ಕ್ವಿಕ್ಕಾಗಿ ಕ್ಲರ್ಕ್‌ ಆಗಿ! ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ


Team Udayavani, Sep 12, 2017, 8:15 AM IST

clark.jpg

“ಊರಿನ ಶಾನುಭೋಗರು ಒಬ್ಬರಿದ್ದಿದ್ದರೆ ಸಾಕು; ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಪಹಣಿ, ಜಮೀನು ಲೆಕ್ಕಪತ್ರ ಹೀಗೆ ಎಲ್ಲ ವ್ಯವಹಾರವೂ ಸೌಜನ್ಯದ ಆಧಾರದ ಮೇಲೆಯೇ ನಡೆದುಹೋಗುತ್ತಿತ್ತು’ ಎಂದು ತಂದೆಯೋ, ತಾತನೋ ಹೇಳಿದ ಮಾತುಗಳು ನೆನಪಿದೆಯೆ? ಆದರೆ ಈಗ ಹಾಗಿಲ್ಲ. ಎಲ್ಲ ಕೆಲಸಗಳನ್ನೂ ಸಮರ್ಪಕವಾಗಿ, ವ್ಯವಸ್ಥಿತವಾಗಿ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ಆಗ್ಗಿಂದಾಗ್ಗೆ ನ್ಯಾಯಾಲಯ, ಡಿ.ಸಿ. ಕಚೇರಿ, ನೋಂದಣಿ ಇಲಾಖೆ ಹೀಗೆ ಅನೇಕ ಸರ್ಕಾರಿ ಕಾರ್ಯಾಲಯದಲ್ಲಿ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸಿಕೊಳ್ಳುತ್ತಿದೆ. ಅದೇ ರೀತಿ ಈ ಬಾರಿಯೂ ಲೋಕಸೇವಾ ಆಯೋಗವು ಒಟ್ಟು 1058 ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

“ನಿನಗೂ ಒಂದು ಸರ್ಕಾರಿ ನೌಕರಿ ಇದ್ದಿದ್ದರೆ ಇಷ್ಟೆಲ್ಲಾ ಪಜೀತಿ ಆಗುತ್ತಿತ್ತಾ?’ ನೆರೆಹೊರೆಯವರು “ಸರಿಯಾದ ಕೆಲಸವಿಲ್ಲ’ ಎನ್ನುತ್ತಾರೆ. ಸಂಬಂಧಿಕರು “ಏನು ಮಾಡಿಕೊಂಡಿದ್ದೀಯಾ?’ ಎಂದು ಪದೇ ಪದೇ ಪ್ರಶ್ನಿಸುತ್ತಾರೆ. “ನಿನಗೆ ಹೆಣ್ಣು ಕೇಳಲು ನಾನೇ ಹೆದರುವ ಸ್ಥಿತಿ ಬಂದಿದೆ. ಒಂದು ಸರ್ಕಾರಿ ಕೆಲಸ ಅಂತ ಆದ್ರೆ, ನೋಡು.. ನಿನ್ನ ಹಿಂದೆ ಎಷ್ಟು ಜನ ಬಂದು ನಿಲ್ಲುತ್ತಾರೆ ಅನ್ನೋದನ್ನು…’ ಎಂದು ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ನಿತ್ಯವೂ ಕಾಡುತ್ತಾ ಅಣ್ಣ ತಮ್ಮಂದಿರ ಮೇಲೆ ಒತ್ತಡ ಹೇರುವುದನ್ನು ನೋಡಿರುತ್ತೇವೆ. ಜೊತೆಗೆ ಸರ್ಕಾರಿ ನೌಕರಿಯನ್ನೇ ಮಾಡಬೇಕು ಎಂದು ಹಂಬಲಿಸುವವರನ್ನು, ಪರಿತಪಿಸುವವರನ್ನು ಕಂಡಿರುತ್ತೇವೆ.

