ಬ್ಯಾಚುಲರ್‌ ಆಫ್ ಸ್ಲೀಪಿಂಗ್‌; ಲೇಟಾಗಿ ಕ್ಲಾಸು, ಯಾರಿಗೆ ಲಾಸು?


Team Udayavani, Jul 18, 2017, 3:55 AM IST

lead5.gif

ಪದವಿ ವಿದ್ಯಾರ್ಥಿಗಳಿಗೆ ಬೇಗನೆ ತರಗತಿ ಆರಂಭಿಸಲು ಹೊರಟಿದ್ದ ಶಿಕ್ಷಣ ಇಲಾಖೆ ಹಿಂದಡಿ ಇಟ್ಟಿದೆ. ಈ ನಿರ್ಧಾರದ ಹಿಂದಿನ ಹಲವು ಆತಂಕಗಳಲ್ಲಿ, “ವಿದ್ಯಾರ್ಥಿಗಳು ಏಳ್ಳೋದೇ ಲೇಟು, ಬೇಗ ಕ್ಲಾಸಿಗೆ ಬರೋಲ್ಲ, ಮೊದಲ ಪೀರಿಯೆಡ್‌ ಖಾಲಿ ಖಾಲಿ ಇರುತ್ತೆ’ ಎನ್ನುವ ಲೆಕ್ಚರರ್‌ಗಳ ಸಂಕಟವೂ ಒಂದು. “ಬ್ಯಾಚುಲರ್‌ ಆಫ್ ಸ್ಲಿàಪಿಂಗ್‌’ನ ಮೋಹಿತರಿಗೆ ಬೆಳಗ್ಗೆ ಬೇಳುವುದು ಅಷ್ಟು ಕಷ್ಟವೇ? ಕಾಲೇಜು ವಿದ್ಯಾರ್ಥಿಗಳೇಕೆ ಮಾರ್ನಿಂಗ್‌ ಪರ್ಸನ್‌ ಆಗೋಲ್ಲ!?

ನೀವು ಇನ್ನು ಎಂಟು ಗಂಟೆಗೆಲ್ಲ ಕ್ಲಾಸಲ್ಲಿರ್ಬೇಕು…- ಒಂದು ಕಾಗದ ಪತ್ರದಲ್ಲಿ ಮುದ್ರಿಸಿದ ಈ ಆದೇಶವನ್ನು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳ ಗೋಡೆಯ ಮೇಲೆ ಅಂಟಿಸಿತ್ತು. ಬಹುತೇಕ ವಿದ್ಯಾರ್ಥಿಗಳು ಅಲ್ಲಿಯೇ ಬಯ್ದುಕೊಂಡರೇನೋ! ಹೈಕಳ ಪೇರೆಂಟ್ಸ್‌ ಅಂತೂ, “ಇವ್ನು ಏಳ್ಳೋದೇ ಒಂಭತ್ತಕ್ಕೆ; ಎಂಟ್‌ ಗಂಟೆಗೇ ಹೋಗೋದಾದ್ರೆ, ಇವ° ಹಾಸಿಗೆಯನ್ನು ಕಾಲೇಜಲ್ಲೇ ಎಲ್ಲಾದ್ರೂ ಸೈಡಲ್ಲಿ ಇಡೋದು ಒಳ್ಳೇದು’ ಎಂದು ಲೇವಡಿ ಮಾಡಿದ್ದರು. ಯಾವ ದೇವರ ವರವೋ, ಅದ್ಯಾವ ವಿದ್ಯಾರ್ಥಿಯ ಹರಕೆಯ ಫ‌ಲವೋ, ಗೊತ್ತಿಲ್ಲ… ಸರ್ಕಾರ ತನ್ನ ಆದೇಶ ವಾಪಸು ತೆಗೆದುಕೊಂಡಿದೆ. “ಬೆಳಗ್ಗೆ ಬೇಗ ಕ್ಲಾಸು ಬೇಡ, ಮಾಮೂಲಿ ಟೈಮ್‌ಗೆ ಬರ್ರಪ್ಪಾ…’ ಎಂಬ ಆ ಮರು ಆಮಂತ್ರಣದಲ್ಲಿ ಇಲಾಖೆಯ ದೊಡ್ಡ ಸೋಲೊಂದು ಇಣುಕಿದೆ.

