ಪರಿಸರ ಪದವಿಗೆ ಸರಸರ ಬನ್ನಿ
Team Udayavani, Jul 2, 2019, 5:00 AM IST
ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆ ಅನ್ನೋದನ್ನ ಈಗ ಎಲ್ಲರೂ ಬಹಳ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ, ಎನ್ವಿರಾನ್‌ಮೆಂಟ್ ಸೈನ್ಸ್‌ಗೂ ಬಹಳ ಬೇಡಿಕೆ ಬಂದಿದೆ. ಇದರಲ್ಲಿ 6 ತಿಂಗಳಿಂದ 6 ವರ್ಷಗಳ ತನಕ ಅಧ್ಯಯನ ಮಾಡಿ ಕೋರ್ಸ್ / ಪದವಿ ಪಡೆಯಬಹುದು. ಪದವಿ ಮುಗಿಸಿ ಯಾರೂ ಸುಮ್ಮನೆ ಕೂರುತ್ತಿಲ್ಲ. ಕೈತುಂಬ ಕೆಲಸ, ಜೇಬ್‌ತುಂಬ ಸಂಬಳ ಪಡೆಯುತ್ತಿದ್ದಾರೆ.
ನೀರು, ಮರ, ಗಿಡ ಈ ಬಗ್ಗೆ ಹೋರಾಟ ಮಾಡೋದು ಈಗ ಫ್ಯಾಷನ್ ಆಗಿ ಉಳಿದಿಲ್ಲ. ಅದೀಗ ಕರ್ತವ್ಯವಾಗಿ ಮಾರ್ಪಟ್ಟಿದೆ. ಹೀಗಾಗಿ, ಪರಿಸರ ಜ್ಞಾನ ಶಿಕ್ಷಣ ಅಂದರೆ ಎನ್ವಿರಾನ್ಮೆಂಟ್ ಸೈನ್ಸ್ ಕೂಡ ಬಲು ಮುಖ್ಯ ಅನಿಸಿ, ಎಲ್ಲರೂ ಈ ಕೋರ್ಸ್‌ಗಳನ್ನು ಮಾಡಲು ಮುಂದಾಗಿದ್ದಾರೆ. ಇದೊಂಥರ ಉಳಿವಿಗಾಗಿ ಓದೋ ಆಟ ಅಂತಲೂ ಹೇಳಬಹುದು. ಇದರಲ್ಲಿ ಪದವಿ ಪಡೆದವರು ಯಾರೂ ಸುಮ್ಮನೆ ಕುಳಿತುಕೊಳ್ಳಲ್ಲ. ಏನಾದರೊ ಮಾಡುತಿರು ತಮ್ಮಾ ಅನ್ನೋ ರೀತಿ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಶಿಕ್ಷಣ, ಸಂಶೋಧನೆ, ಸಂರಕ್ಷಣೆ, ಉದ್ಯೋಗ ಹೀಗೆ ಹಲವು ರೂಪಗಳಲ್ಲಿ ಹೊಮ್ಮುತ್ತಿರುವ ಈ ಕ್ಷೇತ್ರ ಭೌತಿಕ ಮತ್ತು ಜೈವಿಕ ಅಂಶಗಳೆರಡನ್ನೂ ಒಳಗೊಂಡಿದೆ. ಪರಿಸರ ಜ್ಞಾನದ ಕೋರ್ಸ್‌ಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಮಣ್ಣು ವಿಜ್ಞಾನ, ಭೂಗರ್ಭಶಾಸ್ತ್ರ, ಭೂಗೋಳ, ಅರಣ್ಯ ಸಂರಕ್ಷಣೆ, ವ್ಯವಸಾಯ, ಅರಣ್ಯ ಜ್ಞಾನ, ಜಲಸಾಕ್ಷರತೆ, ಸಾಮುದಾಯಿಕ ಆರೋಗ್ಯ, ಕಾನೂನು, ಬೀಜ ಜ್ಞಾನ ಹಾಗೂ ಅಸ್ತಿತ್ವದಲ್ಲಿರುವ ಎಲ್ಲ ಜ್ಞಾನ ಶಾಖೆಗಳ ಮೂಲಭೂತ ಅಂಶಗಳನ್ನು ಒಳಗೊಂಡಿದೆ.
6 ತಿಂಗಳಿಂದ 6 ವರ್ಷದ ತನಕ, ಸರ್ಟಿಫಿಕೇಟ್ ಕೋರ್ಸ್‌ನಿಂದ, ಪಿಎಚ್‌ಡಿ ವರೆಗೆ ಅಧ್ಯಯನ ನಡೆಸಲು ಅವಕಾಶವಿದೆ. ಈ ಪದವಿಯನ್ನು ಹೊರದೇಶದಗಳೂ ಮಾನ್ಯಮಾಡುತ್ತಿರುವುದರಿಂದ ವಿದೇಶಗಳಲ್ಲೂ ಉದ್ಯೋಗವಕಾಶ ಉಂಟು.
