ತಿರುಗುಬಾಣ
ಬಾರೋ ಸಾಧಕರ ಕೇರಿಗೆ
Team Udayavani, Sep 17, 2019, 5:02 AM IST
ಯಹೂದ್ಯರ ಧರ್ಮಗುರುಗಳನ್ನು ಅವರು ರಬೈ ಎನ್ನುತ್ತಾರೆ. ರಬೈಗಳು ಧಾರ್ಮಿಕ ಮುಖಂಡರಾದರೂ ಗಂಟಿಕ್ಕಿದ ಮೋರೆಯವರಲ್ಲ. ಹೆಚ್ಚಿನವರು ಅದ್ಭುತ ಹಾಸ್ಯಪ್ರಜ್ಞೆಗೆ ಪ್ರಸಿದ್ಧರು. ಈ ವಿಚಾರದಲ್ಲಿ ಒಂದು ಘಟನೆ ನಡೆಯಿತು. ಅದು ನಡೆದದ್ದು ಲಂಡನ್‌ನಲ್ಲಿ. 1891ರಿಂದ 20 ವರ್ಷಗಳ ಕಾಲ ಲಂಡನ್‌ನ ಮುಖ್ಯ ರಬೈ ಆಗಿದ್ದ ಎಡ್ಲರ್ ಹರ್ಮನ್ ಕೂಡ ಅಂಥದೇ ಹಾಸ್ಯ ವೈನೋದಿಕ ಸ್ವಭಾವದರಲ್ಲೊಬ್ಬರು.
ಒಮ್ಮೆ ರಬೈ ಎಡ್ಲರ್ ಲಂಡನ್ನಿನ ಕಾರ್ಡಿನಲ್ (ಕ್ರೆಸ್ತ ಧರ್ಮಗುರು) ಆಗಿದ್ದ ವೋಗನ್ ಎಂಬವವರ ಜೊತೆ ಯಾವುದೋ ಸಮಾರಂಭದಲ್ಲಿ ಒಟ್ಟಿಗೆ ಊಟಕ್ಕೆ ಕೂರುವ ಸಂದರ್ಭ ಎದುರಾಯಿತು. ಈ ಯಹೂದ್ಯರಲ್ಲಿ ಹಂದಿಮಾಂಸ ತಿನ್ನುವುದು ಸಂಪೂರ್ಣ ನಿಷಿದ್ಧ. ಇದನ್ನು ತಿಳಿದಿದ್ದ ವೋಗನ್, ರಬೈಯವರ ಕಡೆ ತಿರುಗಿ ಎಡ್ಲರ್ ಅವರೇ, ನಿಮ್ಮ ಊಟದ ತಾಟಿಗೆ ಹ್ಯಾಮ್ (ಹಂದಿಯ ಕೊಬ್ಬಿನ ತೆಳುವಾದ ಪದರ) ಬಡಿಸುವ ವಿಶೇಷ ಸಂದರ್ಭ ನನಗೆಂದು ಬರುವುದೋ ಏನೋ ಎಂದು ಕಾಯುತ್ತಿದ್ದೇನೆ ಎಂದು ಕಿಚಾಯಿಸಿದರು. ಇವರ ಮಾತಿಗೆ ರಬೈ ಸಿಟ್ಟಿಗೇಳಲಿಲ್ಲ, ಜಗಳಕ್ಕೂ ಇಳಿಯಲಿಲ್ಲ. ಬದಲಾಗಿ ಹೀಗೆ ಉತ್ತರ ಕೊಟ್ಟರು- ಅದಕ್ಕೆ ಕಾಯುವುದೇಕೆ! ನಿಮ್ಮ ಮದುವೆಯ ಊಟದಲ್ಲಿ ನನಗೆ ನಿಮ್ಮ ಕೈಯಾರೆ ತೃಪ್ತಿಯಾಗುವಷ್ಟು ಬಡಿಸಿಬಿಡಿ. ನಿಮ್ಮ ನೆರವೇರುತ್ತದೆ ಎಂದರು ರಬೈ ಎಡ್ಲರ್.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.