ದಟ್ಟ ಹಿಮ, ಅಲ್ಲೊಬ್ಬ ಹ್ಯಾರಿಪಾಟರ್‌!

Team Udayavani, Nov 28, 2017, 11:34 AM IST

28-15.jpg

2010ರಲ್ಲಿ ನಾವು ಸ್ಕಾಟ್‌ಲ್ಯಾಂಡ್‌ನ‌ಲ್ಲಿದ್ದೆವು. ಆ ವರ್ಷ ದಾಖಲೆ ಪ್ರಮಾಣದಲ್ಲಿ ಸ್ನೋ (ಹಿಮ) ಬಿತ್ತು. ಇಂಥ ದಿನಗಳ ಮುನ್ಸೂಚನೆ ಸಿಕ್ಕ ಕೂಡಲೆ ಸರ್ಕಾರ ನೆಲಕ್ಕೆ ಮರಳು (ಗ್ರಿಟ್‌) ಹಾಕಿ ಮುಖ್ಯರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡುತ್ತದೆ. ಒಂದು ದಿನ ಮನೆಯಿಂದ 25 ಕಿ.ಮೀ. ದೂರದಲ್ಲಿದ್ದ ಕೆಲಸಕ್ಕೆ ಕಾರಿನಲ್ಲಿ ಹೋಗಿದ್ದೆ. ಬೆಳಗ್ಗೆಯಿಂದಲೇ ಮತ್ತೆ ಸ್ನೋ ಬೀಳಲು ಶುರುವಾಯ್ತು. ವಾಪಸ್‌ ಮನೆಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಮಕ್ಕಳನ್ನು ಬೇಗ ಮನೆಗೆ ಕರೆದೊಯ್ಯಬೇಕೆಂದೂ, ಶಾಲೆಗೆ ರಜೆ ಘೋಷಿಸಲಾಗಿದೆಯೆಂದೂ ಮಗನ ಶಾಲೆಯಿಂದ ಕರೆಬಂತು.

ವಿಧಿಯಿಲ್ಲದೆ ಬೀಳುತ್ತಿರುವ ಸ್ನೋ, ಕತ್ತಲೆ (ಚಳಿಗಾಲದಲ್ಲಿ 4 ಗಂಟೆಗೆಲ್ಲ ದಟ್ಟ ಕತ್ತಲೆ ಆವರಿಸುತ್ತದೆ) ಮತ್ತು ಕ್ರಮಿಸಲು ದುಸ್ಸಾಧ್ಯ ಎನ್ನುವ ರಸ್ತೆಗಿಳಿದೆ. ಮನೆ ಸೇರಲು ಇನ್ನೂ 7 ಕಿ.ಮೀ. ಇದೆ ಎನ್ನುವಾಗ ಮುಖ್ಯ ರಸ್ತೆ ಬಿಟ್ಟು, ಸಣ್ಣ ರಸ್ತೆಗೆ ಬರಬೇಕಿತ್ತು. ಅರ್ಧ ರಸ್ತೆ ಕ್ರಮಿಸಿದ್ದೆ ಅಷ್ಟರಲ್ಲಿ  ಹಳೆಯ ಮಂಜುಗಡ್ಡೆ  ಮತ್ತು ಅದರ ಮೇಲೆ ಬಿದ್ದಿದ್ದ ಒಂದಡಿ ಸ್ನೋ ಕೆಳಗೆ ಕಾರಿನ ಚಕ್ರಗಳು  ಸಿಕ್ಕಿಕೊಂಡವು. ಸಣ್ಣ ರಸ್ತೆಗಳಾಗಿದ್ದ ಕಾರಣ ಈ ರಸ್ತೆಗಳಿಗೆ ಸರ್ಕಾರ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಏನೇನು ಮಾಡಿದರೂ ಗೊರ್‌ರ್‌.. ಎಂದು ಸದ್ದು ಮಾಡಿ ಕಾರು ಹರತಾಳ ಹೂಡಿತ್ತು.

ಈ ವೇಳೆಗೆ ರಸ್ತೆಯಲ್ಲಿ ಸಂಚಾರವೇ ಇರಲಿಲ್ಲ. ಸುಮಾರು ಅರ್ಧ ಗಂಟೆಯಾಗುವಷ್ಟರಲ್ಲಿ ನನ್ನ ಕೈಗಳೂ ಮರಗಟ್ಟತೊಡಗಿದವು. ಈಗೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ, ಬೀಳುತ್ತಿರುವ ಹಿಮದಲ್ಲಿ ಬ್ರಿಟಿಷ್‌ ವ್ಯಕ್ತಿಯೊಬ್ಬ ನಡೆದು ಬರುವುದು ಕಾಣಿಸಿತು. ಯಾರೋ, ಏನೋ? ಹೇಗೆ ಸಹಾಯ ಕೇಳುವುದು ಎನ್ನುವ ತರ್ಕದಲ್ಲಿರುವಾಗಲೇ, ಆತನೇ ಬಳಿಬಂದು  “ಕ್ಯಾನ್‌ ಐ ಹೆಲ್ಪ… ಯು?’ ಅಂತ ಕೇಳಿದ. ಬೀಳುತ್ತಿರುವ ಸ್ನೋನಲ್ಲಿ ಅವನೇನೂ ಸುರಕ್ಷಿತವಾಗಿರಲಿಲ್ಲ. ಆದರೆ ಸತತ 20 ನಿಮಿಷಗಳ ಪರಿಶ್ರಮ ಪಟ್ಟು ಕಾರನ್ನು ಹಿಂದಕ್ಕು ಮುಂದಕ್ಕು  ಆಡಿಸಿ, ಕೈಯಿಂದ ತಳ್ಳಿ ಅತ್ಯಂತ ಪರಿಶ್ರಮ ಪಟ್ಟು ಆ  ಜಾಗದಿಂದ ಮುಂದೆ ಹೋಗಲು ನೆರವು ನೀಡಿದ. ಬರಿಯ ಥ್ಯಾಂಕ್ಯೂವನ್ನು ಮೀರಿದ ಭಾವಾವೇಶದಿಂದ ಅವನಿಗೆ ವಂದನೆಗಳನ್ನು ಸಲ್ಲಿಸಿ ಹೇಗೋ ಮನೆ ಸೇರಿದೆ.

  ಮರುದಿನದ ವಾರ್ತೆಗಳಲ್ಲಿ ಗ್ರಿಟ್‌ ಹಾಕಲು ಬರುವ ವಾಹನಗಳೂ ಕೂಡ ಭಾರಿಯಾಗಿ ಸುರಿದ ಹಿಮದಲ್ಲಿ ಸಿಲುಕಿ ನೂರಾರು ಮಂದಿ ವಾಹನಗಳನ್ನು ರಸ್ತೆಗಳಲ್ಲೇ ತೊರೆದು ಹತ್ತಿರದ ಶಾಲೆಗಳಲ್ಲಿ, ಇನ್ನಿತರೆಡೆ ವಾಸ್ತವ್ಯ ಹೂಡಿದ ಕಥೆಗಳು ಬಿತ್ತರಗೊಂಡಿದ್ದವು. ನನ್ನನ್ನು ಅಂಥ ಸಂಕಷ್ಟದಿಂದ ಪಾರು ಮಾಡಿದ ಆತನಿಗೆ ನಾನು ಎಂದೆಂದಿಗೂ ಚಿರಋಣಿ.

ಡಾ. ಪ್ರೇಮಲತಾ ಬಿ.

ಟಾಪ್ ನ್ಯೂಸ್

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.