ಸಪ್ತಸಾಗರದ ಆಚೆಯೆಲ್ಲೋ..


Team Udayavani, Aug 22, 2017, 10:02 AM IST

22-JOSH-6.jpg

ಜನ್ಮಭೂಮಿಗೂ, ಕರ್ಮಭೂಮಿಗೂ ಹೋಲಿಸಿಕೊಳ್ಳುವ ಭರದಲ್ಲಿ ನಿತ್ಯವೂ ಭಾವುಕರಾಗುತ್ತೇವೆ. ಅದರಲ್ಲೂ ಮಾತೃಭೂಮಿಯಲ್ಲಿ ಸ್ವಾತಂತ್ರ್ಯೋತ್ಸವದ ತಿರಂಗಾ ಧ್ವಜ ಹಾರುತ್ತಿದೆಯೆನ್ನುವಾಗ ದೂರ ತೀರದಾಚೆ ಕುಳಿತ ಮನಕ್ಕೆ ಈ ಮಣ್ಣಿನ ಮೇಲೆ ಮತ್ತಷ್ಟು ಪ್ರೀತಿ ಉಕ್ಕುತ್ತದೆ. ವೃತ್ತಿಯ ಬಂಧನ, ತಾಯ್ನಾಡಿನ ಸ್ವಾತಂತ್ರ್ಯ ಇವೆರಡರ ನಡುವೆ ಜೀಕುವ ಬದುಕಿಗೆ ಏನನ್ನಿಸಬಹುದು? ಸಪ್ತಸಾಗರದಾಚೆ ಕರ್ಮಭೂಮಿಯಲ್ಲಿ ಕುಳಿತ ಅನಿವಾಸಿ ಭಾರತೀಯ ಮನಸ್ಸುಗಳು ಹಾಗೆ ಭಾವುಕರಾದಾಗ, ಅವರ ಕಣ್ಮುಂದೆ ಸುಳಿದಾಡಿದ ಸಾಲುಗಳು ಇವು…

ದೂತವಾಸವೇ ಕೆಂಪುಕೋಟೆ!
ಬಾಲ್ಯದ ಕೆಲವೆರಡು ವರ್ಷ ಶಾಲೆಯ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಗಳೆಂದರೆ ಮೊದಲಿಗೆ ನೆನಪಾಗುತ್ತಿದ್ದುದು ಊರ ಸರಪಂಚರು ಹಂಚುತ್ತಿದ್ದ ರುಚಿರುಚಿಯಾದ ಲಾಡು! ಅದಕ್ಕಾಗಿ ಶಾಲೆಯಿಂದ ಹೊರಟು ಊರ ಬೀದಿಗಳಲ್ಲಿ ಮಕ್ಕಳ ಮೆರವಣಿಗೆ. ಮುಂಚೂಣಿಯಲ್ಲಿ ರಾಷ್ಟ್ರ ನಾಯಕರ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧರ ನಾಯಕರ ಪಟಗಳನ್ನು ಹಿಡಿದು ಮುನ್ನಡೆಯುತ್ತಿದ್ದುದು ನೆನಪಿದೆ. ನಂತರದ ದಿನಗಳಲ್ಲಿ ಊರಹಿರಿಯರ ಭಾಷಣಗಳನ್ನು ಕೇಳಿ ದೇಶಕ್ಕಾಗಿ ಮಡಿಯುವುದೇ ಹೆಮ್ಮೆ ಎನ್ನುವ ಭಾವಾಂಕುರವಾದದ್ದು ಅತಿಶಯವಲ್ಲ. 

ಶಾಲಾ- ಕಾಲೇಜು ಮುಗಿದು, ನೌಕರಿ ಹಿಡಿದ ಮೇಲೆ ಒಂದೆರಡು ವರ್ಷ ಬಿಟ್ಟು ಮಿಕ್ಕೆಲ್ಲ ಸಮಯ ನಾಡಿನಿಂದ ಹೊರಗೇ ಕಳೆದದ್ದು. ಆದರೂ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವವನ್ನು ಮರೆತಿಲ್ಲ. ಎಂಟು ವರ್ಷ ಮಣಿಪುರ, ಅಷ್ಟೇ ಸಮಯ ಸಮಯ ಚೆನ್ನೈನಲ್ಲಿ ನೌಕರಿ. ಆಗೆಲ್ಲ ರಾಷ್ಟೀಯ ಹಬ್ಬಗಳನ್ನು ದೇಶೀಯರೊಡಗೂಡಿ ಖುಷಿಯಿಂದ ಆಚರಿಸಿದ್ದೇನೆ. ಆ ನಂತರ ಬದುಕು ಬಂದು ನಿಂತದ್ದು ಕುವೈತಿಗೆ.

ಕುವೈತ್‌ ಕನ್ನಡ ಕೂಟಕ್ಕೆ ಪ್ರವೇಶಿಸುವವರೆಗೆ (3-4 ವರ್ಷ) ರಾಷ್ಟ್ರಹಬ್ಬಗಳನ್ನು ಗೊತ್ತಿದ್ದೂ ಮರೆತದ್ದು ನಿಜ. ನಂತರ ಪ್ರತಿ ರಾಷ್ಟ್ರೀಯ ಹಬ್ಬವನ್ನು ನಾವು ಗೆಳೆಯರೆಲ್ಲ ಒಗ್ಗೂಡಿ ಇಲ್ಲಿನ ದೂತಾವಾಸದಲ್ಲಿ ಆಚರಿಸುವುದು ವಾಡಿಕೆ. ಭಾರತೀಯ ದೂತವಾಸದಲ್ಲಿ ಧ್ವಜಾರೋಹಣ, ರಾಷ್ಟ್ರಗೀತೆ, ಗಾಯನ ಹಾಗೂ ವಿವಿಧ ಕಾರ್ಯಕ್ರಮಗಳು. ಒಂದು ರೀತಿ ಅಲ್ಲಿಯೇ ಸಮಗ್ರ ಭಾರತವನ್ನು ಕಂಡ ಅದ್ಭುತ ಅನುಭವ. ದೇಶದ ಕೆಂಪುಕೋಟೆಯೇ ಅಲ್ಲಿ ಅವತಾರವೆತ್ತಿದಂತೆ! ಹಾಗಾಗಿ, ಹೊರದೇಶದಲ್ಲಿದ್ದೂ ರಾಷ್ಟ್ರೀಯ ಹಬ್ಬದ ಅನುಭವಕ್ಕೆ ಕೊರತೆ ಎನಿಸಿಲ್ಲ. 

ಡಾ. ಆಜಾದ್‌ ಇಸ್ಮಾಯಿಲ್‌ ಸಾಹೇಬ್‌, ಕುವೈತ್‌

ಮಣ್ಣಿನ ಕಂಪು, ಮನದಲ್ಲಿ ಹಾದು…
ನಾನು ಬೆಲ್ಜಿಯಂನಲ್ಲಿ ಎರಡು ವರ್ಷವಿದ್ದೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ವಾಸವಾಗಿದ್ದೇನೆ. ಬೆಲ್ಜಿಯಂಗೆ ಹೋಗಿದ್ದು ನನ್ನ ಜೀವನದ ಮೊದಲ ದೂರ ತೀರ ಯಾನ. ಅಲ್ಲಿದ್ದಾಗ ಅದೆಷ್ಟೋ ಬಾರಿ ಭಾರತವನ್ನು ಮಿಸ್‌ ಮಾಡಿಕೊಂಡಿದ್ದೇನೆ. ನಮ್ಮವರು ಕಂಡಾಗ, ಕಾಣದೇ ಹೋದಾಗ, ಮನೆಯಿಂದ ಫೋನ್‌ ಬಂದಾಗ, ಟಿವಿ ನೋಡುವಾಗ, ಸೋಷಿಯಲ… ನೆಟ್‌ವರ್ಕ್‌ ಜಾಲಾಡುವಾಗ… ಹೀಗೆ ದೇಶದ ಮಣ್ಣಿನ ಕಂಪು ಆಗಾಗ ಮನಸ್ಸಿನಲ್ಲಿ ಹಾದು ಹೋಗುವುದು ವಿದೇಶದಲ್ಲಿ ನೆಲೆಸಿರುವ ನನ್ನಂಥ ಭಾರತೀಯರ ಪ್ರತಿದಿನದ ಅನುಭವ.

