ಬಟ್ಟೆಗೊಂದು ಕಾಲ
Team Udayavani, Mar 5, 2019, 12:30 AM IST
ಇತ್ತೀಚಿಗೆ ಬಿಡುಗಡೆಯಾದ “ಬೆಲ್ ಬಾಟಂ’ ಕನ್ನಡ ಸಿನಿಮಾ ರೆಟ್ರೋ ಅನುಭವವನ್ನು ಕಟ್ಟಿಕೊಟ್ಟಿತ್ತು. ಆ ಸಿನಿಮಾದಲ್ಲಿ ಪಾತ್ರಧಾರಿಗಳು ತೊಟ್ಟ ಬಟ್ಟೆಗಳೆಲ್ಲವೂ ಹಳೆಯ ಕಾಲವನ್ನು ನೆನಪಿಸುವಂತಿದ್ದವು. ವಸ್ತ್ರವಿನ್ಯಾಸದ ಮೂಲಕ ಕಾಲ, ಸ್ಥಳ ಮತ್ತು ಸನ್ನಿವೇಶವನ್ನು ನಿರ್ಮಿಸುವುದು ಕಾಸ್ಟ್ಯೂಮ್ ಡಿಸೈನರ್‌ನ ಹೊಣೆ…
ರಂಗಭೂಮಿ, ಸಿನಿಮಾ, ಮ್ಯೂಸಿಕ್ ವಿಡಿಯೋ ಕಿರುತೆರೆ ಅಷ್ಟೇ ಯಾಕೆ ಕಾರ್ಯಕ್ರಮಗಳಿಗೆ ಉಡುವ ವಸ್ತ್ರಗಳನ್ನು ವಿನ್ಯಾಸ ಮಾಡುವವರೇ ಕಾಸ್ಟ್ಯೂಮ್ ಡಿಸೈನರ್. ಆಯಾ ಕಾಲಘಟ್ಟಕ್ಕೆ ಹೊಂದುವಂಥ ವಸ್ತ್ರವಿನ್ಯಾಸ ಮಾಡಬೇಕು, ಜೊತೆಗೆ ಅದು ಆ ಪಾತ್ರಕ್ಕೂ ಒಪ್ಪುವಂತಿರಬೇಕು. ಕಲಾನಿರ್ದೇಶಕ, ನಿರ್ದೇಶಕರ ಸಹಕಾರ, ಮಾರ್ಗದರ್ಶನದ ಅಡಿಯಲ್ಲಿ ಇವರು ಕಾರ್ಯ ನಿರ್ವಹಿಸಬೇಕಾಗುತ್ತದೆ. ನಿರ್ಮಾಣದ ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಫ್ಯಾಬ್ರಿಕ್ ಮತ್ತಿತರ ವಸ್ತುಗಳನ್ನು ಹೊಂದಿಸಬೇಕು. ತಿರುಗಾಟವಂತೂ ಈ ವೃತ್ತಿಯ ಬಹುಮುಖ್ಯ ಭಾಗ.