ಅಂಥವರಿಗಾಗಿ ಇಲ್ಲೊಂದು ಸದಾವಕಾಶವಿದೆ. ಕರ್ನಾಟಕ ಲೋಕಸೇವಾ ಆಯೋಗವು ಜಿಲ್ಲಾಧಿಕಾರಿ ಕಾರ್ಯಾಲಯ, ನೋಂದಣಿ, ಮುದ್ರಾಂಕ ಇಲಾಖೆ, ಜಿಲ್ಲಾ ಸತ್ರ ನ್ಯಾಯಾಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ, ಖಜಾನೆ, ಉದ್ಯೋಗ ಮತ್ತು ತರಬೇತಿ ಇಲಾಖೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹು¨ªೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1,058 ಹು¨ªೆಗಳಿಗೆ ಅವಕಾಶವಿದೆ. ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಹುದ್ದೆಗಳು
ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಜಿಲ್ಲಾವಾರು, ವಿವಿಧ ಇಲಾಖಾ ಕಾರ್ಯಾಲಯದಲ್ಲಿ ಒಟ್ಟು 507 ಹುದ್ದೆಗಳಿವೆ.
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖಾ ಕಾರ್ಯಾಲಯದಲ್ಲಿ ಒಟ್ಟು 551 ಹುದ್ದೆಗಳಿವೆ. ಇವುಗಳನ್ನು ಹೈದರಾಬಾದ್‌ ಕರ್ನಾಟಕ ಮತ್ತು ಉಳಿಕೆ ಮೂಲವೃಂದ ಎಂದು ವಿಂಗಡಿಸಲಾಗಿದೆ.

ವಯೋಮಿತಿ, ವಿದ್ಯಾರ್ಹತೆ, ಸಂಬಳ
ಪ್ರಥಮ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಯಾವುದೇ ವಿವಿಯಲ್ಲಿ ಪದವಿ, ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ದ್ವಿತೀಯ ದರ್ಜೆ ಹುದ್ದೆಗೆ ಪದವಿಪೂರ್ವ ತರಗತಿ, ತತ್ಸಮಾನ ವಿದ್ಯಾರ್ಹತೆ ಸಾಕು.

ಅರ್ಜಿ ಸ್ವೀಕೃತಿಗೆ ಕೊನೆ ದಿನಾಂಕದ ಹೊತ್ತಿಗೆ ಅಭ್ಯರ್ಥಿ ಕನಿಷ್ಠ 18 ವರ್ಷ ಗರಿಷ್ಠ 35ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪರಿಶಿಷ್ಟರಿಗೆ 40 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಇನ್ನು ಸಿವಿಲ್‌ ಸೇವೆಯಡಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 14,550 ರೂ. ರಿಂದ 26,700 ರೂ. ವೇತನ ನಿಗದಿ ಮಾಡಲಾಗಿದೆ. ಹಾಗೆಯೇ ದ್ವಿತೀಯ ದರ್ಜೆ ಸಹಾಯಕರಿಗೆ 11,600- 21,000 ವೇತನವನ್ನು ಸರ್ಕಾರ ನಿಗದಿಪಡಿಸಿದೆ. ಜೊತೆಗೆ ಭವಿಷ್ಯ ನಿಧಿ ಸೌಲಭ್ಯವೂ ಇದೆ.

