ಯಾರನ್ನು, ಹೇಗೆ ನಂಬಬೇಕು?

ಆರ್ಟ್‌ ಆಫ್ ಬಿಲೀವಿಂಗ್‌

Team Udayavani, Apr 23, 2019, 6:00 AM IST

4

ಆಕಸ್ಮಿಕವಾಗಿ ಪರಿಚಯ ಆಗುತ್ತೆ. ನಾವು ಅವರನ್ನು ವಿನಾಕಾರಣ ತುಂಬಾ ಹಚ್ಚಿಕೊಳ್ತೀವಿ. ಅವರು ಬಿಟ್ಟು ಹೋದಾಗ, ತುಂಬಾ ದುಃಖ ಆಗುತ್ತೆ. ಆದರೆ, ಆ ದುಃಖದಲ್ಲಿ ಅವರಿಗಿಂತಲೂ ಹೆಚ್ಚು ನಮ್ಮದೇ ಪಾಲಿದೆ ಎಂಬುದು ಮಾತ್ರ ಆ ಕ್ಷಣಕ್ಕೆ ಯಾರಿಗೂ ಗೊತ್ತಾಗಲ್ಲ…

ಕೆಲವೊಂದು ನಂಟೇ ಹಾಗೆ. ಆಕಸ್ಮಿಕವಾಗಿ ಪರಿಚಯ ಆಗುತ್ತೆ, ಬಹುಬೇಗನೆ ಆಪ್ತರಾಗ್ತಾರೆ, ಅಷ್ಟೇ ಬೇಗ ದೂರ ಆಗ್ತಾರೆ. ಅಲ್ಲಿಯವರೆಗೂ ಅವರೇ ನಮಗೆಲ್ಲಾ ಎಂದು ಅಂದುಕೊಂಡ ಭಾವನೆಗಳೆಲ್ಲವೂ ಕಣ್ಣೀರಿನ ಅಲೆಯಲ್ಲಿ ಕೊಚ್ಚಿ ಹೋಗುತ್ತವೆ. ಪ್ರತಿಯೊಬ್ಬರಿಗೂ ಇದು ಅನುಭವಕ್ಕೆ ಬಂದಿರುತ್ತೆ. ಅವರು ಬಿಟ್ಟುಹೋದಾಗ, ತುಂಬಾ ದುಃಖ ಆಗುತ್ತೆ. ಆದರೆ, ಆ ದುಃಖದಲ್ಲಿ ಅವರಿಗಿಂತಲೂ ಹೆಚ್ಚು ನಮ್ಮದೇ ಪಾಲಿದೆ ಎಂಬುದು ಮಾತ್ರ ಆ ಕ್ಷಣಕ್ಕೆ ಯಾರಿಗೂ ಗೊತ್ತಾಗಲ್ಲ.

ಅತಿಯಾಗಿ ನೆಚ್ಚಿಕೊಳ್ಳದಿರಿ…
ಆಕಸ್ಮಿಕವಾಗಿ ಪರಿಚಯವಾದ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದಿರಿ. ಜೀವನವೆಂಬ ಪಯಣದಲ್ಲಿ ಹಲವರು ಬರುತ್ತಾರೆ, ಬಂದಷ್ಟೇ ವೇಗದಲ್ಲಿ ಹಿಂದಿರುಗುತ್ತಾರೆ. ಬಾಳ ಪಯಣದಲ್ಲಿ ನಮ್ಮೊಂದಿಗೆ ಕೊನೆಯವರೆಗೂ ಇಂಥವರೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ, ಯಾರನ್ನೇ ಆದರೂ ಅತಿಯಾಗಿ ನೆಚ್ಚಿಕೊಳ್ಳಬಾರದು. ಅವರವರ ನಿಲ್ದಾಣಗಳು ಬಂದಾಗ ಅವರಿಳಿದು ಅವರ ಪಾಡಿಗೆ ಹೋಗುತ್ತಾರಷ್ಟೇ.

ತುಂಬಾ ಅವಲಂಬಿಸದಿರಿ…
ಯಾವುದೇ ವ್ಯಕ್ತಿಯನ್ನಾದರೂ ಸರಿ, ನಮಗವರು ತುಂಬಾ ಅಚ್ಚುಮೆಚ್ಚು ಎಂಬ ಕಾರಣಕ್ಕಾಗಿ ಎಲ್ಲದಕ್ಕೂ ಅವರನ್ನು ಅವಲಂಬಿಸುವುದು ಸರಿಯಲ್ಲ. ಕೆಲವು ಸಲವಂತೂ ಇದು ಮಿತಿ ಮೀರಿ ಸಣ್ಣ ಸಣ್ಣ ನಿರ್ಧಾರಗಳಿಗೂ ನೆಚ್ಚಿಕೊಂಡವರನ್ನು ಅತಿಯಾಗಿ ಅವಲಂಬಿಸಿರುತ್ತೇವೆ. ಅವರು ಹೇಳುವ ನಿರ್ಧಾರಗಳೇ ಅಂತಿಮ ಎಂಬಂತೆ ನಂಬಿರುತ್ತೇವೆ. ಇದು ಕೆಲವೊಮ್ಮೆ ಅವರಿಗೂ ಕಿರಿಕಿರಿ ಸೃಷ್ಟಿಸಬಹುದು. ನಮ್ಮವರೇ ಆಗಿದ್ದರೆ, ಅದೇನೋ ನಡೆಯುತ್ತೆ. ಆದರೆ, ಅವರೇನಾದರೂ ದೂರವಾಗಿಬಿಟ್ಟರೆ, ಸಣ್ಣ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದಿಕ್ಕೇ ತೋಚದಂತಾಗುತ್ತೆ.

