ಅಮೆರಿಕದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೀರಾ?
Team Udayavani, Apr 2, 2019, 6:00 AM IST
ಅಮೆರಿಕದ ಮಿಸ್ಸೋರಿ ರಾಜ್ಯ ವಿಶ್ವವಿದ್ಯಾನಿಲಯವು ನಾಲ್ಕು ವರ್ಷಗಳ ಸಹಕಾರ ಎಂಜಿನಿಯರಿಂಗ್ ವಿದ್ಯಾಭ್ಯಾಸ ಯೋಜನೆಗೆ (ಕೋ-ಆಪರೇಟಿವ್ ಎಂಜಿನಿಯರಿಂಗ್ ಪ್ರೋಗ್ರಾಂ) ಭಾರತೀಯ ಪದವಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಪದವಿ ಯೋಜನೆಯನ್ನು ಮಿಸ್ಸೋರಿ ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತಿದೆ. ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗಳಿಗೆ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್ ಓದಲಿಚ್ಚಿಸುವವರಿಗೆ ಈ ವಿದ್ಯಾರ್ಥಿವೇತನ ಅನ್ವಯವಾಗಲಿದೆ.
ಅತ್ಯುತ್ತಮ ಸೌಲಭ್ಯಗಳಿಗೆ ಹೆಸರಾದ ವಿದ್ಯಾರ್ಥಿಗಳಿಗೆ ತರಗತಿ ಪಾಠಗಳು, ವೃತ್ತಿನಿರತರಿಂದ ಕಲಿಯುವ ಅವಕಾಶ, ತಂಡಗಳ ಆಧಾರಿತ ಸ್ಪರ್ಧೆಗಳು ಮತ್ತು ಇಂಟರ್ನ್ಶಿಪ್‌ಗ್ಳು ಮುಂತಾದ ಸೌಲಭ್ಯಗಳು ದೊರೆಯಲಿವೆ. ಈ ವಿದ್ಯಾಭ್ಯಾಸ ಯೋಜನೆಯು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ, ಬೇಡಿಕೆ, ಬೆಳವಣಿಗೆ ಮತ್ತು ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ. ಗುಣಮಟ್ಟದ ಭೋದನೆ, ಗ666ೌರವಯುತ ವಾಸ್ತವ್ಯವನ್ನು ನೀಡಲಾಗುವುದು. ವಾರ್ಷಿಕ 5 ಲಕ್ಷದ ವರೆಗಿನ ಖರ್ಚನ್ನು ವಿದ್ಯಾರ್ಥಿವೇತನ ಭರಿಸಲಿದೆ.
ಎಂ.ಎಸ್. ಓದಲಿಚ್ಚಿಸುವವರು ಬ್ಯಾಚಲರ್ ಡಿಗ್ರಿಯಲ್ಲಿ 2.75 ಜಿ.ಪಿ.ಎ ಗಳಿಸಿರಬೇಕು, ಜಿ.ಆರ್.ಇ ಪರೀಕ್ಷೆಯಲ್ಲಿ 290 ಅಂಕಗಳನ್ನು ಗಳಿಸಿರಬೇಕು ಮತ್ತು TOEFEL ಇಂಗ್ಲೀಷ್ ಪರೀಕ್ಷೆಯಲ್ಲಿ 61 ಅಥವಾ IELTS ಇಂಗ್ಲೀಷ್ ಪರೀಕ್ಷೆಯಲ್ಲಿ 5.5 ಅಂಕಗಳನ್ನು ಗಳಿಸಿರಬೇಕು.
ಕೋ-ಆಪರೇಟಿವ್ ಎಂಜಿನಿಯರಿಂಗ್ ಪ್ರೋಗ್ರಾಂನ ಅಡಿ ಯು.ಜಿ ಓದಲಿಚ್ಚಿಸುವವರು ಪಿಯುಸಿನಲ್ಲಿ ಸರಾಸರಿ ಶೇ.65 ಅಂಕ ಗಳಿಸಿರಬೇಕು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಏಪ್ರಿಲ್ 30.
ಹೆಚ್ಚಿನ ಮಾಹಿತಿಗೆ: tinyurl.com/y4vae6gx
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.