ಹಳ್ಳಿ ಹುಡ್ಗೀರ ಸಿಟಿ ಎಕ್ಸ್‌ಪ್ರೆಸ್ ಊರು ಟು ಬೆಂಗಳೂರು
Team Udayavani, Jan 31, 2017, 3:45 AM IST
ಸಿಟಿಯಲ್ಲಿ ಹುಡ್ಗೀರು ಹೇಗಿರುತ್ತಾರೆ? ಕಾಲೇಜಿಗೆ ಹೋಗುತ್ತಿರುವ, ಕೆಲಸ ಮಾಡುತ್ತಿರುವ, ಬಿಪಿಓಗಳಲ್ಲಿ ರಾತ್ರಿಪಾಳಿಯಲ್ಲಿ ಕೆಲ್ಸ ಮಾಡೋ ಹುಡ್ಗಿಯರಿಗೆ ಭಯ ಆಗಲ್ವಾ? ಅವರಿಗೆ ಯಾರೂ ತೊಂದ್ರೆ ಕೊಡಲ್ವಾ?
ಇಂಥದ್ದೊಂದು ಕುತೂಹಲ ಹಳ್ಳಿಯಲ್ಲಿರೋರಿಗೆ ಇರುತ್ತದೆ. ಆ ಕುತೂಹಲ ಸುಲಭಕ್ಕೆ ಮುಗಿಯುವಂತದ್ದಲ್ಲ.
ಹಾಗೆ ನೋಡಿದರೆ ಅಪರಿಚಿತ ಊರುಗಳೆಲ್ಲಾ ಯಾವತ್ತೂ ನಿಗೂಢವಾಗಿಯೇ ಇರುತ್ತವೆ. ಬೆಂಗಳೂರಿಗೆ ಬಂದಾಗ ನಂಗೂ ಈ ಊರಿನ ಬಗ್ಗೆ ಕುತೂಹಲವಿತ್ತು. ಬೆರಗಿತ್ತು. ಭಯವೂ ಇತ್ತು. ಬಹುಶಃ ಆ ಭಯ ಕೊನೆಯವರೆಗೂ ಉಳಿಯುತ್ತದೇನೋ. ಈ ಸಿಟಿಗೊಂದು ತಣ್ಣನೆ ಕ್ರೌರ್ಯ ಇದೆ ಅಂತ ನೆನೆದಾಗೆಲ್ಲಾ ಒಂಥರಾ ಅನ್ನಿಸುತ್ತದೆ. ಯಾವ ಮಹಾನಗರವಾದರೂ ಅಷ್ಟೇ. ಒಳಗೊಂದು ತಣ್ಣನೆ ಕ್ರೌರ್ಯವನ್ನು ಅಡಗಿಸಿಟ್ಟುಕೊಂಡಿರುತ್ತದೆ. ಈಗೀಗಂತೂ ದಿನಕ್ಕೊಂದು ಸುದ್ದಿ ಬರುತ್ತಿರುತ್ತದೆ. ಅಲ್ಲೆಲ್ಲೋ ಯಾರೋ ಒಬ್ಬ ಪಿಜಿಗೆ ನುಗ್ಗಿ ಬೇರೆ ರಾಜ್ಯದ ಹುಡ್ಗಿಯೊಬ್ಬಳನ್ನು ರೇಪ್ ಮಾಡಿದ್ದಾನೆ. ದಾರಿಯಲ್ಲಿ ಹೋಗುತ್ತಿದ್ದ ಹುಡ್ಗಿಯನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ. ಇಂತಿಂಥಾ ರೆಸಿಡೆನ್ಷಿಯಲ್ ಏರಿಯಾದಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದ ಹುಡ್ಗಿಯ ಕತ್ತಲ್ಲಿದ್ದ ಚೈನನ್ನು ಎಳೆದುಕೊಂಡು ಹೋಗಿದ್ದಾರೆ. ಇಂಥದ್ದೇ ಹತ್ತಾರು ಸುದ್ದಿಗಳು ಕಣ್ಣಿಗೆ ಬೀಳುತ್ತವೆ. ಕಿವಿಗೆ ಬೀಳುತ್ತವೆ. ಇನ್ನು ಕಿವಿಗೆ, ಕಣ್ಣಿಗೆ ಬೀಳದೆ ಹೋದ ಕತೆಗಳೆಷ್ಟು ಅನ್ನೋದರ ಲೆಕ್ಕ ಕೊಡೋಕೂ ಯಾರಿಂದಲೂ ಸಾಧ್ಯವಿಲ್ಲ. ಇಂಥಾ ಸ್ಥಿತಿಯಲ್ಲಿ ಹುಡ್ಗಿಯರಿಗೆ ನಿಜಕ್ಕೂ ಈ ಬೆಂಗಳೂರಂಥಾ ಸಿಟಿಯಲ್ಲಿರೋಕೆ ಭಯ ಆಗಲ್ವಾ?
