ಸ್ವಾರಸ್ಯ; ಅವೆರಡೂ ಬೇರೆ ಬೇರೆ ಡಿಪಾರ್ಟ್ಮೆಂಟ್ ಕಣ್ರೀ…ಡಿವಿಜಿ ಕೈಲಿತ್ತು ಜಿಲೇಬಿ!
Team Udayavani, Aug 4, 2020, 11:04 AM IST
ಡಿವಿಜಿಯವರಿಗೆ ಸಿಹಿತಿಂಡಿಯೆಂದರೆ ಪ್ರಾಣ. ಊಟ ತಿಂಡಿಯ ವಿಷಯದಲ್ಲಿ ಶಿಸ್ತು ಪಾಲಿಸಬೇಕು ನಿಜ, ಹಾಗಂತ ನಾಲಿಗೆಗೆ ಮೋಸ ಮಾಡಬಾರದು ಎಂದು ಅವರು ವಿನೋದವಾಗಿ ಹೇಳುತ್ತಿದ್ದರು. ಅದೊಂದು ಸಂದರ್ಭದಲ್ಲಿ ಅವರಿಗೆ ಶುಗರ್ ಹೆಚ್ಚಾಗಿ, ಆಸ್ಪತ್ರೆಯಲ್ಲಿದ್ದರು. ಈ ವಿಷಯ ಗೊತ್ತಾಗುದ್ದಂತೆ, ಅವರನ್ನು ನೋಡಲೆಂದು, ಸಾಹಿತಿ ಡಾ. ಹಾ.ಮಾ. ನಾಯಕ ಅವರು ಆಸ್ಪತ್ರೆಗೆ ಧಾವಿಸಿ ಬಂದರು. ಅಷ್ಟು ಹೊತ್ತಿಗೆ ಶುಗರ್ ತಹಬಂದಿಗೆ ಬಂದಿದ್ದರಿಂದ, ಡಿವಿಜಿಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಅವರು ಮನೆ ಸೇರಿದ್ದರು.
ಹೇಗಿದ್ದರೂ ಅವರನ್ನು ನೋಡಲೆಂದು ಬಂದಿದ್ದಾಗಿದೆ. ಸೀದಾ ಮನೆಗೇ ಹೋಗಿ ಮಾತಾಡಿಸಿಕೊಂಡು, ಆ ಹಿರಿಯರ ಆಶೀರ್ವಾದ ಪಡೆದು ಹೋಗುವುದೆಂದು ನಿಶ್ಚಯಿಸಿದ ಹಾಮಾನಾ, ಡಿವಿಜಿಯವರ ಮನೆಗೆ ಬಂದರು. ಅಲ್ಲಿ ಅವರು ಕಂಡದ್ದೇನು? ಡಿವಿಜಿ ಲಕ್ಷಣವಾಗಿ ಚಕ್ಲಮಕ್ಲ ಹಾಕಿಕೊಂಡು ಜಿಲೇಬಿ ತಿನ್ನುತ್ತಿದ್ದಾರೆ!
ಶುಗರ್ ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಆಸ್ಪತ್ರೆ ಸೇರಿದ್ದ ಡಿವಿಜಿ, ಅಲ್ಲಿಂದ ಬಂದ ತಕ್ಷಣ ಮತ್ತೆ ಸಿಹಿ ತಿನ್ನುತ್ತಾ ಕೂತಿರುವುದನ್ನು ಕಂಡು ಹಾಮಾನಾಗೆ ಅಚ್ಚರಿ. “ಏನ್ಸಾರ್ ಇದೂ..?’ ಎಂದು ಅವರು ಕೇಳಿದ್ದಕ್ಕೆ, ಅವರಿಗೂ ಒಂದು ಜಿಲೇಬಿ ಕೊಟ್ಟು ಡಿವಿಜಿ ಹೇಳಿದರಂತೆ: “ನೋಡ್ರಿ, ಇದನ್ನು ತಿನ್ನೋದು, ಆನಂದಪಡೋದು ಒಂದು ಡಿಪಾರ್ಟ್ಮೆಂಟ್ ರೋಗ ಅಂತ ನರಳ್ಳೋದು ಇನ್ನೊಂದು ಡಿಪಾರ್ಟ್‌ಮೆಂಟ್! ಒಂದು ಇನ್ನೊಂದರಲ್ಲಿ ತಲೆಹಾಕದ್ದಲ್ಲ’!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.