ಗುರಿ ತೋರುವ ಗುರು ಆಗಬೇಕೆ ?: ತಡ ಮಾಡದೆ ಅರ್ಜಿ ಹಾಕಿ…


Team Udayavani, Sep 5, 2017, 9:09 AM IST

05-JOSH-2.jpg

“ಆ ಮೇಷ್ಟ್ರು ಇದ್ದಿದ್ರೆ ನಾನು ಇನ್ನೂ ಚೆನ್ನಾಗಿ ಓದುತ್ತಿದ್ದೆ’,
“ನಾವು ಮೇಷ್ಟ್ರು ಹೇಳಿದ ಮಾತನ್ನು ಎಂದಿಗೂ ಮೀರುತ್ತಿರಲಿಲ್ಲ’,
“ಆ ಮೇಷ್ಟ್ರ ಕೈಲಿ ಪಾಠ ಹೇಳಿಸಿಕೊಂಡವರು ಇಂದಿಗೂ ಒಳ್ಳೆ ಮಾರ್ಗದಲ್ಲಿ ನಡೆಯುತ್ತಿದ್ದಾರೆ’… ಎಂದು ಶಿಕ್ಷಕರ ಬಗ್ಗೆ
ಅನೇಕರು ಹೇಳುವುದನ್ನು ಕೇಳಿರುತ್ತೇವೆ. ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುವ ನಿರ್ಮಾತೃಗಳು. ಶಿಕ್ಷಕರ ಹುದ್ದೆ
ಪಡೆದವರೇ ಪುಣ್ಯವಂತರು ಎನ್ನುವುದನ್ನೂ ಕೇಳಿದ್ದೇವೆ. ಇಂತಿರುವಾಗ 10 ಸಾವಿರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. 

“ಬಹಳ ಒಳ್ಳೇವ್ರು ನಮ್ಮಿಸ್ಸು’ ಎಂಬ ಶಿಶುಗೀತೆ ಕೇಳಿದ್ದು ನೆನಪಿದೆಯಾ? ಅವು ಶಾಲಾ ದಿನಗಳು. ಟೀಚರ್‌ ಅಂದ್ರೆ ಗೌರವದ ಜೊತೆಗೆ ನಮ್ಮ ಮಿಸ್‌,
ನಮ್ಮ ಸರ್‌ ಎಂಬ ಅಭಿಮಾನ. ಆಗ ಟೀಚರ್ಗಳೇ ಕಣ್ಮುಂದಿನ ರೋಲ್ ಮಾಡಲ್ಗಳು. ನಮ್ಮ ಮಿಸ್‌ ಪಾಠ ಮಾಡಿದರೆ ಎಂಥ ಮೂರ್ಖನಿಗೂ
ಅರ್ಥವಾಗುತ್ತೆ, ಅವರು ಹೇಳಿಕೊಟ್ಟ ಪಾಠ ನನಗೆ ಈಗಲೂ ನೆನಪಿದೆ, ಅವರು ಅವತ್ತು ಹಾಗೆ ಮಾಡದೇ ಹೋಗಿದ್ದರೆ ಇಂದು ನಾನು ಈ ಹಂತಕ್ಕೆ
ಬೆಳೆಯುತ್ತಿರಲಿಲ್ಲ…ಇಂಥ ಮಾತುಗಳನ್ನು ಸಾಧಕರ ಬಾಯಿಂದಲೂ ಕೇಳಿದ್ದೇವೆ.ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಗುರುವಿನ ಮುಂದೆ
ಸಣ್ಣವನೇ ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಪರಿಶ್ರಮವಿರುತ್ತದೆ. ಅವರು ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನೂ ವಿದ್ಯಾರ್ಥಿಗಳಲ್ಲಿ 
ತುಂಬುತ್ತಾರೆ. ಶಿಕ್ಷಕರಾಗಲು ಬಯಸುವವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ (6-8 ನೇ ತರಗತಿಗಳ)
ಶಿಕ್ಷಕರ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಹಾಕಲು ಅವಕಾಶ ನೀಡಿದೆ.

