ರಿಪೇರಿ ಖರ್ಚಲ್ಲಿ ಇಂಪೋರ್ಟೆಡ್‌ ಬೈಕು ತಗೊಬಹುದಿತ್ತು!


Team Udayavani, Feb 28, 2017, 3:45 AM IST

bike.jpg

ಸಿಟಿ ಬಸ್‌ಸ್ಟ್ಯಾಂಡ್‌ನಿಂದ ಕಿದಿಯೂರು ಹೊಟೇಲ್‌ ಕಡೆಯ ಏರನ್ನು ಏರುತ್ತಿದ್ದೆ. ಅಷ್ಟರಲ್ಲಿ ಹಿಂದಿನ ಟೈರು ಪಂಕ್ಚರ್ರಾಗಿ ಬುಲೆಟ್‌ ಫ‌ುಲ್ಲು ಶೇಕಿಂಗು. ಏರುದಾರಿಯಾಗಿದ್ದರಿಂದ ಚಾಲನೆ ನಿಯಂತ್ರಣ ತಪ್ಪಲಿಲ್ಲ. ಬೈಕು ನಿಲ್ಲಿಸಿದೆ. ಇಲ್ಲೆಲ್ಲಿ ಪ್ಯಾಚ್‌ ಹಾಕಿಸೋದಪ್ಪಾ? ಈ ಜನ ನಿಬಿಡ ಪ್ರದೇಶದಲ್ಲಿ ಯಾರಿದ್ದಾರೆ ಮೆಕ್ಯಾನಿಕ್‌? ಅಂತ ಚಿಂತಿಸುತ್ತಿದ್ದೆ… 

ಅವರ ತಂದೆಗೊಂದು ಅಭ್ಯಾಸವಿತ್ತು, ಯಾವುದೇ ಘಟನೆಗೂ ಅವರ ಮೊದಲ ಪ್ರತಿಕ್ರಿಯೆ “ದೇವೂ ಗತಿ'( ಕೊಂಕಣಿ) ಎನ್ನುವುದು. ಎಲ್ಲದಕ್ಕೂ ದೇವರೆ ಗತಿ ಎಂದೇ ಆರಂಭವಾಗುತ್ತಿದ್ದ ಮಾತಿನಿಂದಲೇ ಅವರು ಊರಿನಲ್ಲಿ ಜನಪ್ರಿಯರಾಗಿದ್ದರಂತೆ. ಹಾಗಾಗಿ ಅವರು ತೀರಿಕೊಂಡ ಮೇಲೆ ಅವರ ನೆನಪಿಗಾಗಿ ಪದೇ ಪದೇ  ಅವರಾಡುತ್ತಿದ್ದ ಮಾತನ್ನೇ ಹೊಟೇಲಿನ ಹೆಸರಾಗಿ ಬದಲಾಯಿಸಿದ್ದಾರೆ. ಇದು “ದೇವರೇ ಗತಿ ಭವನ’ದ ಹೆಸರಿನ ಹಿಂದಿದ್ದ ಕತೆ.

ಕಾಳಿಂಗನ ಮೇಲೆ ಸವಾರಿ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಅಡ್ಡ ಬಂದು ಬಿದ್ದುಬಿಟ್ಟ ವಿಷಯ ಈಗಾಗಲೇ ಹೇಳಿದ್ದೇನೆ. ಸರಿ. ಬಿದ್ದು ಮುಖ ಮೂತಿ ಚಚ್ಚಿಸಿಕೊಂಡ ಕಾಳಿಂಗನನ್ನು ರಿಪೇರಿ ಮಾಡಿಸಿದೆ. ಮುಗೀತಲ್ಲ? ಇನ್ನು ಜಾಗರೂಕತೆಯಿಂದ ಬೈಕ್‌ ಓಡಿಸಬೇಕು. ಯಾವ ಅಪಘಾತವೂ ಆಗದಂತೆ ನೋಡ್ಕೊಬೇಕು. ಆ ಮೂಲಕ ಮೇಂಟೇನೆನ್ಸ್‌ ಖರ್ಚನ್ನು ನಿಯಂತ್ರಿಸಬೇಕು ಅಂತಿದ್ದೆ. ಆದ್ರೆ ಆ ವಾರದಲ್ಲೇ ಮತ್ತೆ ನನ್ನ ಯೋಜನೆಗಳೆಲ್ಲಾ ಠುಸ್‌ ಅನ್ನಬೇಕೇ? ಟೈರು ಪಂಕ್ಚರು.

