ದೇಶ ಕಾಯ್ತಿರಾ?

Team Udayavani, Mar 26, 2019, 6:00 AM IST

q-7

ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌, ಅಕೌಂಟ್ಸ್‌, ಲಾ… ಹೀಗೆ ನೀವು ಓದುತ್ತಿರೋ ಕೋರ್ಸ್‌ ಯಾವುದೇ ಆಗಿರಲಿ, ಸೇನೆಯಲ್ಲಿ ನಿಮಗೂ ಜಾಗ ಇದೆ. ಯಾಕಂದ್ರೆ ಸೈನ್ಯ ಅಂದ್ರೆ, ಬರೀ ಯೋಧರಷ್ಟೇ ಅಲ್ಲ…

ಕಳೆದ ಕೆಲ ದಿನಗಳಿಂದ ಭಾರತೀಯರ ಎದೆಯಲ್ಲಿ ಇಂಥವೇ ಭಾವನೆಗಳು ಹುಟ್ಟುತ್ತಿವೆ. ಕಾಶ್ಮೀರದಲ್ಲಿ ನಮ್ಮ ಯೋಧರ ಮೇಲೆ ನಡೆದ ದಾಳಿ, ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಧೀಮಂತ ವ್ಯಕ್ತಿತ್ವ, ಶತ್ರು ಪಾಳೆಯದಲ್ಲಿ ನಿಂತು ಅವರಾಡಿದ ದಿಟ್ಟ ಮಾತುಗಳು, ಸೈನ್ಯದ ಮೇಲೆ ನಮಗಿದ್ದ ಗೌರವವನ್ನು ಇಮ್ಮಡಿಯಾಗಿಸಿದೆ. ಇದರಿಂದಾಗಿ ಸೈನ್ಯ ಸೇರಿ, ದೇಶಸೇವೆ ಮಾಡ್ಬೇಕು ಅಂತ ಹಂಬಲಿಸುವವರ ಸಂಖ್ಯೆಯೂ ಹೆಚ್ಚಿದೆ. ಅಂಥ ಗಟ್ಟಿ ನಿರ್ಧಾರ ನಿಮ್ಮದೂ ಆಗಿದ್ದರೆ, ಸೈನ್ಯಕ್ಕೆ ಸೇರಲು ಹಲವಾರು ದಾರಿಗಳಿವೆ. ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌, ಅಕೌಂಟ್ಸ್‌, ಲಾ… ಹೀಗೆ ನೀವು ಓದುತ್ತಿರೋ ಕೋರ್ಸ್‌ ಯಾವುದೇ ಆಗಿರಲಿ, ಸೈನ್ಯದಲ್ಲಿ ನಿಮಗೂ ಜಾಗ ಇದೆ. ಯಾಕಂದ್ರೆ ಸೈನ್ಯ ಅಂದ್ರೆ, ಬರೀ ಯೋಧರಷ್ಟೇ ಅಲ್ಲ…

