ಹೃದಯದಲ್ಲೊಂದು ಒಲವಿನ ಹಣತೆಯ ಹಚ್ಚಿ


Team Udayavani, Feb 11, 2020, 4:25 AM IST

kemmu-11

ನಿನ್ನ ಪ್ರಣಯ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ನಾನು ಹೃದಯವನ್ನು ಕಳೆದುಕೊಂಡಿರುವೆ. ಆದರೂ, ಹುಡುಕುವ ಗೋಜಿಗೆ ಹೋಗಲಾರೆ. ನನ್ನ ಭಾವಗಳ ನೆಲೆ ನಿನ್ನಲ್ಲಿದೆ ಎಂಬ ಸಿಹಿಸತ್ಯವನ್ನು ನಿನ್ನ ಹೃದಯ ನಿನಗೇ ಹೇಳದಂತೆ ನನಗೆ ಮಾತ್ರ ಕಿರುದನಿಯಲ್ಲಿ ಹೇಳಿದೆ. ಮನಸ್ಸಿನ ಕಿಟಕಿಯಲ್ಲಿ ಇಣುಕಿ ಕಣ್ಣೋಟದಲ್ಲೇ ಸೆಳೆದು ನನ್ನ ತನವನ್ನು ಕದ್ದವನು ನೀನು.

ಹೇಳದೇ ಕೇಳದೆ ಯಾರೂ ಕಾಲಿಡದ ನನ್ನದೆಯ ಸ್ವಚ್ಛಂದದ ಗರ್ಭಗುಡಿಯಲ್ಲಿ ದೇವಮಾನವನಂತೆ ಬಂದು ಕುಳಿತು, ಒಂಟಿತನದ ಕದತಟ್ಟಿ, ಪ್ರಣಯದ ಸುಮಧುರ ಸಂಗೀತದ ಪಲ್ಲವಿ ಹಾಡುತ್ತಾ, ಪ್ರೀತಿ ಎಂಬ ಎರಡಕ್ಷರದ ಸುಂದರ ಭಾವನೆ ನನ್ನಲ್ಲಿ ಹುಟ್ಟಿ, ಮೊಗ್ಗಾಗಿ, ಹೂವಾಗಿ ಅರಳಿ ಬಾಡದಂತೆ ಮೋಡಿ ಮಾಡಿದ ಜಾದುಗಾರ ನೀನು.

ಯಾರ ಅಪ್ಪಣೆ ಪಡೆದು ಇಷ್ಟೆಲ್ಲಾ ಮಾಡಿದೆ?
ನಿನ್ನ ಹೃದಯ ಕದಿಯುವ ತಪ್ಪಿಗೆ ಕಾನೂನಿನಲ್ಲಿ ಶಿಕ್ಷೆ ಇಲ್ಲವೇ? ನಿನ್ನ ವಿರುದ್ಧ ಸಾಕ್ಷಿ ಹೇಳಲು ನನ್ನ ಭಾವನೆಗಳು ತಯಾರಾಗಿವೆ. ಹೋಗಲಿ ಬಿಡು, ನಿನ್ನ ಈ ಕಳ್ಳಾಟಕೆ ನಿನ್ನಷ್ಟೇ ಮುದ್ದಾದ ಈ ಸುಂದರ ತಪ್ಪಿಗೆ ನಾ ಕೊಡುವ ಶಿಕ್ಷೆ. ನನ್ನ ಅಳತೆ ಮೀರಿದ ಪ್ರೀತಿಯಿಂದ ನಿನ್ನನ್ನು ಬಂಧಿಸಿ ಪ್ರೇಮ ಖೈದಿಯನ್ನಾಗಿಸುವ ಜೀವಾವಧಿ ಶಿಕ್ಷೆ. ಸೋಲಲೇಬಾರದೆಂದುಕೊಂಡಿದ್ದೆ. ಆದರೆ, ಅಂಗೈಯ ಗಾತ್ರವಿರುವ ಈ ಹೃದಯಕೆ ಹೇಳಿ ಹೇಳಿ ಸಾಕಾಗಿದೆ. ನೀ ಎದುರಿಗೆ ಬಂದಾಗ ಅದರ ಬಡಿತದ ವೇಗವನ್ನು ಜಾಸ್ತಿ ಮಾಡಿ ಕೊಳ್ಳಬೇಡ ಎಂದು. ಹೃದಯಕೆ ಕಿವಿಯಿಲ್ಲ ಹೇಗೆ ಹೇಳಲಿ? ನನ್ನ ತುಟಿಗಳಿಗೆ ಬೈದು ಬುದ್ದಿ ಹೇಳಿದ್ದೇನೆ, ನೀನು ನನ್ನಡೆಗೆ ನೋಡಿ ನಕ್ಕಾಗ, ನನ್ನ ಕಂಗಳು ನಾಚಿದರೂ ತುಟಿಗಳು ಮಂದಹಾಸ ಬೀರಬಾರದೆಂದು. ಅದರಗಳೂ ಅದರಿಷ್ಟದಂತೆ ನಡೆದು ಕೊಳ್ಳುತ್ತಿವೆ. ಏನು ಮಾಡಲಿ? ನನ್ನ ಮನಸ್ಸಂತೂ ಎಲ್ಲೇ ಮೀರಿ ಹೋಗಿದೆ.

ಅದೆಷ್ಟು ದಿನಗಳ ಹುನ್ನಾರ ನಿನ್ನದು? ಪ್ರೀತಿಯೆಂಬ ವಿಷಯಕ್ಕೆ ಮಾತ್ರ ಕರಗಬಾರದೆಂದು ನಿರ್ಧರಿಸಿದ್ದ, ಕಲ್ಲಿನಂತೆ ಮಂಜುಗಡ್ಡೆಯಂತಿದ್ದ ನನ್ನ ಮನಸ್ಸನ್ನು ನಿನ್ನ ಸುಮಧುರ ಪ್ರೇಮದ ಶಾಖದಿಂದ ಕರಗಿಸಿಬಿಟ್ಟೆ. ಶಹಬ್ಟಾಶ್‌! ಮೆಚ್ಚಲೇ ಬೇಕು ನಿನ್ನ !

ನಿನ್ನ ಅಂತರಾತ್ಮದ ನಿಶ್ಕಲ್ಮಶ ಪ್ರೀತಿ ನನಗೊಂದು ಪತ್ರ ಬರೆದಿದೆ. ಆ ಪತ್ರದ ತುಂಬೆಲ್ಲಾ ವಿವರಿಸಿದೆ, ನೀ ನನ್ನ ಪ್ರೀತಿಸುವ ರೀತಿ ! ಅದೆಷ್ಟು ಒಲವು ನನ್ನ ಮೇಲೆ ನಿನಗೆ? ಕೊನೆಗೊ ಪ್ರೀತಿಯೆಂಬ ಬಿಲ್ಲಿನಿಂದ, ಭಾವನೆಗಳ ಬಾಣಗಳನ್ನು ಬಿಟ್ಟು, ನನ್ನೊಂಟಿತನವೆಂಬ ಶತ್ರುವನ್ನು ಸಾಯಿಸಿ ನೀ ಗೆದ್ದೆ , ನನ್ನ ಹೃದಯದಲ್ಲೊಂದು ಒಲವಿನ ಹಣತೆಯ ಹಚ್ಚುತ್ತಾ.

ಸೌಮ್ಯಶ್ರೀ ಸುದರ್ಶನ್‌ ಹಿರೇಮಠ್

ಟಾಪ್ ನ್ಯೂಸ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

9

Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್‌ ಅವ್ಯವಸ್ಥೆ

8

Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.