ಹುದ್ದೆಗಳ ಆಯ್ಕೆ ಹೇಗೆ?
ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಕಡ್ಡಾಯ ಕನ್ನಡ, ಸಾಮಾನ್ಯ ಕನ್ನಡ/ಇಂಗ್ಲಿಷ್‌, ಸಾಮಾನ್ಯಜ್ಞಾನ ಒಟ್ಟು ಮೂರು ಪತ್ರಿಕೆಗಳ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೂಲಕ ಜೇಷ್ಠತೆ ಆಧರಿಸಿ, ಮೀಸಲಾತಿ, ವರ್ಗೀಕರಣ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಂತರ ಕೌನ್ಸೆಲಿಂಗ್‌ ಮೂಲಕ ಇಲಾಖಾ ಹಂಚಿಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಕೆ
ಪ್ರಥಮ ದರ್ಜೆ ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲು ಜಾಲತಾಣ goo.gl/KTpmwwಗೆ ಲಾಗಿನ್‌ ಆಗಿ, ಬಳಿಕ ಪರದೆಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳಿ. ನ್ಯೂ ರಿಜಿಸ್ಟ್ರೇಷನ್‌ ಆಯ್ಕೆಗುಂಡಿ ಒತ್ತಿ. ಬಳಿಕ ಪೂರ್ಣ ಹೆಸರು, ತಂದೆ, ತಾಯಿ ಹೆಸರು, ಜನ್ಮದಿನಾಂಕ, ಮೊಬೈಲ್‌ ಸಂಖ್ಯೆ, ಇ-ಮೇಲ… ವಿಳಾಸ ಇತ್ಯಾದಿ ಮಾಹಿತಿ ತುಂಬಿ ಮುಂದುವರಿಯಿರಿ. ನಿಮ್ಮ ಮಾಹಿತಿಯ ಆಧಾರದ ಮೇಲೆ ರಿಜಿಸ್ಟ್ರೇಷನ್‌ ಐಡಿ ಮತ್ತು ಪಾಸ್‌ವರ್ಡ್‌ ಕ್ರಿಯೇಟ… ಆಗುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ್ತೂಮ್ಮೆ ಲಾಗ್‌ ಆನ್‌ ಆಗಿ. ಇಲ್ಲಿ ಮೊದಲೇ ಸೃಜಿಸಿರುವ ಮಾಹಿತಿ ಇರುತ್ತದೆ. ಜೊತೆಗೆ ನಿಮ್ಮ ವಿಳಾಸ, ಹೊಂದಲಿರುವ ಹು¨ªೆಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಅಗತ್ಯ ದಾಖಲೆ, ಭಾವಚಿತ್ರ, ಸಹಿಪ್ರತಿ ಇತರ ದಾಖಲೆಯನ್ನು ಅಪ್‌ಲೋಡ್‌ ಮಾಡಿ, ಅದನ್ನು ಮತ್ತೂಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ, ಫೈನಲ… ಬಟನ್‌ ಒತ್ತಿ ಪರೀûಾ ಶುಲ್ಕದ ಪ್ರತಿ ಗೋಚರಿಸುತ್ತದೆ ಅದನ್ನು ಪ್ರಿಂಟ್‌ ತೆಗೆದುಕೊಳ್ಳಿ. ಸಮೀಪದ ಇ- ಪೇಮೆಂಟ್‌ ಸೌಲಭ್ಯವಿರುವ ಪೋÓr… ಆಫೀಸಿನಲ್ಲಿ ಶುಲ್ಕ ಪಾವತಿಸಿ. ಅಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಯಾಗುವುದು.

ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 7 ಕೊನೆದಿನವಾಗಿದೆ. ಶುಲ್ಕ ಪಾವತಿಗೆ ಅಕ್ಟೋಬರ್‌ 9 ಕಡೆ ದಿನವಾಗಿದೆ. ಇನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಇತರ ವಿದ್ಯಾರ್ಥಿಗಳಿಗೆ 150 ರೂ. ಪರಿಶಿಷ್ಟರಿಗೆ ಶುಲ್ಕದಲ್ಲಿ ವಿನಾಯ್ತಿಯಿದೆ. 

ಹೆಚ್ಚಿನ ಮಾಹಿತಿಗಾಗಿ: goo.gl/3kyLVM ಸಂಪರ್ಕಿಸಿ.

-ಎನ್‌. ಅನಂತನಾಗ್

ಟಾಪ್ ನ್ಯೂಸ್

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

Road Mishap: ಬೈಕ್ – ಆಂಬ್ಯುಲೆನ್ಸ್ ನಡುವೆ ಅಪಘಾತ: ಬೈಕ್ ಸವಾರ ಸಾವು

Road Mishap: ಬೈಕ್ – ಆಂಬ್ಯುಲೆನ್ಸ್ ನಡುವೆ ಅಪಘಾತ: ಸವಾರ ಸಾವು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ಬಾಂಗ್ಲಾದಲ್ಲಿ ಇಸ್ಕಾನ್‌ ಮುಖಂಡರ ಬಂಧನಕ್ಕೆ ಪುತ್ತಿಗೆ ಶ್ರೀ ಖಂಡನೆ

Udupi: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Udupi: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Mangaluru: ಬೈಕ್‌ ಢಿಕ್ಕಿ: ಪಾದಚಾರಿ ಸಾವು

Mangaluru: ಬೈಕ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.