“ಕಾಮರ್ಸ್’ ರಾಜಮಾರ್ಗ
Team Udayavani, Nov 27, 2018, 6:00 AM IST
ಜಗತ್ತಿನಲ್ಲಿ ಯಾವ ಉದ್ಯೋಗ ಕ್ಷೇತ್ರದಲ್ಲಿ ಏನೇ ತಲ್ಲಣ ಸೃಷ್ಟಿ ಆಗಬಹುದು. ಎಲ್ಲಿ ಏನೇ ಆದರೂ, ಹಣದ ಕ್ಷೇತ್ರಕ್ಕೆ ಯಾವುದೇ ಅತಂಕ ಕಾಡುವುದಿಲ್ಲ. ವಿತ್ತದ ಸುತ್ತಮುತ್ತ ಸೃಷ್ಟಿಯಾದ ಉದ್ಯೋಗಗಳಿಗೆ ಭವಿಷ್ಯವಂತೂ ಇದ್ದೇ ಇರುತ್ತದೆ. ಕಾಮರ್ಸ್ ಹಾದಿ ಹಿಡಿಯುವ ವಿದ್ಯಾರ್ಥಿಗಳಿಗೆ ಭವಿಷ್ಯದ ಕಿಂಡಿಗಳನ್ನು ಇಲ್ಲಿ ನೀಡಲಾಗಿದೆ…
ಕೈಗಾರಿಕಾಭಿವೃದ್ಧಿ ಹಾಗೂ ಉದ್ಯೋಗ ಕ್ಷೇತ್ರಗಳ ಬೆಳವಣಿಗೆಯು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ಕಳೆದ ದಶಕಗಳಿಗೆ ಹೋಲಿಸಿದರೆ, ಉದ್ಯೋಗ ಕ್ಷೇತ್ರ ಹೊಸ ಹೊಸ ಉದ್ಯೋಗ ವಿಭಾಗಗಳನ್ನು ಸೃಷ್ಟಿಸಿಕೊಳ್ಳುತ್ತಾ ವಿಸ್ತಾರವಾಗುತ್ತಾ ಸಾಗಿದೆ. ವಿಜ್ಞಾನದಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವುದು ಕಾಮರ್ಸ್ ಕ್ಷೇತ್ರ. ಹಿಂದೆ ಪದವಿ ಕಾಲೇಜುಗಳಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ಕಾಲವೊಂದಿತ್ತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದವರು ಪಿ.ಯು.ಸಿ.ಗೆ ಕಾಮರ್ಸ್ ಆರಿಸಲು ಹಿಂದೇಟು ಹಾಕುತ್ತಿದ್ದ ಕಾಲವದು. ಆದರೀಗ ವಿಜ್ಞಾನ ಪದವೀಧರರೂ, ಎಂ.ಬಿ.ಎ. ಮಾಡಲು ಆಸಕ್ತಿ ತೋರುತ್ತಿರುವ ಕಾಲ. ಇಂದು ಕಾಮರ್ಸ್ ವಿದ್ಯಾರ್ಥಿಗಳಿಗೆ ಪಿ.ಯು.ಸಿ. ನಂತರದ ಭವಿಷ್ಯದ ಮಾರ್ಗಗಳು ಹಲವಾರಿವೆ. ಅವುಗಳಲ್ಲಿ ಆಯ್ದ ಆರನ್ನು ಇಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ಕರಿಯರ್ ಪ್ಲಾನ್ ಮಾಡಿದಲ್ಲಿ, ವಾಣಿಜ್ಯ ವಲಯದ ಅವಕಾಶಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಯಶಸ್ಸಿನ ವೃತ್ತಿಜೀವನ ರೂಪಿಸಿಕೊಳ್ಳಬಹುದು.
1. ಎಕನಾಮಿಸ್ಟ್: ಇದೊಂದು ಸಂಶೋಧನಾ ಆಧಾರಿತ ವೃತ್ತಿ. ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಮಾರುಕಟ್ಟೆಯ ಪ್ರವೃತ್ತಿ ಮತ್ತು ಬೇಡಿಕೆಗಳನ್ನು ಗ್ರಹಿಸುವುದು, ಮತ್ತು ಅರ್ಥಿಕ ಅಭಿವೃದ್ಧಿಗೆ ಪೂರಕವಾದ ಸುಧಾರಣಾ ಕ್ರಮಗಳು ಮತ್ತು ಆರ್ಥಿಕ ನೀತಿಗಳನ್ನು ರೂಪಿಸುವ ಕೆಲಸವನ್ನು ಒಳಗೊಂಡಿರುತ್ತದೆ. ಖಾಸಗಿ ಬ್ಯಾಂಕ್‌ಗಳು, ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗವಕಾಶಗಳು ದೊರೆಯುತ್ತವೆ.
