ಪೆದ್ದು ಹೃದಯದ ಭಾವ ಗದ್ಯ

Team Udayavani, Sep 5, 2017, 10:41 AM IST

05-JOSH-7.jpg

ಈ ದಿನ ಬಂತೆಂದರೆ ಸಾಕು, ನನ್ನ ಹೃದಯದ ಬಡಿತ ಹೆಚ್ಚಾಗುತ್ತದೆ. ಮನಸಿನ ಭಾವನೆಗಳನ್ನ ಕನಸಲ್ಲಿ ಕನವರಿಸುತ್ತೇನೆ. ಕಾರಣ ಇಂದು ನನ್ನ ಜೀವಾಳವಾಗಿದ್ದ ನಿನ್ನ ಜನ್ಮದಿನ. ಹುಚ್ಚು ಮನಸ್ಸಿನ ಹುಡುಗಿಗೆ ಜನ್ಮದಿನದ ಶುಭಾಶಯಗಳು. ನನ್ನನ್ನು ಕ್ಷಮಿಸು. ನೀನು ನನ್ನನ್ನು ಅಗಲಿ ಹೋಗಿದ್ದರೂ ಪ್ರೀತಿಯ ಕನಸಿನ ಗೋಪುರ ಕಟ್ಟಿ ಈ ಪ್ರೇಮ ಪತ್ರ ಬರೆಯುತ್ತಿದ್ದೇನೆ. ನೀನು ನನ್ನ ಜೊತೆಗಿದ್ದಾಗ ಯಾವಾಗಲೂ ನಿನ್ನ ಹುಟ್ಟುಹಬ್ಬಕ್ಕೆ ಮೊದಲ ಶುಭಾಶಯ ನನ್ನದೇ ಆಗಿರುತ್ತಿತ್ತಲ್ಲವೆ? ಆದರೆ, ಈಗ ಇನ್ಯಾರಧ್ದೋ?! ನೀನು ನನ್ನನ್ನು ಬಿಟ್ಟು ಹೋದೆ ಎಂದು ನನಗೇನೂ ಬೇಜಾರಿಲ್ಲ ಕಣೇ. ನೀನು ಎಲ್ಲೇ ಇದ್ದರೂ ಸಂತೋಷದಿಂದ ಇದ್ದರೆ ಸಾಕು. 

ನನ್ನ ಪೆದ್ದು ಹೃದಯ ಬಯಸುವುದು ಅಷ್ಟನ್ನೇ. ಬಿಟ್ಟು ಹೋದ ಮೇಲೆ ನನ್ನ ನೆನಪು ಒಮ್ಮೆಯೂ ಕಾಡಲಿಲ್ಲವೆ? ಪರವಾಗಿಲ್ಲ, ಯಾವುದೋ ಕಾರಣದಿಂದ ನನ್ನ ನೆನಪಾಗಿರಲಾರದು ನಿನಗೆ. ಆದರೆ, ನನ್ನ ಹೃದಯದ ದೇವತೆಯಾದ ನಿನ್ನ ಜಪವಂತೂ ಈ ಪುಟ್ಟ ಹೃದಯದಲ್ಲಿ ನಿತ್ಯದ ಪೂಜೆಯಾಗಿದೆ.

ನನ್ನೊಡನೆ ಕಳೆದ ದಿನಗಳಲ್ಲಿ ಪ್ರತಿ ನಿಮಿಷವೂ ನಿನಗೆ ನೋವು ಕೊಟ್ಟಿದ್ದೇನೆ. ಪ್ರತಿ ದಿನ, ಪ್ರತಿ ಕ್ಷಣ, ಏನಾದರೊಂದು ನೋವು ಕೊಡುತ್ತಾ ನಿನ್ನ ಅಳಿಸುವುದರಲ್ಲೇ ಕಾಲ ಕಳೆದ ದಡ್ಡ ಕಣೇ ನಾನು. ಒಮ್ಮೆ ಗೆಳತಿಯ ಮುಂದೆ ನೀನು ನೋವು ತೋಡಿಕೊಂಡು ಬಿಕ್ಕಳಿಸಿ ಅತ್ತಿದ್ದು ನೋಡಿದಾಗಲೇ ಗೊತ್ತಾಗಿದ್ದು ನಿನ್ನ ನೈಜ ಬದುಕಿನ ಹಿಂದಿನ ಕಷ್ಟ. ನಾನು ನಿನ್ನನ್ನು ಅಳಿಸುತ್ತಿದ್ದುದು ಸುಮ್ಮನೆ ತಮಾಷೆಗೇ ಹೊರತು ನೋವು ನೀಡಲು ಅಲ್ಲ. ನಿನ್ನೊಂದಿಗೆ ಸದಾಕಾಲ ಜೊತೆಗಿದ್ದು ನಿನ್ನೆಲ್ಲ ಕಷ್ಟಗಳಿಗೆ ಹೆಗಲು ಕೊಡಲು ನಾನು ಸಿದ್ಧನಿದ್ದೆ. ಆದರೆ, ನನ್ನೆದೆಯ ಹಾಡು, ಅದರಲ್ಲಿ ತುಂಬಿದ್ದ ಮಾರ್ದವತೆ ನಿನಗೆ ಕಡೆಗೂ ಅರ್ಥವಾಗಲೇ ಇಲ್ಲ.

ಈಗ ಕಾಲ ಮಿಂಚಿ ಹೋಗಿದೆ. ನಿನ್ನ ನೆನಪಿನಲ್ಲಿ ದಿನ ಕಳೆಯಬೇಕೇ ಅಥವಾ ಎಲ್ಲವನ್ನೂ ಮರೆತು ಮುಂದೆ ಸಾಗಬೇಕೇ? ಅದನ್ನೂ ನಿನ್ನನ್ನೇ ಕೇಳುತ್ತಿರುವ ದಡ್ಡ ಶಿಖಾಮಣಿ ನಾನು. ಆಧುನೀಕರಣದ ಮಧ್ಯೆಯೂ ಹಳೆಯ ಪ್ರೇಮ ಪುರಾಣಗಳಂತೆ ನಿನಗೆ ಪತ್ರ ಬರೆದು ಉತ್ತರಕ್ಕಾಗಿ ಕಾಯುವ ನನಗೆ ಏನೆನ್ನಬೇಕು ಹೇಳು? ಹೇಳಲು ಹೆಚ್ಚೇನೂ ಉಳಿದಿಲ್ಲ. ನನ್ನಿಂದ ದೂರವಾದ ಮೇಲೆ ನೀನು ನೆಮ್ಮದಿಯಿಂದ ಬಾಳುತ್ತಿರುವೆ ಅಂದುಕೊಂಡಿದ್ದೇನೆ. ಎನಿಹೌ, ಒನ್ಸ್ ಮೋರ್‌ ಹ್ಯಾಪಿ ಬರ್ತ್‌ಡೇ ಗೆಳತಿ…. ಲವ್‌ ಯು… ಮಿಸ್‌ ಯು..

ಮುದಕನಗೌಡ ಎನ್‌. ಪಾಟೀಲ

ಟಾಪ್ ನ್ಯೂಸ್

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.