ಕಾಸ್ಟ್ಯೂಮ್ ಡಿಸೈನ್ v/s ಫ್ಯಾಷನ್ ಡಿಸೈನ್
ಬಹುತೇಕ ಮಂದಿ ಇವೆರಡನ್ನೂ ಒಂದೇ ತಿಳಿಯುತ್ತಾರೆ. ಆದರೆ ಹಾಗಿಲ್ಲ, ಪಾತ್ರ, ಸನ್ನಿವೇಶ, ಕಥೆಗೆ ಹೊಂದುವಂತೆ ವಸ್ತ್ರಗಳನ್ನು ವಿನ್ಯಾಸಗೊಳಿಸುವವನು ಕಾಸ್ಟ್ಯೂಮ್ ಡಿಸೈನರ್. ಇದು ಪೊ.ಡಕ್ಷನ್‌ನಿಂದ ಪೊ›ಡಕ್ಷನ್‌ಗೆ ಬದಲಾಗುವಂತಹದ್ದು. ಆದರೆ ಫ್ಯಾಷನ್ ಡಿಸೈನರ್‌ಗಳು ಹೊಸದಾಗಿ, ಆಮೂಲಾಗ್ರ ನೂತನವಾಗಿ ವಿನ್ಯಾಸವನ್ನು ಸೃಜಿಸುತ್ತಾರೆ. ಕಾಸ್ಟ್ಯೂಮ್ ಡಿಸೈನರ್‌ಗಳು ಇವನ್ನು ಮರುಸೃಷ್ಟಿಸುತ್ತಾರೆ. ಉದಾಹರಣೆಗೆ ಇತ್ತೀಚಿಗೆ ಬಿಡುಗಡೆಯಾದ “ಬೆಲ್ ಬಾಟಂ’ ಕನ್ನಡ ಸಿನಿಮಾ. ರೆಟ್ರೋ ಅನುಭವವನ್ನು ಕಟ್ಟಿಕೊಡುವ ಆ ಸಿನಿಮಾದಲ್ಲಿ ಪಾತ್ರಧಾರಿಗಳು ತೊಟ್ಟ ಬಟ್ಟೆಗಳೆಲ್ಲವೂ ಹಳೆಯ ಕಾಲವನ್ನು ನೆನಪಿಸುವಂತಿದ್ದವು. ವಸ್ತ್ರವಿನ್ಯಾಸದ ಮೂಲಕ ಕಾಲ, ಸ್ಥಳ ಮತ್ತು ಸನ್ನಿವೇಶವನ್ನು ನಿರ್ಮಿಸುವುದು ಕಾಸ್ಟ್ಯೂಮ್ ಡಿಸೈನರ್‌ನ ಹೊಣೆ.
ಏನು ಓದಿರಬೇಕು?
ಕಾಸ್ಟ್ಯೂಮ್ ಡಿಸೈನರ್ ಆಗಲು ಇಂತಹುದೇ ಪದವಿ / ಡಿಪ್ಲೊಮಾ ಬೇಕು ಎಂಬ ನಿಯಮವಿಲ್ಲದಿದ್ದರೂ ತತ್ಸಂಬಂಧಿತ ಪದವೀಧರರಿಗೆ ಆದ್ಯತೆ. ಕಾಸ್ಟ್ಯೂಮ್ ಡಿಸೈನರ್ ಪದವಿ ಕೂಡ ಇದೆ. ಕಾಸ್ಟ್ಯೂಮ್ ಗಳ ಚರಿತ್ರೆ, ಕಾಸ್ಟೂ$Âಮ್ ನಿರ್ಮಾಣ, ನಿರ್ವಹಣೆ ಮತ್ತು ಪಾತ್ರಗಳಿಗೆ ಹೊಂದುವ ಕಾಸ್ಟ್ಯೂಮ್ ಗಳ ಆಯ್ಕೆ ಮೊದಲಾದ ವಿಷಯಗಳನ್ನು ಈ ಪದವಿಯಲ್ಲಿ ಬೋಧಿಸಲಾಗುವುದು. ಬೇರೆ ಕ್ಷೇತ್ರದಲ್ಲಿ, ವಿಭಾಗದಲ್ಲಿ ಪದವಿ ಗಳಿಸಿದವರು ಕಾಸ್ಟೂ$Âಮ್ ಡಿಸೈನಿಂಗ್‌ನಲ್ಲಿ ಸರ್ಟಿಫಿಕೆಟ್ ಪ್ರೋಗ್ರಾಂನಲ್ಲಿ ದಾಖಲಾಗಿ ಈ ಕ್ಷೇತ್ರದಲ್ಲಿ ಭವಿಷ್ಯವನ್ನು ಅರಸಬಹುದು. ಫ್ಯಾಷನ್ ಡಿಸೈನ್ ಅಥವಾ ರಂಗಭೂಮಿಯಲ್ಲಿ ಪದವಿ ಪಡೆದವರು ಈ ಮಾರ್ಗದ ಮೂಲಕ ಕಾಸ್ಟ್ಯೂಮ್ ಡಿಸೈನಿಂಗ್ ಕ್ಷೇತ್ರವನ್ನು ಪ್ರವೇಶಿಸಬಹುದು. ಕಲಿಕೆಯ ಎಲ್ಲಾ ವಿಚಾರಗಳಂತೆ ಇಲ್ಲಿಯೂ ಆಸಕ್ತಿಯೇ ಗೆಲ್ಲುವುದು. ಶಾಲಾ, ಕಾಲೇಜು ದಿನಗಳಿಂದಲೇ ಸಭೆ, ಸಮಾರಂಭಗಳಿಗೆ, ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ, ನಾಟಕೋತ್ಸವಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರೆ ಮುಂದೆ ಬೆಳೆಯಲು ಅನುಕೂಲ. ಕೆಲವು ಶಾಲಾ- ಕಾಲೇಜುಗಳ ನಾಟಕೋತ್ಸವಕ್ಕೆ ಪರಿಣಿತ ಕಾಸ್ಟ್ಯೂಮ್ ಡಿಸೈನರ್‌ಗಳನ್ನೇ ಕರೆಸುವುದರಿಂದ ಅವರೊಂದಿಗೆ ಕೆಲಸ ಮಾಡುವುದು ಈ ಅನುಭವಕ್ಕೆ ಬುನಾದಿ.
