ಬೆಟ್ಟದಷ್ಟು ಪ್ರೀತಿಯನು ಪುಟ್ಟ ಹೃದಯದಲ್ಲಿ ಬಚ್ಚಿಟ್ಟಿದ್ದೆ!
Team Udayavani, Apr 4, 2017, 5:30 PM IST
ಪ್ರೀತಿ ಎಂದರೆ ಕೇವಲ ಪಡೆದುಕೊಳ್ಳುವುದಲ್ಲ. ತ್ಯಾಗವೂ ಪ್ರೇಮಕತೆ ಒಂದು ಬಗೆಯ ಪ್ರೀತಿಯೇ. ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯಾ ಎಂದು ನಿನ್ನ ಕಣ್ಣುಗಳೇ ಹೇಳುತ್ತಿವೆ. ಅಷ್ಟು ಸಾಕು ಬಿಡು…
ಕಾಲೇಜಿಗೆ ಕಾಲಿಟ್ಟಾಗ ಮೊದಲು ಪರಿಚಿತಳಾದವಳು ನೀನು. ಮೊದಲ ಭೇಟಿಯ ಮಧುರ ಕ್ಷಣಗಳನ್ನು ಮರೆಯೋಕೆ ನನ್ನಿಂದ
ಸಾಧ್ಯವಾಗುತ್ತಿಲ್ಲ. ನೀನು ಒಬ್ಬಳೆ ಅವತ್ತು ಕ್ಲಾಸಿಗೆ ಬಂದಿದ್ದೆ, ಅಂದು ಕ್ಲಾಸಿನ ಮೊದಲ ದಿನವಾಗಿತ್ತು. ನನಗೆ ಸಿಲಬಸ್ ಕೂಡಾ ಗೊತ್ತಿರಲಿಲ್ಲ. ಆಗ ನಾನು ನಿನ್ನನ್ನು ಸಿಲಬಸ್ ಕಾಪಿ ಕೇಳಿದೆ, ನೀನು ಕೊಡಲು ನಿರಾಕರಿಸಿದೆ. ಕೊನೆಗೆ ನನ್ನ ಸೋತ
ಮುಖವನ್ನು ನೋಡಲಾರದೆ ಬೆಂಚಿನ ಮೇಲೆ ಕಾಪಿಯನ್ನು ಇಟ್ಟುಹೋದೆ. ಆಗ ನನ್ನ ಮನಸ್ಸಿಗೆ ಆದ ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ.
ಇಡೀ ಕ್ಲಾಸಿನಲ್ಲಿ ಎಲ್ಲ ಹುಡುಗರನ್ನು ಬಿಟ್ಟು ನನ್ನ ಸ್ನೇಹವನ್ನು ಬಯಸಿ ಬಂದ ಕ್ಷಣದಿಂದ ನನ್ನ ಹೃದಯದ ತುಂಬಾ ನೀನಾದೆ. ನಮ್ಮ
ಸ್ನೇಹ ಪರ್ವತದಂತೆ ಬೆಳೆಯತೊಡಗಿತು. ನೀನು ಆ ದಿನ ನನ್ನ ಭುಜಕ್ಕೊರಗಿ ಮಲಗಿದ ಗಳಿಗೆಯನ್ನು ನನ್ನಿಂದ ಮರೆಯಲಾಗದು ನೀನು ತೋರಿಸುತ್ತಿದ್ದ ಮಗುವಿನ ಪ್ರೀತಿ ನನ್ನೆದೆಯ ತುಂಬಾ ಆವರಿಸಿತು. ಯಾವುದನ್ನೂ ನೀನು ನನ್ನಿಂದ ಮುಚ್ಚಿಡುತ್ತಿರಲಿಲ್ಲ. ಅಂತರಾಳದ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ. ನನ್ನ ಜೊತೆ ಮನಬಿಚ್ಚಿ ಮಾತನಾಡುತ್ತಿದ್ದೆ. ನಮ್ಮ ಸಂಬಂಧದ ಬಗ್ಗೆ ಊರೆಲ್ಲಾ ಮಾತನಾಡಿದರೂ ಯಾವುದರ ಬಗ್ಗೆಯೂ ನೀನು ತಲೆ ಕೆಡಿಸಿಕೊಳ್ಳದೆ ಇದ್ದದ್ದು ನನಗೆ ನಿನ್ನಲ್ಲಿನ ಪ್ರೀತಿಯನ್ನು ಹೆಚ್ಚಿಸಿತು.
