B.E ಹುಡುಗಿಯ “ಭಯಾ’ಗ್ರಫಿ; ಎಂಜಿನಿಯರಿಂಗ್ ಹುಡುಗಿ ಹೇಳಿದ ಸತ್ಯಗಳು
Team Udayavani, Aug 8, 2017, 6:20 AM IST
ಸಾಫ್ಟ್ವೇರ್ ಎಂಜಿನಿಯರ್ ಆಗಿ, ಕೈತುಂಬಾ ಕಾಸು ಎಣಿಸಬೇಕೆನ್ನುವುದು ಬಹುತೇಕ ವಿದ್ಯಾರ್ಥಿಗಳ ಕನಸು. ಪೋಷಕರದ್ದೂ ಅದೇ ಒತ್ತಡದ ಪ್ರೋತ್ಸಾಹ. ಅಷ್ಟಕ್ಕೂ ಬಿ.ಇ. ಓದಿದ್ರೆ, ಬದುಕಿನಲ್ಲಿ ಗೆಲ್ಲಬಹುದಾ? ಆ ಪದವಿ ಮೇಲೆ ಏಕೆ ಅಷ್ಟು ನಿರೀಕ್ಷೆ? ವ್ಯಾಮೋಹ? ಇಲ್ಲೊಬ್ಬಳು ಬಿ.ಇ. ವಿದ್ಯಾರ್ಥಿನಿ ಹೇಳ್ಳೋದನ್ನು ಕೇಳಿದ್ರೆ, ಎಂಜಿನಿಯರಿಂಗ್ ಕನಸು ಕಾಣಲೂ ಖಂಡಿತಾ ನೀವು ಎರಡೆರಡು ಸಲ ಯೋಚಿಸ್ತೀರಿ…
ಕನಸೋ ನನಸೋ… ಒಂದು ನಿದ್ದೆ ಮಾಡಿ ಎದ್ದಾಗಿದೆ. ನೋಡಿದ್ರೆ ಮೂರ್ ವರುಷ ಆಗೇ ಹೋಗಿದೆ ನನ್ ಎಂಜಿನಿಯರಿಂಗ್ ಪದವಿಗೆ! ನಿನ್ನೆ ಮೊನ್ನೆ ಎಂಜಿನಿಯರಿಂಗ್ ಸೀಟ್‌ಗೆ ಅಪ್ಪನ ಜೊತೆ “ಆ ಕಾಲೇಜಾ? ಈ ಕಾಲೇಜಾ?’ ಅಂತ ಒದ್ದಾಡಿದ ದಿನಗಳು ಕಣ್‌ಮುಂದೆ ಹಾಗೆಯೇ ಹಸಿರಾಗಿದೆ. ಇನ್ನು ನಮ್ಮ ಬ್ರಾಂಚ್ ತೋರಿಸಿ, “ಇದೇ ನಮ್ ಬ್ರಾಂಚ್’ ಅಂದ್ರೆ, ಅದನ್ನು ನಮ್ಮ ಬ್ರಾಂಚ್ ಜನ ಬಿಟ್ಟು ಬೇರೆ ಯಾರೂ ನಂಬೋದಿಲ್ಲ. “ಹೋಗೆ… ಹೋಗೆ… ದೇವಸ್ಥಾನ ತೋರಿಸಿ, ಬ್ರಾಂಚ್ ಅಂತೀಯಾ?’ ಅಂತಾರೆ. ಕಾರಣ, ಅದು ಕೂಡ ನೋಡಕ್ಕೆ ಥೇಟ್ ದೇವಸ್ಥಾನದ ಹಾಗೆಯೇ ಕಲಾತ್ಮಕವಾಗಿ ಶಿಲ್ಪಕಲೆಗಳ ಬೀಡಾಗಿದೆ ಅನ್ನಿ. ಆದರೆ, ಐ ಲವ್ ದಟ್ ಬ್ರಾಂಚ್. ಮೂರ್ ವರುಷದಿಂದ ಅದೊಂಥರಾ ನನ್ ಮನೆ ಆಗೊಗಿದೆ. ಫೈನಲ್ ಇಯರ್ ಅಂತ ಒಂದು ಮನಸ್ಸು ಖುಷಿ ಪಟ್ಟರೆ, ಇದೇ ಲಾಸ್ಟ್ ಇಯರ್ ಅಂತ ಇನ್ನೊಂದು ಮನಸ್ಸು ತೂತಾದ ಬಲೂನ್ ಥರಾ ಠುಸ್ ಅಂತ ಆ ಖುಷೀನ ಹೂತು ಹಾಕುತ್ತಾ ಇರುತ್ತೆ. ಎಂಜಿನಿಯರಿಂಗ್ ನಂಗೆ ಬರೀ ಒಂದ್ ಡಿಗ್ರೀ ಮಾತ್ರ ಅಲ್ಲ, ನುಚ್‌ನೂರಾಗಿದ್ದ ನನ್ ಕನಸಿನ ಗೋಪುರನ ಮತ್ತೆ ಹೊಸ ಪಿಲ್ಲರ್ ಮೇಲೆ ನಿಲ್ಲಿಸಿ, ಅಷ್ಟೇ ಕಾನ್ಫಿಡೆನ್ಸ್ ಕೂಡ ಕೊಟ್ಟಿದೆ. ಅಷ್ಟು ಮಾತ್ರ ಅಲ್ಲ, ಸ್ನೇಹಿತೆಯರೊಂದಿಗೆ ಒಡನಾಟ, ಕಿತ್ತಾಟ, ಕಾಂಪ್ರಮೈಸ್… ಹೀಗೆ ಬೇರೆ ಪ್ರಪಂಚನೇ ಆ ಕ್ಯಾಂಪಸ್ಸಲ್ಲಿ ಇರುತ್ತೆ.
ಇದಿಷ್ಟು ನನ್ನ ಎಂಜಿನಿಯರಿಂಗ್ ವಿದ್ಯಾರ್ಥಿ ಬದುಕಿನ ಕಿರುಪರಿಚಯ. ಆದರೆ, ಈಗೊಂದು ಪ್ರಶ್ನೆ… “ವೈ ಎಂಜಿನಿಯರಿಂಗ್?’! ತುಂಬಾ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗೇ ಏಕೆ ಅನಿವಾರ್ಯ ಅನಿಸುತ್ತೆ ಅನ್ನೋದು ನಿಜವಾಗಿಯೂ ಒಂದು ಸಲ ಯೋಚನೆ ಮಾಡುವಂಥ ವಿಚಾರ. ಎಂಜಿನಿಯರಿಂಗ್ ಬಿಟ್ಟು ಸಾವಿರಾರು ಕೋರ್ಸ್‌ಗಳು ಇರುವ ಕಾಲ ಇದು. ಅಂಥದ್ದರಲ್ಲೂ ತುಂಬಾ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗೇ ಏಕೆ ಬರುತ್ತಾರೆ? ಇದು ನಿಜಕ್ಕೂ ಯಕ್ಷಪ್ರಶ್ನೆ.
