ನನ್ನ ನೀನು ಮರೆತರೇನು ಸುಖವಿದೆ..?


Team Udayavani, Sep 12, 2017, 7:25 AM IST

sukavide.jpg

ಸೋನು…
ಎಂದೂ ನೆನಪಿಗೆ ಬಾರದವಳು ಇಂದೇಕೋ ತುಂಬಾ ನೆನಪಿಗೆ ಬರ್ತಿದೀಯಾ. ಕಾರಣವಿಲ್ಲದೇ ಪರಿಚಿತಳಾಗಿ, ಕಾರಣ ಹೇಳದೇ ನನ್ನ ತೊರೆದು ಹೋದಾಗಿನಿಂದ ಬದುಕೇ ಬರಿದಾಗಿದೆ, ಬರಡಾಗಿದೆ.

ಕತ್ತಲೆಯ ಬಾಳಿಗೆ ಬೆಳಕಂತೆ ಬಂದು ಈ ಒಂಟಿ ಜೀವಕ್ಕೆ ಜಂಟಿಯಾದೆ. ಸುಖ ಮತ್ತು ದುಃಖದ ಸಂದ‌ರ್ಭದಲ್ಲಿ ನನ್ನ ಕಣ್ಣೀರಿಗೆ ಆಸರೆಯಾಗಿ, ನಾನಿಡುವ ಹೆಜ್ಜೆಗಳ ಮೇಲೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದು ಬರುತ್ತಿದ್ದೆ. ಬದುಕಿಗೆ ರಂಗು ತುಂಬಿ ನಂತರ, ನಿರ್ದಾಕ್ಷಿಣ್ಯವಾಗಿ ಅದೇ ಪ್ರೀತಿಯನ್ನು ಕೊಂದು ಹೋದೆಯೇಕೆ?

ನಾನು ಬಡತನದ ಬೇಗೆಯಲ್ಲಿ ಬೆಂದು ಬೆಳೆದವನು. ನೀನು ಕೂಡಾ ಅಷ್ಟೇ, ಸುಖ ದುಃಖಗಳನ್ನು ಸಮನಾಗಿ ಒಂದೇ ತಟ್ಟೆಯಲ್ಲಿಟ್ಟು ಉಂಡು ಬೆಳೆದವ‌ಳು. ಬೇರೆಯವರಂತೆ ನಿನ್ನನ್ನು ಚಿನ್ನ, ಬಂಗಾರಿ, ಅಪ್ಸರೆ, ಅಪರಂಜಿ ಅದು ಇದು ಅಂತಾ ವರ್ಣನೆ ಮಾಡೋಕೆ ನನಗೆ ಗೊತ್ತಿಲ್ಲ. ಯಾಕಂದ್ರೆ ವರ್ಣನೆಗೆಂದು ಇವೆಯಲ್ಲ ಆಪದಗಳಿಗಿಂತ ಹೆಚ್ಚು ಮುದ್ದಾಗಿ ಕಾಣಿ¤à ಯ. ವಾಸ್ತವ ಹೀಗಿರುವಾಗ ನಿನಗೆ ಹೊಗಳಿಕೆಯ ಹಂಗೇಕೆ? ಚಂದಿರನನ್ನೂ ಎಷ್ಟೇ ಹೊಗಳಿದರೂ ಆತನ ಬೆಳದಿಂಗಳ ತಂಪನ್ನು ಮೀರಿಸುವ ಪದ ಸಿಗುವುದುಂಟೆ? ಅರ್ಥವಾಯ್ತಾ? ನೀನು ನನ್ನೆದೆಯ ಬೆಳದಿಂಗಳಂತೆ ಇದ್ದವಳು…

