ಎಂದೆಂದೂ ನೀನು ಸುಖವಾಗಿರು, ನನ್ನನ್ನು ಮರೆತು ಹಾಯಾಗಿರು!


Team Udayavani, Dec 19, 2017, 11:12 AM IST

19-12.jpg

ನಿನ್ನನ್ನು ಮರೆಯಬೇಕು ಅಂತ ನಾನಾ ಕಸರತ್ತುಗಳನ್ನು ಮಾಡಿದೆ. ಪ್ರಯೋಜನವಾಗಲಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ, ಏನ್ಮಾಡ್ಲಿ? ಈ ಮನಸ್ಸು ಅನ್ನೋದಿದೆಯಲ್ಲ, ಬಡ್ಡಿಮಗಂದು, ಅದು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ. ಅದ್ಹೇಗೋ ನಿನ್ನ ನೆನಪುಗಳು ನುಸುಳಿ ಬಿಡುತ್ತವೆ. 

ಹಾಯ್‌ ಸ್ವೀಟಿ,
ಕ್ಷಮೆ ಇರಲಿ, ಈ ನಿನ್ನ ಮಾಜಿ ಪ್ರೇಮಿಗೆ ಊಹೂ, ಒಬ್ಬ ಅನಾಮಿಕನಿಗೆ. ಅಂದು ನೀ ಹೇಳಿದ್ದೆ, “ಇನ್ನೊಮ್ಮೆ ನನ್ನನ್ನು ಆ ಹೆಸರಿನಿಂದ ಕರೀಬೇಡ. ಒಂಥರಾ ಹಿಂಸೆ ಆಗುತ್ತೆ’ ಅಂತ. ನೀನು ಹಾಗಂದಿದ್ದು ಚೆನ್ನಾಗಿ ನೆನಪಿದೆ. ಆದ್ರೆ, ಏನ್ಮಾಡಲಿ, ಈ ನನ್ನ ನಲು°ಡಿ ಹೊಮ್ಮುತ್ತಿರುವುದು ನಿನ್ನನ್ನು ಹುಚ್ಚನಂತೆ ಪ್ರೀತಿಸಿದ, ಅನುಕ್ಷಣವೂ ನಿನ್ನ ಸಾಮೀಪ್ಯವನ್ನೇ ಬಯಸುತ್ತಾ, ಸದಾ ನಿನ್ನ ಹೆಸರನ್ನೇ ಜಪಿಸುತ್ತಿದ್ದ ನನ್ನ ಎದೆ ಎಂಬ ಎರಡಕ್ಷರದ ಪುಟ್ಟ ಗೂಡಿನಿಂದ. ಇರಲಿ, ಈ ತಪ್ಪು ಮರುಕಳಿಸದಂತೆ ಬದುಕಲು ಯತ್ನಿಸುವೆ. ಮೊನ್ನೆ ನಿನ್ನನ್ನು ಬಸ್‌ಸ್ಟಾಪಿನಲ್ಲಿ ನೋಡಿದೆ. ಜೊತೆಗಿದ್ದವನು, ನಿನ್ನ ಕೈಯಿಂದ ಉಂಗುರದ ಶಾಸ್ತ್ರ ಮಾಡಿಸಿಕೊಂಡವನು ಅಂತ ಅಂದುಕೊಂಡಿದ್ದೇನೆ. ಅವನೊಂದಿಗಾದರೂ ಚೆನ್ನಾಗಿರು.

  ನಿನ್ನನ್ನು ಮರೆಯಬೇಕು ಅಂತ ನಾನಾ ಕಸರತ್ತುಗಳನ್ನು ಮಾಡಿದೆ. ಪ್ರಯೋಜನವಾಗಲಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ, ಏನ್ಮಾಡ್ಲಿ? ಈ ಮನಸ್ಸು ಅನ್ನೋದಿದೆಯಲ್ಲ, ಬಡ್ಡಿಮಗಂದು, ಅದು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ. ಅದ್ಹೇಗೋ ನಿನ್ನ ನೆನಪುಗಳು ನುಸುಳಿ ಬಿಡುತ್ತವೆ. ಅಂದಿನ ನಮ್ಮ ಮೊದಲ ಭೇಟಿ¿å  ಸಂದರ್ಭ, ಇದೀಗ ನೇರ ಪ್ರಸಾರವಾಗುತ್ತಿದೆಯೇನೋ ಎಂಬಷ್ಟು ಸ್ಪಷ್ಟವಾಗಿ ನೆನಪಿದೆ. ಅವತ್ತು ನಾನು ನಿನ್ನಲ್ಲಿ ಪ್ರೇಮ ಭಿಕ್ಷೆ ಬೇಡಿದ ರೀತಿ, ಅದಕ್ಕೆ ನೀನು ಸ್ಪಂದಿಸಿದ ರೀತಿ ಎಲ್ಲವೂ ನನ್ನೆದೆಯಲ್ಲಿ ಮಲೆನಾಡ ಸಿರಿಯಂತೆ ಕಂಗೊಳಿಸುತ್ತಿವೆ.

ನಾನು-ನೀನು ಭವಿಷ್ಯದ ಬಗ್ಗೆ ಅದೆಷ್ಟು ಕನಸು ಕಂಡಿದ್ವಿ. ಆ ದಿನಗಳನ್ನು ನೆನೆದರೆ ಮನಸ್ಸು ತುಂಬಿ ಬರುತ್ತದೆ. ನಿನ್ನೊಂದಿಗೆ ಕಳೆದ ಆ ಮಧುರ ಕ್ಷಣಗಳಿಗೆ ಲೆಕ್ಕ ಇಟ್ಟವರ್ಯಾರು? ಒಂದು ದಿನ ನಿನ್ನನ್ನು ಭೇಟಿ ಮಾಡದಿದ್ದರೂ, ನಾನು ಅದೆಷ್ಟು ಚಡಪಡಿಸುತ್ತಿದ್ದೆ. ಆಗ ನೀನು, “ಒಂದು ವೇಳೆ ನಾನು ಶಾಶ್ವತವಾಗಿ ಬಿಟ್ಟು ಹೋದರೆ ಏನ್ಮಾಡ್ತೀಯಾ?’ ಎಂದು ರೇಗಿಸುತ್ತಿದ್ದೆ. ಆಗ ನಾನದನ್ನು ತಮಾಷೆ ಅಂದುಕೊಂಡಿದ್ದೆ. ಆದರೆ, ಇದೇ ಭವಿಷ್ಯದ ಘೋರ ಸತ್ಯವೆಂಬುದು ನನ್ನ ಅರಿವಿಗೆ ಬಾರದೆ ಹೋಯಿತು. ಒಂದು ಸಾರಿ ಅತ್ತು ಹಗುರಾಗೋಣವೆಂದರೆ ಆಗುತ್ತಿಲ್ಲ. ಏನ್ಮಾಡಲಿ? ಇರಲಿ, ನೀನಾದರೂ ಸುಖವಾಗಿರು.

ಮತ್ತೆ ನಿನ್ನನ್ನು ಭೇಟಿಯಾಗಲಿಚ್ಛಿಸದ 

ನಾಗರಾಜ್‌ ಬಿ., ಚಿಂಚರಕಿ

ಟಾಪ್ ನ್ಯೂಸ್

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.