ನಾನು ಮಾತಾಡುವ ಮೊದಲೇ ಪೀರಿಯಡ್ ಮುಗೀತು…
Team Udayavani, Jul 23, 2019, 5:00 AM IST
ಇನ್ನು ನಾಲ್ಕೈದು ನಿಮಿಷ ಕಾದರೆ ಸಾಕು, ನನ್ನ ಸರತಿ ಬಂದೇ ಬಿಡುತ್ತದೆ ಅನ್ನೋ ಥ್ರಿಲ್… ನೋಡನೋಡುತ್ತಿದ್ದಂತೆ ಆದದ್ದು ಬೇರೆಯೇ. ಪಿರಿಯಡ್ ಮುಗಿದ ಸೂಚಕವಾಗಿ ಬೆಲ್ ಹೊಡೆಯಿತು. ನನ್ನೊಳಗಿನ ಉತ್ಸಾಹದ ಗಾಳಿ ತುಂಬಿದ ಬಲೂನ್ ಒಡೆದೇ ಹೋಯಿತು. ಅಯ್ಯೋ, ಸಂಸ್ಕೃತದಲ್ಲಿ ಪಡೆದ ಅಂಕಗಳ ಬಗ್ಗೆ ಹೇಳಿಕೊಳ್ಳಲು ಆಗಲೇ ಇಲ್ಲ ಎಂದು ನಾನು ಪೇಚಾಡುತ್ತಿದ್ದಾಗಲೇ ಮುಂದಿನ ಪೀರಿಯಡ್ ಶುರುವಾಗಿಬಿಟ್ಟಿತ್ತು.
ನಾಲ್ಕು ದಶಕಗಳ ಹಿಂದಿನ ಮಾತು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕೇವಲ ಅಂಕಗಳ ಆಧಾರದಲ್ಲಿ ಸೀಟು ದೊರೆತಾಗ ಏನೋ ಸಾಧಿಸಿದ ತೃಪ್ತಿ. ಅಪ್ಪ ಕಾಲೇಜಿಗೆಂದು ಎರಡು ಜೊತೆ ಬಾಂಬೆಡೈಯಿಂಗ್ ಬಟ್ಟೆಯ ಲಂಗ ಜಂಪರ್ ಕೊಡಿಸಿದ್ದರು. ಕಾಲೇಜಿನ ಮೊಟ್ಟ ಮೊದಲ ದಿನ ಚಿusನಲ್ಲಿ ಕಾಲೇಜ್ ತಲುಪಿದ್ದು ಮರೆಯಲಾರದ ಅನುಭವ. ಕ್ಲಾಸ್ ರೂಮ್ ತುಂಬಾ ಗಿಜಿಗಿಜಿ. ಸಲ್ವಾರ್ ಕಮೀಜ…,ಬೆಲ್ ಬಾಟಮ್,ಮಿಡಿ ಟಾಪ್, ಪ್ಯಾಂಟ್ ಶರ್ಟ್‌ನಿಂದ ಹಿಡಿದು ನನ್ನಂತೆ ಲಂಗ ಬ್ಲೌಸ್‌ವರೆಗೂ ವಸ್ತ್ರ ವೈವಿಧ್ಯದಲ್ಲಿ ಹುಡುಗಿಯರು ಆಗಮಿಸಿದ್ದರು. ಕೇಶವಿನ್ಯಾಸದ ವಿಷಯಗಳ ಬಂದರೆ
ಪೋನಿಟೈಲ…, ಎರಡು ಜುಟ್ಟು, ಬಾಬ…, ಒಂದು ಜಡೆ, ಎರಡು ಜಡೆ , ಕೈಯಲ್ಲಿ ಪುಸ್ತಕ ಹಿಡಿದು ಬಂದವರಿಂದ ಜಂಬದ ಚೀಲ ಏರಿಸಿಬಂದವರೆಗೂ ಇದ್ದವರನ್ನೆಲ್ಲ ಕ್ಲಾಸಿನಲ್ಲಿ ಕಂಡಾಗ ಬೆರಗಾಗಿದ್ದೆ. ಅರೆನಗರ ಪ್ರದೇಶದ, ಇಂಗ್ಲಿಷ್ ಮಾತನಾಡಲು ಬಾರದ ಹುಡುಗಿ ಮತ್ತು ಕೊಂಚ ಹೆಚ್ಚು ಮಡಿವಂತಿಕೆಯ ಹಿನ್ನೆಲೆಯಿಂದ ಬಂದಿದ್ದ ನಾನು ಇವನ್ನೆಲ್ಲಾ ಅರಗಿಸಿಕೊಳ್ಳಲು ಕಷ್ಟವೇ ಆಯಿತು. ಜೊತೆಗೆ ನನ್ನ ಸ್ವಭಾವಕ್ಕೆ ತಕ್ಕುದಾದ ಸ್ನೇಹಿತರು ಸಿಗುವರೋ ಇಲ್ಲವೋ ಎಂಬ ಆತಂಕ ಕೂಡ ಇತ್ತು. ಸ್ಕೂಲ್‌ನಲ್ಲಿ ಎರಡು ಸಾಲು ಹುಡುಗಿಯರಾದರೆ ಒಂದು ಸಾಲು ಹುಡುಗರದ್ದು. ಪ್ರತಿ ವಿಷಯಕ್ಕೂ ಹಾಜರಾತಿ, ಹೈಸ್ಕೂಲಿನಲ್ಲಿ ಒಂದು ಪೀರಿಯಡ್ ಅಂದರೆ 45 ನಿಮಿಷ ಇರುತ್ತಿತ್ತು. ಕಾಲೇಜಿನಲ್ಲಿ ಒಂದು ಪೀರಿಯಡ್‌ನ ಅವಧಿ ಅವಧಿ 55 ನಿಮಿಷಕ್ಕೆ ವಿಸ್ತಾರಗೊಂಡಿದ್ದು ವಿಶೇಷ ಅನಿಸಿತ್ತು.
