“ಆ್ಯಪಲ್’ನಿಂದ ದೂರವೇ ಉಳಿದು ಬಿಟ್ಟವ!
ವಿಂಡೋ ಸೀಟು
Team Udayavani, May 14, 2019, 6:00 AM IST
ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ಕೊಡುವುದು ರೂಢಿ. ಮುದ್ದಾದ ಕೈ ಬರಹ ಇರುವ ಮಕ್ಕಳನ್ನು, ಹೆಚ್ಚು ಅಂಕ ಪಡೆದವರನ್ನು, ಒಂದು ದಿನವೂ ರಜೆ ಹಾಕದವರನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅದರ ಉದ್ದೇಶ. ಈ ವರ್ಷ ತನಗೆ ಒಂದಾದರೂ ಬಹುಮಾನ ಸಿಗಬೇಕು ಎಂಬುದು ಪ್ರತಿ ವಿದ್ಯಾರ್ಥಿಯ ಕನಸಾಗಿರುತ್ತೆ.
ಇಂಗ್ಲೆಂಡ್‌ನ ಸ್ಯಾಮ್ ಸ್ಟನ್ನಾರ್ಡ್‌ಗೂ ಆ ಆಸೆಯಿತ್ತು. ಅವನ ಶಾಲೆಯಲ್ಲಿ, ಶೇ. 100ರಷ್ಟು ಹಾಜರಾತಿ ಇರುವ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಷವೂ, “ಆ್ಯಪಲ್ ಐ ಪ್ಯಾಡ್’ ಅನ್ನು ಬಹುಮಾನವಾಗಿ ನೀಡುತ್ತಿದ್ದರು. ಸತತ ಐದು ವರ್ಷ, ಒಂದು ದಿನವೂ ಶಾಲೆಗೆ ಚಕ್ಕರ್ ಹೊಡೆಯದ ಸ್ಯಾಮ್‌ಗೆ ಮಾತ್ರ ಆ್ಯಪಲ್ ಐ ಪ್ಯಾಡ್ ಸಿಗಲೇ ಇಲ್ಲ.
ಯಾಕಂದ್ರೆ, ಶಾಲೆಯವರು ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತಿದ್ದರು. ದುರಾದೃಷ್ಟಕ್ಕೆ, ಮೊದಲ ನಾಲ್ಕು ವರ್ಷವೂ ಲಕ್ಕಿ ಡ್ರಾನಲ್ಲಿ, ಸ್ಯಾಮ್‌ನ ಹೆಸರು ಇರಲಿಲ್ಲ. ಕೊನೆಯ ವರ್ಷ, ಅವನ ಹೆಸರು ಆಯ್ಕೆಯಾದರೂ, ಶಾಲೆಯವರು ಆ ವರ್ಷ ಬಹುಮಾನವನ್ನೇ ಬದಲಿಸಿಬಿಟ್ಟಿದ್ದರಂತೆ! ಆ ವರ್ಷದ ವಿಜೇತರಿಗೆ ಸಿಕ್ಕಿದ್ದು, ಫೌಂಟನ್ ಪೆನ್ ಮತ್ತು ಸರ್ಟಿಫಿಕೇಟ್ ಮಾತ್ರ.
ಪಾಪ, ಸ್ಯಾಮ್ ಐದು ವರ್ಷಗಳಲ್ಲಿ ಒಂದು ದಿನವೂ ರಜೆ ಹಾಕಲಿಲ್ಲ. ಆತನ ಮನೆಯವರೆಲ್ಲ ಆಗಾಗ ಪ್ರವಾಸಕ್ಕೆ ಹೋಗುತ್ತಿದ್ದರು, ಪಾರ್ಟಿ ಮಾಡುತ್ತಿದ್ದರು. ಸ್ಯಾಮ್ ಅವನ್ನೆಲ್ಲ ಪಕ್ಕಕ್ಕಿಟ್ಟು ಐ ಪ್ಯಾಡ್ ಗೆಲ್ಲುವ ಹಠಕ್ಕೆ ಬಿದ್ದಿದ್ದನಂತೆ. ಪೆನ್ನು ಕೊಡ್ತಾರೆ ಅಂತ ಮೊದಲೇ ಗೊತ್ತಾಗಿದ್ದರೆ, ಈ ವರ್ಷವಾದರೂ ಹೆತ್ತವರ ಜೊತೆ ಟೂರ್ ಹೋಗುತ್ತಿದ್ದೆ ಅಂತ ಕೈ ಕೈ ಹಿಸುಕಿಕೊಳ್ತಾನೆ ಸ್ಯಾಮ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.