“ಮಣಿ’ಯಿಂದಾದ ಗಲಿಬಿಲಿ!


Team Udayavani, Aug 28, 2018, 6:00 AM IST

7.jpg

“ನೀನೇನಾ ಪುಷ್ಪ?’ ಎಂದು ಸ್ವಲ್ಪ ಜೋರಿನ ದನಿಯಲ್ಲಿ ಕೇಳಿದರು. “ಹೌದು ಮೇಡಂ’ ಎಂದೆ ನಡುಗುತ್ತಾ. “ಒಬ್ಬ ಹುಡುಗನಿಂದ ನಿನಗೊಂದು ಪತ್ರ ಬಂದಿದೆ. ಇಷ್ಟು ಸಣ್ಣ ವಯಸ್ಸಿಗೇ ಇದೆಲ್ಲಾ ಬೇಕಾ? ಅದೂ ಅವನು ಶಾಲೆಯ ವಿಳಾಸಕ್ಕೇ ಪತ್ರ ಬರೆದಿದ್ದಾನೆ. ಇದು ಸರಿಯಾ?’ ಅಂತ ಸೀರಿಯಸ್‌ ಆಗಿ ವಿಚಾರಿಸತೊಡಗಿದರು. 

ಇದು ಸುಮಾರು ಐವತ್ತು ವರ್ಷಗಳಷ್ಟು ಹಿಂದಿನ ಘಟನೆ. ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದು ಬಾಲಕಿಯರ ಪ್ರೌಢ ಶಾಲೆ. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು, ಹುಡುಗರ ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಎಲ್ಲಾ ಶಾಲೆಗಳಲ್ಲೂ ಶಿಸ್ತು ಕಟ್ಟುನಿಟ್ಟಾಗಿದ್ದುದಲ್ಲದೆ ಅಧ್ಯಾಪಕರನ್ನು ಕಂಡರೆ ಎಲ್ಲರೂ ಹೆದರುತ್ತಿದ್ದರು.

ಎಲ್ಲಾ ವಿದ್ಯಾರ್ಥಿನಿಯರೂ ಅವರಾಯಿತು, ಅವರ ಪಾಠಪ್ರವಚನವಾಯಿತು ಎಂಬಂತಿದ್ದರು. ಬೇರಾವುದೇ ವಿಷಯಗಳೂ ನಮ್ಮನ್ನು ತಾಕುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ, ಮೂರನೆಯ ಪಿರಿಯಡ್‌ ಇರಬಹುದು. ಶಾಲೆಯ ಆಯಾ ನಮ್ಮ ತರಗತಿಗೆ ಬಂದು ನನ್ನನ್ನು ಮುಖ್ಯೋಪಾಧ್ಯಾಯಿನಿ ಕರೆಯುತ್ತಿದ್ದಾರೆಂದು ಹೇಳಿದಳು. ಅದನ್ನು ಕೇಳಿಯೇ ನನ್ನ ಜಂಘಾಬಲ ಉಡುಗಿ ಹೋಯ್ತು. ಏನು ವಿಷಯವೆಂದು ಆಯಾಳನ್ನು ಕೇಳಿದ್ದಕ್ಕೆ, ಯಾವುದೋ ಒಂದು ಪತ್ರವನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆಂದು ಹೇಳಿದಳು. ನಾನು ಹೆದರಿಕೆಯಿಂದ ಕುಸಿದು ಹೋಗಿದ್ದೆ.