ಹೌದು, ಕಾಲೇಜು ಹೈಕಳು ಮಾರ್ನಿಂಗ್‌ ಪರ್ಸನ್‌ ಅಲ್ಲವೇ ಅಲ್ಲ. ಹೈಸ್ಕೂಲ್‌ ದಿನಗಳಲ್ಲಿ ಬೆಳಗ್ಗೆ ಏಳು ಗಂಟೆಗೆಲ್ಲ ಟ್ಯೂಶನ್‌ ಮುಂದೆ ನಿಲ್ಲುತ್ತಿಧ್ದೋರು, ಈಗ ಒಂಭತ್ತಾದರೂ ಹಾಸಿಗೆಯಲ್ಲಿ ಮೈ ಮುರೀತಾರೆ. ಆರಕ್ಕೆಲ್ಲಾ ಎದ್ದು ಒಂದು ವಾಕ್‌, ಲೈಟಾಗಿ ಕಾಫಿ, ಬೇಗನೇ ರೆಡಿಯಾಗಿ ಫ‌ಸ್ಟ್‌ ಪೀರಿಯೆಡ್‌ನ‌ಲ್ಲಿ ಕೂರೋದು ಇವರಿಗೆ ತ್ರಾಸದಾಯಕ. “ನಿದ್ದೆ ಬಂದಾಗ ಮಲಗು, ಎಚ್ಚರಾದಾಗ ಏಳು’- ಇದು ಇವರ ಮಂತ್ರ. ಅಲ್ಲದೇ, ವಾರಾಂತ್ಯದಲ್ಲಿ ಮಾಡುವ ಗಂಟೆಗಟ್ಟಲೆಯ ನಿದ್ದೆ ಇವರ ಸೋಮಾರಿ ಖಾತೆಗೆ ಜಮೆಯಾದರೂ, ಇವರು ಒಂಥರಾ ನಿದ್ರಾಹೀನರು! ಇವರೊಳಗಿನ ಜೈವಿಕ ಗಡಿಯಾರ ದಾರಿ ತಪ್ಪಿದ ಸಮಯ ಯಾರಿಗೂ ಗೊತ್ತಾಗೋದಿಲ್ಲ!

ಒಂದು ಸಂಶೋಧನೆಯ ಪ್ರಕಾರ, ಸಂಜೆ ವೇಳೆ ನಮ್ಮ ದೇಹದಲ್ಲಿ “ಮೆಲೊಟೋನಿನ್‌’ ಹಾರ್ಮೋನ್‌ ಬಿಡುಗಡೆಯಾಗುತ್ತದಂತೆ. ಇದು ಚಯಾಪಚಯ ಕ್ರಿಯೆ ಮತ್ತು ನಿದ್ದೆಗೆ ಪೂರಕವಾದ ಹಾರ್ಮೋನು. ಯುವಕರ ದೇಹದಲ್ಲಿ ಇದು ಒಂದು ಗಂಟೆ ತಡವಾಗಿ ಬಿಡುಗಡೆಯಾಗಿ, ಅವರು ರಾತ್ರಿಯ ನಿದ್ದೆಯನ್ನು ತಡವಾಗಿಯೇ ಅಪ್ಪಿಕೊಳ್ಳುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹರೆಯದ ಈ ವಯಸ್ಸಿನಲ್ಲಿ 7 ರಿಂದ 9 ಗಂಟೆ ಅವಧಿಯ ಪೂರ್ಣ ಪ್ರಮಾಣದ ನಿದ್ದೆಯ ಅವಶ್ಯಕತೆ ಇರುತ್ತದೆ. ಹಾಗಾಗಿ, ಇವರ ದೇಹ ಅಷ್ಟು ಪ್ರಮಾಣದ ನಿದ್ದೆಯನ್ನು ವಸೂಲಿ ಮಾಡದೇ ಬಿಡೋದಿಲ್ಲ. ಮಲಗೋದು ತಡವಾದ್ರೆ, ಏಳ್ಳೋದೂ ತಡವಾಗೋದು ಪಕ್ಕಾ!