ಭಾವನೆಗಳ ಮೇಲೆ ನಿಯಂತ್ರಣವಿರಲಿ…
ಮನುಷ್ಯನ ಮನಸ್ಸೇ ಹಾಗೆ. ತುಂಬಾ ಆಪ್ತರೆನಿಸಿಕೊಂಡವರಲ್ಲಿ ಪ್ರತಿಯೊಂದನ್ನೂ ಹೇಳಿಕೊಂಡು ಭಾವುಕರಾಗುತ್ತೇವೆ. ಇದನ್ನು ಆದಷ್ಟು ಕಡಿಮೆಮಾಡಿ. ನಿಜ, ಮನುಷ್ಯ ಅಂದಮೇಲೆ ಭಾವನೆಗಳನ್ನು ಹಂಚಿಕೊಳ್ಳೋದು ಸಹಜ. ಹಾಗಂದ ಮಾತ್ರಕ್ಕೆ ಎಲ್ಲವನ್ನೂ ಹೇಳಿಕೊಂಡು ಮನಸ್ಸನ್ನು ನಿರಾಳ ಮಾಡಿಕೊಳ್ಳುವುದು ಎಷ್ಟು ಸರಿ. ಈಗೇನೋ ಅವರು ನಮ್ಮ ಭಾವನೆಗಳಿಗೆ ಸ್ಪಂದಿಸಬಹುದು. ಆದರೆ, ಅವರಿಲ್ಲದೇ ಹೋದಾಗ ನಮ್ಮ ಭಾವನೆಗಳನ್ನು ಯಾರೊಂದಿಗೆ ಹೇಳಿಕೊಳ್ಳುವುದು ಎಂದು ಹಳಿದುಕೊಳ್ಳುವುದಕ್ಕಿಂತಲೂ, ಆದಷ್ಟೂ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ.

ಸಮಯ ತೆಗೆದುಕೊಳ್ಳಿ…
ಭಾವನೆಗಳೊಂದಿಗೆ ಜೀವಿಸುವುದು ತುಂಬಾ ಕಷ್ಟ. ಇದು ಮನಸ್ಸಿಗೆ ಸಂಬಂಧಿಸಿದ ವಿಷಯ. ಹಾಗಾಗಿ, ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ನಿಷಿದ್ಧವಾದುದ್ದು. ಯಾರು ಬೇಕಾದರೂ ಇಲ್ಲಿ ಬಂದು ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಯಾರಾದರೊಬ್ಬರನ್ನು ಆಪ್ತರೆಂದು ಇಷ್ಟಪಟ್ಟು, ಅವರಲ್ಲಿ ತಮ್ಮ ಭಾವನೆಗಳನ್ನೆಲ್ಲಾ ಹೇಳಿಕೊಳ್ಳುವುದಕ್ಕೂ ಮೊದಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಿ. ಅವರಾರು? ಅವರು ನಿಮಗೆ ನೀಡಿರುವ ಸ್ಥಾನವೇನು? ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರು ಸೂಕ್ತರೇ? ಅವರು ನಮ್ಮ ನಂಬಿಕೆಗೆ ಅರ್ಹರೇ? ಹೀಗೆ ನಿಮ್ಮನ್ನು ನೀವೇ ಕೇಳಿಕೊಳ್ಳಿ. ಉತ್ತರ ಪಾಸಿಟಿವ್‌ ಇದ್ದರಷ್ಟೇ, ಅವರನ್ನು ನಂಬಿ.

ಅತಿಯಾದ ನಿರೀಕ್ಷೆ ಏತಕೆ?
ಯಾರೊಂದಿಗೇ ಆದರೂ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿರಿ. ಕಾರಣ, ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಆಪ್ತರಿರುವವರು ದೂರವಾಗಬಹುದು, ಅದೆಲ್ಲೋ ದೂರವಿದ್ದವರು ಆಪ್ತರಾಗಬಹುದು. ಯಾವಾಗಲೂ ಎಲ್ಲರೂ ಒಂದೇ ರೀತಿ ಇರಬೇಕೆಂದಿಲ್ಲ. ಹಾಗಾಗಿ, ನೀವು ಎಲ್ಲದಕ್ಕೂ ಸಿದ್ಧರಾಗಿರಿ. ಸಿಹಿ ಆಗಿರಬಹುದು ಕಹಿ ಆಗಿರಬಹುದು, ಎಲ್ಲದನ್ನೂ ಸಮಾನಮನಸ್ಕರಾಗಿ ಸ್ವೀಕರಿಸುವಂಥ ಗುಣವನ್ನು ಬೆಳೆಸಿಕೊಳ್ಳಿ.

