ಬಾರೋ ಬಾರೋ “ಮನೆ’ರಾಯ!
Team Udayavani, Mar 13, 2018, 12:05 PM IST
ಮನೆ ಕಟ್ಟಿ ನೋಡು ಎಂದು ಹಿರಿಯರ ಮಾತಿದೆ. ನಿವೇಶನ ಖರೀದಿಯಿಂದ ಹಿಡಿದು ಕಾರ್ಮಿಕರ ಶ್ರಮದವರೆಗೂ ಗೃಹ ನಿರ್ಮಾಣದ ವೇಳೆ ಖರ್ಚುವೆಚ್ಚಗಳು ಇದ್ದದ್ದೇ. ಆದರೆ, ನಗರಗಳಲ್ಲಿ ಕನಸಿನ ಮನೆ ನಿರ್ಮಿಸಲು ಪೂರ್ವನಿಯೋಜಿತವಾಗಿ ಮನೆಯ ನೀಲನಕ್ಷೆ ತಯಾರಿಸಿ ಸರ್ಕಾರದ ಅನುಮತಿ ಪಡೆಯಬೇಕು. ಹೀಗಾಗಿ, ನೀಲನಕ್ಷೆ ಅಥವಾ ಮನೆಯ ಪ್ಲಾನ್ ಅನ್ನು ತಯಾರಿಸುವ ಒಂದು ವರ್ಗವೇ ಇದೆ. ಅವರನ್ನು ಬಿ.ಐ.ಎಂ. ಆರ್ಕಿಟೆಕ್ಚರ್ ಎಂದು ಕರೆಯುತ್ತಾರೆ…
“ಮನೆ ಕಟ್ಟಲು ನಗರ ಪಂಚಾಯತ್‌ಗೆ ಬ್ಲೂಪ್ರಿಂಟ್ ನೀಡಿದ್ದೇನೆ. ಅಲ್ಲಿ ಒಪ್ಪಿಗೆ ಸಿಕ್ಕಿದರೆ ನಾಳೆಯಿಂದಲೇ ಮನೆ ಕೆಲಸ ಶುರು’. “ಮನೆ ಡಿಸೈನ್ ಸಿಕ್ರೆ ಸಾಕು, ಅಪ್ರೂವಲ್‌ಗೆ ಕೊಟ್ಟು ಬಿಡುತ್ತೇನೆ. ಈ ಪ್ಲಾನ್ ಸಕ್ಸಸ್ ಆದ್ರೆ ಅರ್ಧ ಕೆಲಸ ಆದ ಹಾಗೆ’ ಹೀಗೆಲ್ಲಾ ಹೇಳುವುದನ್ನು ಕೇಳಿದ್ದೇವೆ. ಅಲ್ಲದೆ, ಕನಸಿನ ಮನೆಯ ನಕ್ಷೆಯ ಜೊತೆ ತ್ರೀಡಿ ಮಾದರಿಯ ಮನೆಯ ಹೊರಾಂಗಣ, ಒಳಾಂಗಣ, ಹಾಲ್, ಅಡುಗೆ ಮನೆ, ಸೀಲೀಂಗ್ ಏರಿಯಾ ಸೇರಿದಂತೆ ಮನೆಯನ್ನು ಹೇಗೆ ನಿರ್ಮಿಸಬೇಕು ಎಂದು ಮುಂಚಿತವಾಗಿ ಸ್ಯಾಂಪಲ್ ಮಾದರಿಯ ವಿಡಿಯೊಗಳನ್ನು ನಿರ್ಮಿಸಿಕೊಳ್ಳುವುದೂ ಇದೆ.
ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್, ಮೇಲ್ಸೇತುವೆ, ಮೆಟ್ರೋ, ಸ್ಟೀಲ್ ಬ್ರಿಡ್ಜ್ ಮಾದರಿಯ ಕಟ್ಟಡಗಳಿಗೆ ನಕ್ಷೆಯಿಲ್ಲದೆ ಕೆಲಸವೇ ಸಾಗದು. ಈ ನಕ್ಷೆಗಳಲ್ಲಿ ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಪ್ಲಾನ್‌ಗಳೂ ಸಿಗುವುದುಂಟು. ಈ ರೀತಿಯ ವಿನ್ಯಾಸಗಳನ್ನು ಮಾಡುವವರೇ ಆರ್ಕಿಟೆಕ್ಟ್ ಎಂಜಿನಿಯರ್ ಅಥವಾ ಬಿ.ಐ.ಎಂ ಆರ್ಕಿಟೆಕ್ಚರ್‌ಗಳು.
