ಓಡುವ ಚಿತ್ರ ಹಿಡಿಯುವುದು
Team Udayavani, Jan 28, 2020, 6:02 AM IST
ನಿಶ್ಚಲ ದೃಶ್ಯವೊಂದನ್ನು ಸೆರೆಹಿಡಿದಷ್ಟು ಸಲೀಸಲ್ಲ ಚಲನಶೀಲ ಛಾಯಾಗ್ರಹಣ. ಸಾಧಾರಣ ನಡಿಗೆಯ ಚಲನೆಯನ್ನು ಸೆರೆಹಿಡಿಯಲು ತಾಂತ್ರಿಕವಾಗಿ ತಿಳುವಳಿಕೆ ಬೇಕು. ಸ್ವಲ್ಪ ಹರಸಾಹಸವೂ ಮಾಡಬೇಕು.
ಶಾಂತವಾಗಿ ನಿಂತ ನೀರಿನ ಕೊಳಕ್ಕೆ ತದ್ವಿರುದ್ದವಾಗಿ ರಭಸದಿಂದ ಮೇಲೇರಿಬರುವ ಸಾಗರದ ಅಲೆಗಳು ಉಂಟುಮಾಡುವ ಭಾವೋದ್ರೇಕದಂತೆ ಛಾಯಾಗ್ರಹಣದಲ್ಲೂ ತಟಸ್ಥಕ್ಕಿಂತ ಆಕ್ಷನ್ ಚಿತ್ರಗಳಿಗೆ ವಿಶೇಷ ಸ್ಥಾನವಿದೆ. ನಿಶ್ಚಲ ದೃಶ್ಯವೊಂದನ್ನು ಸೆರೆಹಿಡಿದಷ್ಟು ಸಲೀಸಲ್ಲ, ಈ ಚಲನಶೀಲ ಛಾಯಾಗ್ರಹಣ. ಸಾಧಾರಣ ನಡಿಗೆಯ ಚಲನೆಯನ್ನು ಸೆರೆಹಿಡಿಯಲು ಕ್ಯಾಮೆರಾದ ಶಟರ್ ಸ್ಪೀಡ್ 1/125 ಸೆಕೆಂಡ್ ಇರಬೇಕು.
ಓಟದ್ದಾದರೆ, 1/250 ಸೆಕೆಂಡ್. ಇನ್ನು ರಭಸವಾಗಿ ಬೀಳುವ ಮಳೆ ಅಥವಾ ಅತಿ ವೇಗದಿಂದ ಚಿಮ್ಮುವ ನೀರಿನ ಹನಿಗಳನ್ನು ತಟಸ್ಥವಾಗಿಸಲು ( ಚುಕ್ಕೆ- ಚುಕ್ಕೆಯಾಗಿ ಫ್ರೀಜ್ ಮಾಡಲು ) ಕನಿಷ್ಠ 1/500 ಸೆಕೆಂಡ್‌ಗೂ ಹೆಚ್ಚು ವೇಗದಲ್ಲಿ ದೃಶ್ಯದೆಡೆ ಫೋಕಸ್ ಮಾಡಿ ಕ್ಯಾಮೆರಾದ ಶಟರ್ ಅನ್ನು ತೆರೆದು ಮುಚ್ಚಬೇಕು. ಚಿತ್ರ ಸರಿಯಾಗಿ ಮೂಡಲು ಆ ಶಟರ್ ವೇಗಕ್ಕೆ ಸರಿಹೊಂದುವ ಇತರೆ ಆಯಾಮಗಳನ್ನೂ (ಅಪರ್ಚರ್,ಐ.ಎಸ್.ಓ.ಕಂಟ್ರೋಲ್ಸ್) ಹಿಡಿತದಲ್ಲಿಟ್ಟುಕೊಳ್ಳಬೇಕು.
