ಬಿ.ಟೆಕ್‌ ಆದಮೇಲೆ ಮುಂದೇನು? ಟೆಕ್ಕಿ ಆಗೋಕೆ ಇಲ್ಲುಂಟು ಟ್ರಿಕ್‌


Team Udayavani, Nov 12, 2019, 5:28 AM IST

shutterstock_1438434725-copy-copy

ವಿದ್ಯಾರ್ಥಿ ಜೀವನದಲ್ಲಿ ಬಿ.ಟೆಕ್‌ ಅನ್ನೋದು ಒಂದು ರೀತಿ ದೊಡ್ಡ ಬೆಟ್ಟವೇ. ಅದರ ಮೇಲೆ ನಿಲ್ಲುವುದು ಎಲ್ಲರ ಗುರಿ ಏನೋ ಹೌದು, ಬಿ.ಟೆಕ್‌ ಪೂರೈಸಿದ ಮೇಲೆ ಮುಂದೇನು, ಕೆಲಸ ಸಿಗುತ್ತಾ? ಬಿ.ಟೆಕ್‌ ಮಾಗಿದ ತಕ್ಷಣವೇ ಕೆಲಸ ಸಿಗುವುದಕ್ಕೆ ಮತ್ತೆ ಏನೇನು ಮಾಡಬೇಕು?

ತಾಂತ್ರಿಕ ಶಿಕ್ಷಣದಲ್ಲಿ ಪದವಿ ಎಂದರೆ ಬಿ.ಇ. ಅಥವಾ ಬಿ.ಟೆಕ್‌ ಪದವಿ. ಅವೆರಡೂ ಒಂದೇಯೋ, ಬೇರೆ ಬೇರೆಯೊ? ಬಿ.ಇ ಎಂದರೆ ಬ್ಯಾಚಲರ್‌ ಆಫ್ ಎಂಜಿನಿಯರಿಂಗ್‌. ಬಿ.ಟೆಕ್‌. ಎಂದರೆ ಬ್ಯಾಚಲರ್‌ ಆಫ್ ಟೆಕ್ನಾಲಜಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವೆರಡೂ ಬೇರೆ ಬೇರೆ. ಬಿ.ಇ. ಕಲಿಕೆ ಹೆಚ್ಚು ತತ್ತಾ$Ìಧಾರಿತ (ಥಿಯರಿ), ಬಿ.ಟೆಕ್‌. ಹೆಚ್ಚು ಪ್ರಾಯೋಗಿಕ ಮತ್ತು ಕೌಶಲ ಆಧಾರಿತ (ಪ್ರಾಕ್ಟಿಕಲ್‌). ಆದರೆ, ಭಾರತೀಯ ಪರಿಸರದಲ್ಲಿ ಎರಡಕ್ಕೂ ಹೆಚ್ಚು ಕಡಿಮೆ ಒಂದೇ ಸಿಲಬಸ್‌ ಇಟ್ಟು, ಒಂದೇ ತೆರನಾದ ಪಠ್ಯಗಳನ್ನು ಬೋಧಿಸಲಾಗುತ್ತಿದೆ. ಆ ಅರ್ಥದಲ್ಲಿ ಬಿ.ಇ ಮತ್ತು ಬಿ.ಟೆಕ್‌ ಎರಡೂ ಒಂದೇ ಎಂದು ಭಾವಿಸಬಹುದು.

ಬಿ.ಟೆಕ್‌ ಪದವಿಗಳಿಸಬೇಕಾದರೆ ಪಿ.ಯು.ಸಿಯಲ್ಲಿ ವಿಜ್ಞಾನವನ್ನು ಓದಿರಬೇಕಾಗುತ್ತದೆ. ಅದರಲ್ಲೂ ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್‌ ತೆಗೆದುಕೊಂಡಿರಬೇಕು. ಜೊತೆಗೆ ಡಿಪ್ಲೊಮಾ ಪದವೀಧರರಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಿ.ಟೆಕ್‌. ಪದವಿ ಸೇರಲು ಲ್ಯಾಟರೆಲ್‌ ಎಂಟ್ರಿಗೆ ಅವಕಾಶ ಇದೆ.