ಅವಳೊಬ್ಬಳು ವೀರಾಗ್ರೇಸರಿ
ಮಲೆನಾಡಿನ ಹುಡ್ಗಿ. ಮಾಸ್ಟರ್ ಡಿಗ್ರಿ ಹೋಲ್ಡರ್. ಮಹಾನಗರಕ್ಕೆ ಬಂದು ಒಂದು ವರ್ಷ ಆಗಿರಬಹುದು. ನಾನು ಕೆಲಸ ಮಾಡಲೇಬೇಕು ಅಂತ ಮನೆಯಲ್ಲಿ ಹಠ ಮಾಡಿ ಬೆಂಗಳೂರಿಗೆ ಬಂದಿದ್ದಳು. ಕಷ್ಟ ಪಟ್ಟು ಪಿಜಿಯಲ್ಲಿದ್ದುಕೊಂಡು ಬೆಂಗಳೂರು ಜೀವನವನ್ನು ಸಹಿಸಿಕೊಂಡು ಏನಾದರೂ ಸಾಧಿಸಬೇಕು ಅಂತ ಒದ್ದಾಡುತ್ತಿದ್ದಳು. ಅಂಥಾ ಹುಡ್ಗಿ ಒಂದು ದಿನ ಕೆಲ್ಸ ಬಿಟ್ಟು ಮನೆಗೆ ಹೋಗುವಾಗ ತಡವಾಗಿತ್ತು.
ಅವಳ ಪಿಜಿ ಇದ್ದಿದ್ದು ಕೋರಮಂಗಲದಲ್ಲಿ. ಜನ ಓಡಾಡುವಂತಹ ಸ್ಥಳ ಅದು. ಅವಳು ನಡೆಯುತ್ತಿದ್ದ ರಸ್ತೆಯಲ್ಲೂ ಅಲ್ಲೊಂದು ಇಲ್ಲೊಂದು ಜನರಿದ್ದರು. ಆ ಧೈರ್ಯದಿಂದ ಬೇಗ ಬೇಗ ನಡೆದು ಪಿಜಿ ಸೇರಬೇಕೆಂದು ಸಾಗುತ್ತಿದ್ದಾಗ ಎದುರಲ್ಲೊಂದು ಕಾರಿದ್ದದ್ದನ್ನು ಕಂಡಳು. ಅವಳಿಗೇನೂ ಭಯ ಇರಲಿಲ್ಲ. ಆದರೂ ಸಣ್ಣದೊಂದು ಆತಂಕವಿತ್ತು.
ಅವಳು ನಿರ್ಲಿಪ್ತಳಾಗಿರಲು ಪ್ರಯತ್ನಪಡುತ್ತಾ ಆ ಕಾರಿನ ಸಮೀಪ ಬಂದಳು. ಅವಳು ಹತ್ತಿರಾಗಿದ್ದೇ ತಡ ಕಾರಿನ ಬಾಗಿಲು ಧಡಕ್ಕನೆ ತೆರೆದುಕೊಂಡಿತ್ತು. ಅವಳು ಆತಂಕದಿಂದ ಕಾರಿನೊಳಗೆ ನೋಡಿದರೆ ಅಲ್ಲಿ ಮಧ್ಯ ವಯಸ್ಕ ಮನುಷ್ಯನೊಬ್ಬ “ನೇಕೆಡ್’ ಆಗಿ ಕೂತಿದ್ದ. ಇವಳು ತಕ್ಷಣ ಕಿರುಚಿಕೊಂಡಳು. ಅವನು ತಕ್ಷಣ ಕಾರಿನ ಬಾಗಿಲು ಎಳೆದುಕೊಂಡು ಭರ್ರನೆ ಹೊರಟು ಹೋದ. ಇವಳು ಶಾಕ್‌ನಿಂದ ಆಚೆ ಬರಲು ಐದು ನಿಮಿಷ ಬೇಕಾಯಿತು.