ಹುದ್ದೆಗಳಿಗೆ ಪರೀಕ್ಷೆ:
ಈ ಹುದ್ದೆಗಳನ್ನು ಶೇಕಡಾವಾರು ಹಂತದಲ್ಲಿ ನಿಗದಿಪಡಿಸಿದ್ದು, ಅದಕ್ಕಾಗಿ ನಾಲ್ಕು ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಏರ್ಪಡಿಸಲಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಭಾಗಕ್ಕೆ
ಎರಡನೇ ಹಂತದಲ್ಲಿ ಹೈದರಾಬಾದ್‌ ಕರ್ನಾಟಕದ ಭಾಗಕ್ಕೆ
ಮೂರನೇ ಹಂತದಲ್ಲಿ ಹೈ-ಕ ಉಳಿಕೆ ಭಾಗಕ್ಕೆ
ನಾಲ್ಕನೆ ಹಂತದಲ್ಲಿ ಬೆಂಗಳೂರು ಉತ್ತರ- ದಕ್ಷಿಣ ಉಳಿಕೆ ಭಾಗಕ್ಕೆ. ಇದರಲ್ಲಿ ಎಲ್ಲ ಜಿಲ್ಲೆಯ ಅಭ್ಯರ್ಥಿಗಳೂ ಸ್ಪರ್ಧಿಸಬಹುದು.

ವಿದ್ಯಾರ್ಹತೆ, ವಯೋಮಿತಿ, ಸಂಬಳ:
ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಪದವಿಯಲ್ಲಿ ಕನಿಷ್ಠ ಶೇ.50 ಅಂಕಗಳು, ಬಿ.ಇಡಿ ಪದವಿ ಅಥವಾ ವಿಶೇಷ ಶಿಕ್ಷಣದ ಪದವಿ ಅಗತ್ಯ. ಪಿಯುಸಿಯಲ್ಲಿಯೂ ಶೇ.50ರಷ್ಟು ಅಂಕ ಗಳಿಸಿರಬೇಕು. ಎನ್‌.ಸಿ.ಟಿ.ಇ.ಯು ನಿಗದಿ ಪಡಿಸಿದ ಹೆಚ್ಚುವರಿ ವಿದ್ಯಾರ್ಹತೆ ಪಡೆದಿರಬೇಕು. ಜೊತೆಗೆ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಭಾಷಾ ವಿಷಯ, ಗಣಿತ, ವಿಜ್ಞಾನ, ಸಮಾಜ ಶಿಕ್ಷಕರಾಗಲು ಬಯಸುವವರು ಆಯಾ ವಿಷಯಗಳಲ್ಲಿ ಶೇ.50 ಅಂಕ ಪಡೆದಿರಬೇಕು. ಪರಿಶಿಷ್ಟರಿಗೆ ಶೇ.45 ಅಂಕಗಳ ಮೀಸಲಾತಿಯಿದೆ. ಸಾಮಾನ್ಯವರ್ಗಕ್ಕೆ ಕನಿಷ್ಠ 21ರಿಂದ ಗರಿಷ್ಠ 40ವರ್ಷದವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಪರಿಶಿಷ್ಟರಿಗೆ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ 14,550 ರು.ನಿಂದ 26700 ರು. ವೇತನವನ್ನು ಸರ್ಕಾರ ನಿಗದಿಪಡಿಸಿದೆ.

