ಕಾಲೇಜುಗಳ ರಂಗಸ್ಥಳ: ಕಾರಿಡಾರ್‌


Team Udayavani, Mar 7, 2017, 3:45 AM IST

college.jpg

ಪುಟ್ಟ ಮಗುವಿಗೆ, ಕಾರಿಡಾರ್‌ ಆಟದ ಮೈದಾನವಾದರೆ ದೊಡ್ಡವರಿಗೆ ಅದು ಇಣುಕು ತಾಣ. ಇನ್ನು ಕೆಲವರಿಗೆ ಅದು ಬಹಿರಂಗ ಅಡಗುತಾಣ! ಇನ್ನು ಹುಡುಗಿಯರ ಬಗ್ಗೆ ಹೇಳಬೇಕೇ? ಅವರಿಗೆ ಅದು ಫ್ಯಾಷನ್‌ ಶೋ ರ್‍ಯಾಂಪ್‌! ಆದರೆ ಲೆಕ್ಚರರಿಗೆ ಅದು ಗಾಂಭೀರ್ಯತೆಯ ದಾರಿ… ಮತ್ತು ಕೆಲವರಿಗೆ ಅದು ಪ್ರೇಕ್ಷಕರ ಗ್ಯಾಲರಿ…

ಅದು ಮಾತನಾಡುವುದಿಲ್ಲ. ಇಷ್ಟು ವರ್ಷಗಳಲ್ಲಿ ಆ ಜೀವ ಮಾತನಾಡಿದ್ದನ್ನು ಕೇಳಿಸಿಕೊಂಡವರು ಒಬ್ಬರೂ ಇಲ್ಲ. ಆದರೆ ಅದು ಮಾತ್ರ ಎಲ್ಲರ ಮಾತಿಗೂ ಕಿವಿಯಾಗಿದೆ. ತನ್ನ ಎದೆಯ ಮೇಲೆಯೋ, ತೋಳಿನ ಮೂಲೆಯಲ್ಲೋ ಯಾರೋ ಬರೆದ ಯಾರದೋ ಭಾವನೆಗಳ ಅಕ್ಷರಗಳಿಗೆ ತಾಣವಾಗಿದೆ. ಅದು ಕಾಲೇಜ್‌ ಕಾರಿಡಾರ್‌.  

ಪುಟ್ಟ ಮಗುವಿಗೆ ಕಾರಿಡಾರ್‌ ಆಟದ ಮೈದಾನವಾದರೆ ದೊಡ್ಡವರಿಗೆ ಅದು ಇಣುಕು ತಾಣ. ಇನ್ನು ಕೆಲವರಿಗೆ ಅದು ಬಹಿರಂಗ ಅಡಗುತಾಣ! ಇನ್ನು ಹುಡುಗಿಯರ ಬಗ್ಗೆ ಹೇಳಬೇಕೇ? ಅವರಿಗೆ ಅದು ಫ್ಯಾಷನ್‌ ಶೋ ರ್‍ಯಾಂಪ್‌! ಆದರೆ ಲೆಕ್ಚರರಿಗೆ ಅದು ಗಾಂಭೀರ್ಯತೆಯ ದಾರಿ… ಮತ್ತು ಕೆಲವರಿಗೆ ಅದು ಪ್ರೇಕ್ಷಕರ ಗ್ಯಾಲರಿ… ಹೊಸ ಹೊಸ ಐಡಿಯಾಗಳು ಹುಟ್ಟಿಕೊಳ್ಳುವುದು, ಸುಂದರವಾದ ಕನಸುಗಳನ್ನು ಹಂಚಿಕೊಳ್ಳಲು, ಪಾಠದ ಬಗ್ಗೆ ಡಿಸ್ಕಶನ್‌ ಮಾಡಲು, “ನೀ ಇಲ್ಲವಾದರೆ  ನಾ…  ಹೇಗೆ ಬಾಳಲಿ?’ ಎಂಬ ಪ್ರೇಮ ಸಂದೇಶ  ರವಾನೆ ಮಾಡಲು ಅದೊಂದು  ವೇದಿಕೆ. 