ಈ ಕತೆಯನ್ನು ಅವಳು ಹೇಳುವಾಗ ನಗುತ್ತಿದ್ದಳು. ಭಯ ಆಗಿಲ್ವಾ ಎಂದೆ. ಭಯಕ್ಕಿಂತ ಜಾಸ್ತಿ ಆಘಾತವಾಗಿತ್ತು, ನನ್ನ ಜೀವನದ ಮೊತ್ತ ಮೊದಲ ಶಾಕ್ ಎಂದಳು. ಆಮೇಲೆ ತಡ ಆಗಿಲ್ವಾ ಅಂತ ಕೇಳಿದೆ. ಈಗಲೂ ಒಂದೊಂದ್ಸಲ ತಡವಾಗಿ ಹೋಗ್ತಿàನಿ, ಅವನನ್ನು ಹುಡುಕ್ತಾ ಇದ್ದೀನಿ, ಇನ್ನೊಂದ್ಸಲ ಸಿಕ್ಲಿ ಗ್ರಹಟಾರ ಬಿಡಿಸ್ತೀನಿ ಅಂತ ಮೊನ್ನೆ ಮೊನ್ನೆ ಸಿಕ್ಕಿದಾಗ ಹೇಳಿದ್ದಳು.
ಮತ್ತೂಬ್ಬಳು ಹೆಲ್ಮೆಟ್ ಹುಡ್ಗಿ
ದಾರಿಯಲ್ಲಿ ಹೋಗುವಾಗ ಶಿಳ್ಳೆ ಹೊಡೆಯೋರಿಗೆ, ಗುರಾಯಿಸೋರಿಗೆ, ಕಮೆಂಟ್ ಪಾಸ್ ಮಾಡೋರಿಗೆ, ವಿಚಿತ್ರವಾಗಿ ಕಾಡುವವರಿಗೆ ಕಮ್ಮಿ ಇಲ್ಲ ಇಲ್ಲಿ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಹುಡ್ಗಿಯರು ಅದನ್ನು ಕೆಲವೊಮ್ಮೆ ಸಹಿಸಿಕೊಳ್ಳುತ್ತಾ ಮತ್ತೂಮ್ಮೆ ಅಲ್ಲಿಂದ ಓಡಿ ಹೋಗಿ ಪಾರಾಗುತ್ತಾ ತುಂಬಾ ಸಿಟ್ಟು ಬಂದರೆ ಬೈಯುತ್ತಾ ಬದುಕುತ್ತಿರುತ್ತಾರೆ.
ಅವಳೊಬ್ಬಳಿದ್ದಾಳೆ. ಭಯಂಕರ ಪಾಪದ ಹುಡ್ಗಿ. ಅವಳಿಗೆ ಮಹಾನಗರದಲ್ಲಿ ತಿರುಗಾಡೋದು ಅಂದ್ರೆ ಭಯ ಇತ್ತು. ಅವಳು ಪಿಜಿಯಿಂದ ಒಂದೊಂದ್ಸಲ ಹೊರಗೆ ಕಾಲಿಡೋಕೆ ಹೆದರುತ್ತಿದ್ದಳು. ಇಂಥಾ ಹುಡ್ಗಿ ಅದೊಂದು ದಿನ ಬಸ್‌ಸ್ಟಾಂಡಲ್ಲಿ ಗೆಳತಿಯೊಬ್ಬಳನ್ನು ಪಿಜಿಗೆ ಕರೆದುಕೊಂಡು ಹೋಗಬೇಕೆಂದು ನಿಂತಿದ್ದಳು. ಸ್ಕೂಟಿಯನ್ನು ಅಲ್ಲೆಲ್ಲೋ ಪಾರ್ಕ್ ಮಾಡಿ ಬಂದಿದ್ದ ಅವಳ ಕೈಯಲ್ಲಿ ಹೆಲ್ಮೆಟ್ ಇತ್ತು.
