ನಿತ್ಯ ಕಾಸು ಎಣಿಸಿ!
Team Udayavani, Sep 19, 2017, 2:39 PM IST
ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬ್ಯಾಂಕುಗಳು ರಾಷ್ಟ್ರಾದ್ಯಂತ ತಮ್ಮ ಶಾಖೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇವೆ. ಇನ್ನೂ ಕೆಲವು, ಜಾಗತಿಕವಾಗಿ ತಮ್ಮ ಆರ್ಥಿಕ ಸಾಧನೆ ತೋರಿ ರಾಷ್ಟ್ರೀಕೃತ ಬ್ಯಾಂಕುಗಳಾಗಿ ಬದಲಾವಣೆ ಕಂಡಿವೆ. ಇಂಥ ಬ್ಯಾಂಕುಗಳಲ್ಲಿ ಆಗಿಂದಾಗ್ಗೆ ಉದ್ಯೋಗ ಸಂಬಂಧಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಪ್ರಸ್ತುತ, ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್‌ನ ಮೂಲಕ ಖಾಸಗಿ ಹಾಗೂ ರಾಷ್ಟ್ರೀಯ ಬ್ಯಾಂಕುಗಳಿಗೆ ಒಟ್ಟು 7875 ಗುಮಾಸ್ತ ಹುದ್ದೆಗಳಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದಿಂದಲೂ 554 ಹುದ್ದೆಗಳಿವೆ. ಆ ಹುದ್ದೆಗಳಿಗೆ ಆಯ್ಕೆಯಾಗಬೇಕೆಂದರೆ…
ನೀನು ಬ್ಯಾಂಕಿಂಗ್ ಪರೀಕ್ಷೆನಾದ್ರೂ ತೆಗೆದುಕೊಂಡಿದ್ದಿದ್ರೆ, ಇಷ್ಟು ಹೊತ್ತಿಗೆ ಕೆಲಸನಾದ್ರೂ ಸಿಗ್ತಿತ್ತು. ನಿನಗಿಂತ ಕಡಿಮೆ ಬುದ್ಧಿವಂತಿಕೆ ಇದ್ದವರು, ನಿನ್ನ ಜೂನಿಯರ್‌ಗಳಲ್ಲಿ ಕೆಲವರು ಪರೀಕ್ಷೆ ಬರೆದೇ ನೌಕರಿ ಗಿಟ್ಟಿಸಿಕೊಂಡ್ರು. ಆದ್ರೆ ನೀನು ಯಾವಾಗಲೂ ಆ ಎಕ್ಸಾಮ…, ಈ ಎಕ್ಸಾಮ… ಅಂತ ಬೇರೆ ಬೇರೆ ಇಲಾಖೆಯ ಪರೀಕ್ಷೆ ಬರೆಯೋದೇ ಆಯ್ತು. ಕೆಲಸ ಮಾತ್ರ ಸಿಗಲಿಲ್ಲ. ನಿನ್ನ ಜೊತೆ ಸೇರಿ ನಾನೂ ಹಾಳಾದೆ ಎಂದು ಸ್ನೇಹಿತರು ತಮ್ಮನ್ನು ಮೂದಲಿಸಿದ್ದು ನೆನಪಿದೆಯಾ? ಪದೇಪದೆ ಪರೀಕ್ಷೆ ಬರೆದು, ಅಯ್ಯೋ ಒಂದು ಮಾರ್ಕ್ ಕಡಿಮೆ ಬಂದ ಕಾರಣಕ್ಕೆ ಕೆಲಸ ಸಿಗಲಿಲ್ಲ, ಬಂಗಾರದಂಥ ಅವಕಾಶ ಮಿಸ್ಸಾಗಿಹೋಯ್ತು, ಇನ್ನೊಂದು ಪರ್ಸೆಂಟ್ ಬಂದಿದ್ದಿದ್ದರೆ.. ಚೆನ್ನಾಗಿರುತ್ತಿತ್ತು ಎಂದು ಪರಿತಪಿಸಿಲ್ಲವೇ?
