ಡಿಗ್ರೀ ಆಯ್ತು… ವಾಟ್‌ ನೆಕ್ಸ್ಟ್? ಈಗಷ್ಟೇ ಪದವಿ ಮುಗಿಸಿದವರಿಗೆ…


Team Udayavani, Jul 18, 2017, 3:55 AM IST

filler-AFTER-DIGREE.gif

ಪದವಿಯ ಕೊನೆಯ ಹಂತಕ್ಕೆ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಉದ್ಯೋಗ ತಲೆಬಿಸಿ ಶುರುವಾಗುತ್ತದೆ. ಕೆಲವರು ತಮ್ಮ ಪದವಿಯ ಅವಧಿಯಲ್ಲೇ ಕ್ಯಾಂಪಸ್‌ ಇಂಟರ್‌ವ್ಯೂನಲ್ಲಿ ಯಶಸ್ಸು ಕಂಡು, ಕಂಪನಿಗೆ ಹಾರುವ ಅವಕಾಶ ಪಡೆದಿರುತ್ತಾರೆ. ಮತ್ತೆ ಕೆಲವರು ಉನ್ನತ ಶಿಕ್ಷಣದ ಕನಸಿನಲ್ಲಿರುತ್ತಾರೆ. ಉಳಿದ ಬಹುತೇಕರಿಗೆ ಕೆಲಸ ಹುಡುಕುವುದೇ ಕಾಯಕ. ಇಂಥವರಿಗೆ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿ ಕೆಲವು ಸಲಹೆಗಳಿವೆ…

1. ವಿಷಯಜ್ಞಾನ ಬೆಳೆಸಿಕೊಳ್ಳಿ…
ಪರೀಕ್ಷೆ ಮುಗಿದ ಮೇಲೆ, ವಿದ್ಯಾರ್ಥಿಗಳು ಪುಸ್ತಕದ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗಾಗಿ, ಕಲಿತ ವಿಷಯಗಳೆಲ್ಲ ಕಾಲಕ್ರಮೇಣ ಮರೆತುಹೋಗುವ ಸಾಧ್ಯತೆಗಳಿರುತ್ತವೆ. ಆದ ಕಾರಣ, ವಿಷಯಗಳ ಮರುಜ್ಞಾನವನ್ನು ಸದಾ ಕಾಪಿಟ್ಟುಕೊಂಡಿರಬೇಕು. ನೆನಪಿರಲಿ, ಸಂದರ್ಶನದ ವೇಳೆ ನಿಮ್ಮನ್ನು ಕೈಹಿಡಿಯುವುದೇ ಈ ಸಂಗತಿ.

2. ಮುಂದಿನ ಪರೀಕ್ಷೆಗೆ ತಯಾರಿ
ಪದವಿ ನಂತರ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಹಂಬಲದಲ್ಲಿರುತ್ತಾರೆ. ಅಂಥ ವಿದ್ಯಾರ್ಥಿಗಳು, ಮುಂದಿನ ಪರೀಕ್ಷೆಗಾಗಿ ತಮಗೆ ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು. ಈ ರೀತಿಯ ತಯಾರಿಯಿಂದ ನಿಮಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವ ಸಾಧ್ಯತೆಗಳಿರುತ್ತವೆ. ಸೀನಿಯರ್ಗಳ ಮಾರ್ಗದರ್ಶನ ಪಡೆದು, ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ ಎಂಬ ಮಾಹಿತಿ ಕಲೆಹಾಕಿ. 

3. ಸ್ಪರ್ಧಾತ್ಮಕ ಪರೀಕ್ಷೆ ಮೇಲೆ ಕಣ್ಣಿಡಿ
ಪದವಿ ನಂತರ ಅನೇಕ ವಿದ್ಯಾರ್ಥಿಗಳು ಕೆಎಎಸ್‌, ಐಎಎಸ್‌ ಬ್ಯಾಂಕಿಂಗ್‌ ಸೇರಿದಂತೆ, ಇನ್ನೂ ಅನೇಕ ರೀತಿಯ ಉದ್ಯಮಗಳಲ್ಲಿ ಕೆಲಸಪಡೆಯಲು ಇಚ್ಛಿಸುತ್ತಾರೆ. ಆದರೆ, ಇದು ಸ್ಪರ್ಧಾತ್ಮಕ ಜಗತ್ತು. ಜವಾನನಿಂದ ಹಿಡಿದು ದಿವಾನನ ಪೋಸ್ಟ್‌ವರೆಗೂ “ಪರೀಕ್ಷೆ’ ಎಂಬ ಹರ್ಡಲ್ಸ್‌ ಅನ್ನು ಜಿಗಿಯಲೇಬೇಕು. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಂದು ಕಣ್ಣಿಡಿ. ಅದಕ್ಕೆ ಸಂಬಂಧಿಸಿದ ಸಾಕಷ್ಟು ಪುಸ್ತಕಗಳನ್ನು ಓದಿ. ಕೋಚಿಂಗ್‌ ಪಡೆದು, ಉತ್ತಮ ಅಭ್ಯಾಸ ನಡೆಸಿದರೆ, ಯಶಸ್ಸು ನಿಮ್ಮ ಕೈಯಲ್ಲಿ.

