ಕಾಲೇಜು ಗ್ಯಾಪಲ್ಲಿ ಕಲರ್‌ಫುಲ್ ಟೀನೇಜು
Team Udayavani, May 2, 2017, 12:22 PM IST
ಹುಡುಗಿಯರು “ಮಾತೆ’ಯರು, ಅದಧಿಕ್ಕೇ ತುಂಬಾ ಮಾತಾಡ್ತಾರೆ. ಸೀಕ್ರೆಟ್ ಮೇಂಟೈನ್ ಮಾಡೊಲ್ಲ ಅನ್ನೊ ಕಂಪ್ಲೇಂಟ್ ಒಂದಿದೆ. ಹಾಗಂತ ಸುಮ್ನೆ ಇರೋ ಜಾಯಮಾನ ಅಲ್ವೇ ಅಲ್ಲ. ರಾತ್ರಿ ಫ್ರೆಂಡ್ ಕಾಲ್ ಮಾಡಿದ್ದಾನೆ ಅಂತ ಮೊಬೈಲ್ ಟವರ್ ಏರಿ ಕುಳಿತವರಂತೆ ಮಹಡಿಯ ಮೇಲೇರಿ ಅದೆಷ್ಟು ಮಾತಾಡ್ತಾರೆ ಅಂದ್ರೆ, ಒಂದೋ ಕರೆನ್ಸಿ ಖಾಲಿ ಆಗ್ಬೇಕು, ಇಲ್ಲಾ… ಮೊಬೈಲ್ ಒಡೆದು ಹೋಗ್ಬೇಕು. ಆ ರೇಂಜಿಗೆ ಮಾತಾಡ್ತಾರೆ.
ಕ್ಯಾಂಪಸ್ ಎಂದಾಗ ನೆನಪಾಗೋದೇ ಕಾಲೇಜು ದಿನಗಳು. ಅದೆಷ್ಟೋ ಹುಡುಗ ಹುಡುಗಿಯರು ಕವಿಗಳಾಗೋದು ಇಲ್ಲಿಂದಲೇ… ನಾನ್ ಹಾಗೆಲ್ಲಾ ಯಾರ ಪ್ರೀತಿಯ ಬಲೆಯಲ್ಲೂ ಬೀಳಲ್ಲ ಅನ್ನೋ ಹುಡುಗ ಹುಡುಗಿಯರು ಒಂದೆಡೆ ಆದ್ರೆ ಮತ್ತೂಂದೆಡೆ, ನಮ್ಮ ಸ್ನೇಹ ಶಾಶ್ವತ ಎಂದು ಬೀಗೋ ಸ್ನೇಹಿತರು. ಕ್ಲಾಸ್ ಬಂಕ್ ಮಾಡಿ μಲ್ಮ್ಗೆ ಹೋಗೋದು, ಒಂದು ದಿನದ ಪಿಕ್‌ನಿಕ್ ಹೋಗೋದು, ಲೆಕ್ಚರರ್‌ನ ಟೀಕೆ ಮಾಡೋದು… ಹೀಗೆ ಅದೆಷ್ಟೋ ಆಡಬಾರದ ಆಟಗಳನ್ನ ಆಡಿರ್ತೇವೆ. ಅವುಗಳ ಜೊತೆಗೆ ಜಗಳ, ಮುನಿಸು… ಹೀಗೆ ಕೆಲವು ಕಹಿ ಘಟನೆಗಳು ಕೂಡ ನಡೆದಿರುತ್ತವೆ. ಆದರೆ ಕಾಲೇಜು ದಿನಗಳು ಅಂದ ಕೂಡಲೆ ಮೋಜು ಮಸ್ತಿಯೇ ನೆನಪಾಗುತ್ತದೆ ಅನ್ನುವುದಂತೂ ಸತ್ಯ. ಆ ದಿನಗಳಲ್ಲಿ ಎಷ್ಟೋ ಜನ ಯಾರಾದರೂ ಒಬ್ಬರ ಮೇಲೆ ಕ್ರಶ್ ಇಟ್ಕೊಂಡೇ ಕಾಲ ಕಳೆದಿರುತ್ತಾರೆ. ಮನದಲ್ಲಿರೋ ಪ್ರೀತೀನಾ ಹೇಳ್ಳೋಕಾಗದೆ ಕೈಬೆರಳ ತುದಿಯ ಉಗುರನ್ನು ಕಚ್ಚುತ್ತಾ ಸದಾ ಯೋಚನೆಯಲ್ಲಿ ತೊಡಗುವವರೇ ಹೆಚ್ಚು. ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಅವರಿಷ್ಟದ ಹುಡುಗ ಹುಡುಗಿಯ ಪೋಸ್ಟ್‌ಗಳಿಗೆ ಲೈಕ್ ಕೊಡುತ್ತಾ, ಚಾಟ್ ಮಾಡುತ್ತಾ
ಅದೆಷ್ಟೋ ಸಮಯ ಕಳೆದರೂ ಅವರಿಗದರ ಅರಿವೇ ಆಗೋದಿಲ್ಲ. ಈಗೆಲ್ಲಾ ಎದುರಿಗೆ ಕಂಡಾಗ ಮಾತಾಡದಿದ್ರೂ ಮೊಬೈಲ್‌ನೊಳಗೆ ಗಂಟೆ ಗಂಟೆಗಟ್ಟಲೆ ಮಾತಾಡ್ತೇವೆ. ಇಲ್ಲೇ ಡ್ರಾ, ಇಲ್ಲೇ ಬಹುಮಾನ ಎಂಬಂತೆ ಅದೆಷ್ಟೋ ಜೋಡಿ ಹಕ್ಕಿಗಳದು ಕಾಲೇಜಲ್ಲೇ ಲವ್ ಮತ್ತು ಅಲ್ಲೆ ಬ್ರೇಕ್ ಅಪ್ ಕೂಡ ಆಗಿಬಿಡುತ್ತೆ. ಇದ್ರ ಮಧ್ಯೆ ಅದೆಷ್ಟು ಮೊಬೈಲ್ ಕರೆನ್ಸಿ ವ್ಯಯ ಆಗಿರುತ್ತೋ ಲೆಕ್ಕವಿಲ್ಲ!