ಹೌದು, ಉದ್ಯೋಗಕ್ಕಾಗಿ ಹೀಗೆಲ್ಲಾ ಹಲವಾರು ಬಾರಿ ಹಂಬಲಿಸಿದ್ದೂ ಆಗಿದೆ. ಮತ್ತೆ ಮತ್ತೆ ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿಯೂ ಆಗಿದೆ. ಕೆಲವೊಮ್ಮೆ ಪರೀಕ್ಷೆಗಳನ್ನು ಕಳೆದುಕೊಂಡರೆ, ಕೆಲವೊಮ್ಮೆ ಅವಕಾಶವಂಚಿತರಾಗಿದ್ದೇವೆ. ಅವಕಾಶವಂತೂ ಮತ್ತೆ ಮತ್ತೆ ಬಂದಿಲ್ಲ. ಬಂದ ಅವಕಾಶಗಳೂ ಕೆಲವೊಮ್ಮೆ ಸದುಪಯೋಗವಾಗಿಲ್ಲ. ಆದರೂ ಮತ್ತೂಂದು ದೊಡ್ಡ ಅವಕಾಶ ಈಗ ನಿಮ್ಮ ಮುಂದಿದೆ.
ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ಖಾಲಿಯಿರುವ ಒಟ್ಟು 7,875 ಗುಮಾಸ್ತ ಹುದ್ದೆಗಳಿಗೆ ಆನ್‌ಲೈನ್ ಮೂಲಕ ನೇಮಕಾತಿಗೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ಮೂಲಕ ಅವಕಾಶ ನೀಡಲಾಗಿದೆ.
ಎಲ್ಲೆಲ್ಲಿ ಹುದ್ದೆಗಳು?
ಆಂಧ್ರಪ್ರದೇಶ-485, ಅರುಣಾಚಲ ಪ್ರದೇಶ-8, ಅಸ್ಸಾಮ…- 109, ಬಿಹಾರ- 227, ಚಂಡೀಗಡ- 34, ಚತ್ತೀಸ್‌ಗಢ- 118, ದೆಹಲಿ- 272, ಗುಜರಾತ್- 487, ಕರ್ನಾಟಕ- 554… ಹೀಗೆ ಎಲ್ಲ ರಾಜ್ಯಗಳೂ ಸೇರಿ ಒಟ್ಟು 7875 ಹುದ್ದೆಗಳಿವೆ. ಈ ಹುದ್ದೆಗಳನ್ನು ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ದೇನಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಯುಕೋ ಬ್ಯಾಂಕ್, ವಿಜಯಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಅರ್ಹತೆಗಳು
ವಯೋಮಿತಿ: ಅಭ್ಯರ್ಥಿಗೆ ಸೆ.1ರ ವೇಳೆಗೆ ಕನಿಷ್ಠ 20 ವರ್ಷ ತುಂಬಿರಬೇಕು. ಗರಿಷ್ಠ 28 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ 5 ವರ್ಷ, ದಿವ್ಯಾಂಗರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.
ವಿದ್ಯಾರ್ಹತೆ: ಕೇಂದ್ರ ಅಥವಾ ರಾಜ್ಯದ ಯಾವುದೇ ಅಂಗೀಕೃತ ವಿವಿಯಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ, ರಾಜ್ಯ, ರಾಷ್ಟ್ರೀಯ ಭಾಷೆಯ ಅರಿವಿರಬೇಕು.
ಆಯ್ಕೆ ಹೇಗೆ?