ಇದೆಲ್ಲಕ್ಕೂ ಉರಿಯುವ ಬೆಂಕಿಗೆ ತುಪ್ಪ ಹಾಕುವಂತೆ ಮಾಡುತ್ತಿರೋದು ಇವರ ಆಧುನಿಕ ಜೀವನ ಶೈಲಿ. ಇವರ ತಾಜಾ ನಿದ್ದೆಯನ್ನು ಮೊಬೈಲ್‌ ಕದ್ದಿದೆ. ಮೊಬೈಲ್‌ ನೋಡುತ್ತಲೇ ನಿದ್ದೆಗೆ ಜಾರುವುದು ಶೇ.90 ಯುವಕ- ಯುವತಿಯರ ಖಯಾಲಿ. ರಾತ್ರಿ ಹನ್ನೆರಡು ಗಂಟೆ ಕಳೆದರೂ, ಇವರ ಚಾಟ್‌ಲೆçನ್‌ ಬಣ್ಣ ಗ್ರೀನ್‌! ಇದು ಇವರಿಗೆ ಸಿಕ್ಕಿರುವ ಮಧ್ಯರಾತ್ರಿಯ ಸ್ವಾತಂತ್ರÂ! ಮೊಬೈಲ್‌ ಪರದೆಯ ಬೆಳಕು, ಇವರ ಕಣ್ಣುಗಳಿಂದ ನಿದ್ದೆಯನ್ನು ಅಪಹರಿಸುತ್ತಲೇ ಇದೆ. ಇಂದು ಯುವಕರಿಗಾಗಿಯೇ ಪ್ರತ್ಯೇಕ ಮಲಗುವ ಕೋಣೆಗಳು ಇರುವುದರಿಂದ, ಈ ಪ್ರೈವೇಸಿ ಎಲ್ಲೆ ಮೀರಿದೆ.

ಮತ್ತೆ ಸೋಲುತ್ತೀರಿ…
ಇದು ಎಲ್ಲ ಬಹುತೇಕ ವಿದ್ಯಾರ್ಥಿಗಳ ಪ್ರಶ್ನೆ. ನೀವು ನಾಳೆಯಿಂದ ಸರಿಯಾಗಿ ಆರಕ್ಕೆ ಎದ್ದುಬಿಡ್ತೀನಿ ಅಂತ ನಿರ್ಧರಿಸಿಯೇ ಮಲಗುತ್ತೀರಿ. ಇಲ್ಲ ನಿಮಗೆ ಸಾಧ್ಯವಾಗೋದೇ ಇಲ್ಲ. ಮತ್ತೆ ಸೋಲುತ್ತೀರಿ. ಅಲಾರಂ ಅರಚಿಕೊಂಡರೆ ಅದಕ್ಕೆ ನಾಲ್ಕು ಬಾರಿಸಿ, ಸುಮ್ಮನಿರಿಸುತ್ತೀರಿ. ಕಾಫೀ ತಂದ ಅಮ್ಮನಿಗೆ ಪ್ರತಿಕ್ರಿಯಿಸದೆ, ಮುಖ ತಿರುವಿಸಿ ಮಲಗುತ್ತೀರಿ. ನಿನ್ನೆ ದಿನ ಮಾಡಿದ ಗಟ್ಟಿಯಾದ ನಿರ್ಧಾರ ಮುಂಜಾನೆಯ ಸಕ್ಕರೆ ನಿದ್ದೆಗೆ ಕರಗಿ ಹೋಗಿರುತ್ತದೆ. ನಿಜಕ್ಕೂ ಇದೊಂದು ಹೋರಾಟ. 