ಪ್ರವೇಶ ಪಡೆಯುವುದು ಹೇಗೆ?
ಇಂದು ತಾಂತ್ರಿಕ ಕೋರ್ಸ್‌ಗಳಿಗೆ ಅತ್ಯಧಿಕ ಬೇಡಿಕೆ ಇರುವುದರಿಂದ, ಈ ಕೋರ್ಸ್‌ಗಳ ಪ್ರವೇಶಕ್ಕೆ ತೀವ್ರ ಸ್ಪರ್ಧೆಯಿದೆ. ವಿದ್ಯಾರ್ಥಿಗಳ ಮೆರಿಟ್‌, ಅಂದರೆ ಅಂಕಗಳಿಕೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ಬಿ.ಟೆಕ್‌ಗಾಗಿಯೇ ಪ್ರವೇಶ ಪರೀಕ್ಷೆಗಳೂ ಇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ JEE ಮುಖ್ಯ ಪರೀಕ್ಷೆ, ಒಉಉ ಅಡ್ವಾನ್ಸ್‌$x, BITSIT ಮತ್ತು APEMCET. ಜೊತೆಗೆ ಬೇರೆ ಬೇರೆ ರಾಜ್ಯಗಳು ಮತ್ತು ಖಾಸಗಿ ತಾಂತ್ರಿಕ ಕಾಲೇಜುಗಳೂ ಪ್ರವೇಶ ಪರೀಕ್ಷೆಗಳನ್ನು ನಡೆಸುವುದುಂಟು. ಪ್ರತಿ ವರ್ಷ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಬಿ.ಟೆಕ್‌.ಗಾಗಿ ಈ ಪರೀಕ್ಷೆಗಳನ್ನು ಬರೆಯುತ್ತಾರೆ. ಇವರಿಗೆ ಮೆರಿಟ್‌, ಮೀಸಲಾತಿ ಆಧಾರದ ಮೇಲೆ ಸೀಟುಗಳನ್ನು ನೀಡಲಾಗುವುದು.

ಬಿ.ಟೆಕ್‌ ಏನನ್ನು ಕಲಿಸುತ್ತದೆ?
ಬಿ.ಟೆಕ್‌. ನಾಲ್ಕು ವರ್ಷದ ಅವಧಿಯ ಪದವಿ. ಒಟ್ಟು ಎಂಟು ಸೆಮಿಸ್ಟರ್‌ಗಳು. ಇದು ಎಂಜಿನಿಯರಿಂಗ್‌ ಪದವಿಯಾಗಿದ್ದು, ಅದಕ್ಕೆ ಬೇಕಾದ ಬೌದ್ಧಿಕ ಮತ್ತು ತಾಂತ್ರಿಕ ಕೌಶಲ್ಯವನ್ನು ಕಲಿಸುತ್ತದೆ. ಇದು ಹೆಚ್ಚಾಗಿ ತಾಂತ್ರಿಕ ವಿಜ್ಞಾನವನ್ನು ಕಲಿಸುತ್ತದೆ. ಕೌಶಲ ಆಧಾರಿತ ಮತ್ತು ಪ್ರಾಯೋಗಿಕ ಅಂಶಗಳಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುವುದು. ಕೈಗಾರಿಕೆಗಳ ಭೇಟಿ (ಇಂಡಸ್ಟ್ರಿಯಲ್‌ ಟೂರ್‌) ಮತ್ತು ಇಂಟರ್ನ್ಶಿಪ್‌ಗ್ಳು ಇಲ್ಲಿ ಕಡ್ಡಾಯ.

