ಒಮ್ಮೆಯಾದರೂ ನನ್ನ ಕಣ್ಮುಂದೆ ಬಂದು ಹೋಗು
Team Udayavani, Oct 22, 2019, 4:06 AM IST
ಪ್ರತಿದಿನ ನಾವಿಬ್ಬರೂ ಒಬ್ಬರಿಗೊಬ್ಬರು ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು. ಸತ್ಯವಾಗಿಯೂ ಹೇಳುತಿರುವೆ, ನೀನಿಲ್ಲದೆ ನನಗೆ ಒಂಟಿತನ ಕಾಡುತಿದೆ…
ನಲ್ಮೆಯ ಗೆಳತಿಗೆ,
ನನಗೆ ಗೊತ್ತು ಗೌರಮ್ಮ, ನಾನು ನಿನ್ನಿಂದ ದೂರ ಆದಮೇಲೆ ನೀನು ತುಂಬಾ ಚೆನ್ನಾಗಿರ್ತೀಯಾ ಅಂತ. ಊರಿಗೆ ಹೋದ ಮೇಲೆ ನಿನ್ನಿಂದ ಒಂದೇ ಒಂದು ಮೆಸೇಜ್ ಕೂಡ ಬರದೇ ಇದ್ದುದಕ್ಕಾಗಿ ನನ್ನ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಜ್ಞಾಪಕ ಇದೆಯಾ? ದಿನದಲ್ಲಿ ಸುಮಾರು ಐದರಿಂದ ಆರು ಘಂಟೆಯಾದರೂ ನಾವಿಬ್ಬರೂ ಪುಟ್ಟ ಪುಟ್ಟ ಮಕ್ಕಳ ಥರಾ ಮಾತಾಡಿಕೊಂಡು ಕೂತು ಬಿಡಿದ್ವಿ.ಆದರೆ ಹದಿನೈದು ದಿನಗಳಾದರೂ ನಿನ್ನ ಒಂದು ಮೆಸೇಜ್ ಕೂಡ ಕಣ್ಣಿಗೆ ಬೀಳದ ಕಾರಣಕ್ಕೆ, ಚಂದಿರನಿಲ್ಲದ ಆಕಾಶದಂತಾಗಿದೆ ನನ್ನ ಬದುಕು.
ನಿನ್ನ ಸ್ನೇಹವಿಲ್ಲದ ಈ ಬದುಕು ಖಾಲಿ ಖಾಲಿ ಅನಿಸ್ತಿದೆ. ಪ್ರೀತಿ ತುಂಬಿದ ನಿನ್ನ ಮಾತುಗಳನ್ನು, ನೀನು ಕಳಿಸುತ್ತಿದ್ದ ಮುದ್ದಾದ ಮೆಸೇಜ್ ಗಳಲ್ಲಿ ನೋಡುತ್ತಾ, ಓದುತ್ತಾ ಇರುತ್ತಿದ್ದೆ. ನೀನು ನನ್ನ ಜೊತೆ ಇಲ್ಲ ಅನ್ನೋ ಶೂನ್ಯವನ್ನು ಹೋಗಲಾಡಿಸುತ್ತಿದ್ದ ನಿನ್ನ ಒಲವಿನ-ಸಾಂತ್ವನದ ಮಾತುಗಳು, ನಿನ್ನ ಪ್ರೀತಿಯ ಸಂದೇಶಗಳು, ನೀನು ಸೊಗಸಾಗಿ ಬಿಡಿಸುತ್ತಿದ್ದ ಚಿತ್ರಗಳನ್ನು ನಾನೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಗೊತ್ತಾ?
ಪ್ರತಿದಿನ ನಾವಿಬ್ಬರೂ ಒಬ್ಬರಿಗೊಬ್ಬರು ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು. ಸತ್ಯವಾಗಿಯೂ ಹೇಳುತಿರುವೆ, ನೀನಿಲ್ಲದೆ ನನಗೆ ಒಂಟಿತನ ಕಾಡುತಿದೆ. ಒಮ್ಮೆಯಾದರೂ ನನ್ನ ಕಣ್ಮುಂದೆ ಬಂದು ಹೋಗು. ನಿನ್ನ ನೆನಪು ತಂದ ಕಣ್ಣೀರನ್ನು ಒತ್ತಿ ಹಿಡಿದಿರುವೆ.. ನೀ ಬಂದು ಹಿಡಿಯುವೆ, ಅಯ್ಯಯ್ಯೋ, ಅಳಬೇಡ ಕಣೋ ಎಂದು ಸಮಾಧಾನ ಹೇಳ್ತೀಯ ಎಂಬ ನಿರೀಕ್ಷೆಯೊಂದಿಗೇ ಕಾಲ ಕಳೆಯುತ್ತಿದ್ದೇನೆ. ಬರುವೆಯಲ್ಲವೆ?
ನಿನ್ನ ಪ್ರೀತಿಯ ಬಿ.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.