ನೇಮಕಾತಿ ಹೇಗೆ ?
ಅಭ್ಯರ್ಥಿಯ ಪದವಿ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣ ಕೋರ್ಸ್‌ನ ಅಂಕ, ಟಿಇಟಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳ ಶೇಕಡಾವಾರು ಅಂಕಗಳನ್ನು ಆಧರಿಸಿ ಪ್ರತ್ಯೇಕ ಅರ್ಹ ಅಭ್ಯರ್ಥಿಗಳ ಮೆರಿಟ್‌ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ವೆಯೆràಜ… ಮತ್ತು ಡೆರಿವೇಡ್‌ ಶೇಕಡಾವಾರು ಲೆಕ್ಕ ಹಾಕಿ ಜೊತೆಗೆ ವಯೋಮಿತಿಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲು http://pstr.caconline.in/ ಲಿಂಕ್‌ಗೆ ಲಾಗಿನ್‌ ಆಗಬೇಕು. ಅಲ್ಲಿ ಯಾವ ಭಾಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂಬುದನ್ನು ನಿಖರವಾಗಿ ಸೂಚಿಸಿಲಾಗಿದೆ. ನೀವು ಪರೀಕ್ಷೆ ಬರೆಯಲಿರುವ (ಎಕ್ಸಾಮಿನೇಷನ್‌ 1,2,3,4) ಹಂತವನ್ನು ನಮೂದಿಸಿ ಮುಂದುವರಿಯಿರಿ. ಮುಂದಿನ ಪರದೆಯಲ್ಲಿ ನ್ಯೂ ಅಪ್ಲಿಕೇಷನ… ಅನ್ನು ಆಯ್ಕೆ ಮಾಡಿ, ಅಭ್ಯರ್ಥಿಯ ಹೆಸರು, ಮೊಬೈಲ… ನಂಬರ್‌, ಇಮೇಲ್ ಐಡಿ, ಪಾಸ್‌ ವರ್ಡ್‌ ತುಂಬಿ ರಿಜಿಸ್ಟರ್‌ ಆಗಿ. ಬಳಿಕ ಲಾಗಿನ್‌ ಅಂಕಣ ಬರುತ್ತದೆ. ಅಲ್ಲಿ ಮತ್ತೆ ಲಾಗಿನ್‌ ಆಗಿ. ಮಾಹಿತಿ ಸರಿಯಾಗಿದೆಯೇ, ಇಲ್ಲವೇ ಎಂಬುದನ್ನು ವೀಕ್ಷಿಸಿ ಮುಂದೆ ಸಾಗಿ. ನಂತರ ಹೆಸರು, ವಿಳಾಸ, ಜಾತಿ ಇತ್ಯಾದಿ ಮಾಹಿತಿ ತುಂಬಿ, ನಂತರ ಟಿಇಟಿ ಮಾಹಿತಿ, ದಾಖಲೆ ಲಗತ್ತಿಸಿ, ಬಳಿಕ ಜಾತಿ, ಪ್ರವರ್ಗಗಳ ದಾಖಲೆ ಅಪ್ಲೋಡ್‌ ಮಾಡಿ. ಮುಂದಿನ ಪರದೆಯಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ
ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಬೇಕು. ನಂತರ ಆದ್ಯತೆಯ ವಿಭಾಗವನ್ನು ಗುರುತಿಸಿ ಬಳಿಕ ನಿಮ್ಮ ಭಾವಚಿತ್ರ, ಸಹಿಚಿತ್ರ, ಹೆಬ್ಬೆಟ್ಟಿನ ಗುರುತಿನ ದಾಖಲೆ ತುಂಬಿ. ನಂತರ ಬ್ಯಾಂಕಿನ ಮಾಹಿತಿ ನೀಡಿ ಚಲನ್‌ ಸೃಜಿಸಿಕೊಳ್ಳಿ ಮತ್ತು 48 ಗಂಟೆಗಳಲ್ಲಿ ಶುಲ್ಕ ಪಾವತಿಸಿ. ಅರ್ಜಿ ಸಲ್ಲಿಸಲು ಸೆ.25 ಕೊನೆಯದಿನವಾಗಿದ್ದು, ಶುಲ್ಕ ಪಾವತಿಗೆ ಸೆ.27 ಕೊನೆ ದಿನ. ಸಾಮಾನ್ಯ ಅಭ್ಯರ್ಥಿಗೆ 1,010 ರು. ಮತ್ತು ಪರಿಶಿಷ್ಟರಿಗೆ 510 ರು. ಪರಿûಾ ಶುಲ್ಕ ನಿಗದಿಪಡಿಸಲಾಗಿದೆ. 
ಹೆಚ್ಚಿನ ಮಾಹಿತಿಗೆ: goo.gl/3Uy3dj

 ಎನ್‌. ಅನಂತನಾಗ್‌

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

5-mudhol

Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.