ಬ್ಲಾಗ್ & ವೈಟ್
Team Udayavani, Jan 15, 2019, 12:30 AM IST
ಕತೆ, ಕವನಗಳನ್ನು ದಾಖಲಿಸಲಷ್ಟೆ ಬ್ಲಾಗ್‌ಗಳ ಬಳಕೆಯಾಗುತ್ತಿದ್ದಿದ್ದು ಬ್ಲ್ಯಾಕ್ ಅಂಡ್ ವೈಟ್ ಜಮಾನ. ಬರವಣಿಗೆಯಿಂದ ದುಡ್ಡು ಸಂಪಾದಿಸಲಾಗುವುದಿಲ್ಲ ಎನ್ನುವುದು ಕೂಡಾ ಹಳೆ ಮಾತು. ಈಗ ಪರಿಸ್ಥಿತಿ ಬದಲಾಗಿದೆ. ಬ್ಲಾಗಿಂಗ್ ಮೂಲಕವೇ ಲಕ್ಷಾಂತರ ರೂ.ಗಳನ್ನು ಸಂಪಾದಿಸುವವರಿದ್ದಾರೆ.
ಬರವಣಿಗೆಗೆ ಯಾವ ಕಾಲಕ್ಕೂ ಬೆಲೆ ಇದೆ. ಟ್ವಿಟ್ಟರ್‌ನಲ್ಲಿನ 140 ಪದಮಿತಿಯ ಬರಹವೊಂದು ಸರಕಾರಗಳನ್ನೇ ಅಲುಗಾಡಿಸಬಲ್ಲಂಥ ತಾಕತ್ತನ್ನು ಪಡೆದಿದೆ ಎಂದರೆ ಬರವಣಿಗೆಯ ಪ್ರಭಾವದ ಅಂದಾಜು ಮಾಡಿಕೊಳ್ಳಬಹುದು. ಬರವಣಿಗೆಯಿಂದ ಜೀವನ ಸಾಗಿಸಲಾಗದು ಎನ್ನುವುದು ತುಂಬಾ ಹಳೆಯ ಮಾತಾಯಿತು. ಇಂದು ಬರವಣಿಗೆಯಿಂದಲೇ ಜೀವನ ಸಾಗಿಸುವುದಕ್ಕೆ ಅನುವು ಮಾಡಿಕೊಡುವ ಹಲವು ಅವಕಾಶಗಳು ನಮ್ಮ ಮುಂದಿವೆ. ಓದುತ್ತಲೇ ಹಣ ಗಳಿಸಬೇಕೆನ್ನುವ ವಿದ್ಯಾರ್ಥಿಗಳಿಗೆ ಬರವಣಿಗೆ ಸುಲಭ ಮಾರ್ಗ. ಬ್ಲಾಗಿಂಗ್ ಅಂಥ ಮಾರ್ಗಗಳಲ್ಲೊಂದು.
ಕಾರ್ಪೊರೆಟ್ ಅವಕಾಶಗಳು
ಕಥೆ, ಕವನಗಳನ್ನು ಅಂತರ್ಜಾಲದಲ್ಲಿ ದಾಖಲಿಸಲು ಬಳಕೆಯಾಗುತ್ತಿದ್ದ ಬ್ಲಾಗಿಂಗ್ ಇಂದು ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಬ್ಲಾಗಿಂಗ್‌ಅನ್ನು ಆಧರಿಸಿಯೇ ಹಲವು ಉದ್ಯೋಗಗಳು ಹುಟ್ಟಿಕೊಂಡಿವೆ. ಇಂದು ಮಾರ್ಕೆಟಿಂಗ್ ಪಂಡಿತರು ತಮ್ಮ ಕಂಪನಿಯ ಉತ್ಪನ್ನಗಳ ಮಾರ್ಕೆಟಿಂಗ್‌ಗಾಗಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಬ್ಲಾಗರ್‌ಗಳ ಮೊರೆ ಹೋಗುತ್ತಿರುವುದು ಹೊಸ ಟ್ರೆಂಡ್. ಇಲ್ಲಿ ಬ್ಲಾಗರ್‌ಗಳು ಉತ್ಪನ್ನವನ್ನು ಪರೀಕ್ಷಿಸಿ ಅದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡುವರು. ಈ ಬ್ಲಾಗರ್‌ಗಳು ಅತ್ಯಾಕರ್ಷಕವಾಗಿ ಅದನ್ನು ಪ್ರಸ್ತುತಪಡಿಸುವುದರಿಂದ ಕಂಪನಿಯ ಇಮೇಜು ವೃದ್ಧಿಯಾಗುತ್ತದೆ. ಈ ಕೆಲಸದಲ್ಲಿ ತೊಡಗುವ ಬ್ಲಾಗರ್‌ನನ್ನು “ಇನ್‌ಫುÂಯೆನ್ಸರ್’ ಎಂದು ಕರೆಯುವರು. ಹೀಗಾಗಿ ಬರವಣಿಗೆಯ ತುಡಿತವಿದ್ದವರು ಪತ್ರಿಕೆ ಅಥವಾ ಸುದ್ದಿ ಮಾಧ್ಯಮಗಳಲ್ಲಿಯೇ ಕೆಲಸ ಮಾಡಬೇಕೆಂದಿಲ್ಲ. ಸ್ವಂತ ಬ್ಲಾಗೊಂದನ್ನು ಶುರು ಮಾಡಿದರೂ ಸಾಕು. ಬ್ಲಾಗ್ ಚೆನ್ನಾಗಿದ್ದರೆ ಹೆಚ್ಚು ಹೆಚ್ಚು ಮಂದಿ ಭೇಟಿ ನೀಡುತ್ತಿದ್ದರೆ ಕಾರ್ಪೊರೆಟ್ ಅವಕಾಶಗಳು ತನ್ನಿಂದ ತಾನೇ ಹುಡುಕಿಕೊಂಡು ಬರುವವು.
ಬ್ಲಾಗಿಂಗ್ ಪ್ಲಾಟ್‌ಫಾರಂಗಳು
ಒಂದು ಬ್ಲಾಗ್ ಸೃಷ್ಟಿಸಲು 30 ರಿಂದ 40 ನಿಮಿಷಗಳಷ್ಟೇ ಸಾಕು. ಬ್ಲಾಗ್ ಸೃಷ್ಟಿಸಲು ಅನುವು ಮಾಡಿಕೊಡುವ ತಾಣಗಳನ್ನು ಬ್ಲಾಗಿಂಗ್ ಪ್ಲಾಟ್‌ಫಾರಂ ಎನ್ನುವರು. ವರ್ಡ್‌ಪ್ರಸ್, ಬ್ಲಾಗ್‌ಸ್ಪಾಟ್, ಟಂಬ್ಲಿರ್, ವೀಬ್ಲಿ, ಲೈವ್‌ಜರ್ನಲ್ ಮುಂತಾದ ತಾಣಗಳಲ್ಲಿ ಉಚಿತವಾಗಿ ಬ್ಲಾಗ್ ಶುರು ಮಾಡಬಹುದು. ಬ್ಲಾಗನ್ನು ಚೆಂದಗಾಣಿಸಲು ಬಹಳಷ್ಟು ಆಯ್ಕೆ, ಸವಲತ್ತುಗಳನ್ನು ಈ ಪ್ಲಾಟ್‌ಫಾರಂಗಳೇ ಒದಗಿಸುತ್ತವೆ. ಅಲ್ಲಿನ ಥೀಮ್, ಬಣ್ಣ ಮತ್ತು ವಿನ್ಯಾಸಗಳಲ್ಲಿ ಬಳಕೆದಾರರು ತಮಗಿಷ್ಟವಾದುದನ್ನು ಆರಿಸಿಕೊಳ್ಳಬಹುದು.
