ಕ್ಯಾನ್ಸರ್‌ ಫ್ರೀ ಡಾಕ್ಟರ್‌

"ಫಿ'ಯರ್‌ಲೆಸ್‌

Team Udayavani, Mar 17, 2020, 5:47 AM IST

cancer-maddu

“ನೀನು ಸಗಣಿ ಎತ್ತಾಕೋಕ್ಕೆ, ಗಂಜಲ ಬಾಚಕ್ಕೆ ಹೋಗಬೇಕಾಗುತ್ತೆ’ ಮಕ್ಕಳು ಓದದೇ ಇದ್ದರೆ ನಮ್ಮ ಹಿರಿಯರು ಹೀಗಂಥ ಹೇಳ್ಳೋರು. ನಿಜ ಏನೆಂದರೆ, ಈ ರೀತಿ ಸಗಣಿ, ಗಂಜಲದ ಸಂಘ ಮಾಡಿದವರಿಗೆ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳೇ ಬರೋದಿಲ್ಲವಂತೆ. ಬೆಂಗಳೂರಿನ ಡಾ.ರಮೇಶ್‌ ಆಯುರ್‌ ಪಂಚಗವ್ಯ ಪದ್ಧತಿಯಲ್ಲಿ, ಅನೇಕ ಸಂಶೋಧನೆ ಮಾಡಿ, ನಾನಾ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ; ಒಂದು ಪೈಸೆ, ಡಾಕ್ಟರ್‌ ಫೀ ಪಡೆಯದೆ. ರಮೇಶ್‌ ಪಾಲಿಗೆ ಇದೇ ಸಮಾಜಸೇವೆ.

ಇವತ್ತು ಜ್ವರದ ಪ್ರತಿ ಸ್ಪರ್ಧಿ ರೋಗ ಯಾವುದು ಅಂದರೆ? ಕ್ಯಾನ್ಸರ್‌ ಅಂತಲೇ ಹೇಳಬೇಕು. ಆ ಮಟ್ಟಕ್ಕೆ ಈ ಕಾಯಿಲೆ ಬಾಧಿಸುತ್ತಿದೆ. ಕ್ಯಾನ್ಸರ್‌ ಅನ್ನು ಇಟ್ಟುಕೊಂಡು ಬ್ಯುಸಿನೆಸ್‌ ಮಾಡುವವರು ನಮ್ಮಲ್ಲಿ ಕಡಿಮೆ ಏನಿಲ್ಲ. ಏಕೆಂದರೆ, ಕ್ಯಾನ್ಸರ್‌ ಶ್ರೀಮಂತ ಕಾಯಿಲೆ. ಒಂದು ಸಲ ಬಂದರೆ ಸಾಕು, ಲಕ್ಷ ಲಕ್ಷ ರೂ. ಖಾಲಿಯಾಗುತ್ತದೆ. ಇನ್ನು ಬಡವರಿಗೆ ಏನಾದರು ಕ್ಯಾನ್ಸರ್‌ ಅಡರಿಕೊಂಡರೆ ಗತಿ ಏನು?ಅದಕ್ಕೆ ಪರಿಹಾರ ಇಲ್ಲವೇ? ಅಂತ ಯೋಚನೆ ಮಾಡುವವರಿಗೆ ಡಾ. ರಮೇಶ್‌ ಕಾಣಿಸುತ್ತಾರೆ. ಮನೆಗೆ ಬಂದ ರೋಗಿಗಳಿಗೆ, “ಇನ್ನು ನೀವು ಅಷ್ಟೇ’ ಅಂಥ ಭಯ ಪಡಿಸುವುದಿಲ್ಲ. ಕೀಮೋ, ಆಪರೇಷನ್‌ ಅಂತೆಲ್ಲ ಹೆದರಿಸುವುದಿಲ್ಲ. ಬದಲಿಗೆ ಕಡಿಮೆ ಬೆಲೆಯಲ್ಲಿ ಪಂಚಗವ್ಯದ ಔಷಧಗಳನ್ನು ಕೊಡುತ್ತಾರೆ.