ಕಾಲೇಜಿನ ಟಾಪರ್‌ಗಳು ಎಂದು ಹೆಸರಾದವರು ಕಾರಿಡಾರಿನಲ್ಲೂ ಗಾಂಭೀರ್ಯದಿಂದ ಪಠ್ಯ ಕುರಿತ ವಿಷಯದಲ್ಲಿ ಮುಳುಗಿ ಹೋಗಿರುತ್ತಾರೆ. ತಮಾಷೆಯ ಸಂಗತಿ ಎಂದರೆ ಕವಿಯಾಗಲು, ಮಿಮಿಕ್ರಿ ಆರ್ಟಿÓr…ಗಳಾಗಲು, ಗ್ರೂಪ್‌ ಡಿಸ್ಕಶನ್‌… ಮುಂತಾದವುಗಳಿಗೆ ಕಾರಿಡಾರ್‌ ಹೇಳಿ ಮಾಡಿಸಿದ ತಾಣ. ಬಯಾಲಾಜಿ ಲೆಕ್ಚರರ್‌ ಹೇಗೆ ಪಾಠ ನಡೆಯೋದು? ಇಂಗ್ಲೀಷ್‌ ಸರ್‌ ಹೇಗೆ ಪಾಠ ಮಾಡೋದು? ಕಂಪ್ಯೂಟರ್‌ ಮೇಡಮ… ಯಾವ  ಥರ ಪ್ರಶ್ನೆ ಕೇಳ್ಳೋದು? ಕನ್ನಡ ಸರ್‌ ಅದ್ಹೇಗೆ ರಾಗ ಎಳೆಯೋದು? ಎಂಬುದನ್ನೆಲ್ಲಾ ಹಾಸ್ಯ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸೋದಕ್ಕೆ ಅದು  ಹೇಳಿ ಮಾಡಿಸಿದ ಜಾಗ. ಇನ್ನು ಟೈಂಪಾಸ್‌ ಮಾಡುವುದಕ್ಕೆ ಎಲ್ಲರಿಗೂ ಕಾರಿಡಾರ್‌ ಬೇಕೇ ಬೇಕು. 

ಹೊಸ ಸ್ನೇಹಿತ, ಸ್ನೇಹಿತೆಯರು ಸಿಗುವುದು, ಬೇರೆ ತರಗತಿಯ ವಿದ್ಯಾರ್ಥಿಗಳು ಹರಟೆ ಹೊಡೆಯೋದಕ್ಕೆ ಸಿಗುವುದು ಇಲ್ಲೇ. ಕೆಲವು ಸಲ ಲವ್‌ ಎಟ್‌ ಫ‌ಸ್ಟ್‌ ಸೈಟ್‌ ಎಂಬ ಮಾತು ಸಕ್ಸಸ್‌ ಆಗುವುದಕ್ಕೂ ಇದೇ ಕಾರಿಡಾರ್‌ ಪ್ರೇರಣೆ! ಇನ್ನು ಕ್ಲಾಸ್‌ ಇಲ್ಲ ಎಂದರೆ ಸಾಕು, ಶುರುವಾಗುತ್ತದೆ ಇಡೀ ಕಾಲೇಜಿನ ಕಾರಿಡಾರ್‌ನಲ್ಲಿ ಒಂದು ಫ್ರೀ ವಾಕ್‌. ಆರಾಮದಲ್ಲಿ ಮನಸ್ಸಿನಲ್ಲಿ ಏನೋ ಹಾಡನ್ನು ಗುನುಗುನಿಸುತ್ತಾ, ಬೇರೆ ಕ್ಲಾಸಿನ ಸ್ನೇಹಿತರಿಗೆ ಕಿಟಕಿಯ ಹೊರಗಿನಿಂದ ಹಾಯ್‌ ಮಾಡಿ, ಹಲ್ಲು ಕಿಸಿಯುತ್ತಾ ಮುಂದೆ ನಡೆದರೆ ಏನೋ ಒಂದು  ಹುರುಪು. ಅಬ್ಬ! ಲೆಕ್ಚರರ್‌ಗೆ ಗೊತ್ತಾಗಲಿಲ್ಲ ಎಂದು ಏದುಸಿರು ಬಿಡುವುದು ಬೇರೆ! ಇನ್ನು ಕೆಲವು ಕಡೆ ಸೀನಿಯರ್‌ಗಳು ಹೊಸದಾಗಿ ಬಂದಿರುವ ಜ್ಯೂನಿಯರ್‌ಗಳನ್ನು ರ್ಯಾಗ್‌ ಮಾಡುವುದು ಇಲ್ಲೇ! 