ಈವಾಗ ಕಾಲೇಜಿನ ಮುಖ ನೋಡ್ತಿರೋ ನನ್ ಜೂನಿಯರ್ನ ಸುಮ್ನೆ “ಯಾಕ್ ಈ ಕೋರ್ಸ್ ತಗೊಂಡೆ?’ ಅಂತ ಕೇಳಿದ್ರೆ, “ಅಪ್ಪ- ಅಮ್ಮ ಫೋರ್ ಮಾಡಿದ್ರು. ಎಂಜಿನಿಯರಿಂಗ್ ಈಝಿ, ಬೇಗ ಕೆಲಸಕ್ಕೆ ಹೋಗ್ಬೋದು, ಬೇರೆ ಕೋರ್ಸ್ ಓದಿದ್ರೆ, ಆರು ವರ್ಷ ಡಬಲ್ ಡಿಗ್ರೀ ಮಾಡ್ಬೇಕು. ಈ ಕೋರ್ಸ್ ತಗೊಂಡ್ರೆ ಜಾಸ್ತಿ ದುಡೀಬೋದು, ಬೇಗ ಸೆಟಲ್ ಆಗ್ಬೋದು… ಜೊತೆಗೆ ಎಂಜಿನಿಯರಿಂಗ್ ಅಂದ್ರೆ ಎಂಜಾಯ್‌ಮೆಂಟ್ ಅಲ್ವೇನಕ್ಕಾ?’ ಅಂತ ಕೆಲವರು ನಂಗೇ ವಾಪಸ್ ಪ್ರಶ್ನಿಸುವವರಿದ್ದಾರೆ. ಅವರು ಹೇಳ್ಳೋದೂ ಒಂದ್ ರೀತೀಲಿ ನಿಜ ಅಂತಾನೆ ಅಂದೊಳ್ಳೋಣ. ಆದರೆ, ಎಂಜಿನಿಯರಿಂಗ್ ಸುಲಭ ಅಂತ ಮಾತ್ರ ನಾನು ಒಪ್ಪೋದಿಲ್ಲ. ಅದರ ಪಾಡು ಅಲ್ಲಿರೋರೆ ಮಾತ್ರ ಗೊತ್ತು. ನಂಗೆ ಬೇರೆ ಆಯ್ಕೆಯೇ ಇರಲಿಲ್ಲ. ಹಾಗಂತ ನನ್ನನ್ನು ಎಂಜಿನಿಯರಿಂಗ್ ಓದು ಅಂತ ಯಾರೂ ಬಲವಂತ ಮಾಡ್ಲಿಲ್ಲ. ಪಿಯುಸಿಯಲ್ಲೂ ಕಂಪ್ಯೂಟರ್ ಓದಿದ್ದರಿಂದ, ನನಗೂ ಕಂಪ್ಯೂಟರ್ ಎಂಜಿನಿಯರಿಂಗ್ ಮೇಲೆ ಒಲವಿತ್ತು. 200 ಕ್ರೆಡಿಟ್ ಕೋರ್, 64 ಸಬೆjಕ್ಟ್ ಅಂತೆಲ್ಲ ಏನೂ ಗೊತ್ತಿರ್ಲಿಲ್ಲ. ನಿಜವಾಗಿಯೂ ಇದು ಒಂದು ಸುಂದರವಾದ ಕೋರ್. 64 ಸಬೆjಕ್ಟ್ ಅಂದರೆ, ನೀವೇ ಯೋಚನೆ ಮಾಡಿ. ಎಷ್ಟೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಕ್ಕೆ ಇದು ಎಂಥಾ ಅವಕಾಶ ಅಂತ! ಇವತ್ತು ನಮ್ಮ ರಾಜಧಾನಿಯಲ್ಲೇ ಹೆಚ್ಚುಕಮ್ಮಿ 100 ಎಂಜಿನಿಯರಿಂಗ್ ಕಾಲೇಜುಗಳಿವೆ. ಇನ್ನು ಕರ್ನಾಟಕದಲ್ಲಿ? ಭಾರತದಲ್ಲಿ? ವರ್ಷಕ್ಕೆ ಲಕ್ಷಾಂತರ ಎಂಜಿನಿಯರ್ ಸೃಷ್ಟಿ ಆಗ್ತಿದ್ದಾರೆ. ಇವರಲ್ಲಿ ಇಷ್ಟಪಟ್ಟು ಓದಿರೋದು ಶೇ.20-30 ಮಂದಿ ಅಷ್ಟೇ! ಆ 20 ರಿಂದ 30ರಲ್ಲಿ ನಾನೂ ಒಬ್ಬಳು ಅನ್ನಬಹುದೇನೋ? ಈವಾಗ “ಎಂಜಿನಿಯರ್ಗೆ ಜಾಬ್ ಇಲ್ಲ, ಜಾಬ್ ಇಲ್ಲ’ ಅಂತಾರೆ. ನಾಲ್ಕನೇ ವರ್ಷಕ್ಕೆ ಇನ್ನೂ ಕಾಲೇ ಇಟ್ಟಿರೋದಿಲ್ಲ… ಆಗಲೇ, ಪರಿಚಯದೋರು, ರಿಲೇಷನ್ಸು, “ನಿಮ್ ಮಗ/ ಮಗಳಿಗೆ ಜಾಬ್ ಆಯ್ತಾ? ಯಾವಾಗ್ ಕೋರ್ಸ್ ಮುಗಿಯುತ್ತೆ?’ ಅಂತ ಕೇಳಿ ಕೇಳಿ, ನಮ್ಮ ನೆಮ್ಮದಿಯನ್ನೇ ಕೆಡಿಸಿಬಿಟ್ಟಿರ್ತಾರೆ. ನಮ್ಮ ಜಾತಕದ ಝೆರಾಕ್ಸನ್ನು ನಾಲ್ಕಾರು ಸಲ ಕೇಳಿರ್ತಾರೆ.
ಮಾಮೂಲಿ ಬೇರೆ ಕೋರ್ಸ್‌ಗಳಂತೆ, ಒಂದನ್ನು ಓದಿ, ಇನ್ನೊಂದು ಆಸಕ್ತಿಯ ಕೆಲಸವನ್ನು ಹಿಂಬಾಲಿಸುವ ಸ್ಥಿತಿ ಇಲ್ಲೂ ಇದೆ. ಅದು ಟೆಕ್ಕಿಗಳ ಪಾಲಿಗೆ ದೊಡ್ಡ ಗೊಂದಲ ಕೂಡ. ಎಂಜಿನಿಯರಿಂಗ್ ಓದಿ ಅದಕ್ಕೆ ಸಂಬಂಧವೇ ಇಲ್ಲದ ಕೆಲಸ ಮಾಡ್ತಿರೋರ್ ಬೇಕಾದಷ್ಟ್ ಜನ ನಮ್ಮ ನಡುವೆಯೇ ಇದ್ದಾರೆ. “ಇದೆಲ್ಲ ಯಾಕ್ ಆಗುತ್ತೆ?’ ಅಂತ ಹಾಗೆಯೇ ಸುಮ್ನೆ ಯೋಚನೆ ಮಾಡಿದಾಗ, ನಂಗನ್ನಿಸಿದ್ದು; ಅವ್ರು ಸುಮ್ನೆ ಡಿಗ್ರೀ ಮುಗಿಸೋಕೆ ಪಾಸ್ ಆದ್ರೆ ಸಾಕು ಅಂತ ಓದಿರ್ತಾರೆ. ಡಿಗ್ರೀ ಮುಗಿದರೂ ಅವರ ಕ್ಷೇತ್ರದಲ್ಲಿ ಹಿಡಿತ ಇರೋಲ್ಲ, ಮುಖ್ಯವಾಗಿ ಅಭ್ಯಾಸದ ಕೊರತೆ ಇರುತ್ತೆ. ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿ, ಪುಸ್ತಕದ ಬದನೆಕಾಯಿ ಬಿಟ್ಟು ಬೇರೇನೂ ಗೊತ್ತಿರೋಲ್ಲ. ನಾನೇನೂ ನಂಗೆ ಬಹಳ ಗೊತ್ತು ಅಂತ ಹೇಳ್ತಿಲ್ಲಪ್ಪಾ… ಆದರೆ, ನಮ್ ಫೀಲ್ಡಲ್ಲಿ ನಡೀತಿರೋದನ್ನು ನಂಗೆ ತಿಳಿದಂತೆ ಹೇಳ್ತಿದ್ದೀನಿ ಅಷ್ಟೇ. ಹೀಗೆ ಕಾಟಾಚಾರಕ್ಕೆ ಡಿಗ್ರೀ ಮುಗಿಸಿದೋರಿಗೆ ಸಾಫ್ಟ್ವೇರ್ ಕಂಪನಿಯಲ್ಲಿ ಕೋಟಿಗಟ್ಟಲೆ ಇನ್ವೆಸ್ಟ್ ಮಾಡಿರೋ ಪ್ರಾಜೆಕ್ಟಾ °ಕೊಡ್ತಾರೆ? ಅಲ್ಲಿ ಪುಸ್ತಕಕ್ಕಿಂತ ಪ್ರಾಕ್ಟಿಕಲ್ ಜ್ಞಾನ ಮುಖ್ಯವಾಗುತ್ತೆ. ಅದು ಇಲ್ಲದೇ ಇದ್ದರೆ, ಅವರ ಡಿಗ್ರೀಗೆ ತಕ್ಕ ಕೆಲಸ ಸಿಗಲು ಚಾನ್ಸೇ ಇಲ್ಲ.