ಸಂಸ್ಕೃತ ಭಾಷೆಯ ಪಿರಿಯಡ್ ಬಂದಾಗ, ವಿದ್ಯಾರ್ಥಿಗಳು ತಮ್ಮ ಹೆಸರು, ಓದಿದ ಶಾಲೆ, sslc ಯಲ್ಲಿ ಸಂಸ್ಕೃತವಿಷಯದಲ್ಲಿ ಗಳಿಸಿದ್ದ ಅಂಕ ಇವಿಷ್ಟನ್ನೂ ಹೇಳಬೇಕೆಂಬ ಅಪ್ಪಣೆ ಉಪನ್ಯಾಸಕರಿಂದ ಬಂತು. ಸರತಿಯಂತೆ ಒಬ್ಬೊಬ್ಬರಾಗಿ ಹೇಳತೊಡಗಿದರು. ನನ್ನ ಸರತಿ ಯಾವಾಗ ಬರುತ್ತದೆ ಅನ್ನೋ ಕುತೂಹಲ. ಒಬ್ಬೊಬ್ಬರದ್ದು ಮುಗಿಯುತ್ತಿದ್ದಂತೆ, ಅದು ಮಗದಷ್ಟು ಏರುತ್ತಲೇ ಇತ್ತು. ನನ್ನ ಲೆಕ್ಕಾಚಾರವೆಲ್ಲ ಮುಖ್ಯವಾಗಿ ಇದ್ದದ್ದು ಗಳಿಸಿದ ಅಂಕಗಳ ಸುತ್ತ. ನನ್ನೊಳಗಿನ ಕಾತುರಕ್ಕೆ ಇನ್ನೊಂದು ಕಾರಣವೂ ಇತ್ತು ಎನ್ನಿ. ಅದೇನೆಂದರೆ, ಅಲ್ಲಿಯವರೆಗೆ ಪರಿಚಯಿಸಿಕೊಂಡವರಲ್ಲಿ ಒಬ್ಬಿಬ್ಬರ ಹೊರತು ಉಳಿದವರೆಲ್ಲ ನನಗಿಂತ ಕಡಿಮೆ ಅಂಕಗಳನ್ನು ಪಡೆದವರೇ ಆಗಿದ್ದರು. ಇವರ ಮುಂದೆ ನನ್ನ ಅಂಕಗಳ ಪ್ರಕಟಣೆಯಾಗಿ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಅನ್ನಿಸಿಕೊಂಡು ಮತ್ತಷ್ಟು ಬೀಗಬಹುದು ಅನ್ನೋದು ನಿಜವಾದ ಲೆಕ್ಕಾಚಾರ.
ಇನ್ನು ನಾಲ್ಕೈದು ನಿಮಿಷ ಕಾದರೆ ಸಾಕು, ನನ್ನ ಸರತಿ ಬಂದೇ ಬಿಡುತ್ತದೆ ಅನ್ನೋ ಥ್ರಿಲ್… ನೋಡನೋಡುತ್ತಿದ್ದಂತೆ ಆದದ್ದು ಬೇರೆಯೇ. ಪಿರಿಯಡ್ ಮುಗಿದ ಸೂಚಕವಾಗಿ ಬೆಲ್ ಹೊಡೆಯಿತು. ನನ್ನೊಳಗಿನ ಉತ್ಸಾಹದ ಗಾಳಿ ತುಂಬಿದ ಬಲೂನ್ ಒಡೆದೇ ಹೋಯಿತು. ಅಯ್ಯೋ, ಸಂಸ್ಕೃತದಲ್ಲಿ ಪಡೆದ ಅಂಕಗಳ ಬಗ್ಗೆ ಹೇಳಿಕೊಳ್ಳಲು ಆಗಲೇ ಇಲ್ಲ ಎಂದು ನಾನು ಪೇಚಾಡುತ್ತಿದ್ದಾಗಲೇ ಮುಂದಿನ ಪೀರಿಯಡ್ ಶುರುವಾಗಿಬಿಟ್ಟಿತ್ತು. ನಾನು ಅದೇನನ್ನು ಗಮನಿಸದ ಭ್ರಮಾದೀನ ಲೋಕದಲ್ಲಿದ್ದೆ. ಆಗಲೇ ಅರ್ಥಶಾಸ್ತ್ರದ ಉಪನ್ಯಾಸಕರು ‘please note down the syllabus’ ಎಂದಾಗ ಅರ್ಥವಾಗದೇ ಪಿಳಿಪಿಳಿ ಕಣ್ಣು ಬಿಟ್ಟಿದ್ದು ಈಗಲೂ ನೆನಪಿದೆ.
-ಕೆ.ವಿ.ರಾಜಲಕ್ಷ್ಮೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.