2. ಆಕುcವೆರಿಯಲ್ ಸೈನ್ಸ್: ಗಣಿತ, ಅಂಕಿಅಂಶಗಳ ಅಧ್ಯಯನ ಹಾಗು ಮಾಹಿತಿ ವಿಶ್ಲೇಷಣೆಯಲ್ಲಿ ಆಸಕ್ತಿಯಿದ್ದವರು ಕಾಮರ್ಸ್‌ನ ಈ ವಿಭಾಗದಲ್ಲಿ ಕೆಲಸ ನಿರ್ವಹಿಸಬಹುದು. ಇಲ್ಲಿ ಉದ್ಯೋಗಿಗಳು ಇನ್ಷೊರೆನ್ಸ್‌ಗಳು, ಪೆನÒನ್ ಫಂಡ್‌ಗಳ ಕುರಿತಾಗಿ ಕೆಲಸ ಮಾಡಬೇಕಾಗುತ್ತದೆ. ನಷ್ಟ ಸಂಭವನೀಯತೆ ಪತ್ತೆ ಹಚ್ಚುವಿಕೆ, ವಿಮಾ ಮೊತ್ತ ನಿಶ್ಚಯ, ಆರ್ಥಿಕ ಕ್ರಮಗಳ ಹೊಣೆಗಾರಿಕೆಯೂ ಇರುತ್ತದೆ. ಮಿಕ್ಕ ವಿಭಾಗಗಳಿಗೆ ಹೋಲಿಸಿದರೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎನ್ನುವುದು ಅನುಭವಸ್ಥರ ಮಾತು. ಆದರೆ, ಹೆಚ್ಚಿನ ಸಂಬಳವೂ ದೊರೆಯುವುದರಿಂದ ಪ್ರತಿಭಾನ್ವಿತರು ಈ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಲು ಹಾತೊರೆಯುತ್ತಾರೆ. ಅದಕ್ಕಾಗಿ ಆಸಕ್ತರು “ಆಕುcವೆರಿಯಲ್ ಕಾಮನ್ ಎಂಟ್ರೆನ್ಸ್ ಟೆಸ್ಟ್'(ಎ.ಸಿ.ಎ.ಟಿ)ನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
3. ಮ್ಯಾನೇಜ್‌ಮೆಂಟ್: ಮೇಲಿನ ವಿಭಾಗಗಳಂತೆ ಇಲ್ಲಿ ಗಣಿತ, ಮಾರುಕಟ್ಟೆಯ ಅಧ್ಯಯನ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿಲ್ಲ. ಇಲ್ಲಿ ಕೆಲಸ ನಿರ್ವಹಿಸಲು ಅಭ್ಯರ್ಥಿಗಳಿಗೆ ಮುಖ್ಯವಾಗಿ ಬೇಕಿರುವುದು ಸಂಘಟನಾ ಚತುರತೆ ಮತ್ತು ಸಂವಹನ ಕಲೆ. ಯಾವುದೇ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವಿಭಾಗ, ಮಾರುಕಟ್ಟೆ ವಿಭಾಗ, ಯೋಜನಾ ವಿಭಾಗ, ಕಾರ್ಯಚಟುವಟಿಕೆ ವಿಭಾಗ, ಸಪ್ಲೇಯರ್ ಚೈನ್ ವಿಭಾಗಗಳಲ್ಲಿ ಕೆಲಸ ಮಾಡಬಹುದು. ಯಾವುದೇ ಪದವಿ ಪಡೆದಿದ್ದರೂ, ನಂತರ ಎಂ.ಬಿ.ಎ ಪದವಿ ಮಾಡಿದವರು ಈ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಬಹುದು.
