ಜೋಕಾಲಿ ಕಟ್ಟೋಣ ಅಂದ್ರೆ, ಆಕಾಶ ಕಳಚಿತಲ್ಲ!


Team Udayavani, Apr 18, 2017, 3:45 AM IST

jokali.jpg

ಹಾಯ್ ಮುದ್ದುಮರಿ, 
ಅದೇನೇ ತಿಪ್ಪರಲಾಗ ಹಾಕಿದ್ರೂ ನಾನಂತೂ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಜೀವದ ಕಣ ಕಣದಲ್ಲೂ ನಿನ್ನನ್ನೇ ತುಂಬಿಕೊಂಡಿರುವ ನನಗೆ ನಿನ್ನ ಮರೆಯವಷ್ಟು ಶಕ್ತಿ ಎಲ್ಲಿಂದ ಬಂದೀತು ಹೇಳು?  ಮರುಭೂಮಿಯಂತಿದ್ದ ನನ್ನ ಹೃದಯದಲ್ಲಿ ಒಲವಿನ ಮಳೆ ಸುರಿಸಿ ಎಂದಿಗೂ ಒಣಗದ ಪ್ರೀತಿಯ ಗಿಡ ನೆಟ್ಟವಳು ನೀನು. ಕೆಲವರಿಗೆ ತಮ್ಮ ಬಳಿ ಇರುವ ಅತ್ಯಮೂಲ್ಯವಾದುದನ್ನು ಉಳಿಸಿಕೊಳ್ಳವ ಕಲೆ ಇರುವುದಿಲ್ಲ. ಬಹುಶಃ ನನ್ನ ವಿಷಯದಲ್ಲೂ ಹಾಗೆಯೇ ಆಗಿರಬೇಕು, ಇಲ್ಲದಿದ್ದರೆ ಇಂದು ನನ್ನ ಬಳಿ ನೀನಿರುತ್ತಿದ್ದೆ.

ಆಕಾಶಕ್ಕೆ ಜೋಕಾಲಿ ಕಟ್ಟಿ ನಿನ್ನೊಂದಿಗೆ ಆಡುವ ಕನಸು ಕಂಡಿ¨ªೆ; ಆದರೆ ಆಕಾಶವೇ ಕಳಚಿ ಬಿದ್ದುಬಿಟ್ಟಿತಲ್ಲ. ಮೈ ಕೊರೆವ ಚಳಿಯಲ್ಲಿ ಬೆಟ್ಟದ ತುದಿಯಲ್ಲಿ ನಿಂತು ನಿನ್ನ ಹೆಸರು ಕೂಗಲು ಹೋದರೆ, ಬೆಟ್ಟವೇ ಪುಡಿಯಾಯಿತಲ್ಲ. ಅರಳು ಹುರಿದಂತೆ ಮಾತನಾಡುವ ನಿನ್ನ ಮಾತುಗಳಿಗೆ ನನ್ನ ಧ್ವನಿ ಸೇರಿಸಿ, ಯುಗಳಗೀತೆ ಹಾಡಬೇಕೆಂದೆಕೊಂಡೆ; ಆದರೆ ಒಂದೂ ಮಾತನಾಡದೆ ನೀ ಮೌನಿಯಾದೆ. ಪ್ರಕೃತಿಯಂತೆ ನಿತ್ಯಹರಿದ್ವರ್ಣವಾಗಿರುವ ನಿನ್ನ ಸೌಂದರ್ಯವನ್ನು ದಿನವೂ ಕಣ್ತುಂಬಿಕೊಳ್ಳುವ ಆಸೆಪಟ್ಟೆ; ಆದರೆ ಕಾಣಿಸದ ಹಾಗೆ ನೀನು ಮರೆಯಾದೆ. ಹೃದಯ ಸಿಂಹಾಸನದಲ್ಲಿ ನಿನ್ನ ಪ್ರತಿಷ್ಠಾಪಿಸಿ ರಾಜ್ಯಭಾರ ನೋಡಬೇಕೆಂದುಕೊಂಡೆ; ಪ್ರೇಮರಾಜ್ಯದಿಂದ ನೀನು ನನ್ನನ್ನೇ ಗಡಿಪಾರು ಮಾಡಿಬಿಟ್ಟೆ. ಹೀಗೆ ಕನಸುಗಳ ಆರಂಭಕ್ಕೆ ಮುನ್ನವೇ ಸೋಲು ಕಂಡ ನಾನು ಎಂಥ ನತದೃಷ್ಟನಿರಬೇಕು!

