಾಯಿತು. ಮೊಬೈಲ್‌ ಏನೋ ಹೋಯಿತು. ಈಗ ಅಕ್ಕನ ಮನೆಗೆ ಹೋಗುವುದು ಹೇಗೆ ಎಂಬುದೇ ಚಿಂತೆಯಾಯಿತು. ಆದರೆ, ಅನತಿ ದೂರದಲ್ಲಿ ನಿಂತಿದ್ದ ಒಬ್ಬ ಹಳ್ಳಿಯವ ನನ್ನ ಪಡಿಪಾಟಲನ್ನೆಲ್ಲಾ ಗಮನಿಸಿ ಆ ಕಳ್ಳನನ್ನು ಬೆನ್ನಟ್ಟಿದ. ಒಂದಷ್ಟು ದೂರ ಇಬ್ಬರೂ ಓಡಿದರು. ಕೊನೆಗೆ ಕಳ್ಳ ಮೊಬೈಲ್‌ ಅನ್ನು ಬಿಸಾಕಿ ಓಡಿ ಹೋದ. ಹಳ್ಳಿಯವ ಮೊಬೈಲ್‌ ತಂದು ನನ್ನ ಕೈಯಲ್ಲಿಟ್ಟ. ಜೀವ ಬಂದಂಗೆ ಆಯಿತು.

ಅವನಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ನನಗೆ ಗೊತ್ತಾಗಲಿಲ್ಲ. ನನ್ನ ಕಣ್ಣುಗಳಲ್ಲಿ ಆಗಲೇ ನೀರು ಆರಿಸಿತ್ತು. “ತುಂಬಾ ಧನ್ಯವಾದಗಳು’ ಅಂದೆ. ನನ್ನ ಕಣ್ಣಲ್ಲಿದ್ದ ಆತಂಕವನ್ನು ಗಮನಿಸಿದ ಆ ವ್ಯಕ್ತಿ, ಹುಶಾರು ತಮ್ಮಾ, ಮೊಬೈಲ್‌ ಜೋಪಾನ ಅಂತ ಹೇಳಿ ಹೊರಟೇ ಹೋದ.

-ವೆಂಕಟೇಶ ಚಾಗಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.