ಆ ಒಂದು ದಿನ ರಸ್ತೆ ದಾಟುತ್ತಿರುವಾಗ ಸುಂದರ ಹುಡುಗಿಯನ್ನು ನೋಡುತ್ತಾ ನಿಂತಾಗ ನೀನು ನನ್ನ ತಲೆಗೆ ಹೊಡೆದು
ನಡೆ ಎಂದು ಸಿಟ್ಟಿನಿಂದ ಕರೆದುಕೊಂಡು ಹೋದೆ. ನಾನು ಬೇರೆ ಹುಡುಗಿಯರ ಬಗ್ಗೆ ಮಾತನಾಡುತ್ತಿರುವಾಗ ನಿನಗೆ
ಸಹಿಸಿಕೊಳ್ಳಲಾಗದಷ್ಟು ಕೋಪ ಬರುತ್ತಿತ್ತು. ದುಃಖದಿಂದ ಕಣ್ಣುಗಳಲ್ಲಿ ನೀರು ತಂದುಕೊಳ್ಳುತ್ತಿದ್ದೆ. ಆಮೇಲೆ ನಾನೇ ಸಾರಿ ಕೇಳಿದ ಮೇಲಷ್ಟೆ ಸರಿಹೋಗುತ್ತಿದ್ದೆ. ನೀನು ಕೇಳುತ್ತಿದ್ದೆ; ನಿನ್ನ ಮನದ ಹುಡುಗಿ ಹೇಗಿರಬೇಕೆಂದು. ಆಗ ನಾನು ಹೇಳುತ್ತಿದ್ದೆ, ಸುಂದರವಾಗಿ ಇರದಿದ್ದರೂ ಪರವಾಗಿಲ್ಲ, ಗುಣದಲ್ಲಿ ಸೀತೆಯಂತೆ, ಜ್ಞಾನದಲ್ಲಿ ಸರಸ್ವತಿಯಂತೆ ಇದ್ದರೆ ಸಾಕೆಂದು. ಒಂದು ದಿನ ಒಬ್ಬಳು ಹುಡುಗಿಯ
ಜೊತೆ ಮಾತನಾಡುತ್ತಿರುವಾಗ ನೀನು ಕೋಪದಿಂದ ಕೆಂಡಾಮಂಡಲವಾಗಿದ್ದೆ. ನನ್ನ ಜೊತೆ ಎರಡು ದಿನ ಮಾತೇ ಆಡಿರಲಿಲ್ಲ.
ನಾನು ಕಾರಣ ಕೇಳಿದಾಗ ಗೊತ್ತಿಲ್ಲವೆಂದು ಸನ್ನೆ ಮಾಡಿ ಸುಮ್ಮನಾದೆ. ಆವತ್ತು ಒಂದು ವಿಚಾರ ಅರ್ಥವಾಯಿತು. ಮನದಲ್ಲಿ
ಪ್ರೀತಿ ತುಂಬಿಕೊಂಡಿದ್ದರೂ ನೀನು ನನ್ನ ಬಳಿ ಹೇಳಿಕೊಳ್ಳಲಾಗದೆ ಪರದಾಡುತ್ತಿದ್ದೀಯಾ ಅಂತ. ನನಗೂ ನಿನ್ನ ಮೇಲೆ ಬೆಟ್ಟದಷ್ಟು
ಪ್ರೀತಿಯಿದೆ. ಆದರೆ, ಹೇಗೆ ಹೇಳಲಿ? ಒಂದು ವೇಳೆ ನನ್ನ ಪ್ರೀತಿಯನ್ನು ನೀನು ನಿರಾಕರಿಸಿದರೆ ಎಂಬ ಭಯ ನನ್ನನ್ನು ಕಾಡುತ್ತಿದೆ.
ನಿನ್ನನ್ನು ನೋಡದೆ ಇದ್ದರೆ ಒಂದೊಂದು ಕ್ಷಣವೂ ಒಂದೊಂದು ವರ್ಷದಂತೆ ಅನಿಸುತ್ತದೆ. ನನ್ನ ಸ್ನೇಹವನ್ನು ದುರುಪಯೋಗ
ಮಾಡಿಕೊಂಡು ಬಿಟ್ಟೆ ಎಂದು ಹೇಳಿಬಿಟ್ಟರೆ ಎಂಬ ಆತಂಕ ಮನದಲ್ಲಿ ಕಾಡುತ್ತಿದೆ. ಈ ಪ್ರೀತಿ ಎಂದರೆ ಕೇವಲ ಪಡೆದುಕೊಳ್ಳುವುದಲ್ಲ. ತ್ಯಾಗವೂ ಒಂದು ಬಗೆಯ ಪ್ರೀತಿಯೇ. ಪ್ರೀತಿ ಮಧುರ, ತ್ಯಾಗ ಅಮರ ಎಂಬ ಪ್ರಸಿದಟಛಿ ಮಾತಿನಂತೆ, ನನ್ನ ನಿನ್ನ ಪ್ರೀತಿ
ಅಮರವಾಗಿರಲಿ ಗೆಳತಿ. ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯಾ ಎಂದು ನಿನ್ನ ಕಣ್ಣುಗಳೇ ಹೇಳುತ್ತಿವೆ. ಆದರೆ ಅದನ್ನು ಹೇಗೆ ಹೇಳಲಿ
ಎಂಬ ಸಂದಿಗ್ದತೆಯಲ್ಲಿ ಸಿಕ್ಕಿಕೊಂಡಿದ್ದೇನೆ.
ಆರೀಫ್ ವಾಲಿಕಾರ, ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.