ಮೊದಲ ಕ್ಲಾಸ್‌ ಖಾಲಿ ಖಾಲಿ! 
ಶಾಲೆಯ ದಿನಗಳಲ್ಲಿ ಟೈ ಬೆಲ್ಟ್ ಬಿಗಿದುಕೊಂಡು ಪ್ರಾರ್ಥನೆಯ ವೇಳೆಗಾಗಲೇ ಸ್ಕೂಲ್‌ ಅಂಗಳದಲ್ಲಿ ಸೇರುತ್ತಿದ್ದ ಹುಡುಗರು ಇಂದು ಕಾಲೇಜಿನಲ್ಲಿ ಪ್ರಥಮ ತರಗತಿಗೆ ಚಕ್ಕರ್‌! ಹಾಜರಾತಿ ಎರಡಂಕಿ ದಾಟಲೂ ಕುಂಟುತ್ತದೆ. ಗಂಟೆ ಹತ್ತಾದರೂ ಕಾಲೇಜಿನ ಮುಖ ನೋಡೋದಿಲ್ಲ. ಅಮ್ಮನ ಬೈಗುಳಕ್ಕೊ, ಅಪ್ಪನ ಭಯಕ್ಕೋ ಎದ್ದಿರುತ್ತಾರೆ. ಟೈಮ್‌ ಮ್ಯಾನೇಜ್‌ ಹೇಗೆಂದು ತಿಳಿಯುತ್ತಿಲ್ಲ. ಲೇಟಾಗಿ ಎದ್ದರೂ ರೆಡಿಯಾಗಲು ಗಂಟೆಗಟ್ಟಲೇ ವ್ಯಯಿಸುತ್ತಾರೆ. ಏನೂ ಬರೆದಿಲ್ಲ, ಓದಿಲ್ಲ ಎಂದು ಅವಾಗ ನೆನಪಿಗೆ ಬರುತ್ತದೆ. ಅದ್ಯಾವುದೋ ನೋಟ್ಸ್‌, ಬುಕ್ಸ್‌ ಅಂತ ಪರದಾಡುತ್ತಾರೆ. ಮರೆಯುತ್ತಾರೆ. ಕಾಲೇಜು ಕ್ಯಾಂಪಸ್‌ ಸೇರುವ ಹೊತ್ತಿಗೆ ಎರಡನೇ ಅವಧಿಯ ಬೆಲ್‌ ಬಾರಿಸಿರುತ್ತದೆ. ಕಾಲೇಜು ಹುಡುಗರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಡಾ. ರಾಲ್ಪ, ಇದೇ ಮಾತನ್ನೇ ಪ್ರತಿಪಾದಿಸುತ್ತಾರೆ: “ಕಾಲೇಜಿನ ತರಗತಿಗಳು ಬೆಳಗ್ಗೆ 11ರ ನಂತರವಷ್ಟೇ ಆರಂಭವಾಗಬೇಕು’. ಇದು ಕಾಲೇಜಿನ ಮೊದಲ ತರಗತಿಗಳನ್ನು ನೋಡಿದಾಗ ನಿಜವೆನಿಸುತ್ತದೆ.

ಕ್ಲಾಸು ಮೊದಲಿನಂತೆ ತಡವಾಗಿಯೇ ಆರಂಭವಾಗಿದೆ ಎನ್ನುವುದು ಸಂಭ್ರಮದ ಸಂಗತಿ ಅಲ್ಲ. ಇದು ಸೋಮಾರಿ ವಿದ್ಯಾರ್ಥಿಗಳ ದಿಗ್ವಿಜಯವೂ ಅಲ್ಲ. ಇದು ದೊಡ್ಡ ಸೋಲು! ಕಾಲೇಜು ಹುಡುಗರು ತಡವಾಗಿ ಎದ್ದರೆ ದೇಶವೇ ತಡವಾಗಿ ಎದ್ದಂತೆ. ಏಕೆಂದರೆ, ಒಂದೆಡೆ ನಾಳೆ ದೇಶವನ್ನು ನಿಮ್ಮ ಕೈಯಲ್ಲಿಡಲು ಎಲ್ಲಾ ತಯಾರಿ ನಡೆಯುತ್ತಿರುವಾಗ ನೀವಿನ್ನೂ ಹಾಸಿಗೆಯ ಮೇಲೆ ಆಕಳಿಸುತ್ತಾ ಮಲಗಿದ್ದರೆ ಹೇಗೆ? ನಿಮ್ಮ ಗುರಿ- ಜವಾಬ್ದಾರಿಗಳು ಕಾದಿರುವಾಗ ಮಲಗಿಕೊಂಡೇ ಇದ್ದರೆ ಏನೂ ಫ‌ಲಕಾರಿಯಾಗದು. ಒಮ್ಮೆ ಮೈ ಕೊಡವಿ ಎದ್ದು ಬಿಡಿ. ಆಮೇಲೆ ನೋಡಿ… ನಿಮ್ಮ ಕೆರಿಯರ್‌ ಹೇಗಿರುತ್ತೆ ಅಂತ! 

