ಕಾಲ್ ಫ್ರಂ ಕೆಪಿಎಸ್ಸಿ!
Team Udayavani, Dec 5, 2017, 1:37 PM IST
ಭವಿಷ್ಯ, ಭದ್ರತೆಯ ಕಾರಣಕ್ಕಾಗಿ ಸರ್ಕಾರಿ ಹುದ್ದೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಎಲ್ಲರೂ ಮೇಲಿಂದ ಮೇಲೆ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೂ ಸರ್ಕಾರಿ ನೌಕರಿ ಸಿಗದೇಹೋದಾಗ, ಮರುಗುತ್ತಾರೆ. ಇಷ್ಟಾದ ಮೇಲೂ ಮತ್ತೂಮ್ಮೆ ಮಗದೊಮ್ಮೆ ಪ್ರಯತ್ನ ಬಿಡದೆ ಮುನ್ನುಗ್ಗುವವರಿಗೆ, ನನಗೆ ಸರ್ಕಾರಿ ಕೆಲಸವೇ ಬೇಕು ಎಂದು ಹಂಬಲಿಸುವವರು ತಪ್ಪದೇ ಈ ಸುದ್ದಿ ಓದಬೇಕು. ಇದೀಗ ಕರ್ನಾಟಕ ಲೋಕ ಸೇವಾ ಆಯೋಗವು ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಗ್ರೂಪ್ “ಸಿ’ ತಾಂತ್ರಿಕ ಮತ್ತು ತಾಂತ್ರಿಕೇತರ 1,604 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ…
ನಿನಗೂ ಒಂದು ಸರ್ಕಾರಿ ಹುದ್ದೆ ಅಂತ ಇದ್ದಿದ್ರೆ ಚೆನ್ನಾಗಿರ್ತಾ ಇತ್ತು. ಹೋಗಿ ಹೋಗಿ ಆ ಫ್ಯಾಕ್ಟರಿಗೆ ಸೇರಿಕೊಂಡಿದ್ದೀಯಾ. ವಾರದ ರಜೇನೂ ಇಲ್ಲ. ತಿಂಗಳ ರಜೇನೂ ಇಲ್ಲ. ಗಂಟೆಗಳನ್ನು ಲೆಕ್ಕ ಹಾಕದೇ, ದಿನವೆಲ್ಲಾ ದುಡಿದ್ರೂ ಸರಿಯಾಗಿ ಸಂಬಳ ಕೊಡೋದಿಲ್ಲ. ಚೆನ್ನಾಗಿ ಓದಿ ಇಂಥ ಉದ್ಯೋಗ ಮಾಡ್ತಾ ಇದ್ದೀಯಲ್ಲಾ ನಿನಗೇನೂ ಅನ್ಸೋದಿಲ್ವಾ ಎಂದು ಅಮ್ಮನಿಂದ ಹಿಡಿದು ಸ್ನೇಹಿತರವರೆಗೂ ಎಲ್ಲರೂ ಪ್ರಶ್ನೆಗಳನ್ನು ಕೇಳುವವರೇ.
ಆ ಕೆಲಸ ಬಿಟ್ಟು ಸರ್ಕಾರಿ ನೌಕರಿ ಪಡೆಯುವುದು ಹೇಗೆ ಎಂಬ ಗುಟ್ಟನ್ನು ಮಾತ್ರ ಯಾರೂ ಹೇಳಿ ಕೊಡಲಾರರು! ಹಲವು ಬಾರಿ ಪ್ರಯತ್ನಿಸಿದರೂ ಸರ್ಕಾರಿ ನೌಕರಿ ಸಿಗದಿದ್ದಾಗ ಏನು ಮಾಡಬೇಕು ಎಂದು ಯೋಚಿಸಿ, ಕಂಗಾಲಾಗಿ ಕಾಲಹರಣ ಮಾಡುವ ಬದಲು ಜೀವನೋಪಾಯಕ್ಕೆ ಯಾವುದೋ ಒಂದು ಕೆಲಸ ಮಾಡಿದರಾಯಿತು ಎಂದು ಮಾರ್ಗ ಬದಲಾಯಿಸುವವರೇ ಹೆಚ್ಚು. ಆದರೆ, ಬೇರೆ ಕೆಲಸದಲ್ಲಿ ಇದ್ದುಕೊಂಡೇ ಸರ್ಕಾರಿ ಉದ್ಯೋಗ ಪಡೆಯಲೇಬೇಕು ಎಂದು ಶತಪ್ರಯತ್ನ ಮಾಡಿ ಕೆಲಸವನ್ನೂ ಪಡೆದವರಿದ್ದಾರೆ.
ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರಗಳಿಂದ ವಿಮುಖರಾಗದೆ ಛಲ ಸಾಧಿಸಿದವರಿದ್ದಾರೆ. ಅಂಥ ಸಾಧಕರಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಒಟ್ಟು 1604 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆಗೆ ಆನ್‌ಲೈನ್ ಮೂಲಕ ಅರ್ಜಿ ತುಂಬಲು ಅವಕಾಶ ನೀಡಲಾಗಿದೆ.
ಯಾವ್ಯಾವ ಹುದ್ದೆಗಳು?
ತಾಂತ್ರಿಕ ಹುದ್ದೆಗಳು: ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಮಾದರಿ ವಸತಿ ಶಾಲೆ (ನವೋದಯ) ಗಳಲ್ಲಿನ ಸ್ನಾತಕೋತ್ತರ ಪದವೀಧರ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಮಾಜ ವಿಜ್ಞಾನ, ಗಣಕಯಂತ್ರ ಶಿಕ್ಷಕರು, ಗ್ರಂಥಪಾಲಕ ಮತ್ತು ಶುಶ್ರೂಷಕಿಯರಿಗೆ ಒಟ್ಟು 61 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ತಾಂತ್ರಿಕೇತರ ಹುದ್ದೆಗಳು: ಅಲ್ಪಸಂಖ್ಯಾತ ನಿರ್ದೇಶನಾಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭಾಷಾ ಶಿಕ್ಷಕರು, ಇತರ ವಿಷಯ, ದೈಹಿಕ ಶಿಕ್ಷಣ, ನಿಲಯಪಾಲಕರು, ವಸತಿ ನಿಲಯ ಮೇಲ್ವಿಚಾರಕ ಹುದ್ದೆ ಸೇರಿದಂತೆ 1543 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗ ಸೇರಿ ಒಟ್ಟು 1604 ಹುದ್ದೆಗಳಿವೆ. ಇದನ್ನು ಮೂಲ ವೃಂದ ಹಾಗೂ ಹೈ-ಕ ಭಾಗಕ್ಕೆ ವಿಂಗಡನೆ ಮಾಡಲಾಗಿದೆ.
ಎಷ್ಟು ಓದಿರಬೇಕು?: ಸ್ನಾತಕೋತ್ತರ ಪದವಿ, ಪದವಿ, ಪದವಿಪೂರ್ವ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ಇರುವ ವಯೋಮಿತಿ, ಕನಿಷ್ಠ 18. ಸಾಮಾನ್ಯ ವರ್ಗಕ್ಕೆ ಗರಿಷ್ಠ 35, ಪ್ರವರ್ಗಗಳಿಗೆ 38 ಮತ್ತು ಪರಿಶಿಷ್ಟ ಅಭ್ಯರ್ಥಿಗಳಿಗೆ 40 ವರ್ಷಗಳ ವರೆಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.
ನೇಮಕಾತಿ ವಿಧಾನ: ನೇಮಕಾತಿಯು ಲೋಕಸೇವಾ ಆಯೋಗವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯುತ್ತದೆ. ತಾಂತ್ರಿಕ ಹುದ್ದೆಗೆ 150 ಅಂಕಗಳ ಕನ್ನಡ ಕಡ್ಡಾಯ ಪತ್ರಿಕೆಯಲ್ಲಿ ತೇರ್ಗಡೆ ಹೊಂದಲೇಬೇಕು. ಜೊತೆಗೆ 200 ಅಂಕಗಳ ಸಾಮಾನ್ಯ ಜ್ಞಾನ ಪರೀಕ್ಷೆ ಮತ್ತು ಆಯಾ ವಿಷಯ ಸಂಬಂಧಿತ 200 ಅಂಕಗಳ ನಿರ್ದಿಷ್ಟ ಪರೀಕ್ಷೆ ನಡೆಸಲಾಗುತ್ತದೆ. ತಾಂತ್ರಿಕೇತರ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆಯೊಂದಿಗೆ 100 ಅಂಕಗಳ ಸಾಮಾನ್ಯ ಜ್ಞಾನ, 100 ಅಂಕಗಳ ಸಂವಹನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಂಕಗಳ ಜೇಷ್ಠತೆ, ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ನೇಮಕ ನಡೆಯುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
– ಹುದ್ದೆಗಳಿಗೆ ಆನ್‌ಲೈನಿನ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕೂ ಮುಂಚೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಭಾವಚಿತ್ರ, ಸಹಿ ಇತ್ಯಾದಿ ದಾಖಲೆಗಳನ್ನು ಬಳಿಯೇ ಇಟ್ಟುಕೊಂಡಿರಿ.
– ಅಂತರ್ಜಾಲದಲ್ಲಿ
* ಅನಂತನಾಗ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.