ಆಲೋಚನೆ ಬದಲಿಸಿಕೊಳ್ಳಿ…
ಪ್ರತಿಬಾರಿಯೂ ಭಾವನೆಗಳ ಕಾರಣದಿಂದಲೇ ಅತಿಯಾಗಿ ನೋವುಂಡವರು ನೀವಾಗಿದ್ದರೆ, ಈ ಬಾರಿ ಅದಕ್ಕೊಂದು ಪೂರ್ಣ ವಿರಾಮವನ್ನಿಡಿ. ನಂತರ ಭಾವನೆಗಳ ಕುರಿತಾದ ನಿಮ್ಮ ಆಲೋಚನಾ ಲಹರಿಯನ್ನೊಮ್ಮೆ ಬದಲಾಯಿಸಿಕೊಳ್ಳಿ. ನೀವು ಎಲ್ಲೆಲ್ಲಿ ನೋವನ್ನು ಅನುಭವಿಸಿದ್ದೀರೋ ಅತ್ತ ಒಮ್ಮೆ ಮನಸ್ಸನ್ನು ಹೊರಳಿಸಿ, ಅಲ್ಲಿ ನೀವು ಮಾಡಿದ ತಪ್ಪನ್ನೊಮ್ಮೆ ತಿದ್ದಿಕೊಳ್ಳಿ. ಕಾರಣ, ಈಗ ತಪ್ಪನ್ನು ತಿದ್ದಿಕೊಂಡರೆ ಮುಂದೊಂದು ದಿನ ತಪ್ಪುಗಳೇ ಇರದು.

ಹೆಚ್ಚು ಜನರೊಂದಿಗೆ ಬೆರೆಯಿರಿ…
ಕೇವಲ ಒಬ್ಬರನ್ನಷ್ಟೇ ನೆಚ್ಚಿಕೊಂಡು ಅವರನ್ನಷ್ಟೇ ಅವಲಂಬಿಸಿದಾಗ, ನೆಮ್ಮದಿಗೆ ದಕ್ಕೆಯುಂಟಾಗುವುದು ಸಹಜ. ಇದೇ ಕಾರಣಕ್ಕಾಗಿ ಹೆಚ್ಚು ಹೆಚ್ಚು ಜನರೊಂದಿಗೆ ಸಾಮಾಜಿಕವಾಗಿ ಬೆರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ತುಂಬಾ ಜನರೊಂದಿಗೆ ಬೆರೆದಾಗ ಮನಸ್ಸು ಒಂದು ರೀತಿಯಲ್ಲಿ ಹಗುರವಾಗುತ್ತೆ. ಯಾವುದೇ ದುಃಖವೂ ಆ ಬೆರೆಯುವಿಕೆಯಲ್ಲಿ ಕರಗಿಹೋಗುತ್ತೆ.

ಆಗೋದೆಲ್ಲ ಒಳ್ಳೆಯದಕ್ಕೆ…
ಹಿರಿಯರು ಹೇಳಿದಂತೆ ಆಗಿರೋದೆಲ್ಲವೂ ಒಳ್ಳೆಯದಕ್ಕಾಗಿ, ಆಗ್ತಿರೋದೆಲ್ಲವೂ ಒಳ್ಳೆಯದಕ್ಕಾಗಿ ಮತ್ತು ಮುಂದೆ ಆಗೋದೆಲ್ಲವೂ ಒಳ್ಳೆಯದಕ್ಕಾಗಿ ಎಂಬ ಮನೋಭಾವ ಬೆಳೆಸಿಕೊಳ್ಳಿ. ಯಾವುದೇ ವಿಚಾರವಾದರೂ ಸರಿ, ಅಥವಾ ಯಾರದೇ ವಿಚಾರವಾದರೂ ಸರಿ. ಸದಾ ಧನಾತ್ಮಕವಾಗಿ ಯೋಚಿಸುವಂಥ ರೀತಿಯಲ್ಲಿ ಆಲೋಚನೆಗಳನ್ನು ಬೆಳೆಸಿಕೊಳ್ಳಿ. ಭಾವನೆಗಳನ್ನೂ ಸೇರಿಸಿ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಯಾರಾದರೂ ನಮ್ಮ ಜೀವನದಿಂದ ಇದ್ದಕ್ಕಿದ್ದಂತೆ ಹೋದರೆ, ಅವರಿಗಿಂತಲೂ ಒಳ್ಳೆಯವರಾರೋ ನಮ್ಮ ಬದುಕಿಗೆ ಬರಲಿದ್ದಾರೆ. ಹಾಗಾಗಿ, ಇವರು ಹೋಗಿದ್ದಾರೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಿ.

ಅಭಿಷೇಕ್‌ ಎಂ. ತೀರ್ಥಹಳ್ಳಿ

ಟಾಪ್ ನ್ಯೂಸ್

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.