ಹಿಂದೆಲ್ಲಾ ಮನೆಯ ಅಥವಾ ಊರಿನ ಹಿರಿಯರು ತಮ್ಮ ಅನುಭವದ ಆಧಾರದಲ್ಲಿ- ಈ ಕಡೆಗೆ ರೂಮ್ ಇರಲಿ, ಇಲ್ಲಿ ಅಡುಗೆಮನೆ, ಪೂರ್ವ ದಿಕ್ಕಿಗೆ ದೊಡ್ಡ ಬಾಗಿಲು, ಹೊಸ್ತಿಲು ದಾಟಿದ ತಕ್ಷಣವೇ ಹಾಲ್… ಹೀಗಿರಲಿ ಎಂದು ಬಿಡುತ್ತಿದ್ದರು. ಆದರೆ ಈಗ, ಆರ್ಕಿಟೆಕ್ಚರ್ ಅನ್ನಿಸಿಕೊಂಡವರು ಪ್ಲಾನ್ ಹಾಕಿಕೊಟ್ಟರೇ ಮನೆ ಕಟ್ಟಿಸುವವರಿಗೆ ಸಮಾಧಾನ. ಎಲ್ಲವನ್ನೂ ವಾಸ್ತು ಪ್ರಕಾರವೇ ರಚಿಸಿದ್ದೇನೆ ಎಂದು ಆತ ಹೇಳಿಬಿಟ್ಟರಂತೂ ಪೂರ್ತಿ ನೆಮ್ಮದಿ. ಈಗ ಆರ್ಕಿಟೆಕ್ಚರ್‌ಗಳಿಗೆ ಭಾರೀ ಬೇಡಿಕೆ ಮತ್ತು ಕೈ ತುಂಬಾ ಸಂಬಳ. ಈ ಹುದ್ದೆಗೆ ಸೇರಬೇಕೆಂದರೆ…
ವಿದ್ಯಾಭ್ಯಾಸ
ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿ ಪದವಿಗೆ ಆರ್ಕಿಟೆಕ್ಟ್ ಎಂಜಿನಿಯರಿಂಗ್‌ಗೆ ಸೇರಬಹುದು. ಅಲ್ಲದೆ ಯಾವುದೇ ಪದವಿ ಓದಿ, ಬಳಿಕ ಆಟೋ ಕ್ಯಾಡ್ ಮತ್ತು ರೆಟ್ ತಂತ್ರಾಂಶಗಳ ಬಗ್ಗೆ ಪ್ರಾವೀಣ್ಯತೆ ಪಡೆದು ಬಿ.ಐ.ಎಂ (ಬಿಲ್ಡಿಂಗ್ ಇನಾ#ರ್ಮೆಷನ್ ಮಾಡೆಲಿಂಗ್) ಅರ್ಕಿಟೆಕ್ಚರ್ ಆಗಬಹುದು. ಮತ್ತೂಂದು ಮಾರ್ಗದಲ್ಲಿ ವಿಜ್ಞಾನ ಪಿಯು ಬಳಿಕ ನ್ಯಾಟ್/ ಜೆಇಇ ಎಂಟ್ರೆನ್ಸ್ ಎಕ್ಸಾಮ್ ಮುಗಿಸಿ ಪದವಿಯಲ್ಲಿ ಬಿ. ಆರ್ಕಿಟೆಕ್ಚರ್ ಮತ್ತು ಎಂ. ಆರ್ಕಿಟೆಕ್ಚರ್ ವಿದ್ಯಾಭ್ಯಾಸ ಮಾಡಿ ತಮ್ಮ ಗುರಿಸಾಧಿಸಬಹುದು. ಇದರಲ್ಲಿ ಬಹಳಷ್ಟು ವಿಭಾಗಗಳಿದ್ದು, ಮನೆ ಮಾದರಿ, ಎಲೆಕ್ಟ್ರಿಕಲ್, ಪ್ಲಂಬಿಂಗ್ ಇತ್ಯಾದಿಗಳನ್ನು ಪರಿಚಯಿಸುವ ಕೋರ್ಸ್‌ಗಳಿವೆ. ಹಾಗಾಗಿ ಮೊದಲೇ ಏನಾಗಬೇಕೆಂಬುದನ್ನು ನಿರ್ಣಯ ಮಾಡಿಕೊಳ್ಳುವುದು ಒಳಿತು.
ವೇತನ ಎಷ್ಟಿರುತ್ತೆ?
ಆರ್ಕಿಟೆಕ್ಚರ್ ಅಥವಾ ಬಿಲ್ಡಿಂಗ್ ಇನಾ#ರ್ಮೆಷನ್ ಮಾಡೆಲಿಂಗ್ ಆರ್ಕಿಟೆಕ್ಚರ್ ಹುದ್ದೆಯಲ್ಲಿರುವವರಿಗೆ ಅವರ ವಿದ್ಯಾರ್ಹತೆ ಮತ್ತು ಪ್ರಾವೀಣ್ಯತೆ ಆಧಾರದ ಮೇಲೆ ಹುದ್ದೆಗಳು ಹಾಗೂ ಸಂಬಳ ನಿಗದಿಯಾಗುತ್ತದೆ. ಪ್ರಾರಂಭ ಹಂತದ ಉದ್ಯೋಗಿಗಳಿಗೆ ವಾರ್ಷಿಕವಾಗಿ 3 ಲಕ್ಷ ರೂ. ವರೆಗೂ ಸಂಬಳ ನೀಡುವುದಿದೆ. ಅಲ್ಲದೆ ಅನುಭವಿ ಆರ್ಕಿಟೆಕ್ಚರ್‌ಗಳಿಗೆ ವಾರ್ಷಿಕವಾಗಿ 17 ಲಕ್ಷ ರೂ. ವರೆಗೂ ವೇತನ ಇರುತ್ತದೆ.
ಅವಕಾಶಗಳು ಎಲ್ಲೆಲ್ಲಿ?
ಕಟ್ಟಡ ವಿನ್ಯಾಸ ವಲಯ, ಆರ್ಕಿಟೆಕ್ಚರ್ ಮತ್ತು ಅಭಿಯಂತರ ಸೇವಾ ವಲಯ, ಕೇಂದ್ರ ಸಾರ್ವಜನಿಕ ಕಾರ್ಯ ಇಲಾಖೆ, ಸಹಕಾರಿ ಕ್ಷೇತ್ರ, ನಗರಾಭಿವೃದ್ಧಿ ಇಲಾಖೆ, ಎಚ್‌ಯುಡಿಸಿಒ, ನ್ಯಾಷನಲ್ ಬಿಲ್ಡಿಂಗ್ ಸಂಘಟನೆ, ಸ್ವತಂತ್ರ ಉದ್ಯೋಗ.
– ಅನಂತನಾಗ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.