ಇಂಥಾ ಸಂದರ್ಭದಲ್ಲಿ ಅವಳು ಗೆಳತಿಯನ್ನು ಹುಡುಕಿಕೊಂಡು ಅಲೆದಾಡುತ್ತಿದ್ದಾಗ ಯಾರೋ ಒಬ್ಬ ಅವಳ ಹಿಂಭಾಗವನ್ನು ಟಚ್ ಮಾಡಿದ. ಅದೆಲ್ಲಿತ್ತೋ ಕೋಪ. ಅವಳು ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಟಪಾರನೆ ಅವಳಿಗೆ ಬಾರಿಸಿದಳು. ಅವನು ಗಾಬರಿಯಿಂದ ಅವಳನ್ನೇ ನೋಡುತ್ತಿರಲು ಬಾಯಿಗೆ ಬಂದಂತೆ ಬೈದಳು. ಒಂದಿಬ್ಬರು ಹಿರಿಯರು ಏನಾಯ್ತಮ್ಮಾ ಅಂತ ಕೇಳುವಾಗ ಇನ್ನೂ ಉತ್ಸಾಹದಿಂದ ಮತ್ತೆ ಹೊಡೆಯಲು ಹೋದ ಅವಳನ್ನು ತಕ್ಷಣ ಅಲ್ಲಿಗೆ ಬಂದ ಗೆಳತಿ ಹಿಡಿದುಕೊಂಡಿದ್ದಳು. ಅವಳ ಗೆಳತಿಗೆ ಬದುಕಿನ ಅತ್ಯಂತ ದೊಡ್ಡ ಶಾಕ್ ಅದು. ಇವಳು ಯಾರನ್ನೋ ಹೊಡೆಯುತ್ತಾಳೆ ಅಂದ್ರೆ ಅದನ್ನು ನಂಬಲು ಅವಳು ತಯಾರಿರಲಿಲ್ಲ.
ಹೀಗೆ ಹುಡುಕುತ್ತಾ ಹೋದಾಗ ಹತ್ತಾರು ಕತೆಗಳು ಕಣ್ಣೆದುರು ಹೀಗೆ ಹಾದು ಹೋದವು.
ಒಂದೆರಡು ದುರಂತ ಕತೆಗಳು ಸಿಕ್ಕವಾದರೂ ಜಾಸ್ತಿ ಕಣ್ಣಿಗೆ ಬಿದ್ದದ್ದು ಗೆಲುವಿನ ಕತೆಗಳೇ. ಈ ನಗರದಲ್ಲಿ ಹುಡ್ಗಿಯರನ್ನು ಕಾಡಿಸುವವರ ಸಂಖ್ಯೆ ಜಾಸ್ತಿಯೇ ಇದೆ. ಎಲ್ಲಿ ನೋಡಿದರಲ್ಲಿ ಏನಾದರೂ ಕಾಟ ಕೊಡುತ್ತಿರುತ್ತಾರೆ. ಮುಟ್ಟುವುದು, ಮುಟ್ಟದೆಯೇ ಕಣ್ಣಲ್ಲೇ ಟಚ್ ಮಾಡೋದು, ನೋಡಬಾರದ ಜಾಗವನ್ನು ನೋಡ್ತಾ ಇರೋದು- ಇಂಥದ್ದೆಲ್ಲಾ ಪ್ರತಿ ಕ್ಷಣ ನಡೆಯುತ್ತಾ ಇರುತ್ತದೆ. ಅಲ್ಲೆಲ್ಲೋ ಹುಡ್ಗಿ ಒಂದು ಗಳಿಗೆ ಆತಂಕಗೊಂಡಿರುತ್ತಾಳೆ. ಮತ್ತೂಬ್ಬಳು ಹುಡ್ಗರು ಜಾಸ್ತಿ ಇದ್ದಾಗ ಒಂದು ಕ್ಷಣ ಭಯಗೊಂಡಿರುತ್ತಾಳೆ. ಸಂಜೆ ಹೊತ್ತು ಪಿಜಿಯತ್ತ ನಡೆದು ಹೋಗುತ್ತಿರುವಾಗ ಸ್ವಲ್ಪ ಕತ್ತಲೆ ಇದ್ದರೆ ಆ ಕತ್ತಲೆ ಹಾದು ಹೋಗುವ ತನಕ ಅವಳ ಎದೆ ದಡಬಡ ದಡಬಡ ಅಂತ ಹೊಡೆದು ಕೊಳ್ಳುತ್ತಿರುತ್ತದೆ. ಪಿಜಿಯಲ್ಲಿ ಮಲಗಿರುವ ಹೊತ್ತಿಗೆ ಹೊರಗಡೆ ಜೋರಾದ ಸದ್ದು ಕೇಳಿಸಿದರೆ, ಯಾರೋ ಜಗಳಾಡಿದಂತೆ ಅನ್ನಿಸಿದರೆ ಅವಳ ಕಣ್ಣಲ್ಲಿ ಆತಂಕದ ಛಾಯೆ ಕಾಣಿಸಿಕೊಳ್ಳುತ್ತದೆ.