ಬಿ.ಟೆಕ್‌ನ ಮತ್ತೂಂದು ವಿಶೇಷವೆಂದರೆ, ಇಲ್ಲಿ ತಂತ್ರಜ್ಞಾನ ಬೆಳೆದಂತೆಲ್ಲ ಹೊಸ ವಿಭಾಗಗಳು ತೆರೆದುಕೊಳ್ಳುತ್ತವೆ. ಉದಾಹರಣೆಗೆ, ಮೊದಲಿಗೆ ಕೇವಲ ಕೆಮಿಕಲ್‌ ಎಂಜಿನಿಯರಿಂಗ್‌ ಇದ್ದಿದ್ದು ಈಗ ಅದರಲ್ಲೇ ಬಯೋ-ಮಾಲೆಕ್ಯುಲಾರ್‌ ಎಂಜಿನಿಯರಿಂಗ್‌, ಮೆಟೀರಿಯಲ್‌ ಎಂಜಿನಿಯರಿಂಗ್‌, ಪ್ರಾಸೆಸ್‌ ಎಂಜಿನಿಯರಿಂಗ್‌, ಕರೋಷನ್‌ ಎಂಜಿನಿಯರಿಂಗ್‌ ಎಂಬ ವಿಭಾಗಗಳಾಗಿ ಬದಲಾಗಿದೆ. ಈಗ ಕೋರ್ಸ್‌ಗಳ ಸಂಖ್ಯೆ ಹೆಚ್ಚಿದೆ.

ಅದೇ ರೀತಿ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌, ಜಿಯೊ-ಟೆಕ್ನಿಕಲ್‌ ಎಂಜಿನಿಯರಿಂಗ್‌, ಸ್ಟ್ರಕ್ಚರಲ್‌ ಎಂಜಿನಿಯರಿಂಗ್‌, ಟ್ರಾನ್ಸ್‌ಪೊàರ್ಟ್‌ ಎಂಜಿನಿಯರಿಂಗ್‌, ವಾಟರ್‌ ರೀಸೋರ್ಸಸ್‌ ಎಂಜಿನಿಯರಿಂಗ್‌ಗಳಲ್ಲಿ ಸ್ಪೆಷಲೈಸೇಷನ್‌ಗೆ ಅವಕಾಶವಿದೆ.

ಬಿ.ಟೆಕ್‌ ಅನಂತರ ಮುಂದೇನು?
ಪದವಿಗಳ ಬಳಿಕ ಸ್ನಾತಕೋತ್ತರ ಪದವಿ ಇರುವಂತೆ ಬಿ.ಟೆಕ್‌. ಬಳಿಕ ಎಂ.ಟೆಕ್‌ ಸ್ನಾತಕೋತ್ತರ ಪದವಿ ಪಡೆಯಬಹುದು. ಸಾಮಾನ್ಯವಾಗಿ ಬಿ.ಟೆಕ್‌ ಓದಿದವರೆಲ್ಲ, ಪದವಿ ಕೋರ್ಸ್‌ನ ಅಂತಿಮ ಸೆಮಿಸ್ಟರ್‌ನಲ್ಲಿ ಕ್ಯಾಂಪಸ್‌ ಸಂದರ್ಶನದಲ್ಲಿ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಂತಹವರು ಒಂದೆರಡು ವರ್ಷಗಳಲ್ಲಿ ಎಂ.ಬಿ.ಎ. ಅಥವಾ ಪಿ.ಜಿ.ಡಿ.ಎಮ್‌ ಪದವಿಗಳಿಗೆ ಪ್ರವೇಶ ಪಡೆಯುವ ಮನಸ್ಸು ಮಾಡುತ್ತಾರೆ. ಎಂ.ಬಿ.ಎ.ಗಾಗಿ ಕೆಲವರು CAT, XAT, MAT, CMAT ಅಥವಾ ಇತರೆ ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾರೆ.