ಕೋರ್ಸ್‌ಗಳ ವಿವರ
ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ-
ಸರ್ಟಿಫಿಕೇಟ್ ಇನ್ ಎನ್ವಿರಾನ್‌ಮೆಂಟಲ್ ಸ್ಟಡೀಸ್, ಸರ್ಟಿಫೈಡ್ ಕೋರ್ಸ್ ಇನ್ ಎನ್ವಿರಾನ್‌ಮೆಂಟಲ್ ಅವೇರ್‌ನೆಸ್ ಮಾಡಬಹುದು. ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ಹೀಗಿವೆ. ಅಡ್ವಾನ್ಸ್ ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮಾ ಇನ್ ಅಟಾ¾ಸಿ#ಯರಿಕ್ ಫಿಸಿಕ್ಸ್ , ಡಿಪ್ಲೊಮಾ ಇನ್ ಎನ್ವಿರಾನ್‌ಮೆಂಟ್ ಪೊ›ಟೆಕ್ಷನ್ ಡಿಪ್ಲೊಮಾ ಇನ್ ಫÅಡ್ ಟಿಕ್ನಾಲಜಿ, ಡಿಪ್ಲೊಮಾ ಇನ್ ಎನ್ವಿರಾನ್‌ಮೆಂಟಲ್ ಲಾ ಮುಂತಾದವು ಪದವಿ ಕೋರ್ಸ್‌ಗಳ ಅವಧಿ ಮೂರು ವರ್ಷ. ಅದಕ್ಕೆ ಪ್ರವೇಶ ಪಡೆಯಲು ಪಿಯುಸಿ ಪೂರ್ಣಗೊಳಿಸಿರಬೇಕು. ಅವುಗಳು ಹೀಗಿವೆ. ಬಿ.ಎಸ್ಸಿ ಇನ್ ಎನ್ವಿರಾನ್‌ಮೆಂಟಲ್ ಸೈನ್ಸ್ ವೈಲ್ಡ್‌ಲೈಫ್ ಮ್ಯಾನೇಜ್‌ಮೆಂಟ್, ಬಿ.ಎಸ್ಸಿ ಇನ್ ಎನ್ವಿರಾನ್‌ಮೆಂಟಲ್ ಸೈನ್ಸ್ ವಾಟರ್ ಮ್ಯಾನೇಜ್‌ಮೆಂಟ್ ಬಿ.ಎಸ್ಸಿ ಇನ್ ಎನ್ವಿರಾನ್‌ಮೆಂಟಲ್ ಸೈನ್ಸ್ , ಬಿ.ಎಸ್ಸಿ ಇನ್ (ಹಾನರ್) ಎನ್ವಿರಾನ್‌ಮೆಂಟಲ್ ಸೈನ್ಸ್ , ಬ್ಯಾಚುಲರ್ ಇನ್ ಎನ್ವಿರಾನ್‌ಮೆಂಟ್ ಅಂಡ್ ಇಕಾಲಜಿ, ಬ್ಯಾಚುಲರ್ ಇನ್ ಎನ್ವಿರಾನ್‌ಮೆಂಟ್ ಮ್ಯಾನೇಜ್‌ಮೆಂಟ್
ಸ್ನಾತಕೋತ್ತರ ಕೋರ್ಸ್‌ಗಳು ಅವಧಿ ಎರಡು ವರ್ಷ.
ಎಂ.ಎಸ್ಸಿ ಇನ್ ವೈಲ್ಡ್‌ಲೈಫ್ ಮ್ಯಾನೇಜ್‌ಮೆಂಟ್, ಡಿಸಾಸ್ಟರ್ ಮಿಟಿಗೇಶನ್, ಅರ್ಥ್ ಸೈನ್ಸ್, ಕ್ಲೆçಮೇಟ್ ಛೇಂಜ್ ಮ್ಯಾನೇಜ್‌ಮೆಂಟ್, ಎನ್ವಿರಾನ್‌ಮೆಂಟಲ್ ಬಯಾಲಜಿ, ಎನ್ವಿರಾನ್‌ಮೆಂಟಲ್ ಅಂಡ್ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್, ಗ್ಲೋಬಲ್ ಮಾìಂಗ್ ರಿಡಕ್ಷನ್, ಹ್ಯಾಬಿಟಾಟ್ ಅಂಡ್ ಪಾಪುಲೇಶನ್ ಸ್ಟಡೀಸ್, ಮ್ಯಾಥಮ್ಯಾಟಿಕಲ್ ಇಕಾಲಜಿ ಅಂಡ್ ಎನ್ವಿರಾನ್‌ಮೆಂಟ್ ಸ್ಟಡೀಸ್, ಪಲ್ಯೂಶನ್ ಕಂಟ್ರೋಲ್, ಸಸ್ಟೇನಬಲ್ ಡೆವೆಲಪ್‌ಮೆಂಟ್, ಎನ್ವಿರಾನ್‌ಮೆಂಟಲ್ ಕೆಮಿಸ್ಟ್ರಿ. ಎಂ.ಬಿ.ಎ. ಇನ್ ಎನ್ವಿರಾನ್‌ಮೆಂಟಲ್ ಸೈನ್ಸ್ , ಎಂ.ಎಸ್ಸಿ ಇನ್ ಎನ್ವಿರಾನ್‌ಮೆಂಟ್ ಸೈನ್ಸ್.