ಗುಮಾಸ್ತ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪೂರ್ವ ಸಿದ್ಧತಾ ತರಬೇತಿಯನ್ನು ನೀಡಲಾಗುತ್ತದೆ. ಜೊತೆಗೆ ಆನ್‌ಲೈನ್ ಮೂಲಕ ಪ್ರಾಥಮಿಕ ಹಂತದ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಇದರ ಫಲಿತಾಂಶ ಜನವರಿ ವೇಳೆಗೆ ಬರುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಈ ಪರೀಕ್ಷೆಯು ಜನವರಿ 21, 2018 ರಂದು ನಡೆಯುತ್ತದೆ. ಪೂರ್ವ ಸಿದ್ಧತೆಗಾಗಿ ತರಬೇತಿ ಇರುವುದಿಂದ ಪರೀಕ್ಷಾ ಕಾಲ… ಲೆಟರ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಪರೀಕ್ಷೆಗಳು: ಪ್ರಾಥಮಿಕ ಮತ್ತು ಮುಖ್ಯ ಎಂಬ ಎರಡು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಒಟ್ಟು ಮೂರು ಪತ್ರಿಕೆಗಳಿರುತ್ತವೆ. ಆಂಗ್ಲ ಭಾಷಾ ಪತ್ರಿಕೆ, ನ್ಯೂಮರಿಕಲ್ ಎಲಿಜಿಬಿಲಿಟಿ, ರೀಸನಿಂಗ್ ಎಲಿಜಿಬಿಲಿಟಿ ವಿಷಯಗಳಿರುತ್ತವೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಇದರ ನಂತರದ ಮುಖ್ಯ ಪರೀಕ್ಷೆಯಲ್ಲಿ ಫೈನಾನ್ಷಿಯಲ್ ಅವೇರ್‌ನೆಸ್, ಜನರಲ್ ಇಂಗ್ಲಿಷ್, ರೀಸನಿಂಗ್ ಎಲಿಜಿಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್, ಕ್ಯಾನಿrಟೇಟೀವ್ ಆಪ್ಟಿಟ್ಯೂಡ್ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗಳು ರಾಜ್ಯವಾರು ಬೇರೆ ಬೇರೆ ದಿನಾಂಕದಲ್ಲಿ ಜರುಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಆನ್‌ಲೈನಿನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮೊದಲು goo.gl/yHdUQL ನಲ್ಲಿ ಅಭ್ಯರ್ಥಿಯು ರಿಜಿಸ್ಟರ್ ಆಗಬೇಕು. ಅಗತ್ಯ ಮಾಹಿತಿ (ಇ-ಮೇಲ್, ಮೊಬೈಲ… ನಂಬರ್, ಹೆಸರು, ಜನ್ಮದಿನಾಂಕ) ತುಂಬಿ ರಿಜಿಸ್ಟ್ರೇಷನ್ ನಂಬರ್, ಪಾಸ್‌ವರ್ಡ್ ಪಡೆದುಕೊಳ್ಳಬೇಕು. ಮತ್ತೂಮ್ಮೆ ಲಾಗಿನ್ ಆಗಿ ಪರೀಕ್ಷೆಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆ, ಭಾವಚಿತ್ರ ಪ್ರತಿಯನ್ನು ತುಂಬಬೇಕು. ದಾಖಲಿಸಿರುವ ಮಾಹಿತಿ, ಪುರಾವೆ ಪರೀಕ್ಷಿಸಿ ಫೈನಲ್ ಸಬಿ¾ಟ್ ಬಟನ್ ಒತ್ತಬೇಕು. ನೀವು ಎಲ್ಲಿ ಪರೀಕ್ಷೆ ಬರೆಯಬೇಕು ಮತ್ತು ಯಾವ ರಾಜ್ಯದ ಹುದ್ದೆಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ? ಎಂಬುದರ ಬಗ್ಗೆ ಅರಿವಿರಲಿ. ನಂತರ ಅರ್ಜಿ ಶುಲ್ಕದ ಪ್ರತಿಯನ್ನು ಡೆಬಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸಬೇಕು. ಪಾವತಿ ನಂತರ ಇ-ರಸೀದಿಯೂ ಅಲ್ಲೇ ಸಿಗುತ್ತದೆ.
ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ, ಪರಿಶಿಷ್ಟರು 100 ರೂ. ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 3 ಕೊನೆದಿನವಾಗಿದ್ದು, ಹೆಚ್ಚಿನ ಮಾಹಿತಿಗೆ goo.gl/PRKqRS ಸಂಪರ್ಕಿಸಿ.
ಎನ್. ಅನಂತನಾಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.