ಇದೇನ್‌ ಮಹಾ? ಪಂಕ್ಚರ್ರಾಗೋದು ಮಾಮೂಲು ಅನ್ನಬಹುದು ನೀವು. ಆದರೆ ಬೆನ್ನು ಹಿಡಿದ ಬೇತಾಳನಂತೆ ಒಂದರ ಹಿಂದೆ ಒಂದು ಕಷ್ಟಗಳು ಎದುರಾದರೆ,  ಅದು ಮರುದಿನವೂ ಕಾಡಿದರೆ ಏನ್ಮಾಡೋದು?

ಉಡುಪಿಯಲ್ಲಿದ್ದರೆ, ಮಧ್ಯಾಹ್ನ ಊಟಕ್ಕೀಗ ಬಂಟ್ಸ್‌ ಹೋಟೆಲ್‌ ಖಾಯಂ. ದೊಡ್ಡ ದೊಡ್ಡ ಕಬಾಬ್‌ ಪೀಸು ಮತ್ತು ಉದ್ದದ ನಂಗ್‌ ಮೀನಿನ ಮಸಾಲೆ ಫ್ರೆ„ಗಾಗಿ ಆ ಹೋಟೆಲನ್ನು ನಾನು  ಇಷ್ಟಪಡುತ್ತೇನೆ. ನನ್ನಿಷ್ಟದ ಮೀನನ್ನೇ ತಿಂದು ಊಟ ಮುಗಿಸಿ ಸುಚಿತ್‌ ಜೊತೆಗೆ ಬುಲೆಟ್‌ ಹತ್ತಿದ್ದೇನೆ. ಸಿಟಿ ಬಸ್‌ಸ್ಟ್ಯಾಂಡ್‌ನಿಂದ ಕಿದಿಯೂರು ಹೋಟೆಲ್‌ ಕಡೆಯ ಏರನ್ನು ಏರುತ್ತಿದ್ದೆ. ಅಷ್ಟರಲ್ಲಿ ಹಿಂದಿನ ಟೈರು ಪಂಕ್ಚರ್ರಾಗಿ ಬುಲೆಟ್‌ ಫ‌ುಲ್ಲು ಶೇಕಿಂಗು.

ಏರುದಾರಿಯಾಗಿದ್ದರಿಂದ ಚಾಲನೆ ನಿಯಂತ್ರಣ ತಪ್ಪಲಿಲ್ಲ. ಬೈಕು ನಿಲ್ಲಿಸಿದೆ. ಇಲ್ಲೆಲ್ಲಿ ಪ್ಯಾಚ್‌ ಹಾಕಿಸೋದಪ್ಪಾ? ಯಾರಿದ್ದಾರೆ ಮೆಕ್ಯಾನಿಕ್‌? ಇಂದ್ರಾಳಿ ಆಟೋಕೇರ್‌ನ ಶೈಲೇಶಣ್ಣನನ್ನು ಕರಿಯೋದಾ? ಅವರದೀಗ ಊಟದ ಹೊತ್ತು. ಆಥವಾ ಪೆಟ್ರೋಲ್‌ ಬಂಕ್‌ವರೆಗೆ ದೂಡಿಕೊಂಡು ಹೋಗಿ ಗಾಳಿ ಹಾಕಿ ನೋಡೋದಾ. ಟಯರು ಚಪ್ಪಟೆಯಾಗಿದೆ. ದೂಡಿಕೊಂಡು ಹೋದರೆ ರಿಮ್ಮಿಗೆ ಪೆಟ್ಟು ಖಂಡಿತ. ಏನ್ಮಾಡೋದಿವಾಗ? ಅಂತ ಆಲೋಚನೆಯಲ್ಲಿರುವಾಗಲೇ ಸ್ಪಾನರು, ಮತ್ತೆರಡು ರಾಡ್‌ನ‌ಂತದ್ದೇನೋ ಹಿಡಿದುಕೊಂಡು ಗ್ಯಾರೇಜು ಸಮವಸ್ತ್ರ ಹಾಕ್ಕೊಂಡಿದ್ದ ಒಬ್ಟಾತ ಬಳಿ ಬಂದ. “ಪಂಕ್ಚರ್ರಾ? ಪ್ಯಾಚ್‌ ಹಾಕೆºàಕಾ?’ ಎಂದು ಕೇಳಿದ.