ಅಂದಹಾಗೆ ಹುಡುಗಿಯರು ಮಾತೆಯರು, ಅದಕ್ಕೇ ತುಂಬಾ ಮಾತಾಡ್ತಾರೆ. ಸೀಕ್ರೆಟ್ ಮೆಂಟೇನ್ ಮಾಡೋಲ್ಲ
ಅನ್ನೋ ಕಂಪ್ಲೇಂಟ್ ಒಂದಿದೆ. ಹಾಗಂತ ಸುಮ್ನೆ ಇರೋ ಜಾಯಮಾನ ಅಲ್ವೇ ಅಲ್ಲ. ರಾತ್ರಿ ಫ್ರೆಂಡ್ ಕಾಲ್
ಮಾಡಿದ್ದಾನೆ ಅಂತ ಮೊಬೈಲ್ ಟವರ್ ಏರಿ ಕುಳಿತವರಂತೆ ಮಹಡಿಯ ಮೇಲೇರಿ ಅದೆಷ್ಟು ಮಾತಾಡ್ತಾರೆ ಅಂದ್ರೆ,
ಒಂದೋ ಕರೆನ್ಸಿ ಖಾಲಿ ಆಗ್ಬೇಕು, ಇಲ್ಲಾ… ಮೊಬೈಲ್ ಒಡೆದು ಹೋಗ್ಬೇಕು. ಆ ರೇಂಜಿಗೆ ಮಾತಾಡ್ತಾರೆ.
ಯಾರಾದ್ರು ಏನ್ ಮಾತಾಡಿದ್ರಿ ಅಂತ ಕೇಳಿದ್ರೆ, ಏನಿಲ್ಲಾ ಹೀಗೇ ಕ್ಯಾಶುವಲ್ ಅಂತಾರೆ. ಕ್ಲಾಸಲ್ಲಿ ಮಾಡೋ ಅದೆಷ್ಟೋ ತರಲೆಗಳು ಮುಂದುವರಿಯುವುದು ಅವರವರ ಹಾಸ್ಟೆಲ್‌ಗಳಲ್ಲಿ. ತರಗತಿಯಲ್ಲಿ ಪ್ರಾರಂಭವಾದ ಗಾಸಿಪ್‌ಗ್ಳು ಚಾನೆಲ್
ನಲ್ಲಿ ಬ್ರೇಕಿಂಗ್ ಸುದ್ದಿ ಬಂದಂತೆ ಕಾಲೇಜು ತುಂಬಾ ಹಬ್ಬಿ ಬಿಡುತ್ತದೆ. ಪರೀಕ್ಷೆಯ ಕಾಲದಲ್ಲಿ ನೋಡಬೇಕು, ಗಂಭೀರ
ವಾತಾವರಣ ನಿರ್ಮಾಣವಾಗಿರುತ್ತೆ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಓದಿ ಅಯ್ಯೋ ಅಂಕ ಕಡಿಮೆಯಾಯ್ತು ಅನ್ನೋ
ಹುಡುಗಿಯರ ಮಧ್ಯ, ಕೊನೆಯ ಕ್ಷಣದಲ್ಲಿ ಪುಸ್ತಕ ತೆರೆದು ಮುಖ್ಯ ಪ್ರಶ್ನೆಗಳನ್ನು ಮಾತ್ರ ಓದಿಕೊಂಡು ಜಸ್ಟ್ ಪಾಸಾಗಿ
ಸೆಲಬ್ರೇಟ್ ಮಾಡುವ ಹುಡುಗರೂ ಅಲ್ಲಿರುತ್ತಾರೆ.
ಕಾಲೇಜು ದಿನಗಳು ಮುಗಿದವು ಅಂತ ಗೊತ್ತಾದಾಗ ಎಲ್ಲಾ ಮುಗಿದು ಹೋದಂತೆ ಮುಖ ಸಣ್ಣಗೆ ಮಾಡಿಕೊಂಡು ಕಣ್ಣೀರು ಹಾಕಿ ಗೆಳೆಯರನ್ನ ತಬ್ಬಿ ಮಿಸ್ ಯೂ ಅಂತ ಹೇಳ್ಕೊಳ್ಳೊ ಸಂದರ್ಭಗಳು ಮಾತ್ರ ನಮ್ಮ ಮನ ಕಲಕುವಂತೆ ಮಾಡುವುದು ಸತ್ಯ. ಇದಿಷ್ಟು ಕಣ್ಣಿಗೆ ಕಾಣುವ ಕಥೆಗಳಾದರೆ ಕಾಣದ ಕಥೆಗಳದೆಷ್ಟೋ! ಅದು ಕ್ಯಾಂಪಸ್‌ನಲ್ಲಿರೋ ಪಾರ್ಕ್, ಮರ, ಗಿಡಗಳಿಗೆ ಮಾತ್ರ ತಿಳಿದಿರುತ್ತದೆ.
– ಕೀರ್ತಿ ಎಂ. ತೀರ್ಥಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.