ಕಂಫ‌ರ್ಟ್‌ ವಿಲನ್ನು


Team Udayavani, Dec 18, 2018, 6:00 AM IST

19.jpg

“ಪಾಕೆಟ್‌ ಮನಿ ಕೊಡ್ತೀವಿ. ಬೈಕ್‌ ತೆಗೆಸಿಕೊಡ್ತೀವಿ. ಈ ಹುಡುಗನಿಗೆ ಓದೋದಿಕ್ಕೇನು ಕಷ್ಟ?’ ಎನ್ನುವ ಇವತ್ತಿನ ತಂದೆ- ತಾಯಿಗಳ ಆತಂಕಕ್ಕೆ ಕೊನೆಯೇ ಇಲ್ಲ. ಸಂಪತ್ತನ್ನು ಗಳಿಸಬೇಕೇ ವಿನಾಃ ಗಳಿಸಿದ ಸಂಪತ್ತಿನ ನಡುವೆ ನಾವಿರಬೇಕೆಂದು ಬಯಸುವುದು ತಪ್ಪು ಎನ್ನುವ ಸತ್ಯವನ್ನು ಅವರೂ ಕಂಡುಕೊಂಡಿಲ್ಲ. ಕಂಫ‌ರ್ಟ್‌ ಝೋನ್‌ನಿಂದ ಆಚೆ ಹೆಜ್ಜೆ ಇಡುವುದೇ ಯಶಸ್ಸಿಗೆ ಇರುವ ಏಕೈಕ ದಾರಿ. 

ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿ ಕುಳಿತಿದ್ದ, ಆ ಹುಡುಗನಲ್ಲಿ ಒಂದು ಟೆನನ್‌ ಇತ್ತು. “ಯಾಕಪ್ಪಾ, ಹೀಗೆ ಭಾರದ ಮುಖವನ್ನು ಹೊತ್ತು ಕುಳಿತಿದ್ದೀ?’, ಅಂತ ಭುಜದ ಮೇಲೆ ಕೈಯಿಟ್ಟು ಕೇಳಿದೆ. ಅವನು ತನ್ನ ಒಂದೊಂದೇ ಚಿಂತೆಯನ್ನು ತೋಡಿಕೊಂಡ. ಅವನಿಗೆ ಕಾಲೇಜಿಗೆ ಬರಲು ಬೈಕ್‌ ಇಲ್ಲವಂತೆ. ಸೈಕಲ್‌ ತುಳಿದೇ ಬರುತ್ತಿದ್ದ. ಬೇರೆಲ್ಲರಂತೆ ಚೆಂದದ ಡ್ರೆಸ್‌ ಮಾಡಿಕೊಳ್ಳಲು ಅವನ ಹತ್ತಿರ ಹಣವಿರಲಿಲ್ಲ. ಮಾಸಿದ ಬಟ್ಟೆ ಧರಿಸಿ ಬರುತ್ತಿದ್ದ. ಕೂಲಿಗೆ ಹೋಗುವ ಅಪ್ಪ- ಅಮ್ಮ ಅವನಿಗೊಂದು ಮೊಬೈಲ್‌ ಕೊಡಿಸಿರಲಿಲ್ಲ… ಇವೆಲ್ಲ “ಇಲ್ಲ’ಗಳ ಕಾರಣಕ್ಕೆ, ಅವನು ಯಾರೊಂದಿಗೂ ಬೆರೆಯುತ್ತಿರಲಿಲ್ಲ.

ನಾನು ಅವನಿಗೆ ಕೇಳಿದೆ: “ಆಯ್ತಪ್ಪಾ… ನಿನಗೆ ಈ ಕ್ಷಣವೇ 1 ಕೋಟಿ ರೂ. ದುಡ್ಡು ಸಿಗುತ್ತೆ. ಕಾಲೇಜಿಗೆ ಬರಲು ಜಾಗ್ವಾರ್‌ ಕಾರು ಸಿಗುತ್ತೆ. ಆ್ಯಪಲ್‌ ಫೋನೊಂದು ಠಣಕ್ಕನೆ ಜೇಬೊಳಗೆ ಬಂದು ಬೀಳುತ್ತೆ. ಆಗ ನೀನು ಏನ್ಮಾಡ್ತೀಯ?’. ಆತ ಹೇಳಿದ, “ಇಷ್ಟೆಲ್ಲ ಬಂದಮೇಲೆ ನಾನೇಕೆ ಕಾಲೇಜಿಗೆ ಬರಬೇಕು? ಇಲ್ಲಿ ಬಂದು ಕಲಿತು, ನಾನೇಕೆ ಟೈಮ್‌ ವೇಸ್ಟ್‌ ಮಾಡಬೇಕು? ಎಲ್ಲಾದರೂ ಸಮುದ್ರ ತೀರದಲ್ಲಿ ವಾಸವಿದ್ದು, ಬದುಕನ್ನು ಬಿಂದಾಸ್‌ ಆಗಿ ಕಳೆಯುವೆ’ ಎಂದ, ಬಾಯ್ತುಂಬಾ ನಗುತ್ತಾ. “ಇದನ್ನೇ ಕಂಫ‌ರ್ಟ್‌ ಝೋನ್‌ ಅನ್ನೋದು. ನಿನಗೆ ಈಗಲೇ ಎಲ್ಲವೂ ಸಿಕ್ಕಿಬಿಟ್ಟರೆ, ನೀನು ಸೊನ್ನೆ ಆಗುತ್ತೀ’ ಅಂದೆ. ಅವನು ಮರು ಮಾತಾಡಲಿಲ್ಲ.