ಮುಖ್ಯೋಪಾಧ್ಯಾಯಿನಿಯ  ಹೆಸರು ರುಕ್ಮಿಣಿ. ಅವರು ಬಹಳ ಸ್ಟ್ರಿಕ್ಟ್. ಹುಡುಗಿಯರ ಹೆಸರಿಗೆ ಯಾವುದೇ ಪತ್ರ ಬಂದರೂ ಅದನ್ನು ಒಡೆದು ಓದುತ್ತಿದ್ದರು. ನನ್ನನ್ನು ನೋಡಿದಾಕ್ಷಣ, “ನೀನೇನಾ ಪುಷ್ಪ?’ ಎಂದು ಸ್ವಲ್ಪ ಜೋರಿನ ದನಿಯಲ್ಲಿ ಕೇಳಿದರು. “ಹೌದು ಮೇಡಂ’ ಎಂದೆ ನಡುಗುತ್ತಾ. “ಒಬ್ಬ ಹುಡುಗನಿಂದ ನಿನಗೊಂದು ಪತ್ರ ಬಂದಿದೆ. ಇಷ್ಟು ಸಣ್ಣ ವಯಸ್ಸಿಗೇ ಇದೆಲ್ಲಾ ಬೇಕಾ? ಅದೂ ಅವನು ಶಾಲೆಯ ವಿಳಾಸಕ್ಕೇ ಪತ್ರ ಬರೆದಿದ್ದಾನೆ. ಇದು ಸರಿಯಾ?’ ಅಂತ ಸೀರಿಯಸ್‌ ಆಗಿ ವಿಚಾರಿಸತೊಡಗಿದರು. ವಿಷಯ ಕೇಳಿದಾಕ್ಷಣ ನನಗೆ ಶಾಕ್‌ ಆಯ್ತು . ಏಕೆಂದರೆ ಪ್ರೀತಿ ಪ್ರೇಮ ಇತ್ಯಾದಿಯ ಹತ್ತಿರವೂ ಸುಳಿಯದಷ್ಟು ಮುಗ್ಧ ವಯಸ್ಸು ಅದು. ಅಂಥಾದ್ದರಲ್ಲಿ ನನಗೆ ಪ್ರೇಮಪತ್ರ ಅಂದರೆ! ಆಗಲೇ ನನ್ನ ಕಣ್ಣಲ್ಲಿ ಗಂಗಾ ಯಮುನಾ ಹರಿಯಲು ಶುರುವಾಗಿತ್ತು. ನಾನು ಧೈರ್ಯ ಮಾಡಿ ಕೇಳಿಯೇ ಬಿಟ್ಟೆ-“ಮೇಡಂ, ಆ ಹುಡುಗನ ಹೆಸರೇನು?’ ಆಗ ಮೇಡಂ ಹುಡುಗನ ಹೆಸರು ಹೇಳಿದರು. ಅಂಥ ಹೆಸರಿನವರ್ಯಾರೂ ನನಗೆ ಪರಿಚಯವಿರಲಿಲ್ಲ. “ಮೇಡಂ, ಆ ಹೆಸರಿನವರ್ಯಾರೂ ನನಗೆ ಗೊತ್ತಿಲ್ಲ. ಪತ್ರ ಕೊಡಿ ನೋಡುತ್ತೇನೆ’ ಎಂದೆ. ಅವರು ಪತ್ರ ಕೈಗೆ ಕೊಟ್ಟರು. ನೋಡಿದಾಗ ಅದು ಪುಷ್ಪಾಮಣಿ ಎನ್ನುವವಳ ಹೆಸರಿಗೆ ಬಂದ ಪತ್ರವಾಗಿತ್ತು. ಅವಳು ನನ್ನ ತರಗತಿಯವಳೇ ಆಗಿದ್ದಳು. “ಮೇಡಂ, ಇದು ನನಗೆ ಬಂದಿದ್ದಲ್ಲ. ಇದು ನಮ್ಮ ಕ್ಲಾಸಿನ ಪುಷ್ಪಾಮಣಿಗೆ ಬಂದದ್ದು’ ಎಂದೆ ನಿರಾಳದ ನಿಟ್ಟುಸಿರುಬಿಡುತ್ತಾ.  ಅವರಿಗೂ ಗೊಂದಲವಾಗಿ, “ಹಾಗಾದರೆ ಅವಳನ್ನು ಕಳುಹಿಸು’ ಎಂದರು. ಅಳುಕುತ್ತಳುಕುತ್ತಾ ಸ್ಟಾಫ್ರೂಮ್‌ಗೆ ಹೋದವಳು, ನಗುತ್ತಾ ಬಂದು ಪುಷ್ಪಾಮಣಿಯನ್ನು ಕಳುಹಿಸಿದ್ದೆ. ಅವಳು ಹೋದವಳು ಎಷ್ಟು ಹೊತ್ತಾದರೂ ಬರಲಿಲ್ಲ.

ಅವಳಿಗೆ ಇಷ್ಟೊತ್ತಿಗೆ ಸರಿಯಾಗಿಯೇ ಸಹಸ್ರ ನಾಮಾರ್ಚನೆ ಆಗಿರಬಹುದು ಎಂದು ಆಲೋಚಿಸುತ್ತಾ, ಅವಳಿಗಾಗಿ ಕಾಯುತ್ತಾ ಇದ್ದೆ. ಆಗಲೇ ತರಗತಿಯವರಿಗೆಲ್ಲ ವಿಷಯ ಗೊತ್ತಾಗಿದ್ದುದರಿಂದ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಅಳುತ್ತಾ ಬಂದ ಅವಳಿಂದ ಎಲ್ಲರಿಗೂ ಏನು ನಡೆಯಿತೆಂದು ತಿಳಿಯಿತು. ಪುಷ್ಪಾಮಣಿಗೆ ಮಾವನ ಮಗನ ಜೊತೆ ಮದುವೆ ನಿಶ್ಚಯವಾಗಿತ್ತು. ಮನೆಗೆ ನೇರವಾಗಿ ಪತ್ರ ಬರೆದರೆ, ಎಲ್ಲರಿಗೂ ಗೊತ್ತಾಗಬಹುದೆಂದು ಆ ಹುಡುಗ ಶಾಲೆಯ ವಿಳಾಸಕ್ಕೆ ಪತ್ರ ಬರೆದಿದ್ದ. ಅಂತೂ ನನ್ನ ಮೇಲೆ ಬಂದಿದ್ದ ಆಪಾದನೆ ಮೋಡದಂತೆ ಕರಗಿ ಹೋಗಿತ್ತು. ಪುಷ್ಪಾಮಣಿಯು ಪುಷ್ಪಳಾಗಿ ಒಂದು ಕ್ಷಣ ನನ್ನನ್ನು ವಿಚಲಿತಗೊಳಿಸಿಬಿಟ್ಟಿದ್ದಳು.

ಪುಷ್ಪಾ ಎನ್‌.ಕೆ. ರಾವ್‌

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.