ಫೀಸು ಇಲ್ಲ
“ಅರೇ, ಇದರಲ್ಲೇನು ಮೇಲಾಗುತ್ತೆ?’ ಅಂದುಕೊಳ್ಳಬೇಡಿ. ರಮೇಶ್‌ ಹೇಳುವ ಪ್ರಕಾರ, ಕ್ಯಾನ್ಸರ್‌ನಂಥ ಕಾಯಿಲೆಗೆ ಇದೇ ರಾಮಬಾಣ. ಅವರು ಸುಮಾರು 25 ವರ್ಷಗಳಿಂದಲೇ, ಆರ್ಥರೈಟೀಸ್‌, ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ಇದೇ ಪಂಚಗವ್ಯ ಮದ್ದು ಅಂತ ಹೇಳುತ್ತಿದ್ದಾರೆ. ಅದೇನು ಅಂದರೆ, ಗೋಮೂತ್ರ. ಆರಂಭದಲ್ಲಿ “ಗಂಜಲದಿಂದ ಈವಯ್ಯ ಏನು ಮಾಡ್ತಾನಪ್ಪಾ’ ಅಂತ ಜನ ನಕ್ಕಿದ್ದು ಉಂಟು. ಆದರೆ, ಇದೇ ಗಂಜಲಕ್ಕೆ ಕೀಮೋ ಥೆರಪಿಯನ್ನು ಓಡಿಸುವ ತಾಕತ್ತು ಇದೆ ಅನ್ನೋದನ್ನು ಸಂಶೋಧಿಸಿ ತೋರಿಸಿದ್ದು ಈ ರಮೇಶ್‌ ಡಾಕ್ಟ್ರು. ಅವರು ಹೇಳ್ಳೋ ಪ್ರಕಾರ, ಆಯುರ್ವೇದದ ತಳಪಾಯ ದೇಸೀ ಹಸುವಿನ ಸಗಣಿ, ಗೋಮೂತ್ರಗಳೇ. ಇದರ ಆಧಾರದ ಮೇಲೇ ಆಯುರ್ವೇದ ವೈದ್ಯ ಪದ್ಧತಿ ನಿಂತಿರೋದು. ಈಗ ಎಲ್ಲರೂ ಅದನ್ನು ಮರೆತಿದ್ದಾರೆ’ ಅಂತಾರೆ. ಮಲ್ಲೇಶ್ವರದ ವಯ್ನಾಲಿಕಾವಲ್‌ನ ಇವರ ಮನೆಗೆ ಹೋದರೆ ರೋಗಿಗಳ ಕ್ಯೂ. ಚರ್ಮರೋಗಿಗಳು, ಆಸ್ತಮಾ, ಹೆಚ್ಚಾಗಿ ಕ್ಯಾನ್ಸರ್‌ ಬಾಧಿತರು. ಬಂದವರೆಲ್ಲರಿಗೂ, “ನೀವೇನೂ ತಲೆಕೆಡಿಸ್ಕೋ ಬೇಡಿ. ನಾನು ಇದ್ದೀನಿ. ನಿಮ್ಮ ರೋಗಾನ ಇಲ್ಲಿಗೇ ಬಿಡಿ. ನಾನು ನೋಡ್ಕೊತೀನಿ’ ಅಂತ ಸವಾಲು ಹಾಕಿ, ಧೈರ್ಯ ತುಂಬುತ್ತಿರುತ್ತಾರೆ.

ಇದು ನಿಜಕ್ಕೂ ಸಾಧ್ಯನಾ ಡಾಕ್ಟ್ರೇ ? ಅಂದರೆ, “ಏಕೆ ಆಗಲ್ಲ, ಮೊದಲು ರೋಗಿಗಳಲ್ಲಿರುವ ಭಯ ಓಡಿಸಬೇಕು. ಆಗಲೇ ರೋಗ ನಿರೋಧಕ ಗುಣ ಜಾಸ್ತಿಯಾಗೋದು. ಆಮೇಲೆ ಔಷಧ ಕೊಡಬೇಕು. ಆಗ ಮೇಲಾಗುತ್ತೆ’ ಅಂದರು ರಮೇಶ್‌.