7 ಗುಟ್ಟು ಪಾಲಿಸಿದ್ರೆ, ನೀವು ಮಾರ್ನಿಂಗ್‌ ಸ್ಟಾರ್‌!
1. ಬೇಗ ಮಲಗಿ. ಹಾಗೆ ಮಲಗುವುದಕ್ಕೂ ಒಂದು ನಿರ್ದಿಷ್ಟ ಟೈಮ್‌ ಫಿಕ್ಸ್‌ ಮಾಡಿಕೊಳ್ಳಿ. ಒಂದು ತಿಂಗಳು ಇದನ್ನು ಪಾಲಿಸಿದರೆ, ಅದು ಅಭ್ಯಾಸವೇ ಆಗುತ್ತೆ.
2. ಮಲಗುವ ಮೊದಲು ಮೊಬೈಲ್‌ ಜತೆ ಸರಸಕ್ಕೆ ಇಳಿಯಬೇಡಿ. ನಿಮ್ಮ ನಿದ್ದೆಯನ್ನು ಇದು ಅನಾಯಾಸವಾಗಿ ತಿಂದುಹಾಕುತ್ತದೆ.
3. ಮಲಗುವ ಕೋಣೆ ಪ್ರಶಾಂತವಾಗಿರಲಿ. ಅಲ್ಲಿ ಗಾಳಿ- ಬೆಳಕು ಯಥೇಚ್ಚವಾಗಿರಲಿ.
4. ಏಳುವುದಕ್ಕೂ ಒಂದು ಸಮಯ ನಿಗದಿಪಡಿಸಿಕೊಳ್ಳಿ. ಅಲಾರಂ ಫಿಕ್ಸ್‌ ಮಾಡಿಕೊಳ್ಳಿ. ಐದಾರು ಬಾರಿ ರಿಪೀಟ್‌ ಆಗುವಂತೆ ಸೆಟ್‌ ಮಾಡಿಡಿ. ಅಲಾರಂ ನೀವು ಮಲಗುವ ಜಾಗದಿಂದ ತುಸು ದೂರವಿರಲಿ, ಕೈಟುಕದಂತೆ.
5. ಮೊದಲ ಬಾರಿಗೆ ಎಚ್ಚರವಾದ ತಕ್ಷಣ, ಎದ್ದುಬಿಡಿ. ಮುಖ ತೊಳೆದು, ತಡಮಾಡದೆ, ಹೊರಗೆ ಒಂದು ವಾಕ್‌ ಹೋಗಿ.
6. ದೇಹಕ್ಕೆ ತನ್ನದೇ ಆದ ಇತಿಮಿತಿಗಳಿರುತ್ತವೆ. ಅದನ್ನು ಗೌರವಿಸಿ. ಅದು ವಿಶ್ರಾಂತಿ ಬಯಸಿದಾಗ, ದೂರ ಉಳಿಯುವುದು ತರವಲ್ಲ. ಆದರೆ, ಈ ವಿರಾಮಕ್ಕೂ ಸೋಮಾರಿತನಕ್ಕೂ ನಡುವಿನ ಗೆರೆಯನ್ನು ಅರಿತುಕೊಳ್ಳುವುದು ಮುಖ್ಯ.
7. ರಾತ್ರಿ ಅತಿಯಾದ ಊಟ ಬೇಡ. ಹೆಚ್ಚು ಚಾಕ್ಲೆಟ್‌, ಕಾಫೀ- ಟೀ ಸೇವನೆ ಬೇಡವೇ ಬೇಡ.

– ಸದಾಶಿವ್‌ ಸೊರಟೂರು

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.