ಕೋವಿಡ್-19 ಹೊಕ್ಕೈತಿ ಮೈಯ್ನಾಗ…
ಬಂತಲ್ರಿ ಕೋವಿಡ್-19 ಹಾಡು!!
Team Udayavani, Apr 21, 2020, 1:00 PM IST
ಕೋವಿಡ್-19 ಎಲ್ಲ ಕಡೆ ಹರಡುತ್ತಿದೆ. ಯಾವ ಕಾರಣಕ್ಕೂ ಮನೆಯಿಂದ ಹೊರ ಬರಬೇಡಿ ಅಂತ ನಮ್ಮ ಸಿಎಂ, ಪಿಎಂ ಎಲ್ಲರೂ ಮನವಿ ಮಾಡಿದರೂ, ಕ್ಯಾರೇ ಅನ್ನದ ಜನ, ಹಾದಿ ಬೀದಿ ಅಲೆಯುತ್ತಲೇ ಇದ್ದಾರೆ. ಇಂಥವರಿಗೆ ಜಾಗೃತಿಯ ಅರಿವು ಮೂಡಿಸುವುದು ಹೇಗೆ? ಅದಕ್ಕೆ ಉತ್ತರವೆಂಬಂತೆ- ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಸಂಗಮೇಶ ಉಪಾಸೆ, ಉತ್ತರ ಕರ್ನಾಟಕ ಭಾಷೆಯಲ್ಲಿ- “ಕೊರೊನಾ ಹೊಕ್ಕೈತಿ ಮೈಯ್ನಾಗ… ಎಲ್ರುನೂ ಕೂಸೈತಿ ಮನೆಯಾಗ…” ಅಂತ ಹಾಡು ಬರೆದಿದ್ದಾರೆ. ಆ ಹಾಡು ವೈರಲ್ ಆಗಿದೆ.
ಎಲ್ಲರ ನಾಲಿಗೆಯ ಮೇಲೆ ಹರಿದಾಡತೊಡಗಿದೆ. ಈ ಹಾಡಿನಲ್ಲಿ, ಕೊರೊನಾದ ಪರಿಣಾಮ ಹೇಳುತ್ತಲೇ, ಬಿಡಾಡಿಯಂತೆ ಓಡಾಡುವ ಮಂದಿಗೆ ಬೆಂಡ್ ಎತ್ತಿದ್ದಾರೆ ಸಂಗಮೇಶ್. ಜೊತೆಗೆ, ಪೊಲೀಸರು, ವೈದ್ಯರು, ಪೌರಕಾರ್ಮಿಕರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಗಮೇಶ್ ಮೂಲತಃ ಕವಿ, ನಾಟಕಕಾರ. ಕವನ ಸಂಕಲನಗಳನ್ನು ಹೊರತಂದಿದ್ದಾರೆ. ನಾಟಕ ರಚಿಸಿ,
ಆಡಿಸಿದ್ದಾರೆ. ಈಗ, ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಪರಿಣಾಮ ತಿಳಿದಿದ್ದರೂ, ಅದನ್ನು ಕೇರ್ ಮಾಡದ ಜನರನ್ನು ಎಚ್ಚರಿಸಲು, ತುಸು ಹಾಸ್ಯ ಬೆರೆಸಿ ಹಾಡು ಬರೆದು, ಹಾಡಿದ್ದೇನೆ ಅನ್ನುತ್ತಾರೆ ಅವರು. ಸಂಗೀತ ಕೆ.ಎಂ.ಇಂದ್ರ ಅವರದು. ಸುರೇಶ್, ಚಿಕ್ಕಣ್ಣ ಅವರ ಕ್ಯಾಮೆರಾ ಕೈಚಳಕ ಇದೆ. ಇವರ ಜೊತೆಗೆ
ಕುಟುಂಬದವರು, ಸ್ನೇಹಿತರೆಲ್ಲಾ ಸೇರಿ ನಟಿಸಿದ್ದಾರೆ. ಹಾಡನ್ನು ಕೇಳುತ್ತಿದ್ದರೆ, ಸಂಗಮೇಶ್ ಎದುರು ಮನೆಯ ಗೆಳೆಯನಾಗಿ, ಮನೆಯ ಒಡೆಯನಾಗಿ, ನೆಂಟನಾಗಿ ಬುದ್ಧಿವಾದ ಹೇಳಿದಂತಿದೆ.
ನೀವು ಒಮ್ಮೆ ಈ ಹಾಡು ಕೇಳಿದರೆ, ನಾಳೆಯಿಂದ ಬೀದಿ ಕಡೆ ತಲೆ ಹಾಕೋಲ್ಲ. https://youtu.be/ DPvnBLH‰q1U
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
ಅಪ್ಪಣ್ಣ ಹೆಗ್ಡೆ-90ರ ಸಂಭ್ರಮ-ಅಪ್ಪಣ್ಣ ಹೆಗ್ಡೆ ಆತ್ಮವಿಶ್ವಾಸದ ಪ್ರತೀಕ : ಡಾ| ಹೆಗ್ಗಡೆ
Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.