ಸ್ಪಷ್ಟ ಉಚ್ಚಾರ, ಲೈಫು ಉದ್ಧಾರ
Team Udayavani, Jul 24, 2018, 6:00 AM IST
ಇತ್ತೀಚಿನ ದಿನಗಳಲ್ಲಿ ತೊದಲಿನ ಸಮಸ್ಯೆ ಅಥವಾ ಅಸ್ಪಷ್ಟ ಉಚ್ಚಾರಣೆಯ ಸಮಸ್ಯೆ ಸಾವಿರಾರು ಮಂದಿ ಎದುರಿಸುತ್ತಿದ್ದುತ್ತಾರೆ. ಹೀಗಾಗಿ ಸ್ಪೀಚ್ ಥೆರಪಿಸ್ಟ್‌ಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಅಂದಹಾಗೆ, ಧ್ವನಿ ಅಸ್ವಸ್ಥತೆಯನ್ನು ನಿವಾರಿಸಿ, ಧ್ವನಿಪೆಟ್ಟಿಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರೂ, ವಾಯ್ಸ ಮಾಡ್ಯುಲೇಷನ್ ಬಗ್ಗೆಯೂ ತಿಳಿಹೇಳುವವರೂ ಇವರೇ…
ಕೆಲವು ಮಕ್ಕಳು, ಮೂರು ವರ್ಷ ತುಂಬಿದ ನಂತರವೂ ಸ್ಪಷ್ಟವಾಗಿ ಮಾತಾಡುವುದಿಲ್ಲ. (ಕೆಲವು ಮಕ್ಕಳು ಮಾತೇ ಆಡುವುದಿಲ್ಲ). ಅವು ಏನನ್ನೋ ಹೇಳುತ್ತಿರುತ್ತವೆ. ಅದೇನು ಎಂದು ಯಾರಿಗೂ ಅರ್ಥವಾಗುವುದಿಲ್ಲ. ಮಗುವಿಗೆ ತೊದಲು ಸಮಸ್ಯೆಯಿದೆ ಎಂಬ ಫೀಲ್ ಹೆತ್ತವರಿಗೆ ಗೊತ್ತಾಗುವುದೇ ಆಗ. ಇದೂ ಗುಣಪಡಿಸಬಹುದಾದ ಒಂದು ಆರೋಗ್ಯ ಸಂಬಂಧಿ ಸಮಸ್ಯೆ. ಹಾಗಾಗಿ, ಗಾಬರಿಯಾಗುವ ಅಗತ್ಯವಿಲ್ಲ. ತೊದಲಿದ, ಉಗ್ಗುವ ಅಥವಾ ಮಾತಾಡಲು ಬಾರದವರಿಗೆ ಚಿಕಿತ್ಸೆ ನೀಡುವವರೇ ಸ್ಪೀಚ್ ಥೆರಪಿಸ್ಟ್‌ಗಳು.
ಇತ್ತೀಚಿನ ದಿನಗಳಲ್ಲಿ ತೊದಲಿನ ಸಮಸ್ಯೆ ಅಥವಾ ಅಸ್ಪಷ್ಟ ಉಚ್ಚಾರಣೆಯ ಸಮಸ್ಯೆ ಸಾವಿರಾರು ಮಂದಿ ಎದುರಿಸುತ್ತಿದ್ದುತ್ತಾರೆ. ಹೀಗಾಗಿ ಸ್ಪೀಚ್ ಥೆರಪಿಸ್ಟ್‌ಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಅಂದಹಾಗೆ, ಧ್ವನಿ ಅಸ್ವಸ್ಥತೆಯನ್ನು ನಿವಾರಿಸಿ, ಧ್ವನಿಪೆಟ್ಟಿಗೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವವರೂ, ವಾಯ್ಸ ಮಾಡ್ಯುಲೇಷನ್ ಬಗ್ಗೆಯೂ ತಿಳಿಹೇಳುವವರೂ ಇವರೇ. ದೊಡ್ಡ ಮತ್ತು ಚಿಕ್ಕ ವಯಸ್ಸಿನವರಲ್ಲಿ ಉಂಟಾಗುವ ತೊದಲು ನುಡಿ ಸಮಸ್ಯೆಯ ನಿವಾರಣೆಯಲ್ಲಿ ಇವರು ಸಿದ್ಧಹಸ್ತರು.