ದಿನಕಳೆದಂತೆ ನನಗೀಗ ಅನಿಸುತಿದೆ, ನಿನ್ನಲ್ಲಿ ಪ್ರೀತಿಯನ್ನು ಬಯಸದೆ ಬರೀ ಸ್ನೇಹವನ್ನು ಬಯಸಿದ್ದರೆ ಬಹುಶಃ ಹೀಗಾಗುತ್ತಿರಲಿಲ್ವೇನೋ. ದುಡುಕಿ ಮಾಡಿದ ಎಡವಟ್ಟಿನಿಂದಾಗಿ ಇಂದಿಗೂ ನಿನ್ನ ಮರೆಯಲಾರದೆ ಚಡಪಡಿಸುತ್ತಿದ್ದೇನೆ. ಎದುರಿಗೆ ಸಿಕ್ಕಾಗ ಒಂದು ಸಣ್ಣ ನಗೆಯನ್ನೂ ಬೀರದೆ ಹೋಗುವ ಆ ನಿನ್ನ ಬಿಗುಮಾನ ನನ್ನನ್ನು ಇನ್ನಷ್ಟು ದುರ್ಬಲನಾಗಿಸಿದೆ. ಏನೇ ಇರಲಿ, ಬೆಟ್ಟದಷ್ಟು ಪ್ರೀತಿಯನ್ನು ಮನದಲ್ಲಿ ತುಂಬಿಕೊಂಡು ಹೇಳಲಿಲ್ವಲ್ಲ ಎಂಬ ಕೊರಗು ಈಗ ನನ್ನಲ್ಲಿಲ್ಲ. ಅನಿಸಿದ್ದನ್ನು ಹೇಳಿ ಮನಸ್ಸು ಹಗುರಾಗಿಸಿಕೊಂಡ ನಿರಾಳತೆ ಈಗ ನನ್ನಲ್ಲಿದೆ. ನೀ ಸಿಕ್ಕರೂ ಸಿಗದಿದ್ದರೂ ಎಂದಿಗೂ ನಿನ್ನ ಪ್ರೇಮದಾಸನಾಗಿಯೇ ಇರುವೆ.

ಅಂದು ನಿನ್ನೊಂದಿಗೆ ಮಾತನಾಡುತ್ತ ಕಳೆದ ಆ ಮೂರು ನಿಮಿಷಗಳು ನನ್ನ ಜೀವನದ ಸುವರ್ಣ ಗಳಿಗೆ. ಆ ಮೂರು ನಿಮಿಷಗಳ ನೆನಪÇÉೇ ಮುಂದಿನ ನೂರು ವರುಷ ಕಳೆಯುತ್ತೇನೆ. ನಾನು ಸಾಯುವ ಸಮಯದಲ್ಲೂ ಆ ಮೂರು ನಿಮಿಷಗಳನ್ನು ಮೆಲುಕು ಹಾಕಿಯೇ ಕಣ್ಮುಚ್ಚುತ್ತೇನೆ. ಈ ವಿಷಯದಲ್ಲಿ ಸಂಶಯ ಬೇಡ. ಜಗತ್ತಿನಲ್ಲಿ ಯಾವ ಪ್ರೇಮಿಯೂ ತನ್ನ ಪ್ರೇಮ ನಿವೇದನೆಯ ಗಳಿಗೆಯನ್ನು ಮರೆಯಲಾರ. ನಿನಗೆ ಆ ಮೂರು ನಿಮಿಷಗಳು ಏನೂ ಅಲ್ಲದಿರಬಹುದು. ಆದರೆ, ನನಗದು ಬಾಳಿನ ಸರ್ವಸ್ವ. ಥ್ಯಾಂಕ್‌ ಯೂ ಫಾರ್‌ ಯುವರ್‌ ಥ್ರಿà ಮಿನಿಟ್ಸ್‌.
ನಿನ್ನವನೇ ಆದ
ಗೆಳೆಯ
– ಶ್ರೀಧರ ಶಿಂಧೆ, ಅಂಗಡಿ ಕಾಲೇಜು, ಬೆಳಗಾವಿ

ಟಾಪ್ ನ್ಯೂಸ್

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್‌ ಇರಾನಿವರೆಗೆ

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್

‌Viral Video: ಟಿಕ್‌ಟಾಕ್‌ ಸ್ಟಾರ್‌ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

ಹೊಸ ಸೇರ್ಪಡೆ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!

Bar-Associatin

Wine Merchants: ನಾಳೆಯ ಮದ್ಯ ಮಾರಾಟ ಬಂದ್‌ ನಿರ್ಧಾರ ವಾಪಸ್‌ ಪಡೆದ ಅಸೋಸಿಯೇಷನ್‌

vital

Vitla: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.