ಇಲ್ಲದಿದ್ದರೆ, ಚಿತ್ರ ಓವರ್ ಅಥವಾ ಅಂಡರ್ ಎಕ್ಸ್‌ಪೋಸ್ ಆಗಿ ಬಿಡಬಹುದು. ಚಲನೆಯಲ್ಲಿರುವುದನ್ನು ಕೆಲವೊಮ್ಮೆ ಫೋಕಸ್ ಮಾಡುವುದು ಕಷ್ಟ. ಕೆಲವು ಆಟೋ ಫೋಕಸ್ ಕ್ಯಾಮೆರಾಗಳು ತ್ವರಿತವಾಗಿ ಕೇಂದ್ರಸಂಗಮ ಗೊಳಿಸಲಾಗದೇ ಪರದಾಡುತ್ತವೆ. ಆಗ ಆಟೋ ಬದಲು ಮ್ಯಾನ್ಯುಯಲ್‌ನಲ್ಲೇ ಸೆರೆಹಿಡಿಯುವುದು ಒಳಿತು. ಸಹಜ ಸೂರ್ಯನ ಬೆಳಕಿನಲ್ಲಿ ಇದು ಸುಲಭ ಸಾಧ್ಯವೇ?
ಒಳಾಂಗಣದಲ್ಲಿ , ಫ್ಲಡ್ ಲೈಟ್, ಇತರೆ ಪ್ರಕಾಶವಾದ ದೀಪದ ವ್ಯವಸ್ಥೆ ಅಥವಾ ಬೌನ್ಸ್ ಮಾಡಿದ ಫ್ಲಾಶ್ ಲೈಟ್ ಅನಿವಾರ್ಯ. ಆಗ ಪ್ರಾರಂಭಿಕ ಹಂತದವರು ಕ್ಯಾಮೆರಾವನ್ನು ಸ್ಥಿರಪಡಿಸಿ ಕೊಳ್ಳಲು ಟ್ರೈ ಪಾಡ್ ಉಪಯೋಗಿಸುವುದು ಸೂಕ್ತ. ನಿಧಾನಗತಿಯ ಚಲನೆಗಳನ್ನು ಮಾತ್ರ ಸೆರೆಹಿಡಿಯುವುದು ಒಳ್ಳೆಯದು. ಸಹಜ ಬೆಳಕಿನಲ್ಲಿ ಸೆರೆಹಿಡಿದ ಎರಡು ಚಿತ್ರಗಳನ್ನು ಇಲ್ಲಿ ನೋಡೋಣ: ಒಂದು ಮುಂಜಾನೆ ಬೆಂಗಳೂರಿನ ಲಾಲ್ ಬಾಗ್ ಉದ್ಯಾನದಲ್ಲಿ ಮಕ್ಕಳಿಬ್ಬರು ಹಿರಿಯರೊಂದಿಗೆ ಸುತ್ತುವಾಗ ತೆಗೆದಿರುವುದು.
ತೋಟಗಾರಿಕೆಯವರು ಅಳವಡಿಸಿದ್ದ ಸ್ಪ್ರಿಂಕ್ಲರ್‌ಗಳು ಚಿಮ್ಮಿಸುತ್ತಿದ್ದ ನೀರಿನ ಹನಿಗಳಲ್ಲಿ ಕೈ-ಮೈ ತೋಯಿಸಿಕೊಂಡು ಆ ಮಕ್ಕಳು ಕುಪ್ಪಳಿಸುತ್ತಿದ್ದಾಗ ಫೋಟೋಗ್ರಾಫರ್ ದಿಗ್ವಾಸ್ ಬೆಳ್ಳೆಮನೆ ಅವರು ದೂರದಿಂದ ಆ ದೃಶ್ಯವನ್ನು ಸೂರ್ಯನ ಎದುರು ಬೆಳಕಿನಲ್ಲಿ , ಸಮಂಜಸವಾಗಿ ಸಂಯೋಜಿಸಿ ಉತ್ತಮವಾದ ಅಂತಭಾಸದಲ್ಲಿ ( ಪಸ್ಪೆìಕ್ಟಿವ್) ಸೆರೆಹಿಡಿದಿರುವುದು. ಮುಖ್ಯವಾಗಿ ಗಮನಿಸಬೇಕಾದ್ದು ಇಲ್ಲಿ ಎರಡುಬಗೆಯ ಚಲನಾಕ್ರಮಗಳನ್ನು.