ಜಗತ್ತಿನ ಶಕ್ತಿಗೆ ನನ್ನ ಮೊರೆ ಕೇಳಿಸಿ ಇವನನ್ನು ಕಳಿಸಿದ್ದಾನೆ ಅನ್ನಿಸಿತು. ತುಂಬಾ ಖುಷಿ ಆಯ್ತು. ಬಸ್ಸಿನ ಟೈರಿನ ಕೆಲಸವೊಂದಕ್ಕೆ ಸಿಟಿ ಬಸ್ಟ್ಯಾಂಡಿಗೆ ಬಂದಿದ್ದನಂತೆ. ಇಲ್ಲೇ ಹತ್ತಿರದಲ್ಲಿ ಗ್ಯಾರೇಜಿದೆ, ಇದ್ಕೆ ಬೇಕಾದ ಸಾಮಾಗ್ರಿ ತರುತ್ತೇನೆ ಎಂದು ಓಡಿದ. ಬಂದ. ಬಿಚ್ಚಿದ.  ವಾಲ್‌Ì ಬಳಿ ಒಡೆದೇ ಹೋದ ಟ್ಯೂಬನ್ನು ಬದಲಾಯಿಸಲೇಬೇಕೆಂದ. ಹೊಸತೊಂದನ್ನು ಹಾಕಿದ. ಐನೂರು ರುಪಾಯಿ ತೆಗೆದುಕೊಂಡ.

ಇದೆಲ್ಲಾ ಮಾಮೂಲು. ಇಂತದ್ದೆಲ್ಲ ಮುಂದೆಯೂ ಬರುತ್ತೆ. ನನಗಿದು ಮೂರನೇ ಬಾರಿಯ ಅನುಭವ. ಒಟ್ಟಿನಲ್ಲಿ ಬೇಗ ಆಯ್ತಲ್ವ. ಧನ್ಯವಾದ ಹೇಳಿ ಸರಿಯಾದ ಸಮಯಕ್ಕೇ ನಾನೂ ಸುಚಿತ್‌ ಕ್ಲಾಸಿಗೆ ಹೋದೆವು.

ಆದರೆ ಗ್ರಹಚಾರ ನೆಟ್ಟಗಿಲ್ಲ ಅಂದ್ರೆ ಬೇರೇನಾಗುತ್ತೆ? ಹೊಸ ಟ್ಯೂಬು. ಒಂದು ವರುಷವಾದರೂ ತೊಂದ್ರೆ ಇಲ್ಲ ಅಂದೊRಂಡು ನಿನ್ನೆಯ ಖರ್ಚಿಗೆ ಸಮಾಧಾನ ಮಾಡ್ಕೊಂಡ್ರೆ, ಮರುದಿನ ಬೆಳಿಗ್ಗೆ ಕಾಲೇಜಿಗೆ ಹೊರಡಲು ಬುಲೆಟ್‌ ಬಳಿ ಬರುತ್ತೇನೆ: ಹಿಂದಿನ ಟೈರಿನ ರಿಮ್ಮು ಮತ್ತೆ ನೆಲಕ್ಕಂಟಿತ್ತು. ಒಂದೇ ದಿನದಲ್ಲಿ ಎರಡನೆಯ ಬಾರಿ ಮತ್ತೆ ಪಂಕ್ಚರು.
ನನಗೆ ನನ್ನ ಮೇಲೇ ಸಿಟ್ಟು. ಪದೇ ಪದೇ ನನಗೆ  ಹೀಗ್ಯಾಕೆ ಆಗುತ್ತಿದೆ… ಈವರೆಗೆ ಬುಲೆಟ್ಟಿಗೆ, ಅದ್ರ ಸರ್ವಿàಸುಗಳಿಗೆ, ರಿಪೇರಿಗಳಿಗೆ, ಬಿದ್ದಾಗಿನ ನನ್ನ ಚಿಕಿತ್ಸೆಗಳಿಗೆ ಖರ್ಚು ಮಾಡಿದ್ದೆಲ್ಲವನ್ನೂ ತೆಗೆದಿಟ್ಟಿದ್ದಿದ್ದರೆ ಹಾರ್ಲೆà ಡೇವಿಡ್ಸನ್‌ಅನ್ನೇ ತಗೋಬಹುದಿತ್ತು ಎಂದು ಗೆಳೆಯ ಪದ್ಮನಾಭ ತಮಾಷೆ ಮಾಡುತ್ತಿರುತ್ತಾನೆ. ಆತ ಹಾಕಿದ್ದ ಚಾಲೆಂಜೊಂದನ್ನು ಮುರಿಯುವುದಕ್ಕೆಂದೇ ನಾನು ಬುಲೆಟ್‌ ತಗೊಂಡಿದ್ದು. ಈಗ ನೋಡಿದ್ರೆ, ಮಾರಿ ಬಿಡು ಮಾರಾಯ. ಬೇರೆಯದನ್ನೇ ತಗೋ ಎನ್ನುತ್ತಾನೆ.