-ಸೇನಾ ಕ್ಯಾಂಪ್‌: ಭಾರತೀಯ ಸೇನಾ ಪಡೆಗಳು ನಡೆಸುವ ಕ್ಯಾಂಪ್‌ನಲ್ಲಿ ಆಯ್ಕೆಯಾದವರು ಸೈನ್ಯಕ್ಕೆ ಸೇರಲು ಅರ್ಹರು.
-ಎನ್‌ಡಿಎ ಪ್ರವೇಶ: ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದು, ಬಳಿಕ ಯುಪಿಎಸ್‌ಸಿ ಮೂಲಕ ಪರೀಕ್ಷೆಗಳನ್ನು ಬರೆದು ಸೇನೆಗೆ ಸೇರಬಹುದು. ಸೇನೆಗೆ ಸೇರಲು ಸಾಮಾನ್ಯ ವಿದ್ಯಾಭ್ಯಾಸ ಪಿಯುಸಿ ಸಾಕು.
-ಸಿಡಿಎಫ್ಸಿ ಪ್ರವೇಶ: ಪದವಿ ಪೂರೈಸಿದ ಅಭ್ಯರ್ಥಿಗಳು, ವರ್ಷಕ್ಕೆ ಎರಡು ಬಾರಿ ನಡೆಯುವ ಕಂಬೈಡ್‌ ಡಿಫೆನ್ಸ್‌ ಸರ್ವೀಸ್‌ ಎಕ್ಸಾಮಿನೇಷನ್‌(ಸಿಡಿಎಫ್ಸಿ) ಪರೀಕ್ಷೆ ಬರೆದು, ಭೂ, ವಾಯು, ನೌಕಾದಳದ ಭಾಗವಾಗಬಹುದು.
-ಎನ್‌ಸಿಸಿ ವಿಶೇಷ ಪ್ರವೇಶ: ಶಾಲಾ-ಕಾಲೇಜು ದಿನಗಳಲ್ಲಿ ನೀವು ನ್ಯಾಷನಲ್‌ ಕೆಡೆಟ್‌ ಕಾರ್ಪ್‌(ಎನ್‌ಸಿಸಿ)ನಲ್ಲಿ ತೊಡಗಿಸಿಕೊಂಡಿದ್ದರೆ, ಅದನ್ನು ಆಧಾರವಾಗಿಟ್ಟುಕೊಂಡು ಸೇನಾ ಸಂಬಂಧಿತ ಪರೀಕ್ಷೆಗಳನ್ನು ಬರೆದು ನೇರವಾಗಿ ಸೇನೆ ಸೇರಬಹುದು.
-ಯುಇಎಸ್‌ ಪ್ರವೇಶ: ಯೂನಿವರ್ಸಿಟಿ ಎಂಟ್ರಿ ಸ್ಕೀಮ್‌ ಮೂಲಕ ಎಂಜಿನಿಯರಿಂಗ್‌ ಕೊನೆಯ ವರ್ಷದ ವಿದ್ಯಾರ್ಥಿಗಳು ಭಾರತೀಯ ಸೇನೆಯ ಟೆಕ್ನಿಕಲ್‌ ವಿಭಾಗಕ್ಕೆ ಆಯ್ಕೆಯಾಗಬಹುದಾಗಿದೆ. ಇವರಿಗೆ ಎಎಫ್ಎ ಮೂಲಕ ತರಬೇತಿ ನೀಡಿ ಸೇನೆಯಲ್ಲಿ ಹುದ್ದೆಗಳನ್ನು ನೀಡಲಾಗುತ್ತದೆ.

ಕಾದಾಡುವುದಷ್ಟೇ ಕೆಲಸವಲ್ಲ
ಸೇನೆ ಅಂದಕೂಡಲೆ, ಗಡಿಯಲ್ಲಿ ಗನ್ನು ಹಿಡಿದು ದೇಶ ಕಾಯುವ, ಯುದ್ಧವಿಮಾನಗಳಲ್ಲಿ ಹಾರುವ ಯೋಧರ ಚಿತ್ರಣವಷ್ಟೇ ಕಣ್ಮುಂದೆ ಬರುತ್ತದೆ. ಆದರೆ, ಸೇನೆಯ ವ್ಯಾಪ್ತಿ ಅಷ್ಟಕ್ಕೇ ಸೀಮಿತವಲ್ಲ. ತೆರೆಮರೆಯಲ್ಲಿ ನಿಂತು ಯೋಧನಿಗೆ ಬೆನ್ನೆಲುಬಾಗಿರುವ ಅನೇಕ ವಿಭಾಗಗಳಿವೆ. ತಾಂತ್ರಿಕ ವಿಷಯದಲ್ಲಿ ನೀವು ಪರಿಣತರಾಗಿದ್ದರೆ ಸೇನೆಯ ಟೆಕ್ನಿಕಲ್‌ ವಿಭಾಗದಲ್ಲಿ ಪ್ರವೇಶ ಪಡೆಯಬಹುದು. ಸಾಮಾನ್ಯ ಸೇನಾ ವಾಹನ ಸೇರಿದಂತೆ, ದೊಡ್ಡ ದೊಡ್ಡ ಯುದ್ಧ ವಿಮಾನಗಳ ನಿರ್ವಹಣೆ ಈ ವಿಭಾಗದ್ದಾಗಿರುತ್ತದೆ. ಎಎಫ್ಸಿಎಟಿ ಮತ್ತು ಯುಇಎಸ್‌ ಪರೀಕ್ಷೆ ಮೂಲಕ ಮೆಕಾನಿಕಲ್‌, ಎಲೆಕ್ಟ್ರಾನಿಕ್ಸ್‌, ಗಣಕ ವಿಷಯಗಳಿಗೆ ಸಂಬಂಧಿಸಿದ ಟೆಕ್ನಿಕಲ್‌ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಅಷ್ಟೇ ಅಲ್ಲದೆ, ಆಡಳಿತ, ಅಕೌಂಟ್‌, ಶಿಕ್ಷಣ, ಲಾಜಿಸ್ಟಿಕ್ಸ್‌, ಸೇನಾ ಸಾಮಗ್ರಿ ನಿರ್ವಹಣೆ, ಆಹಾರ ಉಗ್ರಾಣಗಳ ನಿರ್ವಹಣೆ, ಫ‌ಂಡ್‌ಗಳ ನಿರ್ವಹಣೆ ಸೇರಿದಂತೆ ವಿವಿಧ ವಲಯಗಳು ಕೂಡಾ ಸೈನ್ಯ ಎಂಬ ಸಾಗರಕ್ಕೆ ಸೇರುವ ತೊರೆಗಳು. ಎಎಫ್ಸಿಎಟಿ ಮೂಲಕ ಪರೀಕ್ಷೆಗಳನ್ನು ಬರೆದು ಈ ವಿಭಾಗಗಳಿಗೆ ಪ್ರವೇಶ ಪಡೆಯಬಹುದು.