ಇದು ಪ್ರತಿದಿನದ ಸತ್ಯ ಮತ್ತು ಯಾವತ್ತೂ ಮುಗಿಯದ ಕತೆ. ಇಷ್ಟೆಲ್ಲಾ ಇದ್ದು ಮರುದಿನ ಬೆಳಿಗ್ಗೆ ಮತ್ತೆ ಎದ್ದು ಕೆಲಸಕ್ಕೋ ಕಾಲೇಜಿಗೋ ಹೋಗಲು ಹೇಗೆ ಸಾಧ್ಯವಾಗುತ್ತದೆ? ನಿನ್ನೆ ರಾತ್ರಿ ಹೊತ್ತು ಯಾರೋ ಒಬ್ಬ ಫಾಲೋ ಮಾಡಿದ್ದಾನೆ ಎಂದು ಗೊತ್ತಾದ ನಂತರವೂ ಇವತ್ತು ಸಂಜೆ ಮತ್ತೆ ಅದೇ ಹೊತ್ತಿಗೆ ಪಿಜಿಗೆ ಬರೋ ಧೈರ್ಯ ಹೇಗೆ ಬರುತ್ತದೆ?
ಸುಮ್ಮನೆ ಅಲ್ಲ ಹೆಣ್ಮಕ್ಕಳು
ಹುಡ್ಗಿàರಿಗೊಂದು ಭಯಂಕರ ಶಕ್ತಿ ಇದೆ. ಅವರು ನಾಚಿಕೊಳ್ಳಬಲ್ಲರು. ಮರುಕ್ಷಣ ಕೋಪಿಸಿಕೊಳ್ಳಲೂ ಬಲ್ಲರು. ಒಮ್ಮೆ ಆತಂಕದಿಂದ ಕಿರುಚಿಕೊಳ್ಳಬಲ್ಲರು. ಮತ್ತೂಂದು ಗಳಿಗೆಯಲ್ಲಿ ವೀರವನಿತೆ ಓಬವ್ವನಂತೆ ಜಗಳಕ್ಕೆ ನಿಂತುಕೊಳ್ಳಬಲ್ಲರು. ಈಗ ಅತ್ತರೆ ನಂತರ ಬೈಯಬಲ್ಲರು. ಈಕ್ಷಣ ಹೆದರಿಕೊಂಡರೆ ಮತ್ತೂಂದು ಕ್ಷಣ ಹೊಡೆಯಲೂ ಬಲ್ಲರು.
ಹಾಗಾಗಿಯೇ ಬೆಂಗಳೂರಂಥಾ ಮಹಾನಗರದಲ್ಲಿ ಹುಡ್ಗಿಯರು ಹ್ಯಾಪ್ಪಿಯಾಗಿಯೇ ಬದುಕುತ್ತಿರುವುದು.
ಅವರು ಹೆದರು ಪುಕ್ಕಲರಲ್ಲ. ಅವರು ಓಡಿ ಹೋಗುವವರಲ್ಲ. ಅವರಿಗೆ ಭಯವಾಗುತ್ತದೆ ನಿಜ. ಅದರರ್ಥ ಅವರಿಗೆ ಧೈರ್ಯ ಇರಲ್ಲ ಅಂತಲ್ಲ. ಕೆಲವು ಹುಡ್ಗಿàರು ತನಗೊಬ್ಬ ವೀರಾಗ್ರೇಸರನನ್ನು ದಯಪಾಲಿಸೋ ಭಗವಂತಾ ಅಂತ ಕೇಳಿಕೊಳ್ಳುತ್ತಿರುತ್ತಾರೆ. ಅವರಿಗೆ ಭಯಪಡುವ ಹುಡ್ಗನನ್ನು ಒಪ್ಪಿಕೊಳ್ಳಲು ಯಾವತ್ತೂ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವು ಹುಡ್ಗಿàರಿರ್ತಾರೆ. ಯಾವುದಕ್ಕೂ ಹೆದರಲ್ಲ, ನೀನು ಅಂದ್ರೆ ನಿಮ್ಮಪ್ಪ ಅನ್ನೋ ಸ್ವಭಾವದವರವರು. ಅಂಥದೊಂದು ಗುಣ ಎಲ್ಲಾ ಹುಡ್ಗಿಯರಲ್ಲೂ ಇರುತ್ತದೆ. ಕೆಲವರಲ್ಲಿ ಅಡಗಿಕೊಂಡಿರಬಹುದು. ಅಷ್ಟೇ. ಅವರ ಧೈರ್ಯವನ್ನು ಪ್ರೋತ್ಸಾಹಿಸಬೇಕು. ಅಷ್ಟಿದ್ದರೆ ಸಾಕು ಅವರು ಯಾವತ್ತಿಗೂ ವೀರಾಗ್ರೇಸರಿಯರೇ.