ನಿಜಕ್ಕೂ ನಂಗೆ ಸುಖ ಇಲ್ಲ. ಕಾಳಿಂಗನನ್ನು ಮಾರಿ ಬಿಡೋದಾ? ಸದ್ಯಕ್ಕೀಗ ಕಾಲೇಜಿಗೆ ಹೊರಡಲೇಬೇಕು. ಮುಕ್ಕಾಲು ಗಂಟೆಯ ದಾರಿ. ಬಸ್ಸಿಗೆ ಹೋದರೆ ಮತ್ತಷ್ಟು ತಡವಾಗುತ್ತೆ. ಪ್ಯಾಚ್‌ ಹಾಕಿಸಿಯೇ ಹೋಗೋದು. ಹಿಂದೊಮ್ಮೆ ಪಳ್ಳಿಯ ಕಾಡಿನಲ್ಲೊಮ್ಮೆ ಹೀಗಾಗಿದ್ದಾಗ  ಬಂದು ಸರಿ ಮಾಡಿಕೊಟ್ಟಿದ್ದು ನಮ್ಮೂರ ಮೆಕ್ಯಾನಿಕ್ಕುಗಳಾದ ರಾಮ ಲಕ್ಷ್ಮಣರು. ಈಗಲೂ ಅವರನ್ನೇ ಕರೆದೆ.

ಫೋನ್‌ ಮಾಡಿದ ಹತ್ತೇ ನಿಮಿಷದಲ್ಲಿ ರಾಮ ಲಕ್ಷ್ಮಣರಿಬ್ಬರೂ ಮನೆ ಮುಂದೆ ಹಾಜರ್‌. ಅರುವತ್ತು ವರುಷ ವಯಸ್ಸಿನ ಅವರಿಬ್ಬರೂ ಅವಳಿಗಳು. ನನಗೆ ಇವತ್ತಿಗೂ ಅವರಿಬ್ಬರಲ್ಲಿ ರಾಮ ಯಾರು, ಲಕ್ಷ್ಮಣ ಯಾರೂಂತ ಗುರುತಿಸಲು ಸಾಧ್ಯವಾಗಿಲ್ಲ. ರಾಮಣ್ಣ ಅಂದ್ರೆ ಸಾಕು ಇಬ್ಬರೂ “ಓ…’ ಅನ್ನುತ್ತಾರೆ. ನಮಗೂ ಕನೂಷನ್ನಿಲ್ಲ. ಅವರಲ್ಲೂ ಬೇರೆ ಬೇರೆ ಎಂಬ ಭೇದ ಭಾವವಿಲ್ಲ.

