ಮಕ್ಕಳಿಗೆ ಮೊಬೈಲೇ ಕೊಡದ ಬಿಲ್‌ಗೇಟ್ಸ್!
Team Udayavani, Feb 19, 2019, 12:30 AM IST
“ಅಯ್ಯೋ, ನಮ್ ಮಗ ಮೂರು ಹೊತ್ತು ಮೊಬೈಲ್‌ನಲ್ಲಿ ಆಡ್ತಾ ಇರ್ತಾನೆ. ಕೇಳಿದ್ರೆ, ನೋಟ್ಸು- ಅಸೈನ್‌ಮೆಂಟ್ ಅಂತ ನೆಪ ಹೇಳ್ತಾನೆ…’ ಅಂತ ಎಷ್ಟೋ ಹೆತ್ತವರು ಹೇಳ್ಳೋದನ್ನು ಕೇಳಿದ್ದೇವೆ. ಮಕ್ಕಳ ಈ ಮೊಬೈಲ್ ಗೀಳು ಸಾಮಾನ್ಯ ಪೋಷಕರನ್ನಷ್ಟೇ ಅಲ್ಲ, ತಂತ್ರಜ್ಞಾನದ ದಿಗ್ಗಜ ಬಿಲ್‌ಗೇಟ್ಸ್‌ಗೂ ತಲೆ ನೋವಾಗಿ ಕಾಡಿತ್ತು. ತಂತ್ರಜ್ಞಾನವನ್ನು ನಮ್ಮೆಲ್ಲರ ಬೆರಳ ತುದಿಗೆ ಅಂಟಿಸಿದ ಬಿಲ್‌ಗೇಟ್ಸ್, ತನ್ನ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಮಾತ್ರ ಹದ್ದಿನಗಣ್ಣಿಟ್ಟದ್ದರು. ವಿಡಿಯೋ ಗೇಮ್ಸ್‌ಗೆ ಅತಿಯಾಗಿ ಅಡಿಕ್ಟ್ ಆಗಿದ್ದ ಮಗಳನ್ನು ನೋಡಿದ ಗೇಟ್ಸ್, ತಂತ್ರಜ್ಞಾನ ಬಳಕೆಯ ಮೇಲೆ ನಿಗಾ ಇಡಲು ನಿರ್ಧರಿಸಿದರು. ಮೂವರು ಮಕ್ಕಳಿಗೂ 14 ವರ್ಷ ಆಗುವವರೆಗೆ ಸ್ವಂತ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ. ನೋಟ್ಸ್, ಅಸೈನ್‌ಮೆಂಟ್ ಮುಂತಾದವಕ್ಕೆ ಬಳಸಬಹುದಿತ್ತಾದರೂ, ಜಾಸ್ತಿ ಹೊತ್ತು ಕಂಪ್ಯೂಟರ್ ಮುಂದೆ ಕೂರುವಂತಿರಲಿಲ್ಲ. ಊಟ ಮಾಡುವಾಗ, ರಾತ್ರಿ ಮಲಗುವಾಗ ಮೊಬೈಲ್ ಬಳಸುವಂತೆಯೇ ಇಲ್ಲ. “ಕ್ಲಾಸ್‌ನಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದೆ. ನಮಗ್ಯಾಕೆ ಕೊಡಿಸಲಿಲ್ಲ’ ಅಂತ ಮಕ್ಕಳು ಗೋಗರೆದರೂ, ಗೇಟ್ಸ್ ತನ್ನ ಕಠಿಣ ನಿಲುವು ಬದಲಿಸಲಿಲ್ಲ.
“ನಮ್ಮ ಮಕ್ಕಳು ಎಷ್ಟು ತಂತ್ರಜ್ಞಾನ ಬಳಸಬೇಕು ಎಂಬುದರ ಬಗ್ಗೆ ನಾವು ತುಂಬಾ ಸೀರಿಯಸ್ ಆಗಿದ್ದೇವೆ. ಬೇಕಾಬಿಟ್ಟಿ ಬಳಸಲು ಬಿಡುವುದಿಲ್ಲ’ ಎಂದು, ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆ್ಯಪಲ್ ಕಂಪನಿಯ ಸ್ಥಾಪಕ ಸ್ಟೀವ್ ಜಾಬ್ಸ್ ಕೂಡ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.