ಈಗ ಎಂಜಿನಿಯರಿಂಗ್ ಸೇರಿರೋರಿಗೆ ಒಂದು ಕಿವಿಮಾತು: ನಿಮ್ಮ ಆಸಕ್ತಿ ತಿಳಿದು ಅದಕ್ಕೆ ಸರಿಯಾದ ಬ್ರಾಂಚ್ ಆಯ್ಕೆಮಾಡಿಕೊಳ್ಳಿ. ಯಾರೋ ಹೇಳಿದ್ರು ಅಂತ ಎಂಜಿನಿಯರಿಂಗ್‌ಗೆ ಬರಬೇಡಿ. ಆಟ ಆಡ್ಕೊಂಡ್ ಎಂಜಿನಿಯರಿಂಗ್ ಮಾಡ್ತೀನಿ ಅಂದ್ರೆ ಅದು ಖಂಡಿತಾ ಸುಳ್ಳು. ಎನಿವೇ, ಇಷ್ಟಪಟ್ಟು ಬರೋರಿಗೆ ಈ ಎಂಜಿನಿಯರಿಂಗ್ ಯಾವುದೇ ನಿರಾಸೆ ಮಾಡಲ್ಲ.
ಇನ್‌ಫ್ಯಾಕ್ಟ್, “ಮುಂದೇನು?’ ಅನ್ನೋ ಪ್ರಶ್ನೆ ಯಾರನ್ನೂ ಬಿಟ್ಟಿಲ್ಲ… ನನ್ನ ಕೂಡ! ಆದರೆ, ಈ ನಾಲ್ಕ್ ವರ್ಷದಲ್ಲಿ ಕೋರ್ಸ್ ನಮ್ಮ ಭಾÅಮುಕ ನಿಲುವನ್ನೇ ಬದಲಾಯಿಸುತ್ತೆ. ವಾಸ್ತವವನ್ನು ಪರಿಚಯಿಸಿರುತ್ತೆ. ಪ್ರತಿ ಎಂಜಿನಿಯರಿಂಗ್ ವಿದ್ಯಾರ್ಥಿಗೆ ತಾಳ್ಮೆ ತುಂಬಾ ಮುಖ್ಯ. ಅದನ್ನು ಈ ನಾಲ್ಕು ವರ್ಷ ತಾನಾಗಿಯೇ ಕಲಿಸುತ್ತೆ. ಯಾವ ವಿಷಯಕ್ಕೆ, ಎಷ್ಟು ಪ್ರಾಮುಖ್ಯತೆ ಕೊಡಬೇಕು ಅನ್ನೋದನ್ನೂ ಕಲಿಸುತ್ತೆ. ಬೇರೆ ಡಿಗ್ರೀ ಹೇಗೋ, ಏನೋ ನಂಗೊತ್ತಿಲ್ಲ. ಆದರೆ, ಎಂಜಿನಿಯರಿಂಗ್, ಆ ಸಬೆjಕ್ಟ್, ಕಾಡುವ ಪ್ರಾಕ್ಟಿಕಲ್ಸ್, ನೂರಾಎಂಟು ರೂಲ್ಸ್, ಸಾವಿರಾರು ರೂಪಾಯಿ ಸಪ್ಲಿಮೆಂಟರಿ ಫೀಸ್, ತುಂಡ್ ಹೈಕ್ಳ ತಮಾಷೆಗಳು, ಹಾಸ್ಟೆಲ್‌ನ ಸ್ವತಂತ್ರ ಲೈಫು, ಸಕ್ಸಸ್ಸೇ ಆಗದ ಮಾಸ್ ಬಂಕು, ಹಾಲಿಡೇ ಟ್ರಿಪ್‌ಗ್ಳು, ಹತ್ತಾರು ವರ್ಕ್‌ಶಾಪ್ಸ್… ಹಾnಂ! ಮರೆತೇಬಿಟ್ಟೆ. ಅಟೆಂಡೆನ್ಸ್ (ಕ್ಲಾಸ್‌ಗೆ ಹೋಗೋ ಮುಖ್ಯ ಉದ್ದೇಶ) ಮಾತ್ರ ಲೈಫಲ್ಲಿ ಯಾವತ್ತೂ ಮರೆಯೋಕ್ಕಾಗಲ್ಲ ಬಿಡಿ. ಕೋರ್ಸ್ ಜೊತೆ ಈ ಚಿಕ್ಕ ಚಿಕ್ಕ ಖುಷಿ ಸಂಭ್ರಮಗಳನ್ನು ಅನುಭವಿಸುವ ಮೆಂಟಾಲಿಟಿಯನ್ನ ಕೊನೇ ವರ್ಷದಲ್ಲೂ ಉಳಿಸ್ಕೊಂಡಿರ್ಬೇಕು. ನಾನಂತೂ ಕಾಲೇಜು ಮತ್ತೆ ಶುರುವಾಗೋದನ್ನೇ ಕಾಯ್ತಿದ್ದೀನಿ… ಮತ್ತೆ ನೀವು?
“ಸಾಫ್ಟ್’ ಆಗಿ ನಕ್ಕುಬಿಡಿ…
1. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರ ಸಂಭಾಷಣೆ…
ಎ: ಏನೋ ಇದು ನಿನ್ ಮನೆ ಮುಂದೆ ಹೀಗೆ ಗ್ಯಾರೇಜಿನಲ್ಲಿ ನಿಲ್ಲಿಸಿದಂತೆ ವೆಹಿಕಲ್ ಪಾರ್ಕ್ ಮಾಡಿದ್ದಾರಲ್ಲಾ?
ಬಿ: ಈ ಏರಿಯಾದವ್ರು ಎಷ್ಟ್ ಹೇಳಿದ್ರೂ, ಕೇಳ್ತಿಲ್ವೋ… “ನಾನು ಮೆಕ್ಯಾನಿಕ್ ಅಲ್ಲ, ಮೆಕಾನಿಕಲ್ ಎಂಜಿನಿಯರಿಂಗ್ ಸ್ಟೂಡೆಂಟು ಅಂತ ಸಾವಿರ ಸಲ ಹೇಳಿದ್ದೇನೆ!
2.”ಜಗತ್ತಿನಲ್ಲಿ ಅತಿ ಹೆಚ್ಚು ಶಿಕ್ಷಿತರ ಸ್ಪರ್ಧೆ ನಡೆದರೆ ಗೆಲ್ಲೋದು ಯಾರು?’ ಎಂಬ ಪ್ರಶ್ನೆ ಕೇಳಿದಾಗ, ಎಂಜಿನಿಯರ್ ಸ್ಟೂಡೆಂಟ್ ಒಬ್ಬ ಥರ್ಮಾಮೀಟರ್ ತೋರಿಸಿದ್ದ. ಯಾಕೆ ಹೇಳಿ?ಥರ್ಮಾಮೀಟರ್ ಬಳಿ ನೂರಾರು ಡಿಗ್ರೀಗಳಿವೆಯಲ್ಲಾ!
3. ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಸಿವಿಲ್ ಎಂಜಿನಿಯರ್‌ಗಳ ನಡುವಿನ ವ್ಯತ್ಯಾಸವೇನು?
ಒಬ್ಬರು ಕ್ಷಿಪಣಿ ಆಯುಧಗಳನ್ನು ತಯಾರಿಸುತ್ತಾರೆ. ಇನ್ನೊಬ್ಬರು ಟಾರ್ಗೆಟ್‌ಗಳನ್ನು ಸೃಷ್ಟಿಸುತ್ತಾರೆ!
4. ಇಬ್ಬರು ಭಿಕ್ಷುಕ ಗೆಳೆಯರು ಅಥವಾ ಇಬ್ಬರು ಸಾಫ್ಟ್ವೇರ್ ಗೆಳೆಯರು ಮೀಟ್ ಆದಾಗ ಅವರು ಒಬ್ಬರನ್ನೊಬ್ಬರು ಕೇಳುವ ಪ್ರಶ್ನೆ ಒಂದೇ; “ಯಾವ ಪ್ಲಾಟ್‌ಫಾರಂನಲ್ಲಿ ಕೆಲಸ ಮಾಡ್ತಿದ್ದೀಯಾ?’
5. ಸಂದರ್ಶನದಲ್ಲಿ ಪ್ರಶ್ನೆ ಹೀಗಿತ್ತು. ಸಂಖ್ಯೆ 5ರ ನಡುವೆ ನಾಲ್ಕನ್ನು ಬರೆಯುವುದು ಹೇಗೆ?
ಮೆಡಿಕಲ್ ವಿದ್ಯಾರ್ಥಿ: ಇದು ಪ್ರಶ್ನೆಯಲ್ಲ. ಜೋಕು!
ವಿಜ್ಞಾನ ವಿದ್ಯಾರ್ಥಿ: ಪ್ರಶ್ನೆ ತಪ್ಪಾಗಿದೆ.
ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ: ಇಂಟರ್‌ನೆಟ್‌ನಲ್ಲೆಲ್ಲೂ ಇದಕ್ಕೆ ಉತ್ತರವಿಲ್ಲ!
ಎಂಜಿನಿಯರಿಂಗ್ ವಿದ್ಯಾರ್ಥಿ: F(IV)E
ಟೆಕ್ಕಿಯೇ ಜಗತ್ತಿನ ಬೆಸ್ಟ್ ಡಾಕ್ಟರ್!
ಎಂಜಿನಿಯರ್ ಒಬ್ಬ ಸಾಫ್ಟ್ವೇರ್ ಕಂಪನಿ ಬಿಟ್ಟು ಕ್ಲಿನಿಕ್ ತೆರೆದ. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ “ನಿಮ್ಮ ಎಲ್ಲಾ ಸಮಸ್ಯೆಗೆ ಇಲ್ಲಿ ಪರಿಹಾರವಿದೆ. ಶುಲ್ಕ 500. ರೂ. ಪರಿಹಾರ ಸಿಗದಿದ್ದರೆ 1000ರೂ ನಾವೇ ಕೊಡುತ್ತೇವೆ.’
ಒಬ್ಬ ಡಾಕ್ಟರ್ ವೇಷ ಮರೆಸಿಕೊಂಡು ಹೇಗಾದರೂ 1000. ಸಂಪಾದಿಸಬೇಕೆಂದು ಕ್ಲಿನಿಕ್‌ಗೆ ಬಂದ. ತನಗೆ ಯಾವುದೇ ರುಚಿ ಗೊತ್ತಾಗುತ್ತಿಲ್ಲವೆಂದು ದೂರಿದ. ಎಂಜಿನಿಯರ್ 3 ಹನಿ ಔಷಧಿಯನ್ನು ನಾಲಗೆ ಮೇಲೆ ಹಾಕಿದ.
ಡಾಕ್ಟರ್: ಅಯ್ಯೋ ಇದು ಪೆಟ್ರೋಲು!