ಕಾಲೇಜು ಕಾರಿಡಾರ್‌ಗೆ ಹರೆಯದ ವಯಸ್ಸಿದೆ, ಬಿಸಿ ರಕ್ತವಿದೆ, ಆದ ಕಾರಣ ಅದು ಲವಲವಿಕೆಯಿಂದ ಇರುತ್ತದೆ ಎಂದರೆ ತಪ್ಪು. ನೀವು ಪ್ರೈಮರಿ ಶಾಲೆಗೆ ಹೋಗಿ  ಅಲ್ಲಿಯ ಕಾರಿಡಾರ್‌ನಲ್ಲಿ ಅಂದವನ್ನು ಆನಂದಿಸಿ. ಅದಕ್ಕೆ ಆದರದೇ ಆದ ಅಂದವಿದೆ. ಗೋಡೆಯ ತುಂಬಾ ಮಕ್ಕಳೇ ಗೀಚಿದ ಚಿತ್ತಾರಗಳಿವೆ. ದೇಶವನ್ನು  ಬಿಂಬಿಸುವ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು, ಮಹಾತ್ಮರ ಮಾತುಗಳೂ ಕಾಣಿಸುತ್ತವೆ. ಮಧ್ಯಾಹ್ನ ಜೊತೆಯಲ್ಲಿ ಕುಳಿತು ಊಟ ಮಾಡುವ ಮಕ್ಕಳು, ಅಆ… ಇಈ… ಎಂದು ಸಾಮೂಹಿಕವಾಗಿ ಓದುವ ಪುಟಾಣಿಗಳು, ಟ್ವಿಂಕಲ್‌ ಟ್ವಿಂಕಲ್‌ ಎಂದು ರಾಗ ಎಳೆಯುವ ಚಿಣ್ಣರು… ಹೀಗೆ ಸಾವಿರಾರು ಕನಸುಗಳನ್ನು ಹೊತ್ತು ಕಂಗೊಳಿಸುತ್ತದೆ ಶಾಲಾ ಕಾರಿಡಾರ್‌. 
   
ಮುಂಜಾನೆ ಖುಷಿಯಿಂದ ಝಗಮಗಿಸುತ್ತಿರುವ ಕಾಲೇಜು ಕಾರಿಡಾರ್‌ ಸಂಜೆ ಆದ ಕೂಡಲೇ ಅದೇಕೋ ಬಿಕೋ ಎನಿಸಿಬಿಡುತ್ತದೆ. ವಿದ್ಯಾರ್ಥಿಗಳ ನಗು, ಮೋಜು, ಮಸ್ತಿ, ಕೇಕೆಯಿಂದಾಗಿ ಲವಲವಿಕೆಯಿಂದ ಇರುತ್ತಿದ್ದ ಕ್ಯಾಂಪಸ್‌, ಸಂಜೆಯಾದರೆ ಬೇಸರದಿಂದ ಮುಖ ಮುದುಡಿಸುತ್ತದೆ. ಆ ಸಮಯದಲ್ಲಿ ಅಲ್ಲಿರುವುದು ವಿದ್ಯಾರ್ಥಿಗಳ ಶೂ, ಚಪ್ಪಲಿಗಳ ಅಚ್ಚು, ಸುಮ್ಮನೆ ನಿಂತಾಗ ಗೋಡೆಗಳ ಮೇಲೆ ಗೀಚುತ್ತಿದ್ದ ನಾಲ್ಕು ಸಾಲುಗಳು ಮಾತ್ರ. ಆದರೂ ಕಾರಿಡಾರ್‌ ಮತ್ತೂಂದು ದಿನಕ್ಕೆ ಕಾಯುವುದನ್ನು ಬಿಡುವುದಿಲ್ಲ!  

– ಅನಿತಾ ಬನಾರಿ, ಸುಳ್ಯ

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.