ಅವತ್ತಿನ ದಿನ ನೆನಪಿದೆಯಾ ನಿಂಗೆ? ಕಾಲೇಜಿನಿಂದ ಬಸ್‌ನಲ್ಲಿ ಬರೋವಾಗ ಅಕ್ಕ ಪಕ್ಕ ಕುಳಿತಿದ್ದೆವು. ಒಮ್ಮಿಂದೊಮ್ಮೆ ನಾನು ಭಾವುಕನಾಗಿ, ನನಗೆ ತಂದೆಯಿಲ್ಲ ತಾಯಿಯೂ ಇಲ್ಲ ಬೇರೊಬ್ಬರ ಆಶ್ರಯದಲ್ಲಿ ಬದುಕಿ ಬಾಳುತ್ತಿರುವ ಜೀವವಿದು ಎಂದಾಗ ನಿನ್ನ ಕಣ್ಣಿನಿಂದ ಜಿನುಗಿದ ಕಣ್ಣೀರ ಹನಿಯೂ ನಿನ್ನತ್ತ ಸೆಳೆಯುವಂತೆ ಮಾಡಿತ್ತು. ಸಾಲದ್ದಕ್ಕೆ ನನ್ನ ಪ್ರೀತಿಯೂ ನಿನಗೆ ದಕ್ಕದ್ದು. ಒಂದು ವೇಳೆ ದಕ್ಕಿದರೂ ಸುಖಕ್ಕಿಂತ ಹೆಚ್ಚಿಗೆ ಅದು ದುಃಖವನ್ನೇ ನೀಡುತ್ತೆ. ನನ್ನ ಮರೆತು ಸುಖವಾಗಿರೆಂದು ಕಣ್ಣೀರೊರೆಸಿಕೊಳ್ಳುತ್ತ ನೀ ನನಗೆ ಹೇಳಿದ ಸಾಂತ್ವನದ ನುಡಿಗಳು ನಿನ್ನನ್ನು ಮತ್ತೆ ಮೊದಲಿಗಿಂತ ಜಾಸ್ತಿಯೇ ಪ್ರೀತಿಸುವಂತೆ ಪ್ರೇರೇಪಿಸಿದ್ದವು.

ಇದೆಲ್ಲಾ ನಿಜವೇ ಆದರೂ, ಅದೊಂದು ದಿನ ಸ್ಪಷ್ಟ ಕಾರಣವನ್ನೇ ಹೇಳದೆ, ನಿಷ್ಕಲ್ಮಷ ಪ್ರೀತಿಯನ್ನು ನೀನು ತಿರಸ್ಕರಿಸಿ ನನ್ನಿಂದ ಬಹುದೂರ ಹೋಗಿಬಿಟ್ಟೆ. ನನ್ನುಸಿರು ನಂದುವವರೆಗೂ ನೀನೇ ನನ್ನುಸಿರೆಂದು ಒಂದೇ ಉಸಿರಿನಿಂದ ಹಲುಬುತ್ತಿರುವುದು ನಿನಗೆ ತಟ್ಟುತ್ತಿಲ್ಲವೇ ಅಥವಾ ಮುಟ್ಟುತ್ತಿಲ್ಲವೇ. ನೀನಿಲ್ಲದೆ ಬದುಕಿರಲಾರೆ. ಇನ್ನಾದರೂ ನಿನ್ನ ಮೌನ ಮಾತಾಗಲಿ..

ಇಂತಿ ನಿನ್ನ ನಿಜಪ್ರೇಮಿ

-ರಂಗನಾಥ ಎಸ್‌. ಗುಡಿಮನಿ

ಟಾಪ್ ನ್ಯೂಸ್

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Rain-TN

Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು

Nishkath-Dube

Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಬೆಂಬಲ

Priyanka-VA

Parliment: ವಯನಾಡ್‌ ಲೋಕಸಭಾ ಸದಸ್ಯೆಯಾಗಿ ಇಂದು ಪ್ರಿಯಾಂಕಾ ಶಪಥ ಸಾಧ್ಯತೆ

JAYA-Bhattacharya

Appoint: ಲಾಕ್‌ಡೌನ್‌ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Lokasabha

Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ

Sim-Card

Cyber Crime: ಸೈಬರ್‌ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ

Rahul

Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್‌ ಗಾಂಧಿ

Rain-TN

Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು

Nishkath-Dube

Parliment: ವಕ್ಫ್ ಜೆಪಿಸಿ ಕಾಲಾವಧಿ ಹೆಚ್ಚಳಕ್ಕೆ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.