4. ಕೋರ್ಸ್‌ ಆಯ್ಕೆ ಬಗ್ಗೆ ಮಾಹಿತಿ
ನೀವು ಸ್ನಾತಕೋತ್ತರ ಪದವಿಯನ್ನು ಮಾಡಲು ಇಚ್ಛಿಸಿದರೆ, ಆ ಕೋರ್ಸ್‌ಗೆ ತಗಲುವ ವೆಚ್ಚ, ಕೋರ್ಸ್‌ನ ಅವಧಿ, ಕಾಲೇಜಿನಲ್ಲಿ ಲಭ್ಯವಿರುವ ಸೌಕರ್ಯಗಳು, ಕೋರ್ಸ್‌ನ ಲಭ್ಯತೆ, ಭವಿಷ್ಯದ ದಿನಗಳಲ್ಲಿ ಕೋರ್ಸ್‌ನಿಂದ ದೊರೆಯಬಹುದಾದ ಉದ್ಯೋಗದ ಬಗ್ಗೆ ಗೊತ್ತಿದ್ದವರ ಬಳಿ ಮಾಹಿತಿಯನ್ನು ಕಲೆಹಾಕಿರಿ. ಈ ವಿಚಾರದಲ್ಲಿ ಕೆಲವು ವೆಬ್‌ಸೈಟ್‌ಗಳು ನಿಮಗೆ ನೆರವಾಗುತ್ತವೆ.

5. ಕೌಶಲ್ಯ ಬೆಳೆಸಿಕೊಳ್ಳಿರಿ…
ಭಾಷೆಯ ಮೇಲಿನ ಹಿಡಿತ, ಭಾಷಾ ಜ್ಞಾನದ ಕೊರತೆ, ಸಂವಹನ ಕೌಶಲ್ಯದ ಕೊರತೆ, ವಿಷಯ ಜ್ಞಾನದ ಅಪೂರ್ಣ ಮಾಹಿತಿ ಸೇರಿದಂತೆ ಇನ್ನೂ ಹಲವಾರು ಕೊರತೆಗಳ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಕೆಲಸ ಪಡೆಯುವಲ್ಲಿ ವಿಫ‌ಲರಾಗಿರುತ್ತಾರೆ. ಇಂಥ ಸ್ಕಿಲ್ಸ್‌ಗಳನ್ನು ಬೆಳೆಸಲೆಂದೇ ನಾನಾ ಕೇಂದ್ರಗಳಿವೆ. ಅಲ್ಲಿಗೆ ಸೇರಿಕೊಂಡು, ಪಫೆìಕ್ಟ್ ಆಗಿ.

6. ಜಾಲತಾಣ ಸದುಪಯೋಗ
ಸಾಮಾಜಿಕ ಜಾಲತಾಣಗಳನ್ನು ಯೋಗ್ಯ ಉದ್ದೇಶಕ್ಕೆ ಬಳಸಿಕೊಳ್ಳಿ. ಒಂದೇ ಪರೀಕ್ಷೆಗೆ ಅಣಿಗೊಳ್ಳುತ್ತಿರುವ ಗೆಳೆಯರ ಗ್ರೂಪ್‌ಗ್ಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ನಿರ್ಮಿಸಿಕೊಳ್ಳಿ. ಇದರಿಂದ ವಿಚಾರ ಹಂಚಿಕೆಯಾಗುತ್ತದೆ. ಅಲ್ಲದೆ, ನಿಮ್ಮ ಪರೀಕ್ಷಾ ತಯಾರಿಗೆ ಇನ್ನಷ್ಟು ಜ್ಞಾನ ಬಲ ಬರುತ್ತದೆ.

7. ಉತ್ತಮ ರೆಸ್ಯೂಮ್‌ ಸಿದ್ಧಪಡಿಸಿಕೊಳ್ಳಿ…
ನೀವು ಎಲ್ಲಿಗೇ ಉದ್ಯೋಗ ಬಯಸಿ ಹೋದರೂ, ಅಲ್ಲಿನ ಬಾಸ್‌ ಮೊದಲು ನಿಮ್ಮನ್ನು ಕೇಳುವುದು ರೆಸ್ಯೂಮ್‌. ಹಾಗಾಗಿ, ಒಳ್ಳೆಯ ರೆಸ್ಯೂಮ್‌ ಅನ್ನು ಸಿದ್ಧಪಡಿಸಿಕೊಳ್ಳಿ. ಅದರಲ್ಲಿ ನಿಮ್ಮ ಕುರಿತು ಎಲ್ಲ ಮಾಹಿತಿಗಳು ಇರಲಿ. ನಿಮ್ಮ ರೆಸ್ಯೂಮ್‌, ಸಂದರ್ಶಕರನ್ನು ಇಂಪ್ರಸ್‌ ಮಾಡುವ ಹಾಗಿರಲಿ.

ಟಾಪ್ ನ್ಯೂಸ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.