ಇಲ್ಲಿಗೆ ಬರುವ ರೋಗಿಗಳು ಎಲ್ಲ ಆದ ಮೇಲೆ “ಡಾಕ್ಟ್ರೇ ನಿಮ್ಮ ಫೀಸ್‌ ಎಷ್ಟು?’ ಅಂತ ಯಾರೂ ಕೇಳುವುದೇ ಇಲ್ಲ. ಏಕೆಂದರೆ, ರಮೇಶ್‌ ಕನ್ಸಲ್ಟೆಷನ್‌ಗೆ ಅಂತೆಲ್ಲ ಹಣ ಪಡೆಯೋದಿಲ್ಲ. ಆ ಮಟ್ಟಿಗೆ ಇದು ಸೇವೆ.ಆದರೆ, ಔಷಧಕ್ಕೆ ಮಾತ್ರ ಹಣ ಪಡೆಯುತ್ತಾರೆ. ಎಷ್ಟೋ ಜನ “ತಗೊಳ್ಳಿ ಡಾಕ್ಟ್ರೇ’ ಅಂತ ಪೀಡಿಸುವುದು ಉಂಟು. ಇದರಿಂದ ತಪ್ಪಿಸಿಕೊಳ್ಳಲೆಂದೇ, ಎದುರಿಗೆ ಒಂದು ಹುಂಡಿ ಇಟ್ಟಿದ್ದಾರೆ. ಅದರಲ್ಲಿ ಮನಸ್ಸಿಗೆ ಬಂದಷ್ಟು ಹಣ ಹಾಕಿ ಅಂತ ಹೇಳಿಬಿಡುತ್ತಾರೆ. ಹೀಗೆ ಒಟ್ಟು ಗೂಡಿದ ಮೊತ್ತವನ್ನು ಯಾವುದಾದರೂ ಗೋಶಾಲೆಗೆ ಕೊಡುವುದು 15 ವರ್ಷಗಳಿಂದ ಜಾರಿಯಲ್ಲಿರುವ ರೂಢಿ. “ಕ್ಯಾನ್ಸರ್‌ ಅಂತ ಗೊತ್ತಾದಾಗಲೇ ಜನ ಅರ್ಧ ಕುಸಿದು ಹೋಗಿರುತ್ತಾರೆ. ಲಕ್ಷಾಂತರ ರೂ. ಹೇಗಪ್ಪ ಹೊಂದಿಸೋದು ಅನ್ನೋ ಭಯ ಬೇರೆ ಕಾಡುತ್ತಿರುತ್ತದೆ. ಇಂಥವರ ಹತ್ತಿರ ಫೀಸು ಅಂತೆಲ್ಲ ಪಡೆದು ನಾನ್ಯಾವ ನರಕಕ್ಕೆ ಹೋಗಲಿ? ಬದಲಿಗೆ, ಅವರಿಗೆ ಪಂಚಗವ್ಯ ಚಿಕಿತ್ಸೆಯ ಬಗ್ಗೆ ತಿಳಿ ಹೇಳಿದರೆ, ಮುಂದಿನ ಜನಾಂಗಕ್ಕೂ ಇದು ತಲುಪಬಹುದು ಅಲ್ವಾ?’ಎನ್ನುತ್ತಾರೆ.

ಪಂಚಗವ್ಯದಿಂದ ಲಾಭ ಹೇಗೆ?
ಈ ರೀತಿ ಫೀಸು ಪಡೆಯದೇ ರಮೇಶ್‌ ಡಾಕ್ಟ್ರು ಬದುಕು ನಡೆಸುವುದಾದರೆ ಹೇಗೆ? ಈ ಅನುಮಾನ ಹುಟ್ಟುವುದು ಸಹಜ. ಅದಕ್ಕೆ ಉತ್ತರವೂ ಇದೆ. ರಮೇಶ್‌ ಉದ್ದೇಶ ಪಂಚಗವ್ಯ ಚಿಕಿತ್ಸೆ ಪ್ರತಿಯೊಬ್ಬರಿಗೂ ತಲುಪಬೇಕು ಅನ್ನೋದು. ಅದರ ಹೆಸರಲ್ಲಿ ದುಡ್ಡು ಮಾಡುವುದಲ್ಲ. ಅವರು ಶ್ರೀ ರಾಮಚಂದ್ರಾಪುರ ಮಠದ ಗೋ ಔಷಧ ತಯಾರಿಕೆಯಲ್ಲಿ ತಾಂತ್ರಿಕ ಸಲಹೆಗಾರರು, ಮಧ್ಯ ಪ್ರದೇಶದ ಡಾ. ಜೈನ್‌ ಕೌ ಯುರೇನಿ ಥೆರಪಿ ಹೆಲ್ತ್‌ಕ್ಲಿನಿಕ್‌ನ ವಿಸಿಟಿಂಗ್‌ ಡಾಕ್ಟರ್‌ ಆಗಿರುವುದರಿಂದ ಆದಾಯಕ್ಕೆ ತೊಂದರೆ ಇಲ್ಲ. ಹೀಗಾಗಿ, ಇಲ್ಲಿ ಬರುವ ರೋಗಿಗಳಿಂದ ಫೀ ಪಡೆಯುತ್ತಿಲ್ಲ. ರಮೇಶರ ತುಡಿತ ಎಷ್ಟಿದೆ ಎಂದರೆ, ಪಂಚಗವ್ಯ ಚಿಕಿತ್ಸೆಯ ಸುಮಾರು 200ಕ್ಕೂ ಹೆಚ್ಚು ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿ ಬರುವ ರೋಗಿಗಳಿಗೆ ಅದರಲ್ಲೂ ಕ್ಯಾನ್ಸರ್‌ಪೀಡಿತರಿಗೆ ಉಚಿತ ಚಿಕಿತ್ಸೆ. ಆರ್‌ಎಸ್‌ಎಸ್‌ನ ಸ್ವದೇಶಿ ಮೇಳದ ಭಾಗವಾಗಿದ್ದಾರೆ. ಒಟ್ಟಾರೆ, ಇಡೀ ಜಗದ ಎಲ್ಲ ರೋಗಗಳನ್ನು ಗಂಜಲದಲ್ಲಿ ತೇಲಿಸುವ ಶಕ್ತಿ ಗೋಮೂತ್ರಕ್ಕೆ ಇದೆ ಅನ್ನೋದನ್ನು ವಿವರಿಸಿ ಹೇಳಲು ಟೊಂಕ ಕಟ್ಟಿ ನಿಂತಿದ್ದಾರೆ.