ಮತ್ತೆ ಅವರು ಬರಿಯ ಮೆಕ್ಯಾನಿಕ್ಕುಗಳಷ್ಟೇ ಅಲ್ಲ, ಆಟೋ ರಿûಾವನ್ನೂ ಓಡಿಸುತ್ತಾರೆ. ನಿಟ್ಟೆ ಊರಿನ ಮೊತ್ತ ಮೊದಲ ರಿûಾದ ಮಾಲೀಕರವರು. ಒಂದು ಆಮ್ಲೆಟ್‌ ಅಂಗಡಿಯೂ ಅವರಿಗಿದೆ. ಸಂಜೆ ಮೇಲೆ ಸಿಂಗಲ್ಲಾ, ಡಬ್ಬಲ್ಲಾ ಎಂದು ಕೇಳಿ ಕೇಳಿ ಮೊಟ್ಟೆಗಳನ್ನೊಡೆದು ಕಾವಲಿಗೆ ಸುರಿಯೋದೇ ಅವ್ರ ಕೆಲಸ. ನನ್ನ ಪಾಲಿಗೆ ಅವ್ರ ಪಾತ್ರ ಅಷ್ಟಕ್ಕೇ ಮುಗಿಯುವುದಿಲ್ಲ. ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯ್ಯರಂತೆಯೋ, ವೈಕುಂಠದ ದ್ವಾರಪಾಲಕರಾದ ಜಯ ವಿಜಯರಂತೆಯೋ ನಮ್ಮವರ ಕಥಾಲೋಕದ ಕಾವಲು ಕಾಯುವ ವಿಶೇಷ ವ್ಯಕ್ತಿಗಳವರು.

ಗೇಟಿನ ಒಳಗೆ ಅವರ ಪ್ರವೇಶ ಆದದ್ದೇ ತಡ. ನನ್ನ ಕೋಪ, ಬೇಸರಗಳೆಲ್ಲಾ ಮಾಯವಾಯ್ತು. ಅಲ್ಲಿ ಹೊಸ ಲೋಕವೇ ಸೃಷ್ಟಿಯಾಯ್ತು. ಬೇರೆ ಮೆಕ್ಯಾನಿಕ್ಕುಗಳಂತೆ ಅವರ ಶರ್ಟು ಪ್ಯಾಂಟುಗಳು ಮಾಸಿಲ್ಲ. ಅವರು ತೊಡೋದು ಮುಂಡು ಮತ್ತು ಚಂದದ ಶರ್ಟು. ಆಟೋದಿಂದ ಇಳಿದವರು ಪರಸ್ಪರ ಬೈದುಕೊಂಡೇ ನನ್ನ ಬುಲೆಟ್ಟು ಮುಟ್ಟಿದರು. ಟೈರು ಬಿಚ್ಚಿದರು. ಆ ಹೊತ್ತಿಗೆ ವಾಕಿಂಗಿಗೆ ಹೋಗಿದ್ದ ನನ್ನ ತಂದೆಯೂ ಬಂದು ಬಿಟ್ಟರು. ಎದುರು ಮನೆಯ ನಾಗೂನು ಬಂದ. ಈ ನಾಲ್ವರೂ ಒಂದೇ ವಯಸ್ಸಿನವರಂತೆ. ಒಟ್ಟೊಟ್ಟಿಗೆ ಶಾಲೆಗೆ ಹೋದವರಂತೆ. ದುಗ್ಗ ಶೆಟ್ರ ತೋಟಕ್ಕೆ ನುಗ್ಗಿ ಗೇರುಬೀಜ ಕದ್ದು ಸಂಜೆ ಹೊತ್ತಿಗೆ ಬಿಲೀಸ್‌ ಆಡಿ ಎಲ್ಲವನ್ನೂ ಕಳೆದುಕೊಂಡವರು. ಟೈರಿನೊಳಗಿಂದ ಟ್ಯೂಬು ಹೊರಗೆ ಬರುತ್ತಿದ್ದಂತೆಯೇ ಅವರ ನೆನಪುಗಳ ಬುತ್ತಿಯೂ ತೆರೆದುಕೊಂಡಿತು. ಬೆಳ್ಳಂಬೆಳಿಗ್ಗೆಯೇ ಚಂದದ ಕಥಾಲೋಕ ಮನೆಯಂಗಳದಲ್ಲಿ ಅರಳಿಕೊಂಡಿತು.

(ಮುಂದುವರೆಯುತ್ತದೆ)

– ಮಂಜುನಾಥ್‌ ಕಾಮತ್‌

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.