ಎಲ್ಲೆಲ್ಲಿ ಪದವಿ ಪಡೆಯಬಹುದು?
ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ನಾಲ್ಕು ವರ್ಷದ ಅರ್ಥ್ ಅಂಡ್ ಎನ್ವಿರಾನ್‌ಮೆಂಟಲ್ ಸ್ಟಡೀಸ್‌ನ ಸಂಶೋಧನಾ ಬಿ.ಎಸ್ಸಿ ಪದವಿ ಶಿಕ್ಷಣ ನೀಡುತ್ತದೆ.
ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ, ಸೇಂಟ್ ಜೋಸೆಫ್ ಕಾಲೇಜು, ಸುರಾನಾ ಕಾಲೇಜು, ಕೆ.ಎಲ್.ಇ ಕಾಲೇಜು, ಮೈಸೂರಿನ ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಕಾಡೆಮಿ
ಸುರತ್ಕಲ್‌ನ ಎನ್ ಐಐಟಿ, ಮಣಿಪಾಲ್‌ನ ಎಂ.ಐ.ಟಿ ಗಳು ಪರಿಸರ ಶಿಕ್ಷಣದ ನಾಲ್ಕು ವರ್ಷದ ಎಂಜಿನಿಯರಿಂಗ್ ಪದವಿ ನೀಡುತ್ತವೆ.
ಉದ್ಯೋಗ ಎಲ್ಲಿ ಸಿಗುತ್ತೆ?
-ವಿಶ್ವ ಸಂಸ್ಥೆಯ ಸಂತುಲಿತ ಅಭಿವೃದ್ಧಿ ಗುರಿಯಂತೆ ಪ್ರತೀ ರಾಷ್ಟ್ರವೂ ಪರಿಸರ ರಕ್ಷಣೆಯಲ್ಲಿ ಸಂಘಟಿತ ಕೆಲಸ ಮಾಡಬೇಕೆಂಬ ಕಟ್ಟಳೆ ಹಾಕಿರುವುದರಿಂದ ಸರ್ಕಾರ ರೂಪಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ತಜ್ಞರ ಅವಶ್ಯಕತೆ ಇರುತ್ತದೆ. ಪರಿಸರ ಜ್ಞಾನದ ವಿವಿಧ ಕೋರ್ಸ್‌ಗಳಲ್ಲಿ ಅಧ್ಯಯನ ನಡೆಸಿದವರೇ ಬೇಕಾಗುತ್ತದೆ.
-ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅರಣ್ಯ, ಮಾಲಿನ್ಯ ನಿಯಂತ್ರಣ, ನೀರಾವರಿ, ತ್ಯಾಜ್ಯ ನಿರ್ವಹಣೆ, ವನ್ಯಜೀವಿ ಸಿನಿಮಾ ಮತ್ತು ಛಾಯಾಗ್ರಹಣ, ವಿಪತ್ತು ನಿರ್ವಹಣೆ, ಜಲಾನಯನ ಪ್ರದೇಶ ನಿರ್ವಹಣೆ, ಆವಾಸ ಸಂರಕ್ಷಣೆ, ಇಂಪ್ಯಾಕ್ಟ್ ಅಸೆಸ್‌ಮೆಂಟ್ ಇಲಾಖೆಗಳಲ್ಲಿ ಕೆಲಸ ಮಾಡಲು ವಿಪುಲ ಅವಕಾಶಗಳಿವೆ.
ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಎನ್ವಿರಾನ್‌ಮೆಂಟ್ ಎಜುಕೇಶನ್ ಸಂಸ್ಥೆಯು ಮಾಧ್ಯಮಿಕ ಶಾಲೆಯ ಶಿಕ್ಷಕರಿಗಾಗಿ ಒಂದು ವರ್ಷದ ‘ಗ್ರೀನ್ ಟೀಚರ್ ಎಂಬ ದೂರ ಶಿಕ್ಷಣ ಕಾರ್ಯಕ್ರಮವನ್ನೂ ನಡೆಸುತ್ತಿದೆ. ಆಸಕ್ತ ಇತರರು ಆರು ತಿಂಗಳಿನ ‘ಪರಿಸರ ಪತ್ರಿಕೋದ್ಯಮ’ ಕೋರ್ಸ್‌ಅನ್ನು ಮಾಡಬಹುದು.
ಗುರುರಾಜ್.ಎಸ್.ದಾವಣಗೆರೆ, ಪ್ರಾಚಾರ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.