ಕಮೀಷ್‌ನ್‌ ಇಲ್ಲ
ವಾರಕ್ಕೆ ಎರಡು, ಮೂರು ದಿನ ಬೆಳಗ್ಗೆ 7ರಿಂದ 10 ಗಂಟೆ ತನಕ ಮನೆ ಬಾಗಿಲು ತೆರೆದಿರುತ್ತದೆ. ಬಂದ ರೋಗಿಗಳಿಗೆ ಉಚಿತ ಚಿಕಿತ್ಸೆ. ಒಂದು ಪಕ್ಷ ಅವರು ಇಲ್ಲದೇ ಇದ್ದರೂ ಫೋನ್‌ ಮೂಲಕವೇ ಪರಿಹಾರ ಸೂಚಿಸುವ ಪದ್ಧತಿಯೂ ಇದೆ. ವೈದ್ಯರು ರೋಗಿಗಳ ಬಳಿ ಫೀ ಪಡೆಯುವುದಿಲ್ಲ ಸರಿ, ಆದರೆ ಔಷಧದಲ್ಲಿ ಕಮೀಷನ್‌ ಪಡೆಯಬಹುದಾ? ಬಾಲಂಗೋಚಿಯಂತೆ ಹುಟ್ಟುವ ಇನ್ನೊಂದು ಅನುಮಾನ ಇದು. ರಮೇಶ್‌ ಯಾವ ಔಷಧಗಳ ಮೇಲೂ ಮಾರ್ಜಿನ್‌ ಇಟ್ಟುಕೊಂಡಿಲ್ಲ, ಯಾವ ಕಂಪೆನಿಗಳಿಂದಲೂ ಕಮೀಷನ್‌ ಪಡೆಯುವುದಿಲ್ಲ. ಏಕೆಂದರೆ, ಇವರೇ ರೋಗಿಗಳಿಗೆ ಹೊರೆಯಾಗಬಾರದು ಅಂತ ಸಗಣಿ ಮತ್ತು ಮೂತ್ರದಲ್ಲಿ ಸಂಶೋಧನೆ ಮಾಡಿ ಒಂದಷ್ಟು ಔಷಧ ಕಂಡು ಹಿಡಿದಿದ್ದಾರೆ. ಇದನ್ನು ಹೊರತಾಗಿ, ರಾಮಚಂದ್ರಪುರ ಮಠದ ಕೆಲವು ಔಷಧ ಬಳಸುವುದುಂಟು. ಅಲ್ಲೂ ಕೂಡ ಕಮಿಷನ್‌ ಇಲ್ಲ. ಕಾರಣ ಇಷ್ಟೇ. ಬಂದ ಲಾಭದ ಹಣವೆಲ್ಲ ಗೋ ಶಾಲೆಗೆ ಸೇರುತ್ತದೆ. ಹೀಗಾಗಿ, ಕಮಿಷನ್‌, ಮಾರ್ಜಿನ್‌ ಇಲ್ಲದ ವೈದ್ಯರು ಇವರು.