ಎಂಜಿನಿಯರ್: ಓಹ್! ನಿಮ್ಮ ನಾಲಗೆ ಸರಿಯಾಯಿತಲ್ಲ. ನಿಮ್ಮ ಬಿಲ್ 500 ರೂ.
ಡಾಕ್ಟರ್ ಹಲ್ಲು ಮಸೆಯುತ್ತಾ ಮತ್ತೆ ತನಗೆ ಮರೆವಿನ ಕಾಯಿಲೆಯಿದೆ ಎಂದು ವಾಪಸ್ಸಾದ. ಎಂಜಿನಿಯರ್ ಮತ್ತೆ ನಾಲಗೆ ಮೇಲೆ 3 ಹನಿ ಪೆಟ್ರೋಲು ಹಾಕಲು ಮುಂದಾದಾಗ…
ಡಾಕ್ಟರ್: ಇದು ನಿನ್ನೆ ಹಾಕಿದ್ದ ಪೆಟ್ರೋಲ್ ಅಲ್ಲವೇ?
ಎಂಜಿನಿಯರ್: ಓಹ್! ನಿಮ್ಮ ನೆನಪಿನ ಶಕ್ತಿ ವಾಪಸ್ ಬಂದಿದೆ. ನಿಮ್ಮ ಬಿಲ್ 500 ರೂ.
ಡಾಕ್ಟರ್‌ನ ಕೋಪ ಹೆಚ್ಚಾಯಿತು. ಹೇಗಾದರೂ ಮಾಡಿ ಎಂಜಿನಿಯರ್‌ನಿಂದ 1000 ರೂ. ವಸೂಲಿ ಮಾಡಲೇಬೇಕೆಂದು ಪಣ ತೊಟ್ಟ. ಮಾರನೇ ದಿನ ಕಣ್ಣಿನ ಸಮಸ್ಯೆಯೆಂದು ಮತ್ತೆ ಕ್ಲಿನಿಕ್ಕಿಗೆ ಹೋದ.
ಎಂಜಿನಿಯರ್: ಇದಕ್ಕೆ ಪರಿಹಾರ ಗೊತ್ತಾಗುತ್ತಿಲ್ಲ. ತಗೊಳ್ಳಿ 1000 ರೂ.
ಡಾಕ್ಟರ್ (ಎಣಿಸುತ್ತಾ): ಇದರಲ್ಲಿ ಬರೀ 100 ರೂ. ಅಷ್ಟೇ ಇದೆ? ಎಂಜಿನಿಯರ್: ಓಹ್ ನಿಮ್ಮ ಕಣ್ಣಿನ ದೃಷ್ಟಿಯೂ ಸರಿಯಾಗಿದೆ. ಆ 100 ರೂ. ವಾಪಸ್ ಕೊಡಿ. ನಿಮ್ಮ ಬಿಲ್ 500 ರೂ.!
ಒಂದಿಷ್ಟು ಟ್ರಾಲ್
1. ಎಂಜಿನಿಯರಿಂಗ್ ಕಾಲೇಜಿನ ಮಾಲೀಕ, ಸಾಫ್ಟ್ವೇರ್ ಎಂಜಿನಿಯರ್‌ಗಿಂತ ಹೆಚ್ಚು ದುಡೀತಾನೆ!
2. ಎಕ್ಸಾಮ್ ಬರೆಯಲು ಅವಕಾಶ ಕೊಟ್ರೆ, ಝೆರಾಕ್ಸ್ ಅಂಗಡಿಯವನೇ ಎಂಜಿನಿಯರಿಂಗ್ ಪದವಿ ಸಂಪಾದಿಸ್ತಾನೆ!
3. ಎಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರರ್ಸ್‌ಗಿಂತ ಲ್ಯಾಬ್ ಅಟೆಂಡರ್‌ಗೆ ಹೆಚ್ಚು ಜ್ಞಾನ ಇರುತ್ತೆ!
– ಶರಧಿ, ಹಾಸನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.