ರಾಷ್ಟ್ರೀಯತೆಯೇ ಮಾನದಂಡ
ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಪದವಿ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಪಡೆದವರಿಗೂ ಸೇನೆಯಲ್ಲಿ ಅವಕಾಶಗಳಿವೆ. ಪರೀಕ್ಷೆ ಬರೆಯಲಿಚ್ಛಿಸುವ ವ್ಯಕ್ತಿ ಭಾರತೀಯನಾಗಿರಬೇಕು. ಸ್ತ್ರೀ-ಪುರುಷರಿಗೆ ಸಮಾನವಾಗಿ ಅವಕಾಶಗಳನ್ನು ನೀಡಲಾಗಿದೆ. ಸೇನೆಯಲ್ಲಿ ಶಿಸ್ತಿನ ಜತೆಗೆ ಅಭ್ಯರ್ಥಿಯ ದೈಹಿಕ ಸಾಮರ್ಥಯವನ್ನೂ ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ಉದ್ದ ಜಿಗಿತ, ಎತ್ತರ ಜಿಗಿತ, 100 ಮೀ., 400 ಮೀ. ಓಟ, ಗುಂಡು ಎಸೆತ, ದೃಷ್ಟಿ ಪರೀಕ್ಷೆ, ದೇಹದ ಸುತ್ತಳತೆ ಸೇರಿದಂತೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರಿಗೆ ಸೇನಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ.

ವಿವಿಧ ವಿಭಾಗಗಳಿಗೆ ವಿದ್ಯಾರ್ಹತೆ-ವಯೋಮಿತಿ
16 1/2-19 ವರ್ಷ- ಎನ್‌ಡಿಎ ಮೂಲಕ ಪ್ರವೇಶ (ಪಿಯು)
19-23 ವರ್ಷ- ಫ್ಲೈಯಿಂಗ್‌ ವಿಭಾಗದಲ್ಲಿ ಪ್ರವೇಶ
18-28 ವರ್ಷ- ಪದವಿ ಪೂರೈಸಿದ ಅಭ್ಯರ್ಥಿ ಟೆಕ್ನಿಕಲ್‌ ವಿಭಾಗದಲ್ಲಿ ಪ್ರವೇಶ
20-23 ವರ್ಷ- ಪದವಿ ಪೂರೈಸಿದ ಅಭ್ಯರ್ಥಿ ಗ್ರೌಂಡ್‌ ಬ್ರ್ಯಾಂಚ್‌ನಲ್ಲಿ ಅವಕಾಶ
19-23 ವರ್ಷ- ಎಂಜಿನಿಯರ್‌ ಪೂರೈಸಿದ ಅಭ್ಯರ್ಥಿ ಫ್ಲೈಯಿಂಗ್‌ ವಿಭಾಗದಲ್ಲಿ ಅವಕಾಶ
18-28 ವರ್ಷ- ಎಂಜಿನಿಯರ್‌ ಪೂರೈಸಿದ ಅಭ್ಯರ್ಥಿ ಟೆಕ್ನಿಕಲ್‌ ವಿಭಾಗದಲ್ಲಿ ಪ್ರವೇಶ
20-25 ವರ್ಷ-ಎಂಜಿನಿಯರ್‌ ಪೂರೈಸಿದ ಅಭ್ಯರ್ಥಿ ಗ್ರೌಂಡ್‌ ಬ್ರ್ಯಾಂಚ್‌ನಲ್ಲಿ ಅವಕಾಶ
20-25 ವರ್ಷ- ಗ್ರೌಂಡ್‌ ಬ್ರ್ಯಾಂಚ್‌ನಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಅವಕಾಶ

ಅನಂತನಾಗ್‌

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.