ಹದಿನೈದು ವರ್ಷದ ಹಿಂದೆ ಹುಬ್ಬಳ್ಳಿಯ ವಾಸವಿ ಮಹಲ್‌ನಲ್ಲಿ ಮೊದಲ ಕ್ಯಾಂಪ್‌ ಮಾಡಿದರು. ಇವತ್ತು ತಿಂಗಳಿಗೆ 10-20 ಕ್ಯಾಂಪ್‌ಗ್ಳಲ್ಲಿ ಭಾಗವಹಿಸುತ್ತಾರೆ. ಬಳ್ಳಾರಿ, ಗದಗ, ಹುಬ್ಬಳ್ಳಿ ಧಾರವಾಡ, ಹೊಸಪೇಟೆ, ಕೊಪ್ಪಳ ಅಲ್ಲದೇ ಕೇರಳ, ತಮಿಳುನಾಡು, ಒರಿಸ್ಸಾ, ಗುಜರಾತ್‌ಗಳಲೆಲ್ಲಾ ಕ್ಯಾಂಪ್‌ ಮಾಡಿ ಆಯುರ್‌ ಪಂಚಗವ್ಯ ಪದ್ಧತಿಯ ಚಿಕಿತ್ಸೆ ಬಗ್ಗೆ ತಿಳಿ ಹೇಳುತ್ತಿದ್ದಾರೆ.

ಗೋಮೂತ್ರದಲ್ಲಿ ಏನೇನಿದೆ…?
ಇದರಲ್ಲಿ 100ಕ್ಕೂ ಹೆಚ್ಚು ಔಷಧೀಯ ಗುಣ ಇದೆ. ಸೋಡಿಯಂ, ವಿಟಮಿನ್‌ ಎ,ಬಿ,ಸಿ, ಡಿ ಇದೆ. ಅದರಲ್ಲೂ ಸ್ವರ್ಣಚ್ಛಾರವಿದೆ. ಇದು ಮನುಷ್ಯನ ದೇಹದಲ್ಲಿನ ರೋಗನಿರೋಧ ಗುಣ ಜಾಸ್ತಿ ಮಾಡುತ್ತದೆ. ಇದರಲ್ಲಿ ಆಂಟಿಸೆಫ್ಟಿಕ್‌, ಆಂಟಿವೈರಸ್‌, ಆಂಟಿ ಕ್ಯಾನ್ಸರ್‌ನ ಗುಣ ಇದೆ. ಅಮೇರಿಕದಲ್ಲಿ ಗೋಮೂತ್ರದಲ್ಲಿ 60 ಗುಣ ಕಂಡು ಹಿಡಿದಿದ್ದಾರೆ. ನಮ್ಮಲ್ಲಿ 25 ಗುಣ ಸಂಶೋಧಿಸಿದ್ದಾರೆ. ದೇಸಿ ಗೋವು ವಿಷಕಂಠನ ರೀತಿ. ತಿಂದ ವಿಷವನ್ನು ಅರಗಿಸಿಕೊಂಡರೂ, ಅದು ಮೂತ್ರದಲ್ಲಾಗಲಿ, ಸಗಣಿಯಲ್ಲಾಗಲಿ ಬಿಡುಗಡೆ ಮಾಡೋಲ್ಲ. ಇದು ಹೇಗೆ ಅಂದರೆ, ದೇಸಿ ಹಸುಗಳ ಮೇಲೆ ಡುಬ್ಬ ಇದೆಯಲ್ಲ ಅದರಲ್ಲಿ ಸೂರ್ಯನಾಡಿ, ಚಂದ್ರನಾಡಿ ಇರುವುದರಿಂದ ಸೂರ್ಯ, ಚಂದ್ರನ ಕಿರಣಗಳನ್ನು ಆಂಟೇನ ರೀತಿ ಸೆಳೆಯುತ್ತದೆ. ಇದರಿಂದ ಮೆಡಿಸನಲ್‌ ವ್ಯಾಲ್ಯೂ ಸಿಕ್ಕಾಪಟ್ಟೆ ಜಾಸ್ತಿ. ಇದರ ಮೂತ್ರ ಕಿಮೋ ಥೆರಪಿಯಷ್ಟೇ ಪರಿಣಾಮಕಾರಿ’ ಎನ್ನುತ್ತಾರೆ ರಮೇಶ್‌.

ಕಟ್ಟೆ ಗುರುರಾಜ್

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.