ಎಂಥಾ ಕತೆಗಳೂ ಹೆದರಿಸಲಾರವು
ಮಲೆನಾಡಿನಿಂದ ಬಂದು ಬೆಂಗಳೂರಿನಂಥಾ ನಗರದಲ್ಲಿ ಬದುಕು ಕಟ್ಟಿಕೊಂಡ ಹುಡ್ಗಿಯನ್ನೊಮ್ಮೆ ಕೇಳಿದ್ದೆ- ರೇಪ್ ಸುದ್ದಿಗಳನ್ನೆಲ್ಲಾ ಕೇಳಿದಾಗ ಭಯ ಆಗಲ್ವಾ ಅಂತ. ಅದಕ್ಕವಳು ಉತ್ತರಿಸಿದ್ದಳು- ನಿಂಗಾಗಲ್ವಾ?
ಮನುಷ್ಯರು ಅಂದ ಮೇಲೆ ಭಯ ಆಗಲೇಬೇಕು. ಖುಷಿ, ಸಂತೋಷ ಎಲ್ಲವೂ ಆಗಬೇಕು. ಹುಡ್ಗಿಯರೇನೂ ದೇವರಲ್ಲವಲ್ಲ, ಅವರಿಗೂ ಭಯ ಆಗತ್ತೆ. ಆದರೆ ಭಯ ಪಟ್ಟುಕೊಂಡರೆ ಬದುಕ್ಲಿಕ್ಕಾಗಲ್ಲ ಅಂತ ಅವಳಂದಿದ್ದಳು. ಪಬ್ಬು, ಕ್ಲಬ್ಬು ಎಂದು ಸುತ್ತಾಡಿಕೊಂಡಿರುವ ಹುಡ್ಗಿಯರಿಗೂ ಭಯ ಆಗುತ್ತದೆ, ಪಿಜಿಯಲ್ಲೇ ಓದಿಕೊಂಡಿರುವ ಹುಡ್ಗಿಯರಿಗೂ ಭಯ ಆಗುತ್ತದೆ. ಆದರೆ ಮನೆಯಿಂದ ಸಾಕು ಅಲ್ಲಿದ್ದದ್ದು, ಬಾ ಮನೆಗೆ ಅಂತ ಫೋನ್ ಬಂದರೆ ಮಾತ್ರ ಅವರ ಪಿತ್ತ ಕೆರಳುತ್ತದೆ. ಏನಂದುಕೊಂಡಿದ್ದೀಯಾ ಅಂತ ಅಮ್ಮನಿಗೆ ಗದರಿದರೂ ಅಚ್ಚರಿಯಿಲ್ಲ.
ಹೆದರಿ ಊರಿಗೆ ಹೋಗುವ ವಿಚಾರ ಹುಡ್ಗಿಯ ಮನಸ್ಸಲ್ಲಿರುವುದಿಲ್ಲ. ಮದ್ವೆಯಾಗಿ ಹೋಗಬಹುದಷ್ಟೇ. ಹೆದರಿ ಹೋಗುವ ಸಂಗತಿ ಇಲ್ವೇ ಇಲ್ಲ. ಎಷ್ಟೇ ಹಾಳು ಬಿದ್ದು ಹೋದರೂ ಮಹಾನಗರವೊಂದು ಆಕರ್ಷಣೆಯಾಗಿಯೇ ಉಳಿಯುತ್ತದೆ. ಹುಡ್ಗಿಯರು ಕೈಯಲ್ಲೊಂದು ಸ್ಮಾರ್ಟ್‌ಫೋನನ್ನು ಖಡ್ಗದಂತೆ ಹಿಡಿದುಕೊಂಡು ವೀರಾಗ್ರೇಸರಿಯಾಗಿಯೇ ಬದುಕುತ್ತಿರುತ್ತಾರೆ.
– ಯಾಮಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.