ಶಾಲೆಯಲ್ಲಿದ್ದಾಗ ನಾವು ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಆಚರಿಸುವುದನ್ನು ಒಂದು ವರ್ಷವೂ ತಪ್ಪಿಸುತ್ತಿರಲಿಲ್ಲ. ಅದೇನೋ ಹುರುಪು, ಉತ್ಸಾಹ, ಹಬ್ಬದ ವಾತಾವರಣ. ಕಾಲೇಜಿಗೆ ಹೋಗುತ್ತಿದ್ದಂತೆ ಓದಿನ ಒತ್ತಡದಲ್ಲಿ, ಭವಿಷ್ಯದ ಚಿಂತೆಯಲ್ಲಿ ಆಗಸ್ಟ್ 15 ಬಂತೆಂದರೆ “ಅಬ್ಟಾ, ಇಂದು ರಜೆ’ ಎಂಬ ಖುಷಿ. ಈಗ ದೇಶಪ್ರೇಮ ಕಡಿಮೆಯಾಯ್ತು ಅಂತಲ್ಲ… ಆದರೆ, ಮೊದಲಿನ ಶಿಸ್ತು, ಶ್ರದ್ಧೆ ಮಾಯವಾಗುತ್ತಿದೆ. ಆದರೆ, ಯಾವಾಗ ನಾನು ಬೆಲ್ಜಿಯಂಗೆ ಹೋದೆನೋ, ಆಗ ಇದ್ದಕ್ಕಿದ್ದಂತೆ ನಮ್ಮ ಸಂಸ್ಕೃತಿ, ನಮ್ಮ ಜನ, ನಮ್ಮ ಭಾಷೆ ಎಂಬ ಅಭಿಮಾನ ಮತ್ತೆ ಜಾಗೃತವಾಯಿತು. ನಾನು ಅಲ್ಲಿಗೆ ಹೋದ ನಾಲ್ಕೇ ತಿಂಗಳುಗಳಲ್ಲಿ ಸ್ವಾತಂತ್ರ್ಯ ದಿನ ಬಂದು ಬಿಟ್ಟಿತು.

ನಮ್ಮ ದೇಶದ ಸಮಯಕ್ಕೂ ಬೆಲ್ಜಿಯಂಗೂ ಮೂರೂವರೆ ತಾಸುಗಳ ವ್ಯತ್ಯಾಸ. ನಮ್ಮ ವಿಚಾರ ಏನಿತ್ತೆಂದರೆ ಭಾರತದಲ್ಲಿ ಬೆಳಗಾಗುವುದರೊಳಗೆ ನಾವು ಹಬ್ಬ ಆಚರಿಸುವುದಕ್ಕೆ ರೆಡಿಯಾಗಿರಬೇಕು ಎನ್ನುವುದು. ಭಾರತೀಯ ಕಾಲಮಾನದ ಪ್ರಕಾರ ಧ್ವಜಾರೋಹಣ ಮಾಡಬೇಕಲ್ಲ? ಅದಕ್ಕಾಗಿ ಮೊದಲೇ ನಾವೆಲ್ಲ ಒಟ್ಟಾಗಿ ಮಾತುಕತೆ ನಡೆಸಿ, ಬೆಳಗ್ಗೆ ಬೇಗನೆ ಎದ್ದು ಅಲ್ಲಿನ ರಾಯಭಾರಿ ಕಚೇರಿಗೆ ಹೋಗಲು ನಿರ್ಧರಿಸಿದ್ದೆವು. ಅಲ್ಲಿಗೆ ಹೋದಾಗ ನಮ್ಮ ನೆಲದಲ್ಲೇ ನಿಂತಿರುವೆನೆಂಬ ಭಾವ. ಬೆಲ್ಜಿಯಂನಲ್ಲಿದ್ದ ಭಾರತೀಯರು ಸಂಸಾರ ಸಮೇತ ಅಲ್ಲಿಗೆ ಬಂದಿದ್ದರು. ಅಲ್ಲಿ ಧ್ವಜಾರೋಹಣ ನಡೆಯಿತು. ಮಕ್ಕಳ ನೃತ್ಯ, ಹಾಡು ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿತ್ತು. ನಿಜವಾಗಿಯೂ ಅಂದು ನಾನು ಬಾಲ್ಯದ ದಿನಗಳಿಗೆ ವಾಪಸ್‌ ಹೋಗಿದ್ದೆ. ಎಷ್ಟೋ ದಿನಗಳ ನಂತರ ನಮ್ಮವರನ್ನು ಭೇಟಿಯಾದ ಭಾವ. ವ್ಹಾ ಅದೆಷ್ಟು ಮಧುರ ಅನುಭೂತಿ. ಜಾತಿ, ಮತ, ಧರ್ಮ, ರಾಜ್ಯಗಳ ಭೇದವಿಲ್ಲದ ಭೇಟಿ, ಅನ್ಯೋನ್ಯತೆ. ಕೆಲವರು ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರ ಧರಿಸಿದ್ದರು. ಈಗಲೂ ಮತ್ತೆ ಮತ್ತೆ ನೆನಪಾಗುತ್ತದೆ ಆ ದಿನ. ನೆಲ ಯಾವುದಾದರೇನು, ನೆನಪಿನ ಜತೆಗೆ ದೇಶಪ್ರೇಮವೂ ತೇಲಿ ಬರುತ್ತದೆ!

ಹೇಮಂತ್‌ ಭಟ್‌, ಬೆಲ್ಜಿಯಂ

ಟಾಪ್ ನ್ಯೂಸ್

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1-jagga

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.