ಜನಪ್ರಿಯತೆ ಗಳಿಸಿಕೊಳ್ಳಿ
ಬ್ಲಾಗ್ ಸೆಟ್ ಮಾಡಿ ಬರಹವನ್ನು ಆರಂಭಿಸಿದೆವೆಂದಿಟ್ಟುಕೊಳ್ಳಿ. ಆದರೆ ನಮ್ಮತ್ತ ಓದುಗರನ್ನು ಸೆಳೆಯುವುದು ಮುಂದಿನ ಹಂತ. ಇದನ್ನು “increasing the traffic’ ಎನ್ನುತ್ತಾರೆ. ಅಂದರೆ ಹೆಚ್ಚು ಹೆಚ್ಚು ಓದುಗರನ್ನು ಬ್ಲಾಗ್‌ಗೆ ಭೇಟಿ ಕೊಡುವಂತೆ ಮಾಡಬೇಕು. ಇದಕ್ಕಾಗಿ ನಾವು ಹಲವು ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ ಪಾರ್ಟಿಸಿಪೇಷನ್ (ಭಾಗವಹಿಸುವಿಕೆ) ಅಳವಡಿಸಿಕೊಳ್ಳಬೇಕು. ಮಾರ್ಕೆಟಿಂಗ್, SEO ಮತ್ತು ಗೆಸ್ಟ್ ಬ್ಲಾಗಿಂಗ್ ತಂತ್ರಗಳನ್ನು ಪಾಲಿಸಬೇಕು. ಬೇರೆಯವರ ಬ್ಲಾಗ್‌ಗಳಲ್ಲಿ ಒಳ್ಳೆಯ ಕಮೆಂಟ್ ಹಾಕುವುದು, ಸೋಷಿಯಲ್ ಮೀಡಿಯಾಗಳಲ್ಲಿ ಭಾಗವಹಿಸುವುದೇ ಪಾರ್ಟಿಸಿಪೇಷನ್. ತಮ್ಮ ಬ್ಲಾಗ್‌ನ ಕೊಂಡಿಯನ್ನು ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿ ಹಂಚಿಕೊಳ್ಳಬೇಕು, ವಾಟ್ಸಾಪ್ ಗ್ರೂಪಿನಲ್ಲಿ ಹರಿಯಬಿಡಬೇಕು- ಒಟ್ಟಿನಲ್ಲಿ ಹೆಚ್ಚು ಹೆಚ್ಚು ಜನ ನಮ್ಮ ಬ್ಲಾಗ್ ಓದುವಂತಾಗಬೇಕು, ಅಷ್ಟೆ. ಕೀವರ್ಡ್, ಸರ್ಚ್ ಕ್ವೆರಿಗಳನ್ನು ಬಳಸಿ ನಮ್ಮ ಬ್ಲಾಗ್‌ನ SEO ಹೆಚ್ಚಿಸಿಕೊಳ್ಳುವುದರಿಂದ ಸರ್ಚ್ ಇಂಜಿನ್ ಫಲಿತಾಂಶಗಳಲ್ಲಿ ನಮ್ಮ ಬ್ಲಾಗ್‌ನ ಕೊಂಡಿ (ಲಿಂಕ್) ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಗೂಗಲ್ ಅನಾಲಿಟಿಕ್ಸ್ ಅಥವಾ ಬೇರೆ ಟ್ರಾಫಿಕ್ ಸ್ಟಾಟಿಸ್ಟಿಕ್ಸ್ ಸವಲತ್ತಿನ ಸಹಾಯ ಪಡೆದುಕೊಳ್ಳಬಹುದು.
ಸಂಪಾದನೆಯ ಮಾರ್ಗ
ಬ್ಲಾಗ್ ಒಮ್ಮೆ ಪ್ರಸಿದ್ಧಿ ಪಡೆಯಿತೆಂದರೆ ಆದಾಯದ ಮೂಲವನ್ನಾಗಿಸಬಹುದು. ಇಂದು ಭಾರತದಲ್ಲಿ, ಬ್ಲಾಗ್ ಬರಹಗಳ ಮೂಲಕ ಲಕ್ಷಾಂತರ ರೂಪಾಯಿ ದುಡಿಯುವವರಿದ್ದಾರೆ. ಖ್ಯಾತ ಬ್ರಾÂಂಡ್‌ಗಳು ಜನಪ್ರಿಯ ಬ್ಲಾಗರ್‌ಗಳನ್ನು ಸಂಪರ್ಕಿಸಿ ತಮ್ಮ ಉತ್ಪನ್ನ, ಸೇವೆಗಳ ಬಗ್ಗೆ ಲೇಖನ, ವಿಮರ್ಶೆ, ವಿಡಿಯೋ ಮತ್ತು ಸ್ಟೇಟಸ್‌ಗಳನ್ನು ಪೋಸ್ಟ್ ಮಾಡುವಂತೆ ಕೋರುತ್ತವೆ. ಇದನ್ನು ಬ್ಲಾಗ್‌ನ ಹಿಂಬಾಲಕರು (Followers) ಗಮನಿಸಲಿ ಎಂದು. ಸಾಂಪ್ರದಾಯಿಕ ಜಾಹೀರಾತಿಗಿಂತ ಬಾಯಿಮಾತಿನ ಜಾಹೀರಾತು (word-of-mouth advertisement) ಹೆಚ್ಚು ಪ್ರಭಾವಶಾಲಿ ಎಂಬುದನ್ನು ಕಂಡುಕೊಂಡಿರುವ ಸಂಸ್ಥೆಗಳು ಬ್ಲಾಗಿಂಗ್ ಇನ್‌ಫುÉಯನ್ಸರ್‌ಗಳನ್ನು ಬಳಸಿಕೊಳ್ಳಲಾರಂಭಿಸಿವೆ. ಸೂಕ್ತ ಮೊತ್ತವನ್ನು ಪಾವತಿಸಿ ಬ್ಲಾಗರ್‌ಗಳನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಇನ್ನೊಂದು ವಿಧಾನ ಎಂದರೆ ಬ್ಲಾಗ್ ಪೇಜಿನಲ್ಲಿ ಜಾಹೀರಾತುಗಳಿಗೆ ಅವಕಾಶ ಕೊಡುವುದು. ಉದಾಹರಣೆಗೆ ಅಡುಗೆ ಖಾದ್ಯಗಳ ಬ್ಲಾಗ್‌ಗಳಲ್ಲಿ ಅಡುಗೆ ಎಣ್ಣೆ, ಕುಕ್ಕರ್ ಮಿಕ್ಸಿ ಮುಂತಾದ ಗೃಹಬಳಕೆ ವಸ್ತುಗಳನ್ನು ತಯಾರಿಸುವ ಕಂಪನಿಗಲು ಜಾಹೀರಾತು ಕೊಡುತ್ತವೆ. ಟ್ರಾವೆಲ್ ಬ್ಲಾಗುಗಳಾದರೆ ಟ್ರಾವೆಲ್ಸ್ ಸಂಸ್ಥೆಗಳು, ಪ್ರವಾಸೋದ್ಯಮ ಇಲಾಖೆ ಮುಂತಾದ ಸಂಸ್ತೆಗಳು ಜಾಹೀರಾತು ನೀಡುತ್ತವೆ. ಇದರಿಂದ ಬ್ಲಾಗರ್‌ಗಳಿಗೆ ಹಣ ಸಂದಾಯವಾಗುತ್ತದೆ. ಇದು, ಟೆಲಿಕಾಂ ಕಂಪನಿಯವರು ಮನೆ ಮೇಲೆ ಟವರ್ ಅಳವಡಿಸಿದಂತೆ. ಜಾಗ ಕೊಟ್ಟದ್ದಕ್ಕೆ ಪ್ರತಿಯಾಗಿ ಮನೆ ಮಾಲೀಕನಿಗೆ ಕಂಪನಿ ಇಂತಿಷ್ಟು ಮೊತ್ತ ಪಾವತಿಸುವುದಿಲ್ಲವೆ. ಹಾಗೆಯೇ ಇದು ಕೂಡಾ. ಬ್ಲಾಗ್ ಬರಹಗಾರಗಾಗಿ ಯಶಸ್ಸು ಗಳಿಸಿದವರನ್ನು ದಿನಪತ್ರಿಕೆಗಳು, ವಾರ-ಮಾಸ ಪತ್ರಿಕೆಗಳು ತಮ್ಮಲ್ಲಿ ಬರೆಯುವಂತೆ ಕೋರುತ್ತವೆ. ಅಲ್ಲದೆ ಬ್ಲಾಗರ್ ಪರಿಣತಿ ಗಳಿಸಿದ ಕ್ಷೇತ್ರದಲ್ಲಿ ಏನೇ ಸಲಹೆ ಬೇಕಾದಾಗ, ಬ್ಲಾಗರ್‌ನನ್ನು ಸಂಪರ್ಕಿಸಲಾಗುತ್ತದೆ. ಇದರಿಂದ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ.
– ಪೊ›. ವಿ. ರಘು, ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.