ಬಿ.ಟೆಕ್‌ ಪದವೀಧರರು GMAT ಪರೀಕ್ಷೆಯ ಅಂಕಗಳಿಕೆಯ ಆಧಾರದ ಮೇಲೆ ಸಾರ್ವಜನಿಕ ವಲಯದ ಕಂಪನಿ ಮತ್ತು ಸರ್ಕಾರದ ತಾಂತ್ರಿಕ ಹುದ್ದೆಗಳಿಗೆ ಆಯ್ಕೆಯಾಗಬಹುದು. ಸಿ.ಐ.ಐ., ಇಸ್ರೋ, ಬಿಎಆರ್‌ಸಿ ಅಂತಹ ಸಂಸ್ಥೆಗಳು ತಾವೇ ಪರೀಕ್ಷೆ ನಡೆಸಿ ಈ ಪದವೀಧರರ ಸೇವೆಗೆ ಅವಕಾಶ ನೀಡುತ್ತವೆ. ಕೇಂದ್ರ ಲೋಕ ಸೇವಾ ಆಯೋಗದ ಮೂಲಕ ಎಂಜಿನಿಯರಿಂಗ್‌ ಸರ್ವಿಸಸ್‌ ಪರೀಕ್ಷೆಯನ್ನು ನಡೆಸಲಾಗುವುದು. ಪಿ.ಡಬ್ಲೂಡಿ, ರೈಲ್ವೇ ಇತ್ಯಾದಿ ಸಂಸ್ಥೆಗಳಿಗೆ ಈ ಪರೀಕ್ಷೆ ಪ್ರವೇಶಾನುಕೂಲ ಕಲ್ಪಿಸುತ್ತದೆ. ಇವಿಷ್ಟೇ ಅಲ್ಲದೆ, ಖಾಸಗಿ ಕಂಪೆನಿಗಳಲ್ಲೂ ಬಿ.ಟೆಕ್‌. ಪದವೀಧರರಿಗೆ ವಿಪುಲ ಅವಕಾಶವಿದೆ. ಆದರೆ, ಬುದ್ಧಿಮತ್ತೆ, ತಾಂತ್ರಿಕ ಕೌಶಲ ಇರುವುದಂತೂ ಇಲ್ಲಿ ಕಡ್ಡಾಯ. ಆರಂಭದಲ್ಲಿ 20-25 ಸಾವಿರದ ಪಗಾರವಾದರೂ ಮುಂದೆ ಲಕ್ಷಗಟ್ಟಲೆ ಸಂಪಾದಿಸುವ ಸಾಧ್ಯತೆಗಳಿವೆ.

ತಂತ್ರಜ್ಞಾನ ಬೆಳೆದಂತೆಲ್ಲ, ತಾಂತ್ರಿಕ ಪದವೀಧರರಿಗೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಎಲ್ಲ ಪದವಿಗಳಿಗೆ ಅನ್ವಯವಾಗುವಂತೆ ಇಲ್ಲಿ ಕೇವಲ ಪಠ್ಯಕ್ರಮ ಅಂಕಪಟ್ಟಿ ಮಾನದಂಡವಾಗದೆ ಕೌಶಲ, ವಿಷಯ ತಜ್ಞತೆ ಎರಡೂ ಸಮವಾಗಿ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಏರಿಸಬಲ್ಲವು.

ಕಾಂಬಿನೇಷನ್‌ ಮುಖ್ಯ
ಬಿಟೆಕ್‌ ಪದವಿ ಪಡೆಯಬೇಕು ಅಂತ ಹಂಬಲಿಸುವವರು ಒಂದಷ್ಟು ವಿಷಯಗಳ ಕಾಂಬಿನೇಷನ್‌ ಮೇಲೆ ಕಣ್ಣು ಇಡುವುದು ಒಳಿತು. ಏಕೆಂದರೆ, ಇವು ಮಾರುಕಟ್ಟೆಯಲ್ಲಿ ಚಲಾವಣೆ ಇರುವ ನಾಣ್ಯಗಳು. ಹೀಗಾಗಿ, ಕೋರ್ಸ್‌ ಮುಗಿಸಿದ ತಕ್ಷಣ ಕೆಲಸ ಸಿಗಬಹುದು, ಬದುಕಲ್ಲಿ ನೆಲೆ ನಿಲ್ಲಬಹುದು. ಹೀಗಾಗಿ, ಬಿಗ್‌ಡಾಟಾ ಮತ್ತು ಆಯಿಲ್‌ ಗ್ಯಾಸ್‌ ಇವಫ‌ರ್‌ವೆುàಟಿಕ್ಸ್‌ ವಿಚಾರದಲ್ಲಿ ಸ್ಪೆಷಲೈಸೇಷನ್‌ ಮಾಡಿಕೊಂಡರೆ ಉತ್ತಮ ಎನಿಸುತ್ತದೆ.