ಚಿಣ್ಣರ ಕುಣಿದಾಟವನ್ನು ಅಲುಗಾಡದಂತೆ ದಾಖಲಿಸಲು ಕನಿಷ್ಠ 1/250 ಸೆಕೆಂಡ್ ಶಟರ್ ವೇಗ ಬೇಕು. ನೀರಿನ ಹನಿ ಹನಿಯನ್ನೂ ಅಂತೆಯೇ ಚುಕ್ಕೆ ಚುಕ್ಕೆಯಾಗಿ ದಾಖಲಿಸಲು 1/500 ಸೆಕೆಂಡ್‌ಗೂ ಮಿಗಿಲಾದ ವೇಗ ಬೇಕು. ದಿಗ್ವಾಸ್ ತಮ್ಮ ಅನುಭವದ ಜಾಣ್ಮೆಯಿಂದ ಶಟರ್ ವೇಗವನ್ನು 1/250 ಮಾತ್ರ ಇಟ್ಟು, ಎದುರು ಬೆಳಕಿನಲ್ಲಿ ಮಿಂಚುತ್ತಿದ್ದ ನೀರಿನಹನಿಗಳ 3-4 ಇಂಚುಗಳ ಚಲನೆಯನ್ನೂ ಗೀರು ಗೀರಾಗಿ ದಾಖಲಿಸಿ ಇಡೀ ದೃಶ್ಯಕ್ಕೆ ಜೀವಂತಿಕೆ ತುಂಬಿದ್ದಾರೆ.
ಮತ್ತೂಂದು, ಕೋಲಾಟದ ಚಿತ್ರ. ಹಲವು ವರ್ಷಗಳ ಹಿಂದೆ ಜಯನಗರದ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನ ಕೋಲಾಟದ ಸಂದರ್ಭ. ಸಹಜ ಬೆಳಕು ಕಡಿಮೆಯಾಗುತ್ತಿದ್ದಂತೆ ಬೆಳಕು ನೇರವಾಗಿ ಕಲಾವಿದರ ಮೇಲೆ ಬೀಳದಂತೆ ಪ್ರತಿಫಲನ ( ರಿಫ್ಲೆಕ್ಟರ್) ಅಳವಡಿಸಿಕೊಂಡ ದೊಡ್ಡ ಫ್ಲಾಶ್ ಲೈಟನ್ನು ಬೌನ್ಸ್ ಮಾಡಿ, ಆಕ್ಷನ್ ಭರಿತ ಭಂಗಿಯನ್ನು 9 ಅಡಿ ದೂರದಿಂದ ಸೆರೆಹಿಡಿದಿದ್ದೆ. ಶಟರ್ ವೇಗ 1/200 ಸೆಕೆಂಡ್ ಇದ್ದಿದ್ದರಿಂದ, ಟ್ರೈಪಾಡ್ ಬಳಸಿಲ್ಲ. ಹೀಗಾಗಿ, ಕೋಲಾಟದ ಕಲಾವಿದೆಯ ಹಾವ ಭಾವವನ್ನು ಆಕೆಗೆ ಅರಿವಿಲ್ಲದೆಯೇ ಸ್ಪುಟವಾಗಿ ಸೆರೆಹಿಡಿಯಲು ಸಾಧ್ಯವಾಗಿತ್ತು.
ಚಿಮ್ಮಿದ ನೀರಲ್ಲಿ , ಹಿಗ್ಗಿದ ಖುಷಿ….: ಕ್ಯಾಮೆರಾ ಲೆನ್ಸ್‌ನ ಫೋಕಲ್ ಲೆಂಗ್ – 285 ಎಂ.ಎಂ. , ಅಪಾರ್ಚರ್ ಊ6.3, ಶಟರ್ ವೇಗ 1/250 ಸೆಕೆಂಡ್, ಐಎಸ್‌ಓ400, ಫ್ಲಾಶ್ ಬಳಸಿಲ್ಲ
ಅವನ್ಯಾರೇ… ಆ ಚಲುವ? ..: ಕ್ಯಾಮೆರಾ ಲೆನ್ಸ್‌ನ ಫೋಕಲ್ ಲೆಂಗ್ – 70 ಎಂ.ಎಂ., ಅಪಾರ್ಚರ್ ಊ 8, ಶಟರ್ ವೇಗ 1/200 ಸೆಕೆಂಡ್, ಐ.ಎಸ್.ಓ. 400, ಫ್ಲಾಶ್ ಬೌನ್ಸ್ ಮಾಡಿದೆ
* ಕೆ.ಎಸ್. ರಾಜಾರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.