ಆತನಷ್ಟೇ ಅಲ್ಲ. ಪಾರಿವಾಳದ ಕಾಲುಬುಡದಲ್ಲಿ ವರ್ಷಕ್ಕೆ ಸಾಲುವಷ್ಟು ಧವಸಧಾನ್ಯಗಳನ್ನು ಸುರಿದುಬಿಟ್ಟರೆ, ಅದು ಕೆಲ ಕಾಲ ತನಗೆ ರೆಕ್ಕೆ ಇರುವುದನ್ನೇ ಮರೆಯುತ್ತದೆ. ಬದುಕಿನಲ್ಲಿ ಅವಶ್ಯಕತೆಗಳು ಜತೆಗಿರಬೇಕು. ಆದರೆ, ಅದು ಮಿತಿಮೀರಿ ವೈಭೋಗವಾದಾಗ, ಹೊಸತು ಸೃಷ್ಟಿಸಲು ದಾರಿಯೇ ಕಾಣುವುದಿಲ್ಲ. “ನಾನು ದುಡಿದು ಇದನ್ನೆಲ್ಲ ಗಳಿಸಿದೆ’ ಎಂದು ಲೋಕಕ್ಕೆ ಹೆಮ್ಮೆಯಿಂದ ತೋರಿಸಲು ಆಗ ನಮ್ಮ ಬಳಿ ಏನೂ ಇರುವುದಿಲ್ಲ.

ಹಾಗೆ ನೋಡಿದರೆ, ಬಳ್ಳಾರಿಯ ಎಟಿಎಂನ ಗೂಡಿನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿ, ಫ‌ಸ್ಟ್‌ ರ್‍ಯಾಂಕ್‌ ಬಂದು ಚಿನ್ನದ ಪದಕ ಬಾಚಿದವನ ಬಳಿ ಏನೂ ಇರಲಿಲ್ಲ. ಆತನೇನು ಲಕ್ಷುರಿ ಕಾರಿನಲ್ಲಿ ಕ್ಯಾಂಪಸ್ಸಿಗೆ ಬರುತ್ತಿರಲಿಲ್ಲ. ಆತನ ತಂದೆ- ತಾಯಿ ಸಿರಿವಂತರೂ ಆಗಿರಲಿಲ್ಲ. ಕಂಫ‌ರ್ಟ್‌ ಝೋನ್‌ ಒಳಗೆ ಇಲ್ಲದ ಕಾರಣಕ್ಕೇ ಆತನೊಳಗೆ ಛಲ ಮೂಡಿತು. ಅವನಂತೆ ಎಷ್ಟೋ ಹಳ್ಳಿ ಹುಡುಗರು, ಸಿಟಿಯ ಪುಟ್ಟ ಗೂಡಿನೊಳಗೆ ನೆಲೆನಿಂತು, ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಗಿಟ್ಟಿಸಿಕೊಂಡವರಿದ್ದಾರೆ. ಹಾಗೆ ದುಡಿದು, ಬದುಕನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅವರಿಗೆ ಅಪಾರ ಜೀವನಾನುಭವ ದಕ್ಕಿರುತ್ತದೆ. ಸಕಲ ವೈಭೋಗಗಳು ಕಾಲು ಬುಡದಲ್ಲಿದ್ದಾಗ, ಯಾವ ಅನುಭವಗಳೂ ಆಗುವುದಿಲ್ಲ. ನೀವೊಬ್ಬರು ಉದ್ಯೋಗಿಯಾಗಿ, “ಬಹಳ ಆರಾಮಾಗಿದ್ದೇನೆ. ನಂಗೇನೂ ತೊಂದ್ರೆ ಇಲ್ಲ’ ಎಂದು ಅಂದುಕೊಂಡಿದ್ದರೆ, ಅದು ನಿಮ್ಮ ಮೂರ್ಖತನ. ನೀವು ಬೆಳೆಯುತ್ತಿಲ್ಲ, ಹೊಸತನಕ್ಕೆ ಜಿಗಿಯುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ ಎನ್ನುವ ದೌರ್ಬಲ್ಯಗಳೊಂದಿಗೆ ಜೀವಿಸುತ್ತಿದ್ದೀರಿ ಎಂದರ್ಥ.

ಹುಟ್ಟಿನಿಂದ ಯಾರೂ ಸಿರಿವಂತರಾಗಿರುವುದಿಲ್ಲ. ನಂತರ ಭೂಮಿಗೆ ಬಂದು, ಬೆವರು ಸುರಿಸಿಯೇ ಎಲ್ಲವನ್ನೂ ಕಂಡುಕೊಳ್ಳಬೇಕು. ನಮ್ಮ ಸುತ್ತ ಸೌಲಭ್ಯಗಳು ಜಾಸ್ತಿ ಇದ್ದಷ್ಟು, ನಾವು ಆರಾಮವಾಗಿರಲು ಬಯಸುತ್ತೇವೆ. ಜಡತ್ವ, ಸೋಮಾರಿತನ ಎನ್ನುವುದು ಕಂಫ‌ರ್ಟ್‌ ಝೋನ್‌ನ ಮೊದಲ ಗಿಫ್ಟ್. ಆ ಸುಖವೇ ಎಲ್ಲದಕ್ಕೂ ಅಡ್ಡಿ. ಕಂಫ‌ರ್ಟ್‌ ಝೋನ್‌ನಿಂದ ಆಚೆ ಹೆಜ್ಜೆ ಇಡುವುದೇ ಯಶಸ್ಸಿಗೆ ಇರುವ ಏಕೈಕ ದಾರಿ. 

– ಪಾಟೀಲ ಬಸನಗೌಡ, ಧಾರವಾಡ

ಟಾಪ್ ನ್ಯೂಸ್

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.