4. ಚಾರ್ಟೆರ್ಡ್ ಅಕೌಂಟೆನ್ಸಿ: ಕಾಮರ್ಸ್ ಕ್ಷೇತ್ರ ಎಂದಾಕ್ಷಣ ನೆನಪಾಗುವ ಉದ್ಯೋಗವೆಂದರೆ ಸಿ.ಎ. (ಚಾರ್ಟರ್ಡ್ ಅಕೌಂಟೆನ್ಸಿ). ಕಂಪನಿಗಳ ಆಡಿಟಿಂಗ್, ಹಣ ಹೂಡಿಕೆ, ಫೈನಾನ್ಸ್ ಅನ್ನು ನಿರ್ವಹಿಸುವವರು ಸಿ.ಎ.ಗಳು. ಅಲ್ಲದೇ, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಇವರಿಗೆ ಬಹಳಷ್ಟು ಅವಕಾಶಗಳಿವೆ. ಸಿ.ಎ.ಗಳು ಸ್ವತಂತ್ರವಾಗಿಯೂ ಕೆಲಸ ಮಾಡಬಹುದು. ಅಲ್ಲದೇ, ಅಂತಾರಾಷ್ಟ್ರೀಯ ಕಂಪನಿಗಳಲ್ಲೂ ಕೆಲಸ ನಿರ್ವಹಿಸಬಹುದು. ಸಿ.ಎ. ಆಗಬೇಕೆಂದರೆ ಮುಖ್ಯವಾಗಿ “ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)’ ಅವರು ಆಯೋಜಿಸುವ ಪರೀಕ್ಷೆಯನ್ನು ಪಾಸು ಮಾಡಬೇಕು. ಐಸಿಎಐ ಅವರ ಈ ವೃತ್ತಿಪರ ಸರ್ಟಿಫಿಕೇಷನ್ ಕೋರ್ಸ್‌ಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಇದೆ. ಅದನ್ನು ಪಾಸು ಮಾಡುವುದು ಸುಲಭವಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
5. ಬ್ಯಾಂಕ್‌ನಲ್ಲಿ ಪ್ರೊಬೇಷನರಿ ಆಫೀಸರ್ (ಪಿ.ಒ): ಈ ವೃತ್ತಿಯು ಪ್ರಾಥಮಿಕ ಹಂತದ್ದಾಗಿದೆ. ಬ್ಯಾಂಕ್‌ನಲ್ಲಿ, ದೈನಂದಿನ ವ್ಯವಹಾರಗಳಿಗೆ ಸಂಬಂಧಿಸಿದ, ಜವಾಬ್ದಾರಿಗಳನ್ನು ನಿರ್ವಹಿಸುವುದು ಪ್ರೊಬೇಷನರಿ ಆಫೀಸರ್‌ಗಳ ಕೆಲಸ. ಈ ಕೆಲಸವನ್ನು ಪಡೆಯಲು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ನಡೆಸುವ ಪಿ.ಒ. ಪರೀಕ್ಷೆಗಳನ್ನು ಪಾಸು ಮಾಡಬೇಕಾಗಿರುತ್ತದೆ. ಪ್ರೊಬೇಷನರಿ ಆಫೀಸರ್‌ಗಳ ಕಾರ್ಯಾವಧಿ ನಿಗದಿತವಾಗಿರುತ್ತದೆ. ಸಾಮಾನ್ಯವಾಗಿ ಎರಡು ವರ್ಷಗಳ ಕಾಲವಿರುತ್ತದೆ. ಅವಧಿ ಮುಗಿದ ನಂತರ ಅಸಿಸ್ಟೆಂಟ್ ಮ್ಯಾನೇಜರ್, ನಂತರ ಬ್ರ್ಯಾಂಚ್ ಮ್ಯಾನೇಜರ್ ಆಗಿ ಭಡ್ತಿ ಪಡೆಯುತ್ತಾರೆ.
6. ಸ್ಟಾಕ್ ಬ್ರೋಕಿಂಗ್: ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ, ಷೇರು ಖರೀದಿ ಮತ್ತು ಮಾರಾಟಗಳಿಗೆ ಸಂಬಂಧಿಸಿದ ವೃತ್ತಿಯನ್ನು ಸ್ಟಾಕ್ ಬ್ರೋಕಿಂಗ್ ಎನ್ನುತ್ತಾರೆ. ಇವರು ಷೇರುಪೇಟೆ ಬೆಳವಣಿಗೆಗಳ ಕುರಿತು ಸದಾ ನಿಗಾ ವಹಿಸಿರುತ್ತಾರೆ. ಶ್ರೀಸಾಮಾನ್ಯನಿಂದ ಹಿಡಿದು ಮಲ್ಟಿನ್ಯಾಷನಲ್ ಕಂಪನಿಗಳವರೆಗೂ ಸ್ಟಾಕ್ ಬ್ರೋಕರ್‌ಗಳಿಗೆ ಗ್ರಾಹಕರಿರುತ್ತಾರೆ. ಮಾರುಕಟ್ಟೆ ಏರಿಳಿತ, ಹಣದುಬ್ಬರ ಇತ್ಯಾದಿಗಳ ಬಗೆಗೆ ಸಲಹೆ ಸೂಚನೆ ನೀಡುವ ಜವಾಬ್ದಾರಿಯೂ ಇವರಿಗಿರುತ್ತದೆ. ಬಾಂಬೆ ಷೇರುಪೇಟೆ ಮಾರುಕಟ್ಟೆ ನಡೆಸುವ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಪಾಸು ಮಾಡಿದರೆ ಮಾನ್ಯತೆ ಮತ್ತು ಬೇಡಿಕೆ ಎರಡೂ ಅಭ್ಯರ್ಥಿಗೆ ಸಿಗುತ್ತದೆ. ಬ್ರೋಕರೇಜ್ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಹೂಡಿಕೆ ಬ್ಯಾಂಕ್‌ಗಳು ಮುಂತಾದ ಕಡೆಗಳಲ್ಲಿ ಇವರು ಕೆಲಸ ನಿರ್ವಹಿಸುತ್ತಾರೆ.
ಪ್ರಶಾಂತ್ ಕೋಲ್ಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.