ಆರ್ಟಿಕ್ಯುಲೇಷನ್, ಫೂಯೆನ್ಸಿ, ರೆಸೊನೆನ್ಸ್, ಓರಲ್ ಫೀಡಿಂಗ್ ಸಮಸ್ಯೆಗಳನ್ನು ನಿವಾರಿಸಲು ಇವರು ಸಹಾಯ ಮಾಡುತ್ತಾರೆ. ಅಲ್ಲದೇ, ಮಕ್ಕಳು ಬರೆಯುವ, ಮಾತಾಡುವ, ಓದುವ, ಭಾಷೆಯನ್ನು ಅರಿತುಕೊಳ್ಳದೇ ಪದೇಪದೆ ತಪ್ಪು ಮಾಡುವ ಅನೇಕ ತೊಂದರೆಗಳನ್ನು ಗಮನಿಸಿ ಪರಿಹಾರವನ್ನೂ ಸೂಚಿಸುತ್ತಾರೆ.
ಸ್ಪೀಚ್ ಥೆರಪಿಸ್ಟ್ ಆಗೋದು ಹೇಗೆ?
ಸ್ಪೀಚ್ ಥೆರಪಿಸ್ಟ್‌ಗಳಾಗಲು ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಪಿ.ಸಿ.ಎಂ.ಬಿ ಅಭ್ಯಾಸ ಮಾಡಬೇಕು. ನಂತರ ಆಲ್ ಇಂಡಿಯಾ ಟೆಸ್ಟ್ ಅಥವಾ ಮೆರಿಟ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪದವಿ (ಬಿಎ ಎಸ್‌ಎಲ್‌ಪಿ) ಸ್ನಾತಕೋತ್ತರ ಪದವಿ (ಎಂಎ ಎಸ್‌ಎಲ್‌ಪಿ/ ಎಂಎಸ್ಸಿ ಆಡಿಯೋಲಜಿ)ಯಲ್ಲಿ ಸ್ಪೀಚ್ ಥೆರಪಿ ಅಧ್ಯಯನ ನಡೆಸಬೇಕು, ಆನಂತರ ಸ್ಪೀಚ್ ಥೆರಪಿಸ್ಟ್ ಆಗಬಹುದು.
ಕೌಶಲ್ಯಗಳೂ ತಿಳಿದಿರಲಿ…
– ಧ್ವನಿ ಸಮಸ್ಯೆ, ಕ್ಲಿಷ್ಟ ಪದೋಚ್ಚಾರಣೆ ಸಮಸ್ಯೆ, ನಾಲಗೆಗೆ ಕಸರತ್ತು ನೀಡುವ ವ್ಯಾಯಾಮಗಳ ಬಗ್ಗೆ ಅರಿವು
– ಧ್ವನಿಪೆಟ್ಟಿಗೆ ತೊಂದರೆಗೆ ಚಿಕಿತ್ಸೆ ನೀಡುವ ಪ್ರಾವೀಣ್ಯತೆ
– ಥೈರಾಯ್ಡ, ಗಂಟಲು ಬೇನೆ ಸಂಬಂಧಿತ ರೋಗಗಳ ಬಗ್ಗೆ ತಿಳಿವಳಿಕೆ
– ಭಾಷೆಗಳ ಬಗ್ಗೆ ಜ್ಞಾನ, ರೆಕಾರ್ಡ್ ನಿರ್ವಹಣೆ
– ಉತ್ತಮ ಸಂವಹನಾ ಕೌಶಲ್ಯ
– ಸಮೂಹದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ, ಸಹನೆ ಅತ್ಯಗತ್ಯ
ಅವಕಾಶಗಳು ಎಲ್ಲೆಲ್ಲಿ?
ಆಡಿಯೋಲಜಿ ವಿಭಾಗ, ಸ್ಪೀಚ್ ಕ್ಲಿನಿಕ್, ರಿಹೆಬಿಲಿಟೇಷನ್ ಸೆಂಟರ್‌ಗಳು, ಸ್ಪೀಚಿಸ್ಟ್ ಶಾಲೆಗಳು, ವಿಶೇಷ ಚೇತನರ ಶಾಲೆಗಳು, ಕ್ಯಾನ್ಸರ್ ರಿಹೆಬಿಲಿಟೇಷನ್ ಸೆಂಟರ್, ಭಾಷಾ ತರಬೇತಿ ಕೇಂದ್ರಗಳು
ಎಲ್ಲೆಲ್ಲಿ ಕೋರ್ಸ್ ಇದೆ?
– ಆಲ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆಯಂಡ್ ಹಿಯರಿಂಗ್, ಮೈಸೂರು
– ಜ್ಞಾನಭಾರತಿ, ಬೆಂಗಳೂರು
– ಡಾ.ಎಸ್.ಆರ್. ಚಂದ್ರಶೇಖರ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್, ಹೆಣ್ಣೂರು ಮುಖ್ಯರಸ್ತೆ, ಬೆಂಗಳೂರು
– ಡಾ. ಎಂ.ವಿ. ಶೆಟ್ಟಿ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್, ಮಂಗಳೂರು
– ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಮಣಿಪಾಲ, ಮಂಗಳೂರು
– ಅನಂತನಾಗ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