ಬಿಟೆಕ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದರೆ ಕೆಲಸ ಗ್ಯಾರಂಟಿ ಅನ್ನೋದು ಪ್ರಸ್ತುತ ಚಾಲ್ತಿಯಲ್ಲಿರುವ ನಿರೀಕ್ಷೆ. ಇದರಲ್ಲಿ ಸುಮಾರು ಅವಕಾಶಗಳು ಇವೆ.
ಅದು ಹೇಗೆಂದರೆ, ಮ್ಯಾಕಾನಿಕಲ್‌ ಡಿಸೈನ್‌ ಎಂಜಿನಿಯರ್‌, ಅಡ್ವಾನ್ಸಡ ಮ್ಯಾನುಫ್ಯಾಕ್ಚರ್‌ ಎಂಜಿನಿಯರ್‌, ಅನಾಲಿಸ್ಟ್‌, ಡಿಸೈನ್‌ ಎಂಜಿನಿಯರ್‌, ಡೆವಲಪ್‌ಮೆಂಟ್‌ ಎಂಜಿನಿಯರ್‌ – ಹೀಗೆ ಹಲವಾರು ವಿಷಯಗಳು ಉದ್ಯೋಗದ ಹಾದಿ ತೋರಿಯಾವು. ಇದರಂತೆ, ಬಿಟೆಕ್‌ ಜಿಯೋ-ಇನ್‌ಫ‌ರ್‌ಮ್ಯಾಟಿಕ್ಸ್‌ ಎಂಜಿನಿಯರಿಂಗ್‌ ಕೂಡ ಲಾಭದಾಯಕವೇ. ಇದು ನಾಲ್ಕು ವರ್ಷದ ಕೋರ್ಸ್‌. ಇದನ್ನು ಜಿಯೋ. ಸೈನ್ಸ್‌ ಎಂಜಿನಿಯರ್‌ ಅಂತಲೂ ಕರೆಯುವುದುಂಟು. ಸಿಸ್ಟಮ್ಯಾಟಿಕ್‌ ಡಾಟಾ ಕಲಕ್ಷನ್‌ ಎಂಜಿನಿಯರ್‌, ಸಿಸ್ಟಮ್ಯಾಟಿಕ್‌ ಡಾಟಾ ಇನ್‌ಟರ್‌ಪಿಟೇಷನ್‌ ಎಂಜಿನಿಯರ್‌, ಮಿನರಲ್‌ ಎಂಜಿನಿಯರ್‌, ಹೀಗೆ ಹಲವು ಹಾದಿಗಳೂ ಇದರಲ್ಲಿವೆ.

ಮೊಬೈಲ್‌ ಗೇಮ್‌ಗಳ ಪ್ರೋಗ್ರಾಂ ರಚಿಸುವುದು ಇದರಲ್ಲಿದೆ. ಇದರಲ್ಲಿ ಬಿಗ್‌ ಡಾಟಾ ಸ್ಪೇಷಲೈಸೇಷನ್‌ ತೆಗೆದುಕೊಂಡರೆ ಬಿಗ್‌ ಡಾಟಾ ಆರ್ಕಿಟೆಕ್ಟ್, ಬಿಗ್‌ ಡಾಟಾ ಪ್ರಾಜೆಕ್ಟ್ ಮ್ಯಾನೇಜರ್‌, ಬಿಗ್‌ ಡಾಟಾ ಅನಾಲಿಸ್ಟ್‌ ಹೀಗೆ ಹಲವಾರು ರೀತಿಯ ಉದ್ಯೋಗ ಅವಕಾಶಗಳು ಇವೆ.

ರಘು. ವಿ

ಟಾಪ್ ನ್ಯೂಸ್

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.