ಇಂಟರ್ನ್ಶಿಪ್ ಮತ್ತು ಪೋರ್ಟ್‌ಫೋಲಿಯೊ
ಕಾಸ್ಟ್ಯೂಮ್ ಡಿಸೈನಿಂಗ್ ಕ್ಷೇತ್ರದಲ್ಲಿ ಬೆಳೆಯುವಲ್ಲಿ, ಇಂಟರ್ನ್ಶಿಪ್ ಬಹು ಮುಖ್ಯ ಪಾತ್ರ ವಹಿಸುತ್ತದೆ. ರಂಗೋತ್ಸವ, ಪ್ರಾದೇಶಿಕ ರಂಗಚಟುವಟಿಕೆಗಳಲ್ಲಿ ಇಂಟರ್ನ್ಶಿಪ್ ಮಾಡಿ ಅನುಭವಿ ಕಾಸ್ಟ್ಯೂಮ್ ಡಿಸೈನರ್‌ಗಳ ಒಂದೆರಡು ಪೊ›ಡಕ್ಷನ್‌ಗಳಲ್ಲಿ ಕೆಲಸ ಮಾಡುವುದರಿಂದ ಅನುಭವ ಪಡೆಯುವುದಷ್ಟೇ ಅಲ್ಲದೆ ಈ ಕ್ಷೇತ್ರದವರ ಸಂಪರ್ಕ, ಸಂಬಂಧ ಪಡೆಯಲು ಅನುಕೂಲವಾಗುತ್ತದೆ.
ಬ್ಯಾಚುಲರ್ ಪದವಿ ಓದಿನಲ್ಲಿ, ಇಂಟರ್ನ್ಶಿಪ್‌ನಲ್ಲಿ ಕೈಗೊಂಡ ಪ್ರಾಜೆಕ್ಟ್ಗಳನ್ನು ಸೇರಿಸಿಕೊಂಡು ನಿಮ್ಮ ಪೋರ್ಟ್‌ಫೋಲಿಯೊ ಬೆಳೆಸಿ. ನೀವು ವಿನ್ಯಾಸಗೊಳಿಸಿದ ವಸ್ತ್ರಗಳು, ನೀವು ಬಿಡಿಸಿದ ಕಾಸ್ಟ್ಯೂಮ್ನ ರೇಖಾಚಿತ್ರಗಳು, ಚಿತ್ರ-ಸ್ಕೆಚ್‌ಗಳು ಇವನ್ನೆಲ್ಲ ಸೇರಿಸಿ ಮಾಡಿದ ಪೋರ್ಟ್‌ಫೋಲಿಯೊ ಅನ್ನು ಪೊ.ಡಕ್ಷನ್ ಕಂಪನಿಗಳಿಗೆ ಮತ್ತಿತರ ಸೂಕ್ತ, ಸಂಭವನೀಯ ಉದ್ಯೋಗದಾತರಿಗೆ ಕಳಿಸಿಕೊಡಿ.
– ರಘು ವಿ.,ಪ್ರಾಂಶುಪಾಲರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.