ಸ್ವಾರಸ್ಯ; ಜನರ ಸೇವೆಯೇ ದೇವರ ಸೇವೆ
Team Udayavani, Jul 21, 2020, 12:00 PM IST
ಅದೊಮ್ಮೆ ಸ್ವಾಮಿ ರಾಮತೀರ್ಥರು ಹಡಗಿನಲ್ಲಿ ಜಪಾನ್ ದೇಶಕ್ಕೆ ಪ್ರವಾಸ ಹೊರಟಿದ್ದರು. ಹಡಗಿನಲ್ಲಿ, ಅಮೆರಿಕಾದ ವೃದ್ಧ ಪ್ರೊಫೆಸರ್ ಒಬ್ಬರು ಅವರ ಗೆಳೆಯರಾದರು. ಆತ ರಷಿಯನ್ ಭಾಷೆಯನ್ನು ಕಲಿಯುತ್ತಿದ್ದರು. ಕುತೂಹಲಕ್ಕೆಂದು ವಿಚಾರಿಸಿದಾಗ, ಅವರಿಗೆ ಒಟ್ಟು 11 ಭಾಷೆಗಳು ಬರುತ್ತವೆ ಎಂದು ತಿಳಿಯಿತು.
“ಈ ವಯಸ್ಸಿನಲ್ಲಿ ಹೊಸ ಭಾಷೆಯನ್ನೂ ಏಕೆ ಕಲಿಯುತ್ತೀರಿ?’- ರಾಮತೀರ್ಥರು ಕೇಳಿದರು. “ನಾನು ಭೂಗರ್ಭ ಶಾಸ್ತ್ರದ ಪೊ›ಫೆಸರ್. ರಷಿಯನ್ ಭಾಷೆಯಲ್ಲಿ ಈ ಶಾಸ್ತ್ರದ ಅತ್ಯುತ್ತಮ ಗ್ರಂಥವೊಂದು ಹೊರಬಿದ್ದಿದೆ. ಅದನ್ನು ಅನುವಾದಿ ಸಿದರೆ, ಅದರಿಂದ ನಮ್ಮ ದೇಶದ ಜನರಿಗೆ ತುಂಬಾ ಪ್ರಯೋಜನವಾದೀತು. ಅದಕ್ಕಾಗಿಯೇ ರಷಿಯನ್ ಭಾಷೆ ಕಲಿಯುತ್ತಿದ್ದೇನೆ’-ಎಂಬ ಉತ್ತರ ಬಂತು. “ನೀವು ಈಗ ಸಾವಿನ ದಂಡೆಯಲ್ಲಿ ನಿಂತಿದ್ದೀರಿ ಅನ್ನಬಹುದು. ಅಷ್ಟು
ವಯಸ್ಸಾಗಿದೆ ನಿಮಗೆ. ಈಗ ಹೊಸ ಭಾಷೆ ಕಲಿತು ಏನು ಫಲ? ಅದರ ಬದಲು ಪರಮಾತ್ಮನನ್ನು ಧ್ಯಾನಿಸಿರಿ. ಬರೀ ಶಾಸ್ತ್ರಾಭ್ಯಾಸದಿಂದ ಏನು ಪ್ರಯೋಜನ?’- ರಾಮತೀರ್ಥರು ಹೀಗೊಂದು ಸಲಹೆ ಕೊಟ್ಟರು. ಅದಕ್ಕೆ ಅಮೆರಿಕದ ಆ ವೃದ್ಧ ಪ್ರೊಫೆಸರ್ ಕೊಟ್ಟ ಉತ್ತರ ಹೀಗಿತ್ತು- “ಜನತೆಯ ಸೇವೆಯೇ ದೇವರ ಸೇವೆ. ನನ್ನ ಬಂಧುಗಳಿಗೆ ಅನುಕೂಲ ಆಗುವಂತಿದ್ದರೆ, ಅದಕ್ಕಾಗಿ ಎಂಥಾ ರಿಸ್ಕ್ ತಗೊಳ್ಳಲೂ ನಾನು ಸಿದ್ಧ. ಸಾವಿನ ಭಯದಿಂದ ನಾನು ಪರರ ಸೇವೆ ಮಾಡುವ ಹಕ್ಕನ್ನು ಬಿಟ್ಟು ಕೊಡಲಾರೆ… ‘
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.